ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್​ ಬಂದ ಇಬ್ಬರು ‌ವಿದ್ಯಾರ್ಥಿನಿಯರು: ಮರು ಮೌಲ್ಯಮಾಪನದಲ್ಲಿ ಹೆಚ್ಚುವರಿ ಅಂಕ

ದಾವಣಗೆರೆ ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು ಎಸ್‌ಎಸ್‌ಎಲ್‌ಸಿ ಮರು‌ ಮೌಲ್ಯಮಾಪನ ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಮತ್ತು ಕರ್ನಾಟಕಕ್ಕೆ ಎರಡನೇ ಸ್ಥಾನ ಪಡೆದುಕೊಳ್ಳುವ ಮೂಲಕ ಸಾಧನೆ ಮಾಡಿದ್ದಾರೆ. ಇಬ್ಬರೂ 624 ಅಂಕಗಳನ್ನು ಪಡೆದುಕೊಂಡಿದ್ದಾರೆ. ಮರುಮೌಲ್ಯಮಾಪನದ ನಂತರ ಅವರಿಗೆ ತಲಾ ಎರಡು ಅಂಕಗಳು ಹೆಚ್ಚಾಗಿವೆ.

ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್​ ಬಂದ ಇಬ್ಬರು ‌ವಿದ್ಯಾರ್ಥಿನಿಯರು: ಮರು ಮೌಲ್ಯಮಾಪನದಲ್ಲಿ ಹೆಚ್ಚುವರಿ ಅಂಕ
ಐಜಾ ಫಾತಿಮಾ, ಯಶಸ್ವಿನಿ
Updated By: ಗಂಗಾಧರ​ ಬ. ಸಾಬೋಜಿ

Updated on: May 26, 2025 | 2:25 PM

ದಾವಣಗೆರೆ, ಮೇ 26: ಈ ವರ್ಷದ ಎಸ್​ಎಸ್​ಎಲ್​ಸಿ (SSLC) ಪರೀಕ್ಷೆ ಫಲಿತಾಂಶ ಈಗಾಗಲೇ ಪ್ರಕಟಗೊಂಡಿದ್ದು, ಶೇ.62.34ರಷ್ಟು ವಿದ್ಯಾರ್ಥಿಗಳು ಪಾಸ್​ ಆಗಿದ್ದಾರೆ. ಮರು‌ ಮೌಲ್ಯಮಾಪನಕ್ಕೆ ಕರ್ನಾಟಕ ಶಿಕ್ಷಣ ಇಲಾಖೆ ಅವಕಾಶ ನೀಡಿತ್ತು. ಅದರಂತೆ ಮರು‌ ಮೌಲ್ಯಮಾಪನ (Revaluation Result) ಸಲ್ಲಿಸಿದ್ದ ನಗರದ ಇಬ್ಬರು ವಿದ್ಯಾರ್ಥಿನಿಯರು ಇದೀಗ ಜಿಲ್ಲೆಗೆ ಪ್ರಥಮ ಸ್ಥಾನ ಬಂದಿದ್ದು, ಕರ್ನಾಟಕಕ್ಕೆ ಎರಡನೇ ರ‍್ಯಾಂಕ್​ ಪಡೆದುಕೊಂಡಿದ್ದಾರೆ. ಈ ಮುಂಚೆ ಪ್ರಕಟಗೊಂಡಿದ್ದ ಫಲಿತಾಂಶದಲ್ಲಿ ಕೆಲ ವಿಷಯಗಳಲ್ಲಿ ಕಡಿಮೆ ಅಂಕ ಬಂದಿತ್ತು. ಇದೀಗ ಮರು‌ ಮೌಲ್ಯಮಾಪನ ಬಳಿಕ ವಿದ್ಯಾರ್ಥಿಗಳು ನಿರೀಕ್ಷಿಸಿದಂತೆ ಅಂಕ ಪಡೆದುಕೊಂಡಿದ್ದಾರೆ.

ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್​

ಜಿಲ್ಲೆಯ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಸರ್ಕಾರಿ ಉರ್ದು ಶಾಲೆಯ ಐಜಾ ಫಾತಿಮಾ 625ಕ್ಕೆ 624 ಅಂಕ ಪಡೆದರೆ, ದಾವಣಗೆರೆ ಸಿದ್ದಗಂಗಾ ಶಾಲೆಯ ಕೆಪಿ ಯಶಸ್ವಿನಿಗೂ ಸಹ 624 ಅಂಕ ಬಂದಿದೆ. ಆ ಮೂಲಕ ಇಬ್ಬರು ವಿದ್ಯಾರ್ಥಿನಿಯರು ಜಿಲ್ಲೆಗೆ ಪ್ರಥಮ ಸ್ಥಾನ ಹಂಚಿಕೊಂಡಿದ್ದು, ರಾಜ್ಯ ಎರಡನೇ ರ‍್ಯಾಂಕ್​ ಬಂದಿದ್ದಾರೆ.

ಇದನ್ನೂ ಓದಿ: ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದ ವಿದ್ಯಾರ್ಥಿ ಮರು ಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಪ್ರಥಮ

ಇದನ್ನೂ ಓದಿ
SSLC Result: ಮರುಮೌಲ್ಯ ಮಾಪನದಲ್ಲಿ ರಾಜ್ಯಕ್ಕೆ ಪ್ರಥಮ ಬಂದ ವಿದ್ಯಾರ್ಥಿ
SSLC Result 2025: SSLC ಮರು ಮೌಲ್ಯಮಾಪನ, ರಾಜ್ಯಕ್ಕೆ ಮತ್ತಿಬ್ಬರು ಟಾಪರ್
ಮೊಮ್ಮಗನ ಜತೆ SSLC ಪರೀಕ್ಷೆ ಬರೆದ 65ರ ಅಜ್ಜಿ ಪಾಸ್
ಬ್ರಿಟಿಷ್​ ಅಧಿಕಾರಿಗಳ ಮಕ್ಕಳು ಓದಿದ ಕೋಲಾರದ ಐತಿಹಾಸಿಕ ಶಾಲೆಯ ಕಥೆ ವ್ಯಥೆ!

ಐಜಾ ಫಾತಿಮಾಗೆ ವಿಜ್ಞಾನ ವಿಷಯದಲ್ಲಿ ಎರಡು ಅಂಕ ಹಾಗೂ ಯಶಸ್ವಿನಿಗೆ ಹಿಂದಿ ವಿಷಯದಲ್ಲಿ ಎರಡು ಅಂಕ ಮರು ಮೌಲ್ಯಮಾಪನದಲ್ಲಿ ಹೆಚ್ಚುವರಿಯಾಗಿ ಬಂದಿವೆ. ಮುಂಚೆ ಪ್ರಕಟಗೊಂಡಿದ್ದ ಫಲಿತಾಂಶದಲ್ಲಿ 622 ಅಂಕ ಪಡೆದ ಇಬ್ಬರು ವಿದ್ಯಾರ್ಥಿನಿಯರಿಗೆ ಮರು‌ ಮೌಲ್ಯಮಾಪನ ಬಳಿಕ 624 ಅಂಕ ಗಳಿಸಿದ್ದಾರೆ. ಆ ಮೂಲಕ ಅವರ ಕಾನ್ಫಿಡೆಂಟ್ ಕೈ ಹಿಡಿದಿದೆ.

ಎಲ್ಲಾ ವಿಷಯಗಳಲ್ಲಿ 100ಕ್ಕೆ ನೂರು ಅಂಕ

ಐಜಾ ಫಾತಿಮಾ ವಿಜ್ಞಾನ ವಿಷಯದಲ್ಲಿ 99 ಹಾಗೂ ಯಶಸ್ವಿನಿ ಕನ್ನಡದಲ್ಲಿ 124 ಹೊರತು ಪಡಿಸಿದರೆ, ಉಳಿದ ಎಲ್ಲಾ ವಿಷಯಗಳಲ್ಲಿ 100ಕ್ಕೆ ನೂರು ಅಂಕ ಪಡೆದುಕೊಂಡಿದ್ದಾರೆ. ಇದು ಅವರ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ.

ಇದನ್ನೂ ಓದಿ: Karnataka SSLC Result 2025: SSLC ಮರು ಮೌಲ್ಯಮಾಪನ, ಕರ್ನಾಟಕಕ್ಕೆ ಮತ್ತಿಬ್ಬರು ಟಾಪರ್, ಕೈ ಹಿಡಿದ ಕಾನ್ಫಿಡೆಂಟ್

ಇನ್ನು ನಾಲ್ಕನೇ ಸ್ಥಾನ ಗಳಿಸಿದ್ದ ಮಡಿಕೇರಿಯ ವಿದ್ಯಾರ್ಥಿ ಕೂಡ ಮರು ಮೌಲ್ಯಮಾಪನ ಬಳಿಕ ಕರ್ನಾಟಕಕ್ಕೆ ಪ್ರಥಮ ಸ್ಥಾನ ಬಂದಿದ್ದ. ತನ್ಮಯಿ ಎಂ. ಎನ್. ಮರು ಮೌಲ್ಯಮಾಪನ ಬಳಿಕ ರಾಜ್ಯಕ್ಕೆ ಪ್ರಥಮ ಬಂದಿದ್ದ.

ಇದಿನಿಂದ ಜೂನ್ 2ರವರೆಗೆ SSLC ಎರಡನೇ ಪರೀಕ್ಷೆ ನಡೆಯಲಿದೆ. ಇದರಲ್ಲೂ ಫೇಲ್​​ ಆದರೆ ಜೂನ್ 23-ಜೂನ್ 30ರಂದು ನಡೆಯುವ ಮೂರನೇ ಪರೀಕ್ಷೆಯ ಬಾಗಿಲು ಕೂಡ ತೆರೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:27 pm, Mon, 26 May 25