ದೆಹಲಿ: ಚಾರ್ಟರ್ಡ್ ಅಕೌಂಟಂಟ್ಸ್ ಆಫ್ ಇಂಡಿಯಾ ಇನ್ಸ್ಟಿಟ್ಯೂಶನ್ (ICAI) ಇಂದು ಸಿಎ ಫೌಂಡೇಶನ್ ಮತ್ತು ಫೈನಲ್ ಪರೀಕ್ಷೆಗಳ (ICAI CA Foundation and Final Exams Result) ಫಲಿತಾಂಶವನ್ನು ಇಂದು ಸಂಜೆ (ಸೆಪ್ಟೆಂಬರ್ 13) ಅಥವಾ ಸೆಪ್ಟೆಂಬರ್ 14 (ನಾಳೆ) ಘೋಷಣೆ ಮಾಡುವ ಸಾಧ್ಯತೆ ಇದೆ. ಸಿಎ ಫೌಂಡೇಶನ್ ಮತ್ತು ಫೈನಲ್ ಪರೀಕ್ಷೆಗಳು ಜುಲೈ 2021ರಲ್ಲಿ ನಡೆದಿದ್ದವು. ಇದೀಗ ಹಳೇ ಮತ್ತು ಹೊಸ ವರ್ಷನ್ ಕೋರ್ಸ್ ಎರಡೂ ವಿಭಾಗದವರ ಫಲಿತಾಂಶವೂ ಒಟ್ಟಿಗೇ ಬರಲಿದೆ.
ಐಸಿಎಐ ಸಿಎ ಫೌಂಡೇಶನ್ ಮತ್ತು ಫೈನಲ್ ಪರೀಕ್ಷೆಗಳನ್ನು ಬರೆದಿರುವವರು ತಮ್ಮ ಫಲಿತಾಂಶವನ್ನು ಸಂಸ್ಥೆಯ ವೆಬ್ಸೈಟ್ಗಳಾದ icaiexam.icai.org, caresults.icai.org and icai.nic.in ಮೂಲಕ ಪಡೆಯಬಹುದು. ಈ ವೆಬ್ಸೈಟ್ಗಳಿಗೆ ಹೋಗಿ ಅಲ್ಲಿ ರೋಲ್ನಂಬರ್, ನೋಂದಣಿ ಸಂಖ್ಯೆ ಅಥವಾ ಪಿನ್ ನಂಬರ್ಗಳನ್ನು ಒದಗಿಸಿದರೆ ಆನ್ಲೈನ್ ಮೂಲಕವೇ ಫಲಿತಾಂಶ ನೋಡಬಹುದಾಗಿದೆ.
ಸಿಎ (CA) ಫಲಿತಾಂಶ ನೋಡುವ ವಿಧಾನ ಇಲ್ಲಿದೆ..
1.ಮೊದಲು icaiexam.icai.org, caresults.icai.org ಅಥವಾ icai.nic.in-ಈ ಮೂರರಲ್ಲಿ ಯಾವುದಾದರೂ ವೆಬ್ಸೈಟ್ಗೆ ಭೇಟಿ ಕೊಡಿ
2.ಹೋಮ್ ಪೇಜ್ನಲ್ಲಿ ಪರೀಕ್ಷೆ ಫಲಿತಾಂಶ ಸಂಬಂಧ ಲಿಂಕ್ ಕೊಡಲಾಗಿದ್ದು, ಅದರ ಮೇಲೆ ಕ್ಲಿಕ್ ಮಾಡಿ.
3. ನಿಮ್ಮ ಮಾಹಿತಿಗಳನ್ನು ಹಾಕಿ ಲಾಗಿನ್ ಆಗಿ.
4. ಸ್ಕ್ರೀನ್ ಮೇಲೆ ನಿಮ್ಮ ಅಂಕಪಟ್ಟಿ ಕಾಣಿಸುತ್ತದೆ. ಅದನ್ನು ಡೌನ್ಲೋಡ್ ಮಾಡಿಕೊಳ್ಳಿ
ಈ ವಿಧಾನ ಹೊರತುಪಡಿಸಿದರೆ ಅಭ್ಯರ್ಥಿಗಳು icaiexam.icai.org ವೆಬ್ಸೈಟ್ನಲ್ಲಿ ತಮ್ಮ ಇ-ಮೇಲ್ ಐಡಿ ಮೂಲಕ ರಿಜಿಸ್ಟರ್ ಆಗಿಯೂ ಫಲಿತಾಂಶ ಪಡೆಯಬಹುದು. ಪ್ರಸ್ತುತ ವೆಬ್ಸೈಟ್ನಲ್ಲಿ ರಿಜಿಸ್ಟರ್ ಮಾಡಿಕೊಂಡರೆ ಅತ್ತ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ನಿಮ್ಮ ಮೇಲ್ಗೆ ನಿಮ್ಮ ಅಂಕ ಬರುತ್ತದೆ. ಸಿಎ ಫೌಂಡೇಶನ್ ಪರೀಕ್ಷೆ ಬರೆದವರು ಮತ್ತು ಅಂತಿಮ ಪರೀಕ್ಷೆ ಬರೆದವರು ಎರಡೂ ವಿಭಾಗದವರೂ ಈ ವಿಧಾನ ಅನುಸರಿಸಬಹುದಾಗಿದೆ ಎಂದು ಐಸಿಎಐ ತಿಳಿಸಿದೆ.
ಇದನ್ನೂ ಓದಿ: IPL 2021: ಹೋಟೆಲ್ ರೂಮ್ನಲ್ಲೇ ಅಭ್ಯಾಸ ಆರಂಭಿಸಿದ ಸನ್ರೈಸರ್ಸ್ ತಂಡದ ನಾಯಕ ಡೇವಿಡ್ ವಾರ್ನರ್
ಗಂಡನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಾಯಿಸಿ, ಶವವನ್ನ ಕಸದಂತೆ ಚರಂಡಿಗೆ ಹಾಕಿದ ತುಮಕೂರು ಮಹಿಳೆ