CET Seats Extended: ಕಾಲೇಜುಗಳ ಆಯ್ಕೆ, ಶುಲ್ಕ ಪಾವತಿ, ದಾಖಲೆ ಸಲ್ಲಿಕೆ ದಿನಾಂಕವನ್ನು ವಿಸ್ತರಿಸಿದ ಕೆಇಎ
ಕರ್ನಾಟಕ ಶಿಕ್ಷಣ ಪ್ರಾಧಿಕಾರ (ಕೆಇಎ) ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಮೂಲಕ ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಸೀಟು ಪಡೆದವರಿಗೆ ಕಾಲೇಜುಗಳ ಆಯ್ಕೆ, ಶುಲ್ಕ ಪಾವತಿ ಮತ್ತು ಕಾಲೇಜುಗಳಿಗೆ ಬರುವ ದಿನಾಂಕಗಳನ್ನು ವಿಸ್ತರಿಸಿದೆ.
ಬೆಂಗಳೂರು, ಸೆ.11: ಕರ್ನಾಟಕ ಶಿಕ್ಷಣ ಪ್ರಾಧಿಕಾರ (ಕೆಇಎ) ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಮೂಲಕ ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಸೀಟು ಪಡೆದವರಿಗೆ ಕಾಲೇಜುಗಳ ಆಯ್ಕೆ, ಶುಲ್ಕ ಪಾವತಿ ಮತ್ತು ಕಾಲೇಜುಗಳಿಗೆ ಬರುವ ದಿನಾಂಕಗಳನ್ನು ವಿಸ್ತರಿಸಿದೆ. ಇದರಿಂದ ಶುಲ್ಕ ಪಾವತಿ ಮಾಡುವ ಸಮಯದ ವಿಸ್ತರಣೆ ಮಾಡಿರುವುದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸಹಾಯವಾಗಿದೆ ಎಂದು ಕೆಇಎ ಹೇಳಿದೆ. ಇನ್ನು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸಲು, ಕೆಇಎ, ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಅಗ್ರಿಕಲ್ಚರ್, ವೆಟರ್ನರಿ, ಫಾರ್ಮಸಿ, ಬಿಎಸ್ಸಿ (ನರ್ಸಿಂಗ್) ಮತ್ತು ಹೆಚ್ಚಿನ ಸೀಟುಗಳ ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಸೀಟು ಪಡೆದ ಅಭ್ಯರ್ಥಿಗಳಿಗೆ ಆಯ್ಕೆ, ಶುಲ್ಕ ಪಾವತಿ, ಕಾಲೇಜಿಗೆ ಬರುವ ದಿನಾಂಕವನ್ನು ಎರಡು ದಿನಗಳವರೆಗೆ ವಿಸ್ತರಣೆ ಮಾಡಲಾಗಿದೆ.
ಇನ್ನು ಅಭ್ಯರ್ಥಿಗಳ ಆಯ್ಕೆಯ ಪ್ರಕ್ರಿಯೆಗಳನ್ನು ಸೆಪ್ಟೆಂಬರ್ 11, 11:59 pm ವರೆಗೆ ವಿಸ್ತರಿಸಲಾಗಿದೆ ಎಂದು KEA ಶನಿವಾರ ತಿಳಿಸಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ನಾಲ್ಕು ಆಯ್ಕೆಗಳು ಇರುತ್ತದೆ. ಇದಲ್ಲದೆ, ಚಾಯ್ಸ್-1 ಅಥವಾ ಚಾಯ್ಸ್-2 ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯ ದಿನಾಂಕವನ್ನು ಸೆಪ್ಟೆಂಬರ್ 13 ರವರೆಗೆ ವಿಸ್ತರಿಸಲಾಗಿದೆ.
ಇದನ್ನೂ ಓದಿ:KCET 2023ರ ಎರಡನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಇಂದು ಬಿಡುಗಡೆ; ಸಮಯ, ಪರಿಶೀಲಿಸುವ ಹಂತಗಳನ್ನು ತಿಳಿಯಿರಿ
ಚಾಯ್ಸ್-1 ಮೂಲಕ ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಪ್ರವೇಶ ಆದೇಶಗಳನ್ನು ಸೆಪ್ಟೆಂಬರ್ 13 ರವರೆಗೆ ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗಿದೆ. ಮತ್ತು ಸೆಪ್ಟೆಂಬರ್ 14, ಸಂಜೆ 5:30ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ಕೆಇಎ ನಿರ್ದೇಶಕಿ ರಮ್ಯಾ ಎಸ್ ತಿಳಿಸಿದ್ದಾರೆ. ಇನ್ನು ಇದಕ್ಕೂ ಮುನ್ನ ಸೆಪ್ಟೆಂಬರ್ 8, ಶುಕ್ರವಾರದಂದು ಕೆಇಎ ಚಲನ್‌ಗಳನ್ನು ಸಂಗ್ರಹಿಸಿದ ನಂತರ ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿ ಮತ್ತು ಇನ್ನಿತರ ದಾಖಲೆಗಳನ್ನು ನೀಡಲು ಸೆಪ್ಟೆಂಬರ್ 11ರವರೆಗೆ ಅವಕಾಶವನ್ನು ನೀಡಿತ್ತು. ಆದರೆ ಶನಿವಾರ, ಭಾನುವಾರ ಬ್ಯಾಂಕ್‌ಗಳಿಗೆ ರಜೆ ಮತ್ತು ದಾಖಲೆಗಳನ್ನು ಮತ್ತು ಶುಲ್ಕ ಪಾವತಿ ಮಾಡಲು ಇಂದು(ಸೆ.11 ಸೋಮವಾರ) ಕೊನೆಯ ದಿನಾಂಕವಾಗಿರುವುದರಿಂದ ಈ ಪ್ರಕ್ರಿಯೆಗಳನ್ನು 2 ದಿನಕ್ಕೆ ವಿಸ್ತರಣೆ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:23 am, Mon, 11 September 23