ಬೆಂಗಳೂರಿನಲ್ಲಿ ಆ್ಯಸಿಡ್ ದಾಳಿಗೆ ಒಳಗಾಗಿದ್ದ ಯುವತಿ ಆರೋಗ್ಯ ಸ್ಥಿರ; ಆರೋಪಿ ಹುಡುಕಾಟಕ್ಕೆ 7 ತಂಡ ರಚನೆ

| Updated By: sandhya thejappa

Updated on: May 01, 2022 | 12:42 PM

ಮೊದಲು ಮೂರು ತಂಡದಿಂದ ಹುಡುಕಾಟ ನಡೆಸಲಾಗುತ್ತಿತ್ತು. ನಂತರ ಐದು ತಂಡಗಳಾಗಿ ಮಾಡಿಕೊಳ್ಳಲಾಗಿತ್ತು. ಸದ್ಯಕ್ಕೆ 7 ತಂಡದಿಂದ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ. ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ನಿನ್ನೆ ಸಂಜೆಯೊಳಗೆ ಬಂಧಿಸುವುದಾಗಿ ಹೇಳಿದ್ದರು.

ಬೆಂಗಳೂರಿನಲ್ಲಿ ಆ್ಯಸಿಡ್ ದಾಳಿಗೆ ಒಳಗಾಗಿದ್ದ ಯುವತಿ ಆರೋಗ್ಯ ಸ್ಥಿರ; ಆರೋಪಿ ಹುಡುಕಾಟಕ್ಕೆ 7 ತಂಡ ರಚನೆ
ಸಂತ್ರಸ್ತ ಯುವತಿ
Follow us on

ಬೆಂಗಳೂರು: ಸುಂಕದಕಟ್ಟೆಯಲ್ಲಿ ಏಪ್ರಿಲ್ 28ರಂದು ಆ್ಯಸಿಡ್​ (Acid) ದಾಳಿಗೆ ಒಳಗಾಗಿದ್ದ ಯುವತಿ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಸೇಂಟ್ ಜಾನ್ಸ್ ಆಸ್ಪತ್ರೆಯ ಐಸಿಯುನಲ್ಲಿ (ICU) ಸಂತ್ರಸ್ತೆಗೆ ಚಿಕಿತ್ಸೆ ಮುಂದುವರೆದಿದೆ. ದಿನದಿಂದ ದಿನಕ್ಕೆ ಯುವತಿ ಚೇತರಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿಕಿತ್ಸಾ ವೆಚ್ಚ ಭರಿಸೋದಾಗಿ ಸರ್ಕಾರ ಹೇಳಿದೆ. ಇನ್ನು ಆರೋಪಿ ನಾಗೇಶ್​ಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. 72 ಗಂಟೆ ಕಳೆದರೂ ಆರೋಪಿ ಪತ್ತೆಯಾಗಿಲ್ಲ. ಸಿಕ್ಕ ಸುಳಿವುಗಳ ಮೇಲೆ ಪೊಲೀಸರು ತಲಾಶ್ ನಡೆಸುತ್ತಿದ್ದಾರೆ. ಮೊದಲು ಮೂರು ತಂಡದಿಂದ ಹುಡುಕಾಟ ನಡೆಸಲಾಗುತ್ತಿತ್ತು. ನಂತರ ಐದು ತಂಡಗಳಾಗಿ ಮಾಡಿಕೊಳ್ಳಲಾಗಿತ್ತು. ಸದ್ಯಕ್ಕೆ 7 ತಂಡದಿಂದ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ.

ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ನಿನ್ನೆ ಸಂಜೆಯೊಳಗೆ ಬಂಧಿಸುವುದಾಗಿ ಹೇಳಿದ್ದರು. ಆದ್ರೆ ರಾತ್ರಿ ಕಳೆದು ಬೆಳಗಾದರೂ ಆರೋಪಿ ಸುಳಿವಿಲ್ಲ. ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿಯೂ ಹುಡುಕಾಟ ನಡೆಯುತ್ತಿದೆ. ಈಗಾಗಲೇ ಪೊಲೀಸರು ಆರೋಪಿಯ ಸ್ನೇಹಿತರು, ಕುಟುಂಬಸ್ಥರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 20ಕ್ಕೂ ಹೆಚ್ಚು ಜನರನ್ನ ವಶಪಡೆದಿದ್ದಾರೆ.

ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ:
ಆ್ಯಸಿಡ್ ದಾಳಿ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ಮಾಡಿದ್ದಾರೆ. ಹೆಗ್ಗನಹಳ್ಳಿ ಬಳಿಯ ನಿಸರ್ಗ ಶಾಲೆಯಿಂದ ಪ್ರತಿಭಟನಾ ಮೆರವಣಿಗೆ ಮಾಡಿದ್ದಾರೆ. ನಿಸರ್ಗ ಶಾಲಾ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಯುತ್ತಿದೆ. ಸಂತ್ರಸ್ತೆ ಯುವತಿ 2013ರಲ್ಲಿ ಇದೇ ಶಾಲೆಯಲ್ಲಿ 10ನೇ ತರಗತಿ ಓದಿದ್ದರು.  ಕೂಡಲೇ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ನಾಳೆಯಿಂದ ಸಂತ್ರಸ್ತೆ ಯುವತಿಗೆ ಚರ್ಮ ಜೋಡಣೆ ಚಿಕಿತ್ಸೆ:
ನಾಳೆಯಿಂದ ಸಂತ್ರಸ್ತೆ ಯುವತಿಗೆ ಚರ್ಮ ಜೋಡಣೆ ಚಿಕಿತ್ಸೆ ಪ್ರಾರಂಭವಾಗುತ್ತದೆ. ವಿಕ್ಟೋರಿಯಾದಿಂದ ಸ್ಕಿನ್ ಸೇಂಟ್ ಜಾನ್ಸ್ ಆಸ್ಪತ್ರೆ ತಲುಪಿದೆ. ಚರ್ಮ ಜೋಡಣೆಯ ಬಳಿಕ 2-3 ವಾರಗಳಲ್ಲಿ ಬೆಳವಣಿಗೆ ಆಗುತ್ತದೆ. ಮೊದಲಿದ್ದ ರೀತಿಯಲ್ಲೇ ಚರ್ಮ ಬೆಳವಣಿಗೆ ಆಗುತ್ತದೆ. ಚರ್ಮ ಜೋಡಣೆಯ ಬಳಿಕ ನೋವು ಕಡಿಮೆಯಾಗಲಿದೆ. ನೋವು ಕಡಿಮೆಯಾಗಿ ಸುಟ್ಟ ಗಾಯದ ಉರಿ ಕಡಿಮೆಯಾಗುತ್ತೆ. ಸ್ವಂತ ಚರ್ಮದ ಬೆಳವಣಿಗೆಯಾಗಿ ದೇಹ ಮೊದಲಿನ ಸ್ಥಿತಿಗೆ ಬರಲಿದೆ. ಡೋನರ್​ಗಳಿಂದ ಪಡೆದ ಸ್ಕಿನ್ ಲ್ಯಾಬ್​ನಲ್ಲಿ ಟೆಸ್ಟ್ ಮಾಡಲಾಗುತ್ತೆ. ತೊಂದರೆ ಇಲ್ಲವೆಂದ ಖಚಿತವಾದ ಬಳಿಕವೇ ಸ್ಕಿನ್ ಸ್ಟೋರ್ ಮಾಡುತ್ತಾರೆ.

ಇದನ್ನೂ ಓದಿ

Thala Ajith Kumar Birthday: ಅಜಿತ್​ ಕುಮಾರ್​ ಜನ್ಮದಿನ: ವಿಮಾನದ ಪೈಲಟ್​ ಕೂಡ ಆಗಿರುವ ಸ್ಟಾರ್​ ನಟನಿಗಿದೆ ಹಲವು ಹವ್ಯಾಸ

World Laughter Day 2022: ಇಂದು ವಿಶ್ವ ನಗು ದಿನ; ಏನಿದರ ವಿಶೇಷ? ಮೊದಲಿಗೆ ಆಚರಿಸಿದ್ದು ಎಲ್ಲಿ? ಕುತೂಹಲಕರ ಮಾಹಿತಿ ಇಲ್ಲಿದೆ

Published On - 8:48 am, Sun, 1 May 22