International Workers Day 2022: ಇಂದು ಕಾರ್ಮಿಕರ ದಿನಾಚರಣೆ; ಏನಿದರ ಇತಿಹಾಸ ಹಾಗೂ ಮಹತ್ವ? ಇಲ್ಲಿದೆ ನೋಡಿ

ಕಾರ್ಮಿಕರ ದಿನಾಚರಣೆ: ‘ಮೇ ದಿನ’ ಎಂದೂ ಕರೆಯಲ್ಪಡುವ ದಿನವನ್ನು ‘ಕಾರ್ಮಿಕರ ದಿನ’ವನ್ನು ಅನೇಕ ದೇಶಗಳಲ್ಲಿ ಸಾರ್ವತ್ರಿಕ ರಜಾದಿನವಾಗಿಯೂ ಘೋಷಿಸಲಾಗಿದೆ. ಭಾರತದಲ್ಲಿ 1923ರಂದು ಇದನ್ನು ಮೊದಲಿಗೆ ಆಚರಿಸಲಾಗಿತ್ತು.

International Workers Day 2022: ಇಂದು ಕಾರ್ಮಿಕರ ದಿನಾಚರಣೆ; ಏನಿದರ ಇತಿಹಾಸ ಹಾಗೂ ಮಹತ್ವ? ಇಲ್ಲಿದೆ ನೋಡಿ
ಕಾರ್ಮಿಕರ ದಿನ (ಪ್ರಾತಿನಿಧಿಕ ಚಿತ್ರ)
Follow us
TV9 Web
| Updated By: shivaprasad.hs

Updated on: May 01, 2022 | 8:16 AM

ಕಾರ್ಮಿಕ ವರ್ಗದ ಸಾಧನೆಗಳನ್ನು ಆಚರಿಸಲು ಪ್ರತಿ ವರ್ಷ ಮೇ 1 ರಂದು ಕಾರ್ಮಿಕರ ದಿನ ಅಥವಾ ಅಂತರರಾಷ್ಟ್ರೀಯ ಕಾರ್ಮಿಕರ ದಿನವನ್ನು (International Workers Day) ಆಚರಿಸಲಾಗುತ್ತದೆ. ‘ಮೇ ದಿನ’ (May Day) ಎಂದೂ ಕರೆಯಲ್ಪಡುವ ದಿನವನ್ನು ಅನೇಕ ದೇಶಗಳಲ್ಲಿ ಸಾರ್ವಜನಿಕ ರಜಾದಿನವಾಗಿಯೂ ಘೋಷಿಸಲಾಗಿದೆ. ಭಾರತದಲ್ಲಿ 1923ರಂದು ಇದನ್ನು ಮೊದಲಿಗೆ ಆಚರಿಸಲಾಗಿತ್ತು. ಕಾರ್ಮಿಕರ ದಿನವು ಸಂಪೂರ್ಣವಾಗಿ ಕಾರ್ಮಿಕ ವರ್ಗಕ್ಕೆ ಮೀಸಲಾದ ವಿಶೇಷ ದಿನ. ಕೆಲವು ದೇಶಗಳಲ್ಲಿ ಬೇರೆ ದಿನಾಂಕಗಳಂದೂ ಇದನ್ನು ಆಚರಿಸುತ್ತಾರೆ. ಆದರೆ ಬಹುತೇಕ ರಾಷ್ಟ್ರಗಳಲ್ಲಿ ಮೇ 1 ರಂದು ಕಾರ್ಮಿಕರ ದಿನವನ್ನು ಆಚರಿಸಲಾಗುತ್ತದೆ. ಕಾರ್ಮಿಕರ ದಿನಾಚರಣೆಯ ಇತಿಹಾಸ ಹಾಗೂ ಮಹತ್ವದ ಕುರಿತ ಮಾಹಿತಿ ಇಲ್ಲಿದೆ.

ಅಮೇರಿಕಾದಲ್ಲಿ ಕೈಗಾರಿಕಾ ಕ್ರಾಂತಿಯ ನಂತರ ಕಾರ್ಮಿಕರನ್ನು ವಿಪರೀತ ದುಡಿಸಿಕೊಳ್ಳಲಾಗುತ್ತಿತ್ತು. ಇದನ್ನು ವಿರೋಧಿಸಲು 1886ರಲ್ಲಿ ಕಾರ್ಮಿಕರ ಒಕ್ಕೂಟವು ಒಂದು ದಿನಕ್ಕೆ 16 ಗಂಟೆಗಳ ಕೆಲಸದ ಬದಲಿಗೆ 8 ಗಂಟೆಗಳ ಕೆಲಸಕ್ಕಾಗಿ ಮುಷ್ಕರವನ್ನು ಘೋಷಿಸಿತು. ಜನಸಂದಣಿಯನ್ನು ನಿಯಂತ್ರಿಸಲು, ಪೊಲೀಸರು ಶೆಲ್ ದಾಳಿಯನ್ನು ನಡೆಸಿದರು. ಅನೇಕ ಕಾರ್ಮಿಕರು ಸಾವನ್ನಪ್ಪಿದರು ಮತ್ತು ಕೆಲವರು ಗಾಯಗೊಂಡರು. ಈ ಘಟನೆಯ ನಂತರ ಕಾರ್ಮಿಕರ ಹಕ್ಕುಗಳಿಗಾಗಿ ಸಾಗರೋತ್ತರ ಚಳುವಳಿ ಪ್ರಾರಂಭವಾಯಿತು. ಕೊನೆಗೆ 1916ರಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನವು 8 ದಿನಗಳ ಕೆಲಸದ ಅವಧಿಯನ್ನು ಘೋಷಿಸಿತು. ಕಾರ್ಮಿಕರ ಹಕ್ಕುಗಳ ಹೋರಾಟಕ್ಕೆ ಹಾಗೂ ಕಾರ್ಮಿಕರ ಪ್ರಭುತ್ವದ ನೆನಪೊಗೆ 1889ರಲ್ಲಿ ಮೊದಲ ಬಾರಿಗೆ ಮೇ 1 ರಂದು ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು ಎಂದು ಹೇಳಲಾಗುತ್ತದೆ. ಪ್ಯಾರಿಸ್ಸಿನಲ್ಲಿ ನಡೆದ ಅಂತಾರಾಷ್ಟ್ರೀಯ ಸಮಾಜವಾದಿ ಪ್ರಥಮ ಅಧಿವೇಶನದಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.

ಭಾರತದಲ್ಲಿ ಮೊದಲ ಬಾರಿಗೆ ಕಾರ್ಮಿಕರ ದಿನ ಆಚರಿಸಿದ್ದು ಯಾವಾಗ?

ಭಾರತದಲ್ಲಿ ಮೊದಲ ಮೇ ದಿನವನ್ನು ಮದ್ರಾಸ್‌ನಲ್ಲಿ (ಈಗಿನ ಚೆನ್ನೈ) ‘ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದೂಸ್ತಾನ್’ 1923ರ ಮೇ 1ರಂದು ಆಯೋಜಿಸಿತು. ಪ್ರಸ್ತುತ ಕಾರ್ಮಿಕರ ದಿನವನ್ನು ಭಾರತದಾದ್ಯಂತ ವಿವಿಧ ಹೆಸರುಗಳಿಂದ ಆಚರಿಸಲಾಗುತ್ತದೆ. ಕನ್ನಡದಲ್ಲಿ ‘ಕಾರ್ಮಿಕರ ದಿನಾಚರಣೆ’ ಎಂದು ಆಚರಿಸಿದರೆ, ಹಿಂದಿಯಲ್ಲಿ ‘ಕಾಮ್ಗರ್ ದಿನ್’ ಅಥವಾ ‘ಅಂತರಾಷ್ಟ್ರೀಯ ಶ್ರಮಿಕ್ ದಿವಸ್’, ತಮಿಳಿನಲ್ಲಿ ‘ಉಝೋಪಾಲರ್ ನಾಲ್’ ಮತ್ತು ಮರಾಠಿಯಲ್ಲಿ ‘ಕಾಮ್ಗರ್ ದಿವಾಸ್’ ಸೇರಿದಂತೆ ವಿವಿಧ ಹೆಸರುಗಳಲ್ಲಿ ಆಚರಿಸಲಾಗುತ್ತದೆ.

ಭಾರತದಲ್ಲಿ ಕಾರ್ಮಿಕರ ದಿನವು ರಾಷ್ಟ್ರೀಯ ರಜಾದಿನವಲ್ಲದ ಕಾರಣ, ರಾಜ್ಯ ಸರ್ಕಾರದ ವಿವೇಚನೆಯಿಂದ ಕಾರ್ಮಿಕರ ದಿನವನ್ನು ಸಾರ್ವಜನಿಕ ರಜಾದಿನವಾಗಿ ಆಚರಿಸಲಾಗುತ್ತದೆ. ಅನೇಕ ಭಾಗಗಳಲ್ಲಿ ವಿಶೇಷವಾಗಿ ಉತ್ತರ ಭಾರತದ ರಾಜ್ಯಗಳಲ್ಲಿ ಇದು ಸಾರ್ವಜನಿಕ ರಜಾದಿನವಲ್ಲ.

ಕಾರ್ಮಿಕರ ದಿನಾಚರಣೆಯ ಮಹತ್ವ:

ಮೇ ದಿನವು ಸಮಾಜಕ್ಕೆ ಮತ್ತು ಕಾರ್ಮಿಕರ ಕೊಡುಗೆ ಮತ್ತು ತ್ಯಾಗವನ್ನು ತಿಳಿಸಿಕೊಡುವ, ಅರಿವು ಮೂಡಿಸುವ ದಿನವಾಗಿದೆ. ಹಾಗೆಯೇ ಕಾರ್ಮಿಕರ ಕಾನೂನುಗಳು, ಕಾರ್ಮಿಕರ ಹಕ್ಕುಗಳ ಉಲ್ಲಂಘನೆ, ಕೆಲಸದ ಅವಧಿ ಮೊದಲಾದವುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆಸಲಾಗುತ್ತದೆ.

ಇಂದೇ ಮಹಾರಾಷ್ಟ್ರ ಮತ್ತು ಗುಜರಾತ್ ದಿನ:

ಹಿಂದಿನ ಬಾಂಬೆ ರಾಜ್ಯವನ್ನು ಭಾಷಾವಾರು ಆಧಾರದಲ್ಲಿ ವಿಂಗಡಿಸಿದ ನಂತರ 1960ರಲ್ಲಿ ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯದ ಸ್ಥಾನಮಾನ ಪಡೆದವು. ಆ ದಿನಾಂಕವನ್ನು ಗುರುತಿಸಲು ಮೇ 1 ಅನ್ನು ‘ಮಹಾರಾಷ್ಟ್ರ ದಿನ’ (Maharashtra Day) ಮತ್ತು ‘ಗುಜರಾತ್ ದಿನ’ (Gujarat Day) ಎಂದು ಆಚರಿಸಲಾಗುತ್ತದೆ.

ಇನ್ನೂ ಹೆಚ್ಚಿನ ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಪ್ರೇಯಸಿಯನ್ನು ಕರೆಸಿಕೊಳ್ಳಲು ಪ್ರತಿ ಬಾರಿ ಖಾಸಗಿ ವಿಮಾನ ಕಳಿಸುತ್ತಿದ್ದ ವಂಚಕ ಸುಕೇಶ್​; ಕೊನೆಗೆ ಜೈಲುಪಾಲು

Ramadan Eid 2022 Moon Sighting: ಭಾರತ, ಸೌದಿ ಅರೇಬಿಯಾದಲ್ಲಿ ರಂಜಾನ್ ಹಬ್ಬ ಆಚರಣೆ ಯಾವಾಗ?

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್