ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ತರಗತಿ ಶುರು: ಮಳೆ ಮಧ್ಯೆ ಖಾಸಗಿ ಶಾಲೆಗಳಿಂದ ಹುಚ್ಚಾಟ!

ಬೆಂಗಳೂರಿನಲ್ಲಿ ನಿರಂತರ ಮಳೆ ನಡುವೆಯೂ ಕೆಲವು ಖಾಸಗಿ ಶಾಲೆಗಳು ಬೇಸಿಗೆ ರಜೆಯನ್ನು ಲೆಕ್ಕಿಸದೆ ತರಗತಿಗಳನ್ನು ಆರಂಭಿಸಿವೆ. ಇದಕ್ಕೆ ಪೋಷಕರ ಆಕ್ರೋಶ ವ್ಯಕ್ತವಾಗಿದೆ. ಶಾಲೆಗಳು ನಿಯಮ ಉಲ್ಲಂಘಿಸಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಒತ್ತಡ ಹೇರುತ್ತಿವೆ ಎಂದು ದೂರುಗಳು ಬಂದಿವೆ. ಶಿಕ್ಷಣ ಇಲಾಖೆ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಲಾಗಿದೆ.

ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ತರಗತಿ ಶುರು: ಮಳೆ ಮಧ್ಯೆ ಖಾಸಗಿ ಶಾಲೆಗಳಿಂದ ಹುಚ್ಚಾಟ!
ಪ್ರಾತಿನಿಧಿಕ ಚಿತ್ರ
Updated By: ಗಂಗಾಧರ​ ಬ. ಸಾಬೋಜಿ

Updated on: May 23, 2025 | 8:13 AM

ಬೆಂಗಳೂರು, ಮೇ 23: ಶಾಲಾ ಮಕ್ಕಳಿಗೆ ಬೇಸಿಗೆ ರಜೆ ಅಂದರೆ ಹರುಷ. ಶಾಲೆಗೆ ರಜೆ ಅಂತಾ ಊರೂರು ಸುತ್ತಾಡಿಕೊಂಡು ಮಜಾ ಮಾಡುತ್ತಾರೆ. ಆದರೆ ಇದಕ್ಕೆಲ್ಲಾ ಮಳೆ (rain) ಬ್ರೇಕ್​ ಹಾಕಿದೆ. ಈ ವರ್ಷ ವಿಪರಿತ ಮಳೆ ಹೆಚ್ಚಾಗಿದ್ದು, ಪೋಷಕರು ಮಕ್ಕಳನ್ನು ಮನೆಯಿಂದ ಹೊರಗಡೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಿರುವಾಗ ಖಾಸಗಿ ಶಾಲೆಗಳು (private schools) ಇದನ್ನೆಲ್ಲಾ ಲೆಕ್ಕಿಸದೇ ನಿಯಮ ಉಲ್ಲಂಘಿಸಿ ಶಾಲೆಗಳನ್ನು ಆರಂಭಿಸಿವೆ.

ಶೈಕ್ಷಣಿಕ ವರ್ಷದ ಆರಂಭಕ್ಕೂ ಮುನ್ನವೇ ತರಗತಿ ಶುರು

ರಾಜಧಾನಿಯಲ್ಲಿ ಕಳೆದ ಒಂದು ವಾರದಿಂದ ನಿರಂತರ ಮಳೆಯಾಗುತ್ತಿದೆ. ಕೆಲವು ಏರಿಯಾಗಳಿಗೆ ನೀರು ನುಗ್ಗಿ ಪ್ರವಾಹದ ಸ್ಥಿತಿ ಉಂಟಾಗಿದೆ. ಸಾಕಷ್ಟು ಮನೆಗಳಿಗೆ ನೀರು ನುಗ್ಗಿ ಜನರ ಪರದಾಟಕ್ಕೆ ಕಾರಣವಾಗಿದೆ. ಇತಂಹ ಸಂದರ್ಭದಲ್ಲಿ ಕೆಲವು ಖಾಸಗಿ ಶಾಲೆಗಳು ತರಗತಿಗಳನ್ನು ಆರಂಭಿಸಿ ಹುಚ್ಚಾಟ ಶುರುಮಾಡಿವೆ. ಶೈಕ್ಷಣಿಕ ವರ್ಷದ ಆರಂಭಕ್ಕೂ ಮುನ್ನವೇ ಮಕ್ಕಳಿಗೆ ಬೇಸಿಗೆ ರಜೆ ನೀಡದೆ ಕೆಲವು ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ತರಗತಿ ಆರಂಭಿಸಲಾಗಿದೆ.

ಇದನ್ನೂ ಓದಿ: Karnataka 2nd PUC Exam-3: ದ್ವಿತೀಯ ಪಿಯುಸಿ 3ನೇ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ, ಇಲ್ಲಿದೆ ಟೈಮ್​ಟೇಬಲ್

ಇದನ್ನೂ ಓದಿ
ಅಂಕಗಳ ಬಗ್ಗೆ ನಿಮಗೂ ಅನುಮಾನವಿದೆಯೇ? ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿ
ದ್ವಿತೀಯ ಪಿಯುಸಿ 3ನೇ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ, ಇಲ್ಲಿದೆ ಟೈಮ್​ಟೇಬಲ್
CBSE ಶಾಲಾ ಕ್ಯಾಂಪಸ್‌ಗಳಲ್ಲಿ 'ಶುಗರ್​​ ಬೋರ್ಡ್​​​​​' ಸ್ಥಾಪನೆ
2nd PUC Exam-2 Result: ದ್ವಿತೀಯ ಪಿಯು ಪರೀಕ್ಷೆ -2 ಫಲಿತಾಂಶ ಪ್ರಕಟ

ಪ್ರಸಕ್ತ ಶೈಕ್ಷಣಿಕ ವರ್ಷ 2025-26 ನೇ ಸಾಲಿಗೆ ರಾಜ್ಯದಲ್ಲಿ ಎಲ್ಲಾ ಸರ್ಕಾರಿ ಶಾಲೆಗಳು ಮೇ 29 ರಿಂದ ಪುನರಾರಂಭಗೊಳ್ಳುತ್ತಿವೆ. ಆದರೆ ಈ ವ್ಯಾಪಕ ಮಳೆಯ ನಡುವೆಯೂ ಕೆಲವು ಖಾಸಗಿ ಶಾಲೆಗಳು ಈಗಾಗಲೇ ಆರಂಭಗೊಂಡಿವೆ. ಮಕ್ಕಳಿಗೆ ಬೇಸಿಗೆ ರಜೆ ನೀಡದೆ ಶೈಕ್ಷಣಿಕ ವರ್ಷದ ತರಗತಿಗಳನ್ನ ಆರಂಭ ಮಾಡಿವೆ. ಪೋಷಕರಿಗೂ ಮಕ್ಕಳನ್ನ ಈ ಸಮಯದಲ್ಲಿ ಶಾಲೆಗೆ ಕಳಿಸಲು ಇಷ್ಟವಿಲ್ಲ. ಆದರೆ ಈ ಮಧ್ಯೆ ಖಾಸಗಿ ಶಾಲೆಗಳು ಆರಂಭಿಸಿದ್ದು, ತರಗತಿಗಳನ್ನು ಶುರು ಮಾಡುತ್ತಿವೆ.

ಕೆಲವು ಶಾಲೆಗಳಿಂದ ಮಕ್ಕಳನ್ನ ಶಾಲೆಗೆ ಕಳಿಸುವಂತೆ ವಾಟ್ಸ್ ಆ್ಯಪ್ ಮೇಸೆಜ್ ಕಳುಹಿಸಲಾಗುತ್ತಿದೆಯಂತೆ. ಈ ಕೆಲವು ಶಾಲೆಗಳು ಈಗಾಗಲೇ ಮುಂದಿನ ತರಗತಿಗೆ ಬಡ್ತಿ ಪಡೆದ ವಿದ್ಯಾರ್ಥಿಗಳಿಗೆ ತರಗತಿ ನಡೆಸುತ್ತಿದ್ದು, ಈ ಬಗ್ಗೆ ಶಿಕ್ಷಣ ಇಲಾಖೆ ಕ್ರಮಕೈಗೊಳ್ಳುವಂತೆ ಪೋಷಕರ ಸಮನ್ವಯ ಸಮಿತಿ ಅಧ್ಯಕ್ಷ ಯೋಗಾನಂದ್​ ಒತ್ತಾಯಿಸಿದ್ದಾರೆ.

ಇನ್ನು ಈ ಬಗ್ಗೆ ಕೆಲವು ಖಾಸಗಿ ಶಾಲೆಗಳ ಒಕ್ಕೂಟಕ್ಕೂ ದೂರು ಬಂದಿವೆ. ಹೀಗಾಗಿ ಕೆಲವು ಖಾಸಗಿ ಶಾಲೆಗಳ ಒಕ್ಕೂಟ ಈ ಬಗ್ಗೆ ಸೂಕ್ತ ಸೂಚನೆ ನೀಡಿದೆ. ಜೊತೆಗೆ ಬೇಸಿಗೆ ರಜೆಯಲ್ಲಿ ಶಾಲೆ ನಡೆಸುವುದು ಸೂಕ್ತವಲ್ಲ, ಇತಂಹ ಶಾಲೆ ವಿರುದ್ಧ ಕ್ರಮವಹಿಸುವಂತೆ ಖಾಸಗಿ ಶಾಲೆಗಳ ಒಕ್ಕೂಟ ಕೂಡ ಶಿಕ್ಷಣ ಇಲಾಖೆಗೆ ಮನವಿ ಮಾಡಿದೆ.

ಇದನ್ನೂ ಓದಿ: CBSE ಕ್ಯಾಂಪಸ್‌ಗಳಲ್ಲಿ ‘ಶುಗರ್​​ ಬೋರ್ಡ್​​​​​’ ಸ್ಥಾಪನೆ; ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಮಹತ್ವದ ನಿರ್ಧಾರ

ಸಿಲಿಕಾನ್ ಸಿಟಿಯಲ್ಲಿ ಈ ವರ್ಷ ಮಳೆಗಾಲದ ಅಬ್ಬರದ ನಡುವೆ ಖಾಸಗಿ ಶಾಲೆಗಳು ಬೇಸಿಗೆ ರಜೆಯಲ್ಲಿಯೂ ತರಗತಿಗೆ ಹಾಜರಾಗುವಂತೆ ಮಕ್ಕಳಿಗೆ ಒತ್ತಡ ಹಾಕಿದ್ದು, ಮಕ್ಕಳ ಹಕ್ಕುಗಳ ಉಲ್ಲಂಘಣೆ ಆರೋಪ ಕೇಳಿಬಂದಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಇತಂಹ ಶಾಲೆಗಳ ವಿರುದ್ಧ ಸೂಕ್ತ ಕ್ರಮವಹಿಸಬೇಕಿದೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.