CET Exam 2023: ಬೆಂಗಳೂರು ಸಿಇಟಿ ಅಭ್ಯರ್ಥಿಗಳಿಗೆ ವಿಶೇಷ ಸೂಚನೆ; ಟ್ರಾಫಿಕ್ ತೊಂದರೆಯಿಂದ ದೂರವಿರಲು ಈ ಸೂಚನೆಗಳನ್ನು ಗಮನಿಸಿ
ಕರ್ನಾಟಕ ಪರೀಕ್ಷಾ ಪ್ರಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯ ಅವರು ಈ ಬಾರಿ 2.6 ಲಕ್ಷ ವಿಧ್ಯಾರ್ಥಿಗಳು ಸಿಇಟಿ ಪರೀಕ್ಷೆಯನ್ನು ಪರೀಕ್ಷೆ ಬರೆಯಲಿದ್ದಾರೆ ಎಂದು ತಿಳಿಸಿದ್ದಾರೆ. ಟ್ರಾಫಿಕ್ ಸಮಸ್ಯೆಯಿಂದ ದೂರವಿರಲು ಈ ಮಾಹಿತಿಯನ್ನು ಗಮನಿಸಿ
ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಮೇ 20 ಮತ್ತು 21ರಂದು ಸಾಮಾನ್ಯ ಪ್ರವೇಶ ಪರೀಕ್ಷೆ (CET) ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ. ಮತ್ತೊಂದೆಡೆ ನಾಳೆ, ಶನಿವಾರ ಮಧ್ಯಾಹ್ನವೇ 12.30ಕ್ಕೆ ಬೆಂಗಳೂರಿನಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಏರ್ಪಡಿಸಿರುವುದರಿಂದ ಪರೀಕ್ಷಾರ್ಥಿಗಳಿಗೆ ಟ್ರಾಫಿಕ್ ಸಮಸ್ಯೆ (Traffic Problems) ಭೀತಿ ಶುರುವಾಗಿದೆ. ಕರ್ನಾಟಕ ಪರೀಕ್ಷಾ ಪ್ರಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯ ಅವರು ಈ ಬಾರಿ 2.6 ಲಕ್ಷ ವಿಧ್ಯಾರ್ಥಿಗಳು ಸಿಇಟಿ ಪರೀಕ್ಷೆಯನ್ನು ಬರೆಯಲಿದ್ದಾರೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಒಟ್ಟು 592 ಪರೀಕ್ಷೆ ಸೆಂಟರ್ಗಳಿದ್ದು, ಬೆಂಗಳೂರಿನಲ್ಲಿ ಒಟ್ಟು 122 ಸೆಂಟರ್ಗಳಿವೆ ಎಂದು ತಿಳಿಸಿದ್ದಾರೆ. ಸುಮಾರು 23 ಸಾವಿರ ಸಿಬ್ಬಂದಿಗಳು ಪರೀಕ್ಷಾ ನಿರ್ವಹಣೆಯ ಕೆಲಸದಲ್ಲಿ ತೊಡಗಲಿದ್ದಾರೆ.
“ಯಾವುದೇ ಸಮಸ್ಯೆಗಳು ಬಾರದಂತೆ ಎಲ್ಲಾ ಸಿದ್ದತೆ ಮಾಡಿಕೊಂಡಿದ್ದೇವೆ. ಕಂಠೀರವ ಸ್ಟೇಡಿಯಂ ಸುತ್ತ – ಮುತ್ತ ಇರುವ ಪರೀಕ್ಷಾ ಕೇಂದ್ರಗಳ ಮಾಹಿತಿಗಳನ್ನ ವೆಬ್ಸೈಟ್ನಲ್ಲಿ ಹಾಕುತ್ತೇವೆ. ಈ ಸ್ಟೇಡಿಯಂ ಸುತ್ತ – ಮುತ್ತಾ ಸೆಂಟರ್ಗಳಿರುವ ವಿಧ್ಯಾರ್ಥಿಗಳು ಎರಡು ಗಂಟೆಗೂ ಮೊದಲೇ ಬರಬೇಕು” ಎಂದು ರಮ್ಯಾ ತಿಳಿಸಿದ್ದಾರೆ.
8:30 ರ ಹೊತ್ತಿದೆ ಪರೀಕ್ಷೆ ಕೇಂದ್ರಗಳಲ್ಲಿ ಅಭ್ಯರ್ಥಿಗಳು ಇರತಕ್ಕದ್ದು. ಪಿಸಿಎಂ ಬರೆಯುವ ವಿಧ್ಯಾರ್ಥಿಗಳು ಸ್ವಲ್ಪ ಬೇಗ ಬರಬೇಕಾಗಬಹುದು. ಮಧ್ಯಹ್ನ ಪರೀಕ್ಷೆಗೆ ಬರುವವರು ಟ್ರಾಫಿಕ್ ನಲ್ಲಿ ಸಿಕ್ಕಿಕೊಳ್ಳುವ ಸಾಧ್ಯಾತೆಗಳು ಹೆಚ್ಚು ಎಂಬುದನ್ನು ಗಮನಿಸಬೇಕು.
ಅಭ್ಯರ್ಥಿಗಳಿಗೆ ಸೂಚನೆ:
- ಅಭ್ಯರ್ಥಿಗಳು ಬ್ಲಾಕ್ , ಬ್ಲೂ ಪೆನ್ನುಗಳನ್ನ ತೆಗೆದುಕೊಂಡು ಬರಬೇಕು.
- ವಾಚ್ ಹಾಗೂ ಜುವೆಲ್ಲರಿ ಹಾಕುವಂತಿಲ್ಲ
- ಅರ್ಧ ತೋಳಿನ ಶರ್ಟ್ಗಳನ್ನ ಧರಿಸಬೇಕು
- ಹಾಲ್ ಟಿಕೇಟ್ ಮರೆಯದೆ ತರಬೇಕು
- ಎಲ್ಲೆ ಟ್ರಾಫಿಕ್ ಸಮಸ್ಯೆ ಇದ್ರು ಹಾಲ್ ಟಿಕೇಟ್ ತೋರಿಸಿ ನೀವು ಸೆಂಟರ್ಗಳನ್ನ ತಲುಪಬಹುದು
- ರೋಡ್ಗಳು ಕ್ಲೋಸ್ ಆಗಿದ್ರು ಟ್ರಾಫಿಕ್ ಪೋಲಿಸರು ಅನುವು ಮಾಡಿಕೊಡ್ತಾರೆ
- ಆದ್ರೆ ಹಾಲ್ ಟಿಕೇಟ್ ಕಡ್ಡಾಯವಾಗಿ ತೋರಿಸಬೇಕಾಗುತ್ತದೆ. ಪೋಷಕರಿಗೂ ಜನಸಂದಣಿಯಿಂದ ಬಿಡಿಸಲಾಗುತ್ತದೆ
ಇದನ್ನೂ ಓದಿ: ಸಿಇಟಿ ಪರೀಕ್ಷೆ ದಿನವೇ ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಪ್ರಮಾಣ ವಚನ: ವಿದ್ಯಾರ್ಥಿಗಳಿಗೆ ಟ್ರಾಫಿಕ್ ಸಮಸ್ಯೆ ಭೀತಿ
ಇದರ ಜೊತೆಗೆ ಈಗಾಗಲೇ ಮಕ್ಕಳಿಗೂ ಬಲ್ಕ್ ಮೆಸೇಜ್ ಕಳುಹಿಸಲಾಗುತ್ತಿದೆ. ಜೊತೆಗೆ ಕಾಲ್ ಮಾಡಿ ಹೇಳಾಲಾಗುತ್ತಿದೆ. ಸೆಂಟ್ ಜೋಸೆಫ್ ಕಾಲೇಜ್ ಸೆಂಟರ್ ಇರುವ ಅಭ್ಯರ್ಥಿಗಳಿಗೆ ಸಾಕಷ್ಟು ಸಮಸ್ಯೆಯಾಗುವ ಸಾಧ್ಯಾತೆ ಇದೆ. ಹೀಗಾಗ ಈ ಸೆಂಟರ್ ನ ವಿಧ್ಯಾರ್ಥಿಗಳು ಸ್ವಲ್ಪ ಬೇಗ ತೆರಳಬೇಕಾಗುತ್ತದೆ. ಸಿಇಟಿ ವಿಧ್ಯಾರ್ಥಿಗಳಿಗೆ ತೊಂದರೆಯಾಗದಂತೆ ಟ್ರಾಫಿಕ್ ಪೋಲಿಸರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ರಮ್ಯಾ ಅವರು ಭರವಸೆ ನೀಡಿದ್ದಾರೆ.
Published On - 1:26 pm, Fri, 19 May 23