ಉಚಿತವಾಗಿ 13 ಸಾವಿರ ಕೋರ್ಸ್‌ ಕಲಿಸಲಿರುವ ಪ್ರತಿಷ್ಠಿತ ಇನ್ಫೋಸಿಸ್ ಕಂಪನಿ: ರಾಜ್ಯ ಉನ್ನತ ಶಿಕ್ಷಣ ಪರಿಷತ್ ಜೊತೆ ಒಡಂಬಡಿಕೆ

Infosys Springboard: ಒಡಂಬಡಿಕೆಯ ಅನುಸಾರ ಈ ವಿಶೇಷ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಸಂಸ್ಥೆ ಒಟ್ಟು 13 ಸಾವಿರ ಕೋರ್ಸ್‌ಗಳನ್ನು ಉಚಿತವಾಗಿ ಕಲಿಸಲಿದೆ. ಕೋರ್ಸ್‌ಗಳ ಕಲಿಕೆಗೆ ಇನ್ಪೋಸಿಸ್ ಸಂಸ್ಥೆ ಜೊತೆಗೆ ವಿಟಿಯು ಮತ್ತು ಇತರ ವಿವಿಗಳು ಒಡಂಬಡಿಕೆ ಮಾಡಿಕೊಳ್ಳುತ್ತಿವೆ.

ಉಚಿತವಾಗಿ 13 ಸಾವಿರ ಕೋರ್ಸ್‌ ಕಲಿಸಲಿರುವ ಪ್ರತಿಷ್ಠಿತ ಇನ್ಫೋಸಿಸ್ ಕಂಪನಿ: ರಾಜ್ಯ ಉನ್ನತ ಶಿಕ್ಷಣ ಪರಿಷತ್ ಜೊತೆ ಒಡಂಬಡಿಕೆ
ಉಚಿತವಾಗಿ 13 ಸಾವಿರ ಕೋರ್ಸ್‌ ಕಲಿಸಲಿರುವ ಪ್ರತಿಷ್ಠಿತ ಇನ್ಫೋಸಿಸ್ ಕಂಪನಿ: ರಾಜ್ಯ ಉನ್ನತ ಶಿಕ್ಷಣ ಪರಿಷತ್ ಒಡಂಬಡಿಕೆ
Updated By: ಸಾಧು ಶ್ರೀನಾಥ್​

Updated on: Sep 06, 2022 | 2:09 PM

ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಕಂಪನಿಯಾದ ಇನ್ಫೋಸಿಸ್ ಜೊತೆಗೆ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಒಡಂಬಡಿಕೆ ಮಾಡಿಕೊಂಡಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ ನಾರಾಯಣ್ ಈ ಒಡಂಬಡಿಕೆಗೆ (MoU) ಸಹಿ ಹಾಕಿದ್ದಾರೆ. ಇನ್ಫೋಸಿಸ್ ಆನ್ ಲೈನ್ ಕಲಿಕೆ ಮತ್ತು ತರಬೇತಿ ವೇದಿಕೆ ಸ್ಪ್ರಿಂಗ್ ಬೋರ್ಡ್‌ನಿಂದ (Infosys Springboard, a digital platform) ಈ ವಿಶೇಷ ಕಾರ್ಯಕ್ರಮ ಆಯೋಜನೆಗೊಂಡಿದೆ.

ಒಡಂಬಡಿಕೆಯ ಅನುಸಾರ ಈ ವಿಶೇಷ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಸಂಸ್ಥೆ ಒಟ್ಟು 13 ಸಾವಿರ ಕೋರ್ಸ್‌ಗಳನ್ನು ಉಚಿತವಾಗಿ ಕಲಿಸಲಿದೆ. ಕೋರ್ಸ್‌ಗಳ ಕಲಿಕೆಗೆ ಇನ್ಪೋಸಿಸ್ ಸಂಸ್ಥೆ ಜೊತೆಗೆ ವಿಟಿಯು ಮತ್ತು ಇತರ ವಿವಿಗಳು ಒಡಂಬಡಿಕೆ ಮಾಡಿಕೊಳ್ಳುತ್ತಿವೆ. ಇನ್ಪೋಸಿಸ್ ಸಂಸ್ಥೆಯ ಸ್ಪ್ರಿಂಗ್ ಬೋರ್ಡ್ ಕೋರ್ಸ್‌ಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಜೊತೆ ಒಪ್ಪಂದ ಮಾಡಿಕೊಂಡಿದೆ. ಕಾರ್ಯಕ್ರಮದಲ್ಲಿ ಸಚಿವ ಡಾ. ಅಶ್ವತ್ ನಾರಯಣ್ (Higher Education Minister Dr C N Ashwath Narayan), ಇನ್ಫೋಸಿಸ್ ಉನ್ನತಾಧಿಕಾರಿ ತಿರುಮಲ ಆರೋಹಿ ಮತ್ತು ವಿವಿ ಕುಲಪತಿಗಳು ಭಾಗಿಯಾಗಿದ್ದರು.