JEE Main 2022: ಈ ಬಾರಿಯೂ ಜೆಇಇ ಮುಖ್ಯ ಪರೀಕ್ಷೆ ಮುಂದೂಡುವ ಸಾಧ್ಯತೆ; ಶೀಘ್ರವೇ ದಿನಾಂಕ ಪ್ರಕಟ, ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ

ಕಳೆದ ಬಾರಿ ಕೊವಿಡ್ 19 ಸಾಂಕ್ರಾಮಿಕ ತೀವ್ರತೆ ಜಾಸ್ತಿ ಇರುವ ಕಾರಣ ಜೆಇಇ ಪರೀಕ್ಷೆಯನ್ನು ನಾಲ್ಕು ಸೆಷನ್ಸ್​ಗಳಲ್ಲಿ ನಡೆಸಲಾಗಿತ್ತು. ಮೊದಲ ಹಂತ ಮತ್ತು ಎರಡನೇ ಹಂತ ಬೇಗನೇ ಮುಗಿದು ಹೋಗಿದ್ದರೂ, ಉಳಿದೆರಡು ಹಂತದ ಪರೀಕ್ಷೆ ನಡೆಸಲು ಕೊವಿಡ್ 2ನೇ ಅಲೆ ಸಮಸ್ಯೆ ತಂದೊಡ್ಡಿತ್ತು.

JEE Main 2022: ಈ ಬಾರಿಯೂ ಜೆಇಇ ಮುಖ್ಯ ಪರೀಕ್ಷೆ ಮುಂದೂಡುವ ಸಾಧ್ಯತೆ; ಶೀಘ್ರವೇ ದಿನಾಂಕ ಪ್ರಕಟ, ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Jan 01, 2022 | 6:14 PM

ಕೊರೊನಾ ಬಂದಾಗಿನಿಂದಲೂ ಬಹುತೇಕ ಪರೀಕ್ಷೆಗಳು ನಡೆಯಲು ವಿಳಂಬವಾಗುತ್ತಲೇ ಇವೆ. ಅದರಲ್ಲೂ ಕಳೆದ ವರ್ಷ ಕೂಡ ಜೆಇಇ ಮುಖ್ಯ ಪರೀಕ್ಷೆ (JEE Main Exam) ಹಲವು ಬಾರಿ ಮುಂದೂಡಲ್ಪಟ್ಟಿತ್ತು. ಹಾಗೇ, ಈ ಬಾರಿಯೂ ಸಹ ರಾಷ್ಟ್ರಮಟ್ಟದ ಇಂಜನಿಯರಿಂಗ್​ ಪ್ರವೇಶ ಮುಖ್ಯ ಪರೀಕ್ಷೆ (JEE Main 2022) ಫೆಬ್ರವರಿ ತಿಂಗಳ ಬದಲು ಮಾರ್ಚ್​ನಲ್ಲಿ ನಡೆಯಬಹುದು ಎಂದು ಹೇಳಲಾಗಿದೆ. ಆದರೆ ಈ ಸಲಕ್ಕೆ ಕಾರಣ ಕೊರೊನಾ ಅಲ್ಲ, ಬದಲಿಗೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳು.

2022ರ ಜೆಇಇ ಮುಖ್ಯ ಪರೀಕ್ಷೆಯ ದಿನಾಂಕವನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಶೀಘ್ರವೇ ಘೋಷಣೆ ಮಾಡಲಿದೆ. ಹಾಗೇ, ಈ ಸಲವೂ ಕೂಡ ಮಾರ್ಚ್​, ಏಪ್ರಿಲ್​, ಮೇ, ಜೂನ್​ ತಿಂಗಳಲ್ಲಿ (4 ಸೆಷನ್ಸ್​)ಪರೀಕ್ಷೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ಬಾರಿ ಕೊವಿಡ್ 19 ಸಾಂಕ್ರಾಮಿಕ ತೀವ್ರತೆ ಜಾಸ್ತಿ ಇರುವ ಕಾರಣ ಜೆಇಇ ಪರೀಕ್ಷೆಯನ್ನು ನಾಲ್ಕು ಸೆಷನ್ಸ್​ಗಳಲ್ಲಿ ನಡೆಸಲಾಗಿತ್ತು. ಮೊದಲ ಹಂತ ಮತ್ತು ಎರಡನೇ ಹಂತ ಬೇಗನೇ ಮುಗಿದು ಹೋಗಿದ್ದರೂ, ಉಳಿದೆರಡು ಹಂತದ ಪರೀಕ್ಷೆ ನಡೆಸಲು ಕೊವಿಡ್ 2ನೇ ಅಲೆ ಸಮಸ್ಯೆ ತಂದೊಡ್ಡಿತ್ತು. ಇನ್ನುಳಿದಂತೆ ಹಳೇ ನಿಯಮಗಳೇ ಇಲ್ಲೂ ಅನ್ವಯ ಆಗುತ್ತವೆ. ಜೆಇಇ ಮುಖ್ಯ ಮತ್ತು ಇಂಜಿನಿಯರಿಂಗ್​ ಪ್ರವೇಶ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಪಡೆಯುವ ಅಭ್ಯರ್ಥಿಗಳು ಐಐಟಿ (Indian Institutes of Technology) ಪ್ರವೇಶಕ್ಕೆ ಅರ್ಹರಾಗುತ್ತಾರೆ.  ಇನ್ನು 2023ರ ಜೆಇಇ ಅಭ್ಯರ್ಥಿಗಳಿಗಾಗಿ ಜಂಟಿ ಪ್ರವೇಶ ಮಂಡಳಿ ಪಠ್ಯಕ್ರಮಗಳಲ್ಲಿ ಕೆಲವು ಬದಲಾವಣೆ ಮಾಡಿದೆ. ಈ ಹೊಸ ಪಠ್ಯಕ್ರಮ, ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಆ್ಯಂಡ್​ ಟ್ರೇನಿಂಗ್​ ಮತ್ತು ಜೆಇಇ ಮುಖ್ಯ ಪಠ್ಯಕ್ರಮಕ್ಕೆ ತುಂಬ ಹೋಲಿಕೆಯಿರುತ್ತದೆ ಎಂದು ಹೇಳಲಾಗಿದೆ. ಹಾಗೇ, ಜೆಇಇ ಅಡ್ವಾನ್ಸ್ಡ್ ಗೆ​ 2022ರ ಪ್ರಠ್ಯಕ್ರಮ ಮುಂದುವರಿಯುತ್ತದೆ.

ಜೆಇಇ ಮುಖ್ಯ ಪರೀಕ್ಷೆ ಅರ್ಜಿ ತುಂಬುವುದು ಹೇಗೆ? 1. jeemain.nta.nic.in ವೆಬ್​ಸೈಟ್​ಗೆ ಲಾಗಿನ್ ಆಗಿ 2. ಅದರಲ್ಲಿ ಜೆಇಇ ಮುಖ್ಯ ಅರ್ಜಿ ಫಾರ್ಮ್​ 2022ರ ನೋಂದಣಿ ಲಿಂಕ್​ನ್ನು ಆಯ್ಕೆ ಮಾಡಿ 3. ಅದಾರ ಮೇಲೆ ಅಲ್ಲಿ ನಿಮ್ಮ ವಿವರಗಳು, ಕ್ವಾಲಿಫಿಕೇಶನ್​, ಹೆಸರು, ವಿಳಾಸಿ ಇತ್ಯಾದಿಗಳನ್ನು ತುಂಬಿ 4.  ನಂತರ ನಿಮ್ಮ ಫೋಟೋವನ್ನು ಸ್ಕ್ಯಾನ್​ ಮಾಡಿ ಅಟ್ಯಾಚ್​ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ನೀಡಿ 5.  ದಾಖಲೆಯಲ್ಲಿ ಕಾಣುವ ವಿವರಗಳನ್ನೆಲ್ಲ ತುಂಬಿ, ಅದನ್ನು ಸಬ್​ಮಿಟ್ ಮಾಡಿ 6. ಆನ್​ಲೈನ್ ಮೂಲಕ ಶುಲ್ಕ ಪಾವತಿಸಿ

ಇದನ್ನೂ ಓದಿ: GST Collection: ಡಿಸೆಂಬರ್ ತಿಂಗಳಲ್ಲಿ 1.29 ಲಕ್ಷ ಕೋಟಿ ರೂಪಾಯಿ ಜಿಎಸ್​ಟಿ ಸಂಗ್ರಹ

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್