ಡಾ. ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯದಿಂದ 2022-23ನೇ ಸಾಲಿನ ವಿವಿಧ ಕೋರ್ಸ್‍ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
ಡಾ. ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯದಿಂದ 2022-23ನೇ ಸಾಲಿನ ವಿವಿಧ ಕೋರ್ಸ್ಗಳಿಗಾಗಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ ನೀಡಲಾಗಿದೆ.
ಬೆಂಗಳೂರು: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ (Dr. Gangubai Hangal University) ದಿಂದ 2022-23ನೆ ಸಾಲಿನ ಬಿ.ಪಿ.ಎ, ಎಂ.ಪಿ.ಎ, ಸರ್ಟಿಫಿಕೇಟ್ ಕೋರ್ಸ್, ಡಿಪ್ಲೋಮಾ, ಪಿ.ಜಿ.ಡಿಪ್ಲೋಮಾ ಹಾಗೂ ಡಿ.ಲಿಟ್ ಕೋರ್ಸ್‍ಗಳಿಗೆ ಪ್ರವೇಶಾತಿಗಳು ಪ್ರಾರಂಭವಾಗಿವೆ. ಬಿ.ಪಿ.ಎ ಹಾನರ್ಸ್ ನಾಲ್ಕು ವರ್ಷಗಳ ಕೋರ್ಸ್‍ನ್ನು ಹೊಸ ಶಿಕ್ಷಣ ನೀತಿ ಮಾದರಿಯದಾಗಿದ್ದು, ನಾಟಕ, ಭರತನಾಟ್ಯ, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, ಕನಾಟಕ ಶಾಸ್ತ್ರೀಯ ಸಂಗೀತ, ತಬಲಾ, ಮೃದಂಗ, ವೀಣಾ, ಪಿಟೀಲು, ಭಾಷಾ ಪತ್ರಿಕೆಗೆ ಪ್ರವೇಶ ಪಡೆಯಲು ಪಿ.ಯು.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ಎಂ.ಪಿ.ಎ ಕೋರ್ಸ್- ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಭರತನಾಟ್ಯ, ನಾಟಕ, ತಬಲ, ಮೃದಂಗ, ವೀಣೆ ಪ್ರವೇಶ ಪಡೆಯಲು ಯಾವುದೇ ವಿಷಯದಲ್ಲಿ ಪದವಿ ಹೊಂದಿರಬೇಕು ಮತ್ತು ತತ್ಸಮಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ಜೊತೆಗೆ ವಿಶ್ವವಿದ್ಯಾಲಯದ ಮೌಖಿಕ ಪರೀಕ್ಷೆಯಲ್ಲಿ ಅರ್ಹತೆ ಹೊಂದಿರಬೇಕು. ಡಿ.ಲಿಟ್ ಪ್ರವೇಶಕ್ಕೆ ಸಂಗೀತ, ನೃತ್ಯ, ನಾಟಕ ಹಾಗೂ ಪ್ರದರ್ಶನ ಕಲೆಗಳಲ್ಲಿ ಅಧ್ಯಯನ ನಡೆಸಿ ಉನ್ನತ ಮಟ್ಟದ ಪರಿಣಿತಿ ಹೊಂದಿರಬೇಕು.
ಆರು ತಿಂಗಳ ಸರ್ಟಿಫಿಕೇಟ್ ಕೋರ್ಸ್: ಭಕ್ತಿ ಸಂಗೀತ, ಸುಗಮ ಸಂಗೀತ, ಜನಪದ ಸಂಗೀತ, ರಂಗ ಸಂಗೀತ, ಭರತನಾಟ್ಯ, ನಾಟಕ, ಹಾರ್ಮೊನಿಯಂ, ತಬಲ, ಯೋಗ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಯಕ್ಷಗಾನ, ಗಮಕ, ಸಿತಾರ, ಒಡಿಸ್ಸಿ ಕೋರ್ಸ್‍ಗಳನ್ನು ಪ್ರತಿ ದಿನ ಸಂಜೆ 5.30 ಗಂಟೆಯಿಂದ 8.30 ಗಂಟೆಯವರೆಗೆ ಆರಂಭಿಸಲಾಗುವುದು. ಒಂದು ವರ್ಷದ ಡಿಪ್ಲೋಮಾ ಕೋರ್ಸ್ – ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಭರತನಾಟ್ಯ, ನಾಟಕ, ತಬಲ, ಮೃದಂಗ, ವೀಣೆ ಮತ್ತು ಯೋಗ ಪ್ರವೇಶಕ್ಕೆ ಪಿ.ಯು.ಸಿಯಲ್ಲಿ ತೇರ್ಗಡೆ ಹೊಂದಿರಬೇಕು.
ಒಂದು ವರ್ಷದ ಪಿ.ಜಿ. ಡಿಪ್ಲೋಮಾ ಕೋರ್ಸ್: ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಭರತನಾಟ್ಯ, ನಾಟಕ, ತಬಲ, ಮೃದಂಗ, ವೀಣೆ ಮತ್ತು ಯೋಗ ಪ್ರವೇಶಕ್ಕೆ ಯಾವುದೇ ಪದವಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ಈ ಎಲ್ಲಾ ಕೋರ್ಸ್‍ಗಳ ಪ್ರವೇಶಕ್ಕೆ ರೂ. 200/- ದಂಡ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆಯ ದಿನಾಂಕವಾಗಿದೆ.
ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದಲ್ಲಿ ಬರುವ ಎಲ್ಲಾ ಸ್ನಾತಕೋತ್ತರ / ಡಿಪ್ಲೋಮಾ / ಸರ್ಟಿಫಿಕೇಟ್ / ಡಿ.ಲಿಟ್ ಕಾರ್ಯಕ್ರಮಗಳ ಪ್ರವೇಶಾತಿಯನ್ನು ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ಮನಿರ್ವಾಹಕ ವ್ಯವಸ್ಥೆ ಪೊರ್ಟಲ್ ಮೂಲಕ ಮಾಡಲಾಗುವುದು. ಹೆಚ್ಚಿನ ಮಾಹಿತಿಯನ್ನು https://www.musicuniversity.ac.in ನಿಂದ ಪಡೆದುಕೊಳ್ಳಬಹುದು. ಆಸಕ್ತರು ಹೆಚ್ಚಿನ ವಿವರಗಳಿಗಾಗಿ ಇ-ಮೇಲ್ ವಿಳಾಸ musicuniversity.ac.in ಅಥವಾ registrar@ musicuniversity.ac.in ಮೂಲಕ ಸಂಪರ್ಕಿಸಬಹುದು. ಅಥವಾ ದೂರವಾಣಿ ಸಂ. 0821-2402141, ಮೊಬೈಲ್ ದೂರವಾಣಿ ಸಂಖ್ಯೆ 9880761877ನ್ನು ಸಂಪರ್ಕಿಸಲು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.