NEET Result 2022: ಇಂದು ನೀಟ್ ಪರೀಕ್ಷೆ ಫಲಿತಾಂಶ, ರಿಸಲ್ಟ್ ನೋಡುವ ವಿಧಾನ ಹೇಗೆ?
ನೀಟ್ ಪರೀಕ್ಷೆ ಫಲಿತಾಂಶ ನಾಳೆ ಹೊರ ಬೀಳಲಿದೆ. NTA ಅಧಿಕೃತ ವೆಬ್‌ಸೈಟ್ neet.nta.nic.in ನಲ್ಲಿ ಫಲಿತಾಂಶ ಲಭ್ಯವಾಗಲಿದೆ.
ಬೆಂಗಳೂರು: NEET UG 2022 ಇಂದು ಬಹುನಿರೀಕ್ಷಿತ ರಾಷ್ಟ್ರೀಯ ಅರ್ಹತಾ & ಪ್ರವೇಶ ಪರೀಕ್ಷೆ ಫಲಿತಾಂಶ ಹೊರ ಬೀಳಲಿದೆ. ಜುಲೈ 17ರಂದು ದೇಶದ 546 ನಗರಗಳಲ್ಲಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳಿಗೆ ನಡೆದಿದ್ದ ನೀಟ್ ಪರೀಕ್ಷೆ ಫಲಿತಾಂಶ ಇಂದು (ಸೆಪ್ಟೆಂಬರ್ 7) ಬುಧವಾರದಂದು ಹೊರ ಬೀಳಲಿದೆ. NTA ಅಧಿಕೃತ ವೆಬ್‌ಸೈಟ್ neet.nta.nic.in ನಲ್ಲಿ ಫಲಿತಾಂಶ ಲಭ್ಯವಾಗಲಿದೆ. ಈ ವರ್ಷ 18 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿದ್ದರು.
NEET UG 2022 ಫಲಿತಾಂಶ ಡೌನ್ ಲೋಡ್ ಮಾಡುವ ವಿಧಾನ ಹೇಗೆ?
- ನೀಟ್ ಅಧಿಕೃತ ವೆಬ್‌ಸೈಟ್ neet.nta.nic.in ಅಥವಾ ntaresults.nic.in ಗೆ ಭೇಟಿ ನೀಡಿ.
- ಮುಖಪುಟದಲ್ಲಿ “NEET UG – 2022 Result 2022” ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಂತರ ನಿಮ್ಮ ಲಾಗಿನ್ ಐಡಿ, ಜನ್ಮ ದಿನಾಂಕ, ನೋಂದಣಿ ಸಂಖ್ಯೆಯನ್ನು ನಮೂದಿಸಿ.
- ಆಗ ನಿಮಗೆ ನೀಟ್ ಯುಜಿ ಫಲಿತಾಂಶ ಪರದೆಯ ಮೇಲೆ ಕಾಣಿಸುತ್ತದೆ.
- ಅದನ್ನು ಡೌನ್‌ಲೋಡ್ ಮಾಡಿಕೋಂಡು, ಪ್ರಿಂಟ್ ತೆಗೆದುಕೊಳ್ಳಿ.
ತಾಂತ್ರಿಕ ದೋಷಗಳಿಂದ ಜುಲೈ 17 ರಂದು ನಡೆದ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಹಾಜರಾಗಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 4 ರಂದು ನೀಟ್ ಮರು ಪರೀಕ್ಷೆಯನ್ನು ನಡೆಸಲಾಗಿತ್ತು. ಈ ವರ್ಷ 18 ಲಕ್ಷಕ್ಕೂ ಹೆಚ್ಚು (18,72,343) ಅಭ್ಯರ್ಥಿಗಳು NEET UG ಪರೀಕ್ಷೆಗೆ ಹಾಜರಾಗಿದ್ದರು.
13 ಭಾಷೆಗಳಲ್ಲಿ ನಡೆದಿದ್ದ ನೀಟ್ ಪರೀಕ್ಷೆ
MBBS/BDS/BAMS/BSMS/BUMS/BHMS ಪ್ರವೇಶಕ್ಕಾಗಿ ನಡೆದ ನೀಟ್ ಪರೀಕ್ಷೆಯನ್ನು 13 ಭಾಷೆಗಳಲ್ಲಿ ನಡೆಸಲಾಗಿತ್ತು. ಅಲ್ಲದೆ ಮೊದಲ ಬಾರಿಗೆ ಅಬುಧಾಬಿ, ಬ್ಯಾಂಕಾಕ್, ಕೊಲಂಬೊ, ದೋಹಾ, ಕಠ್ಮಂಡು, ಕೌಲಾಲಂಪುರ್, ಲಾಗೋಸ್, ಮನಾಮ, ಮಸ್ಕತ್, ರಿಯಾದ್, ಶಾರ್ಜಾ, ಸಿಂಗಾಪುರ್ ಜೊತೆಗೆ ದುಬೈ ಮತ್ತು ಕುವೈತ್ ಸಿಟಿಯಲ್ಲಿ ಈ ಪರೀಕ್ಷೆಯನ್ನು ನಡೆಸಲಾಗಿದೆ. ಭಾರತ ಹೊರತು ಪಡಿಸಿ 14 ನಗರಗಳಲ್ಲಿ ಪರೀಕ್ಷೆ ನಡೆದಿದೆ.
Published On - 8:07 pm, Tue, 6 September 22