ಬೆಂಗಳೂರು, (ಜುಲೈ 16): ಇದೇ ಜೂನ್ 25ರಿಂದ ಜುಲೈ5 ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ-3ರ ಫಲಿತಾಂಶ ಪ್ರಕಟವಾಗಿದೆ. 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ3 ರ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಇಂದು(ಜುಲೈ 16) ಪ್ರಕಟಿಸಿದೆ. ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 75466 ವಿದ್ಯಾರ್ಥಿಗಳ ಪೈಕಿ 17,911 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ.21.65 ಬಾಲಕರು ಪಾಸ್ ಆಗಿದ್ದರೆ, ಶೇ. 26.55 ಬಾಲಕಿಯರು ತೇರ್ಗಡೆಯಾಗಿದ್ದಾರೆ. ಈ ಮೂಲಕ ಮತ್ತೊಮ್ಮೆ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ.
ಕರ್ನಾಟಕದಾದ್ಯಂತ ಇದೇ ಜೂನ್ 25ರಿಂದ ಜುಲೈ5 ರವರೆಗೆ ದ್ವಿತೀಯ ಪಿಯುಸಿ-3 ಪರೀಕ್ಷೆ ನಡೆಸಲಾಗಿತ್ತು. 76,005 ವಿದ್ಯಾರ್ಥಿಗಳಿಂದ ಪರೀಕ್ಷೆ ನೋಂದಣಿ ಮಾಡಿಕೊಂಡಿದ್ದರು. ಆದ್ರೆ, 75466 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 17,911 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
ಇಂದು (ಜುಲೈ 16) ಮಧ್ಯಾಹ್ನ 3ಕ್ಕೆ ವೆಬ್‌ಸೈಟ್ ಮೂಲಕ ಪ್ರಕಟಿಸಲಾಗಿದ್ದು, ನಾಳೆ(ಜುಲೈ 7) ಆಯಾ ಕಾಲೇಜುಗಳಲ್ಲೂ ಫಲಿತಾಂಶವನ್ನು ನೋಟಿಸ್ ಬೋರ್ಡ್ಗೆ ಹಾಕಲಾಗುತ್ತ. ಇನ್ನು ಇಂದೇ ಆನ್ಲೈನ್ನಲ್ಲಿ ಫಲಿತಾಂಶ ನೋಡಬೇಕು ಎಂದರೆ ಈ ಕೆಳಗೆ ನೀಡಿರುವ ಮಹಿತಿಯನ್ನು ಅನುಸರಿಸಿ.
ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:39 pm, Tue, 16 July 24