ಬೆಂಗಳೂರು ವಿವಿಗೂ ಬಂತು AI ಕೋರ್ಸ್; ಮೂರು ವರ್ಷದ ಎಐ ಪದವಿ ಶುರು ಮಾಡಿದ ಜ್ಞಾನಭಾರತಿ ವಿವಿ

AI degree courses; ಜಗತ್ತಿನಾದ್ಯಂತ ಸದ್ಯ ಎಐ ಅಥವಾ ಕೃತಕ ಬುದ್ಧಿಮತ್ತೆ ಹವಾ ಹೆಚ್ಚಾಗಿದೆ. ಒಂದೆಡೆ ಹಲವು ಉದ್ದಯೋಗಾವಕಾಶಗಳನ್ನು ಕಸಿದುಕೊಳ್ಳುವ ಆತಂಕ ಸೃಷ್ಟಿಸಿರುವ ಈ ತಂತ್ರಜ್ಞಾನ ಮತ್ತೊಂದೆಡೆ, ಹೊಸ ಉದ್ಯೋಗಾವಕಾಶಗಳನ್ನೂ ಸೃಷ್ಟಿಸುತ್ತಿದೆ. ಹೀಗಾಗಿ ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯ ಹೊಸ ಎಐ ಪದವಿ ಕೋರ್ಸ್​ ಆರಂಭಿಸಿದೆ. ನೂತನ ಕೋರ್ಸ್​ ಬಗ್ಗೆ ವಿವರ ಇಲ್ಲಿದೆ.

ಬೆಂಗಳೂರು ವಿವಿಗೂ ಬಂತು AI ಕೋರ್ಸ್; ಮೂರು ವರ್ಷದ ಎಐ ಪದವಿ ಶುರು ಮಾಡಿದ ಜ್ಞಾನಭಾರತಿ ವಿವಿ
ಬೆಂಗಳೂರು ವಿವಿಗೂ ಬಂತು AI ಕೋರ್ಸ್ (ಸಾಂದರ್ಭಿಕ ಚಿತ್ರ)
Follow us
Vinay Kashappanavar
| Updated By: Ganapathi Sharma

Updated on: Jun 24, 2024 | 7:56 AM

ಬೆಂಗಳೂರು, ಜೂನ್ 24: ಇತ್ತೀಚಿನ ದಿನಗಳಲ್ಲಿ ಎಲ್ಲ ಕಾರ್ಯ ಕ್ಷೇತ್ರಗಳಿಗೂ ಕೃತಕ ಬುದ್ಧಿಮತ್ತೆ ಅಥವಾ ಎಐ (Artificial intelligence) ಕಾಲಿಟ್ಟಿದೆ. ಜಾಗತಿಕ ಮಟ್ಟದಲ್ಲಿ ಸಖತ್ ಬೇಡಿಕೆಯನ್ನೂ ಈ ತಂತ್ರಜ್ಞಾನ ಸೃಷ್ಟಿ ಮಾಡಿದೆ. ಇದರಿಂದಾಗಿ ಉದ್ಯೋಗಾವಕಾಶಗಳು ಕಡಿಮೆಯಾಗುವುದು ಒಂದೆಡೆಯಾದರೆ ಹೊಸ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಲೂ ಇವೆ. ಹೀಗಾಗಿ ಈಗ ಎಲ್ಲಡೆ ಎಐ ಕೋರ್ಸ್​​​ಗೆ ಬೇಡಿಕೆ ಆರಂಭವಾಗಿದೆ. ಹೀಗಾಗಿ ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯ (Bangalore University) 2024-25 ನೇ ಶೈಕ್ಷಣಿಕ ಸಾಲಿಗೆ ಎಐ ಪದವಿ ಕೋರ್ಸ್​​ಗಳನ್ನು ಪರಿಚಯಿಸಿದೆ. ಮೂರು ವಿಷಯಗಳಲ್ಲಿ ಪದವಿ ದೊರೆಯಲಿದ್ದು, ಅವುಗಳೆಂದರೆ ಎಐ ಡಾಟಾ ಅನಾಲಿಸಿಸ್, ಎಐ ಮಿಷನ್ ಲರ್ನಿಂಗ್, ಹಾಗೂ ಪುಲ್ ಸ್ಟಾಕ್ ಡೆವಲೆಪಮೆಂಟ್ ಮೂರು ಆಗಿವೆ.

ಪರೀಕ್ಷೆಯಲ್ಲಿ ನಕಲು ಪತ್ತೆಹಚ್ಚಲು, ಟ್ರಾಫಿಕ್ ನಿಯಂತ್ರಣಕ್ಕೆ ಸೇರಿದಂತೆ ಸಾಕಷ್ಟು ಕ್ಷೇತ್ರಗಳಲ್ಲಿ ಸದ್ಯ AI ತಂತ್ರಜ್ಞಾನಗಳ ಬಳಕೆ ಮಾಡಲಾಗುತ್ತಿದೆ. ಹೀಗಾಗಿ ಬೆಂಗಳೂರು ಜ್ಞಾನ ಭಾರತಿ ವಿಶ್ವವಿದ್ಯಾಲಯ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಕೆಯ ಕೋರ್ಸ್ ಆರಂಭಕ್ಕೆ ಮುಂದಾಗಿದೆ.

ಎಐ ಕೋರ್ಸ್​​ಗೆ ಯಾರು ಅರ್ಹರು?

ಪಿಯುಸಿ ಬಳಿಕ ವೃತ್ತಿಪರ ಕೋರ್ಸ್​​ಗಳ ಹುಡಕಾಟದಲ್ಲಿರುವ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಈ ಕೋರ್ಸ್ ಆರಂಭಿಸಲಾಗುತ್ತಿದೆ. ಇಂಥ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡೇ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಬೇಡಿಕೆ ಸೃಷ್ಟಿಮಾಡಿರುವ ಈ ಕೋರ್ಸ್ ಶುರು ಮಾಡಲು ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯ ಮುಂದಾಗಿದೆ ಎಂದು ಕುಲಪತಿ ಜಯಕರ ಶೆಟ್ಟಿ ತಿಳಿಸಿದ್ದಾರೆ.

ಇದನ್ನೂ ಓದಿ: ನೀಟ್ ಪರೀಕ್ಷೆಯಲ್ಲಿ ಅಕ್ರಮ: ಕೇಂದ್ರ ಸರ್ಕಾರದ ನಿರ್ಧಾರಗಳನ್ನು ಪ್ರಶಂಸಿದ ಭಾರತೀಯ ವೈದ್ಯಕೀಯ ಸಂಘ

ಸದ್ಯ ಮೂರು ವರ್ಷದ ಮೂರು ಬೇರೆ ಬೇರೆಯಾದ ಎಐ ಕೋರ್ಸ್​​ಗಳನ್ನ ಶುರು ಮಾಡಲಾಗುತ್ತಿದ್ದು, ಇದರ ಬೇಡಿಕೆ ನೋಡಿಕೊಂಡು ಮುಂದಿನ ದಿನಗಳಲ್ಲಿ ಸ್ನಾತ್ತೋಕತ್ತರ ಪದವಿಯಲ್ಲಿಯೂ ಈ ತಂತ್ರಜ್ಞಾನ ಕೋರ್ಸ್ ಆರಂಭಿಸುವ ಬಗ್ಗೆ ವಿಶ್ವವಿದ್ಯಾಲಯ ಚಿಂತನೆ ಮಾಡಿದೆ. ಹೀಗಾಗಿ ಪಿಯುಸಿ ಬಳಿಕ ಟೆಕ್ನಿಕಲ್ ಕೋರ್ಸ್ ಮೊರೆ ಹೋಗಬೇಕು ಎಂಬವರಿಗೆ ಇದೊಂದು ಒಳ್ಳೆಯ ಅವಕಾಶವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ