World Laughter Day 2022: ಇಂದು ವಿಶ್ವ ನಗು ದಿನ; ಏನಿದರ ವಿಶೇಷ? ಮೊದಲಿಗೆ ಆಚರಿಸಿದ್ದು ಎಲ್ಲಿ? ಕುತೂಹಲಕರ ಮಾಹಿತಿ ಇಲ್ಲಿದೆ

ವಿಶ್ವ ನಗು ದಿನ: ಇಂದು (ಮೇ.1) ವಿಶ್ವ ನಗು ದಿನ. ನಗುವಿನ ಮಹತ್ವ ನಿಮಗೆ ತಿಳಿಸಿದಿದೆಯೇ? ನಗುವಿನ ದಿನವನ್ನು ಮೊದಲು ಆಚರಿಸಿದ್ದು ಯಾವಾಗ? ಇಲ್ಲಿದೆ ನೋಡಿ.

World Laughter Day 2022: ಇಂದು ವಿಶ್ವ ನಗು ದಿನ; ಏನಿದರ ವಿಶೇಷ? ಮೊದಲಿಗೆ ಆಚರಿಸಿದ್ದು ಎಲ್ಲಿ? ಕುತೂಹಲಕರ ಮಾಹಿತಿ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: shivaprasad.hs

Updated on:May 01, 2022 | 8:51 AM

ಸರ್ವ ರೋಗಕ್ಕೂ ನಗುವೊಂದೇ ಪರಮ ಔಷಧ ಎನ್ನುತ್ತಾರೆ. ಹಾಗಾದರೆ ರೋಗಕ್ಕೆಲ್ಲವೂ ಅದೇ ಔಷಧವೇ ಎಂದು ಕೇಳಬೇಡಿ. ರೋಗವನ್ನು ಎದುರಿಸುವಲ್ಲಿ ನಮ್ಮನ್ನು, ನಮ್ಮ ಆತ್ಮವಿಶ್ವಾಸವನ್ನು ಗಟ್ಟಿಗೊಳಿಸುತ್ತದೆ ಈ ನಗು. ಅಷ್ಟೇ ಅಲ್ಲ, ನೀವು ನಗುತ್ತಾ ಸಂತೋಷವಾಗಿದ್ದರೆ ಯಾವ ಖಾಯಿಲೆ ನಿಮ್ಮ ಬಳಿ ಸುಳಿದೀತು ಹೇಳಿ? ವಿಶ್ವ ನಗು ದಿನವು (World Laughter Day) ನಗುವಿನ ಮಹತ್ವವನ್ನು ಜನರಿಗೆ ತಿಳಿಸಲು ಇರುವ ಒಂದು ದಿನ. ಅದರಲ್ಲೂ ಪ್ರಸ್ತುತ ಜಗತ್ತು ಕೊರೊನಾ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಇಂತಹ ಸಮಯದಲ್ಲಿ ಜನರು ನಗುವಿನೊಂದಿಗೆ ಅವುಗಳನ್ನು ಎದುರಿಸಿದರೆ, ಚಿಂತೆಗಳ ಭಾರ ತುಸು ಕಡಿಮೆಯಾಗುತ್ತವೆ. ಆದ್ದರಿಂದಲೇ ನಗು ನಿಜಕ್ಕೂ ಅತ್ಯುತ್ತಮವಾದ ಔಷಧಿ. ನಗುವಿನ ಮಹತ್ವ ನಿಮಗೆ ತಿಳಿಸಿದಿದೆಯೇ? ನಗುವಿನ ದಿನವನ್ನು ಮೊದಲು ಆಚರಿಸಿದ್ದು ಯಾವಾಗ? ಇಲ್ಲಿದೆ ನೋಡಿ.

ವಿಶ್ವ ನಗು ದಿನವನ್ನು ಮೊದಲು ಆಚರಿಸಿದ್ದು ನಮ್ಮ ಭಾರತದಲ್ಲಿ!

ಜಗತ್ತಿನ ಅನೇಕ ಮೇಧಾವಿಗಳು ವಿಶೇಷ ದಿನವನ್ನು ಮೊದಲು ಆರಂಭಿಸಿದ್ದಾರೆ. ಈ ಮೂಲಕ ಜಗತ್ತು ಆಯಾ ದಿನಗಳಂದು ಅವರನ್ನು ಸ್ಮರಿಸಿಕೊಳ್ಳುತ್ತದೆ. ಆದರೆ ಜಗತ್ತಿಗೆ ನಗುವ ಮಹತ್ವವನ್ನು ಮೊದಲು ತಿಳಿಸಿಕೊಟ್ಟಿದ್ದು, ಇದಕ್ಕೆ ಒಂದು ವಿಶೇಷ ದಿನವನ್ನು ಪರಿಚಯಿಸಿದ್ದು ಭಾರತೀಯರೇ! ವಿಶ್ವ ನಗು ದಿನವನ್ನು ಮೊದಲು ಆಚರಿಸಿದ್ದು ಮುಂಬೈನಲ್ಲಿ. 1998 ರಲ್ಲಿ ‘ನಗು ಯೋಗ ಚಳುವಳಿ’ಯ ಸಂಸ್ಥಾಪಕ ಡಾ ಮದನ್ ಕಟಾರಿಯಾ ಅವರು ಚಳುವಳಿಯ ಮೂಲಕ ಒಂದು ವಿಚಾರ ಪ್ರತಿಪಾದಿಸಿದರು. ನಗು ವ್ಯಕ್ತಿಯ ಮಾನಸಿಕ ಸ್ಥಿತಿಯನ್ನು ಪ್ರತಿಬಿಂಬಿಸಬಹುದು ಎಂದು ಅವರು ಊಹಿಸಿದ್ದರು. ಇದರ ಪರಿಣಾಮ ನಿಧಾನವಾಗಿ ನಗರಗಳಲ್ಲಿ ‘ಲಾಫಿಂಗ್ ಕ್ಲಬ್’ಗಳು ಜನ್ಮತಾಳಿದವು. ಹೀಗೆ ನಿಧಾನವಾಗಿ ವಿಶ್ವ ನಗು ದಿನ ಹುಟ್ಟಿಕೊಂಡಿತು.

ನಗುವಿನ ಮಹತ್ವವೇನು ಗೊತ್ತಾ?

ನಗುವುದರಿಂದ ನಿಮ್ಮ ಚಿಂತೆಗಳು ಮಾಯವಾಗುವುದಿಲ್ಲ, ಆದರೆ ದೈಹಿಕವಾಗಿ ದೇಹಕ್ಕೆ ಅಗತ್ಯವಾದ ಅದ್ಭುತವಾದ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಸಂತೋಷವಾಗಿರುವಾಗ ಮತ್ತು ವಿನೋದದಿಂದ ತುಂಬಿದ ಜೀವನಶೈಲಿಯನ್ನು ಹೊಂದಿರುವಾಗ ಒತ್ತಡದಿಂದ ಉಂಟಾಗುವ ಅನೇಕ ಸಮಸ್ಯೆಗಳನ್ನು ಎದರಿಸಲು ನಗುವು ಸಹಾಯ ಮಾಡುತ್ತದೆ. ಇದಕ್ಕಾಗಿಯೇ ಅನೇಕ ಮಂದಿ ಬೆಳಗೆದ್ದ ತಕ್ಷಣ ವಾಕಿಂಗ್ ಎಂದು ಪಾರ್ಕ್ಗಳಿಗೆ ತೆರಳಿ ಒಂದು ಕಡೆ ನಿಂತು ಸ್ನೇಹಿತರೆಲ್ಲರೂ ಒಟ್ಟಾಗಿ ನಕ್ಕು ನಲಿಯುತ್ತಾರೆ. ಹೀಗೆ ಮಾಡುವುದರಿಂದ ನಮ್ಮಲಿರು ಒತ್ತಡ ಕಮ್ಮಿಯಾಗಿ ಆರೋಗ್ಯಕ್ಕೆ ಉತ್ತಮ ಪ್ರಯೋಜನವಾಗುತ್ತದೆ.

ನೀವು ನಗುವುದರ ಮೂಲಕ 40-60 ಕ್ಯಾಲೋರಿಯನ್ನು ಬರ್ನ್ ಮಾಡಬಹುದು. ಮತ್ತು ನಗುವುದರಿಂದ ಮುಖದ ಸ್ನಾಯು ವ್ಯಾಯಾಮ ಕೂಡ ಆಗುತ್ತದೆ. ಇದರಿಂದ ಮುಖದ ತ್ವಚೆ ಹೆಚ್ಚು ಕಾಂತಿದಾಯಕವಾಗುತ್ತದೆ. ಇದರಿಂದ ಟಿ-ಕೋಶಗಳು (T-cells) ಸುಧಾರಿಸುತ್ತದೆ. ಹೃದಯ ಸಂಬಂಧಿ ಕಾಯಿಲೆ ಇರುವವರೂ ನಗುವನ್ನೇ ಸಂಗತಿಯನ್ನಾಗಿಸಿಕೊಂಡರೆ ಉತ್ತಮ. ಏಕೆಂದರೆ ನಗುವಿನಿಂದ ರಕ್ತದ ಒತ್ತಡ ಸಮಸ್ಯೆ ಬೇಗ ಬಗೆಹರಿಯುತ್ತದೆ. ನಿಮ್ಮ ಮಾನಸಿಕ ಆರೋಗ್ಯವನ್ನು ಹೆಚ್ಚಿಸಲು ಇದು ಅದ್ಭುತ ಮಾರ್ಗವಾಗಿದೆ. ಇದಲ್ಲದೆ, ನಗು ಜನರನ್ನು ಹತ್ತಿರ ತರುತ್ತದೆ ಮತ್ತು ಎಷ್ಟೇ ಕಷ್ಟ, ಒತ್ತಡವಿದ್ದರೂ ಅದರ ವಿರುದ್ಧ ಹೋರಾಡಲು ಶಕ್ತಿಯನ್ನು ತುಂಬುತ್ತದೆ.

ಇದನ್ನೂ ಓದಿ: International Workers Day 2022: ಇಂದು ಕಾರ್ಮಿಕರ ದಿನಾಚರಣೆ; ಏನಿದರ ಇತಿಹಾಸ ಹಾಗೂ ಮಹತ್ವ? ಇಲ್ಲಿದೆ ನೋಡಿ

ಪ್ರೇಯಸಿಯನ್ನು ಕರೆಸಿಕೊಳ್ಳಲು ಪ್ರತಿ ಬಾರಿ ಖಾಸಗಿ ವಿಮಾನ ಕಳಿಸುತ್ತಿದ್ದ ವಂಚಕ ಸುಕೇಶ್​; ಕೊನೆಗೆ ಜೈಲುಪಾಲು

Published On - 8:45 am, Sun, 1 May 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ