AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿ ರೋಡ್​ಶೋ ಎಫೆಕ್ಟ್; ಬೆಳಗಾವಿಯಲ್ಲಿ ಫಸ್ಟ್ ಪಿಯುಸಿ ಪರೀಕ್ಷೆ ಮಾ.6ಕ್ಕೆ ಮುಂದೂಡಿಕೆ

ಪಿಯು ಶಿಕ್ಷಣ ಇಲಾಖೆ ಹೊರಡಿಸಿದ ಅಧಿಕೃತ ಸೂಚನೆಯ ಪ್ರಕಾರ, ಫೆಬ್ರವರಿ 27, 2023 ರಂದು ನಿಗದಿಯಾಗಿದ್ದ ಪರೀಕ್ಷೆಯನ್ನು ಮಾರ್ಚ್ 6 ಕ್ಕೆ ಮುಂದೂಡಲಾಗಿದೆ. ಉಳಿದ ಪರೀಕ್ಷೆಗಳು ವೇಳಾಪಟ್ಟಿಯಂತೆ ನಡೆಯುತ್ತವೆ. ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾರ್ಚ್ 9, 2023 ರಿಂದ ಪ್ರಾರಂಭವಾಗಿ ಮಾರ್ಚ್ 29, 2023 ರಂದು ಮುಕ್ತಾಯಗೊಳ್ಳುತ್ತವೆ. 

ಮೋದಿ ರೋಡ್​ಶೋ ಎಫೆಕ್ಟ್; ಬೆಳಗಾವಿಯಲ್ಲಿ ಫಸ್ಟ್ ಪಿಯುಸಿ ಪರೀಕ್ಷೆ ಮಾ.6ಕ್ಕೆ ಮುಂದೂಡಿಕೆ
ಪರೀಕ್ಷೆ ಮುಂದೂಡಿಕೆ
ನಯನಾ ಎಸ್​ಪಿ
|

Updated on:Mar 01, 2023 | 2:15 PM

Share

ಬೆಳಗಾವಿ: ಪದವಿ ಪೂರ್ವ ಶಿಕ್ಷಣ ಇಲಾಖೆಯು ಬೆಳಗಾವಿಯಲ್ಲಿ ಫಸ್ಟ್ ಪಿಯುಸಿ ಪರೀಕ್ಷೆಗಳನ್ನು ಮುಂದೂಡಿದೆ. ಬೆಳಗಾವಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರೋಡ್‌ಶೋ ನಡೆಯುತ್ತಿದ್ದ ಕಾರಣಕ್ಕೆ ಮೊದಲನೇ ವರ್ಷದ ವಿದ್ಯಾರ್ಥಿಗಳಿಗೆ ಪಿಯಿಸಿ ಪರೀಕ್ಷೆಗಳನ್ನು ಮುಂದೂಡಲಾಯಿತು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಹೊರಡಿಸಿದ ಅಧಿಕೃತ ಸೂಚನೆ ಹೊರಡಿಸಿದೆ. ಫೆ. 27 ರಂದು ನಡೆಯಬೇಕಿದ್ದ ಪರೀಕ್ಷೆಯು ಈಗ ಮಾರ್ಚ್ 6 ರಂದು ನಡೆಯಲಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಹೊರಡಿಸಿದ ವೇಳಾಪಟ್ಟಿ ಪ್ರಕಾರ, ಮೊದಲನೇ ವರ್ಷದ ಪಿಯು ಪರೀಕ್ಷೆಗಳು ಫೆಬ್ರವರಿ 20, 2023 ರಂದು ಪ್ರಾರಂಭವಾಗಿ ಮಾರ್ಚ್ 3 ರಂದು ಮುಕ್ತಾಯಗೊಳ್ಳಬೇಕಿತ್ತು. ಆದರೆ, ಫೆ 27 ರಂದು ಬೆಳಗಾವಿಯಲ್ಲಿ ಪ್ರಧಾನಿ ಮೋದಿಯವರ 10 ಕಿಮೀ ಉದ್ದದ ರೋಡ್‌ಶೋ ನಡೆದ ಕಾರಣ, ಸರ್ಕಾರವು ಫೆ 27 ರಂದು ನಡೆಯ ಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲು ನಿರ್ಧರಿಸಿತು.

ಪದವಿ ಪೂರ್ವ ಶಿಕ್ಷಣ ಇಲಾಖೆ ಹೊರಡಿಸಿದ ಅಧಿಕೃತ ಸೂಚನೆಯ ಪ್ರಕಾರ, ಮೊದಲನೇ ಪಿಯುಸಿ ಪರೀಕ್ಷೆಗಳು ಈಗ ಮಾರ್ಚ್ 6, 2023 ರಂದು ನಡೆಯಲಿವೆ. ಇತಿಹಾಸ, ಭೌತಶಾಸ್ತ್ರ ಮತ್ತು ಮೂಲ ಗಣಿತ ಪರೀಕ್ಷೆಗಳು ಸೋಮವಾರ ನಡೆಯಬೇಕಿತ್ತು. ಈಗ ಅವುಗಳನ್ನು ಮುಂದಿನ ವಾರ ನಡೆಸಲಾಗುವುದು ಎಂದು ಅಧಿಕೃತ ವೇಳಾಪಟ್ಟಿಯಲ್ಲಿ ತಿಳಿಸಲಾಗಿದೆ.

ಪಿಯು ಶಿಕ್ಷಣ ಇಲಾಖೆ ಹೊರಡಿಸಿದ ಅಧಿಕೃತ ಸೂಚನೆಯ ಪ್ರಕಾರ, ಫೆಬ್ರವರಿ 27, 2023 ರಂದು ನಿಗದಿಯಾಗಿದ್ದ ಪರೀಕ್ಷೆಯನ್ನು ಮಾರ್ಚ್ 6 ಕ್ಕೆ ಮುಂದೂಡಲಾಗಿದೆ. ಉಳಿದ ಪರೀಕ್ಷೆಗಳು ವೇಳಾಪಟ್ಟಿಯಂತೆ ನಡೆಯುತ್ತವೆ. ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾರ್ಚ್ 9, 2023 ರಿಂದ ಪ್ರಾರಂಭವಾಗಿ ಮಾರ್ಚ್ 29, 2023 ರಂದು ಮುಕ್ತಾಯಗೊಳ್ಳುತ್ತವೆ.

ಇದೇ ಮೊದಲ ಬಾರಿಗೆ ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆಗಳಲ್ಲಿ ಮಲ್ಟಿಪಲ್ ಚಾಯ್ಸ್ ಪ್ರಶ್ನೆಗಳನ್ನು ನೀಡಲಿ ಶಿಕ್ಷಣ ಇಲಾಖೆ ನಿರ್ಧರಿಸಿದೆ. ದ್ವಿತೀಯ ಪಿಯುಸಿ 2023 ರ ವೇಳಾಪಟ್ಟಿಯನ್ನು ಇಲ್ಲಿ ಪರಿಶೀಲಿಸಿ

ಪರೀಕ್ಷೆಯ ದಿನಾಂಕ ವಿಷಯ
ಮಾರ್ಚ್ 9, 2023 ಕನ್ನಡ, ಅರೇಬಿಕ್
ಮಾರ್ಚ್ 11, 2023 ಗಣಿತ, ಶಿಕ್ಷಣ
ಮಾರ್ಚ್ 13, 2023 ಅರ್ಥಶಾಸ್ತ್ರ
ಮಾರ್ಚ್ 14, 2023
ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮನೋವಿಜ್ಞಾನ, ರಸಾಯನಶಾಸ್ತ್ರ, ಮೂಲ ಗಣಿತ
ಮಾರ್ಚ್ 15, 2023
ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಮಾರ್ಚ್ 16, 2023 ತರ್ಕಶಾಸ್ತ್ರ, ವ್ಯವಹಾರ ಅಧ್ಯಯನಗಳು
ಮಾರ್ಚ್ 17, 2023
ಮಾಹಿತಿ ತಂತ್ರಜ್ಞಾನ, ಚಿಲ್ಲರೆ ವ್ಯಾಪಾರ, ಆಟೋಮೊಬೈಲ್, ಆರೋಗ್ಯ ರಕ್ಷಣೆ, ಸೌಂದರ್ಯ ಮತ್ತು ಆರೋಗ್ಯ
ಮಾರ್ಚ್ 18, 2023 ಭೂಗೋಳ, ಜೀವಶಾಸ್ತ್ರ
ಮಾರ್ಚ್ 20, 2023 ಇತಿಹಾಸ, ಭೌತಶಾಸ್ತ್ರ
ಮಾರ್ಚ್ 21, 2023 ಹಿಂದಿ
ಮಾರ್ಚ್ 23, 2023 ಇಂಗ್ಲಿಷ್
ಮಾರ್ಚ್ 25, 2023 ರಾಜ್ಯಶಾಸ್ತ್ರ, ಅಂಕಿಅಂಶ
ಮಾರ್ಚ್ 27, 2023 ಅಕೌಂಟೆನ್ಸಿ, ಒಪ್ಶನಲ್ ಕನ್ನಡ, ಭೂವಿಜ್ಞಾನ, ಗೃಹ ವಿಜ್ಞಾನ
ಮಾರ್ಚ್ 29, 2023 ಸಮಾಜಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್

Published On - 1:02 pm, Wed, 1 March 23