Karnataka 2nd PUC Exam-2 Time Table: ಫೇಲ್ ಆಗಿದ್ರೆ ಚಿಂತೆ ಬೇಡ, ದ್ವಿತೀಯ ಪಿಯು ಪರೀಕ್ಷೆ-2 ವೇಳಾಪಟ್ಟಿ ಪ್ರಕಟ

Karnataka Second PUC Exam-2 Date: 2024-25ನೇ ಸಾಲಿನ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ 1 ಫಲಿತಾಂಶ ಇಂದು(ಏಪ್ರಿಲ್ 08) ಪ್ರಕಟವಾಗಿದೆ. ಈಗ ಇದರ ಬೆನ್ನಲ್ಲೇ ಫೇಲ್ ಆಗಿರುವ ವಿದ್ಯಾರ್ಥಿಗಳಿಗಾಗಿ ಮತ್ತೊಂದು ಅವಕಾಶ ನೀಡುವ ಪರೀಕ್ಷೆ 2 ವೇಳಾಪಟ್ಟಿ ಬಿಡುಗಡೆ ಮಾಡಿದೆ. ಜತೆಗೆ ವಿದ್ಯಾರ್ಥಿಗಳು ಇಂದಿನಿಂದಲೇ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ವೇಳಾಪಟ್ಟಿ ಈ ಕೆಳಗಿನಂತಿದೆ.

Karnataka 2nd PUC Exam-2 Time Table: ಫೇಲ್ ಆಗಿದ್ರೆ ಚಿಂತೆ ಬೇಡ, ದ್ವಿತೀಯ ಪಿಯು ಪರೀಕ್ಷೆ-2 ವೇಳಾಪಟ್ಟಿ ಪ್ರಕಟ
Karnataka 2nd Puc Exam 2 (1)

Updated on: Apr 08, 2025 | 6:02 PM

ಬೆಂಗಳೂರು, (ಏಪ್ರಿಲ್ 08): ಇಂದು (ಏಪ್ರಿಲ್ 08) ಮಧ್ಯಾಹ್ನವಷ್ಟೇ ದ್ವಿತೀಯ ಪಿಯುಸಿ ಪರೀಕ್ಷೆ-1 ಫಲಿತಾಂಶ (Karnataka 2nd PUC Exam-1 Result) ಪ್ರಕಟವಾಗಿದ್ದು, ಉಡುಪಿ ಮೊದಲ ಸ್ಥಾನ ಪಡೆದುಕೊಂಡಿದ್ದರೆ, ಯಾದಗಿರಿ ಕೊನೆ ಸ್ಥಾನ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಮೊದಲ ಪರೀಕ್ಷೆಯಲ್ಲಿ ಅನುರ್ತೀಣರಾದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ನೀಡಲು ಪರೀಕ್ಷೆ-2 ವೇಳಾಪಟ್ಟಿಯನ್ನು (Karnataka 2nd PUC Exam-2 Time Table) ಬಿಡುಗಡೆ ಮಾಡಲಾಗಿದೆ. ಏಪ್ರಿಲ್ 24ರಿಂದ ಮೇ 8ರ ವರೆಗೆ ಪರೀಕ್ಷೆಗಳು ನಡೆಯಲಿವೆ. ಹಾಗಾಗಿ ವಿದ್ಯಾರ್ಥಿಗಳು ಮೊದಲ ಪರೀಕ್ಷೆಯಲ್ಲಿ ಫೇಲ್ ಆಗಿದ್ದೇವೆ ಎಂದು ಕೊರಗುವ ಬದಲು 2ನೇ ಪರೀಕ್ಷೆಗೆ ಅರ್ಜಿ ಹಾಕಿ ಬರೆದು ಉತ್ತೀರ್ಣರಾಗಬಹುದು.

ಮೊದಲ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಹತಾಶರಾಗದೆ ಈಗ ದ್ವಿತೀಯ ಪಿಯುಸಿಯ 2ನೇ ಪರೀಕ್ಷೆಗೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಅದು ಈ ಕೆಳಗಿನಂತಿದೆ.

ದ್ವಿತೀಯ ಪಿಯು ಪರೀಕ್ಷೆ-2 ವೇಳಾಪಟ್ಟಿ

  • 24-4-25: ಕನ್ನಡ, ಅರೇಬಿಕ್
  • 25-4-25: ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ
  • 26-4-25: ಇತಿಹಾಸ, ಭೌತಶಾಸ್ತ್ರ
  • 27-4-25: ಭಾನುವಾರ (ರಜಾ ದಿನ)
  • 28-4-25: ಭೂಗೋಳಶಾಸ್ತ್ರ, ಮನಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ
  • 29-4-25: ಇಂಗ್ಲೀಷ್
  • 30-4-25: ಬಸವ ಜಯಂತಿ (ರಜಾ ದಿನ)
  • 01-05-25: ಕಾರ್ಮಿಕ ದಿನಾಚರಣೆ (ರಜಾ ದಿನ)
  • 02-05-25: ತರ್ಕಶಾಸತ್ರ, ವ್ಯವಹಾರ ಶಾಸ್ತ್ರ, ಗಣಿತ, ಶಿಕ್ಷಣ ಶಾಸ್ತ್ರ, ಗೃಹ ವಿಜ್ಞಾನ.
  • 03-05-25: ಸಮಾಜಶಾಸ್ತ್ರ, ಭೂರ್ಗರ್ಭಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕಶಾಸ್ತ್ರ
  • 04-05-25: ಭಾನುವಾರ (ರಜಾ ದಿನ)
  • 05-05-25: ಅರ್ಥಶಾಸ್ತ್ರ
  • 06-05-25: ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ
  • 07-5-25: ಹಿಂದಿ
  • 08-05-25: ತಮಿಳು, ತೆಲುಗು,ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್.

ಇದನ್ನೂ ಓದಿ: Karnataka 2nd PUC Result 2025 Highlights: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ: ಇಲ್ಲಿವೆ ಮುಖ್ಯಾಂಶಗಳು

ಪರೀಕ್ಷೆ ನೋಂದಣಿ ಯಾವಾಗ? ಎಲ್ಲಿ?

ವಿದ್ಯಾರ್ಥಿಗಳು ಪರೀಕ್ಷೆ 2ಕ್ಕೆ ದಿನಾಂಕ 08-04-2025 ರಿಂದ 17-04-2025 ರ ನೊಂದಾಯಿಸಿಕೊಳ್ಳಬೇಕು. ದಂಡ ಸಹಿತ – 16-04-2025 ರಿಂದ 17-04-2025. ಇನ್ನು ವಿದ್ಯಾರ್ಥಿಗಳು ತಮ್ಮ ತಮ್ಮ ಕಾಲೇಜಿನಲ್ಲಿ ನೋಂದಣಿ ಮಾಡಿಕೊಳ್ಳಬಹುದು.

ಇದನ್ನೂ ಓದಿ
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ಯಾರು ಟಾಪರ್ಸ್? ಇಲ್ಲಿದೆ ವಿವರ
ಕರ್ನಾಟಕ ದ್ವಿತೀಯ ಪಿಯುಸಿ ಜಿಲ್ಲಾವಾರು ಫಲಿತಾಂಶ ಇಲ್ಲಿದೆ
ದ್ವಿತೀಯ ಪಿಯುಸಿ ನಂತರ ಯಾವ ಕೋರ್ಸ್ ಆಯ್ಕೆ ಮಾಡಬೇಕು?
KCET Exam ಹಾಲ್ ಟಿಕೆಟ್​ ಬಿಡುಗಡೆ, ಆನ್​ಲೈನ್​ನಲ್ಲಿ ಡೌನ್‌ಲೋಡ್ ಮಾಡಿ

2023ರ ನಂತರ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು, 2025 ರ ದ್ವಿತೀಯ ಪಿಯುಸಿ ಪರೀಕ್ಷೆ 2 ಕ್ಕೆ ಮಂಡಲಿಯು ಒದಗಿಸಿದ ಫಲಿತಾಂಶ ಪಟ್ಟಿಯ ಆಧಾರದ ಮೇಲೆ ನೊಂದಾವಣೆ ಮಾಡಿಕೊಳ್ಳಬಹುದು. ಇನ್ನು 2022ನೇ ಸಾಲಿನ ಅಥವಾ ಹಿಂದಿನ ವರ್ಷದ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು 2025 ರ ದ್ವಿತೀಯ ಪಿಯುಸಿ ಪರೀಕ್ಷೆ 2 ಕ್ಕೆ ‘MCA’ ಆಧಾರದ ಮೇಲೆ ಮಾತ್ರ ನೋಂದಾವಣೆ ಮಾಡಿಕೊಳ್ಳಬಹುದು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:26 pm, Tue, 8 April 25