ICAI CA Exam 2021: ಸಿಎ ಪರೀಕ್ಷಾರ್ಥಿಗಳೇ ಗಮನಿಸಿ; ಡಿಸೆಂಬರ್ನಲ್ಲಿ ನಡೆಯಲಿರುವ ಪರೀಕ್ಷೆಗೆ ನೋಂದಾಯಿಸಿಕೊಳ್ಳಿ
ಅಕ್ಟೋಬರ್ 11ರಂದು ಮಧ್ಯಾಹ್ನ 12 ಗಂಟೆಯಿಂದ ಅಕ್ಟೋಬರ್ 12ರ ರಾತ್ರಿ 11:59ರವರೆಗೂ ನೋಂದಣಿ ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ನೋಂದಣಿ ಶುಲ್ಕ ₹ 600.
ICAI CA Exam 2021: ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಡಿಸೆಂಬರ್ನಲ್ಲಿ ನಡೆಯಲಿರುವ ICAI CA Exam 2021 ರ ಅರ್ಜಿಯ ಪೋರ್ಟಲ್ನ್ನು ಮತ್ತೊಮ್ಮೆ ತೆರೆದಿದ್ದು ಅಭ್ಯರ್ಥಿಗಳಿಗೆ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. ICAI ಯ ಅಧಿಕೃತ ಜಾಲತಾಣ icai.org.ನಲ್ಲಿ ಅಭ್ಯರ್ಥಿಗಳು ಫಾರಂ ಫಿಲ್ ಮಾಡಿ ನೋಂದಾಯಿಸಿಕೊಳ್ಳಬಹುದು. ಅಕ್ಟೋಬರ್ 11ರಂದು ಮಧ್ಯಾಹ್ನ 12 ಗಂಟೆಯಿಂದ ಅಕ್ಟೋಬರ್ 12ರ ರಾತ್ರಿ 11:59ರವರೆಗೂ ನೋಂದಣಿ ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ನೋಂದಣಿ ಶುಲ್ಕ ₹ 600.
ಡಿಸೆಂಬರ್ ಆವೃತ್ತಿಯ ICAI CA Exam 2021ರ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಲು ಇದೇ ಅಂತಿಮ ಅವಕಾಶವಾಗಿದೆ. 1. ಅಧಿಕೃತ ಜಾಲತಾಣವಾದ icai.org.ಗೆ ತೆರಳಿ. https://icaiexam.icai.org/index1.php 2. ಎಕ್ಸಾಮಿನೇಷನ್ ಎಂದು ಬರೆಯಲಾದ ವಿಭಾಗವನ್ನು ಕ್ಲಿಕ್ ಮಾಡಿ 3. ಕ್ಯಾಂಡಿಡೇಟ್ಸ್ ಪೋರ್ಟಲ್ನಲ್ಲಿ ನಿಮ್ಮ ಐಡಿ ಮತ್ತು ಪಾಸ್ವರ್ಡ್ ನಮೂದಿಸಿ 4. ಅಗತ್ಯ ದಾಖಲಾತಿಗಳನ್ನು ಸಬ್ಮಿಟ್ ಮಾಡಿ ಮತ್ತು ನೋಂದಣಿ ಶುಲ್ಕ ಪಾವತಿಸಿ 5. ಸಬ್ಮಿಟ್ ಮಾಡಿದ ಅರ್ಜಿಯನ್ನು ಪ್ರಿಂಟ್ ತೆಗೆದು ಇಟ್ಟುಕೊಳ್ಳಿ
ಡಿಸೆಂಬರ್ 5ರಿಂದ 20ರ ಒಳಗೆ ICAI CA Exam 2021ನ್ನು ನಡೆಸುವುದಾಗಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಈಗಾಗಲೇ ತಿಳಿಸಿದೆ.
ಇದನ್ನೂ ಓದಿ:
ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟ; ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಮೊದಲ ಸ್ಥಾನ
ಶಿಕ್ಷಕನ ಹಾವ ಭಾವಕ್ಕೆ ಬೆರಗಾದ ವಿದ್ಯಾರ್ಥಿಗಳು; ಪಾಠದ ಮತ್ತಷ್ಟು ವಿಡಿಯೋಗಳು ವೈರಲ್