Karnataka SSLC Exam Time Table 2024: ಎಸ್​ಎಸ್​ಎಲ್​ಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ

ಕರ್ನಾಟಕ 10ನೇ ತರಗತಿ ಪರೀಕ್ಷೆ ವೇಳಾಪಟ್ಟಿ 2024: ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ ಎಸ್​ಎಸ್​ಎಲ್​ಸಿ (10ನೇ ತರಗತಿ) ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟವಾಗಿದೆ. ಮಾರ್ಚ್​ 25ರಿಂದ ಏಪ್ರಿಲ್ 6ರವರೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆಗಳು ನಡೆಯಲಿವೆ. ಇನ್ನು ಯಾವ ದಿನದಂದು ಯಾವ ವಿಷಯದ ಪರೀಕ್ಷೆ ನಡೆಯಲಿದೆ? ಸಮಯದ ಮಾಹಿತಿಈ ಕೆಳಗಿನಂತಿದೆ ನೋಡಿ/

Karnataka SSLC Exam Time Table 2024: ಎಸ್​ಎಸ್​ಎಲ್​ಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Digi Tech Desk

Updated on:Jan 22, 2024 | 11:25 AM

ಬೆಂಗಳೂರುಮ (ಜನವರಿ 17): ಎಸ್​ಎಸ್​ಎಲ್​ಸಿ (10ನೇ ತರಗತಿ) ಪರೀಕ್ಷೆಯ ಅಂತಿಮ ವೇಳಾಪಟ್ಟಿ(Karnataka SSLC Exam Time Table)  ಪ್ರಕಟವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಿದ ಬೆನ್ನಲ್ಲೇ ಎಸ್​ಎಸ್​ಎಲ್​ಸಿ ಟೈಮ್ ಟೇಬಲ್​ ಸಹ ಬಿಡುಗಡೆ ಮಾಡಿದೆ. ಮಾರ್ಚ್​ 25ರಿಂದ ಏಪ್ರಿಲ್ 6ರವರೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆಗಳು ನಡೆಯಲಿವೆ. ಇನ್ನು ಪರೀಕ್ಷೆಗಳು ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿವೆ.

ಇದನ್ನೂ ಓದಿ: Karnataka 2nd PUC Time Table 2024: ಮಾರ್ಚ್ 1ರಿಂದ 22ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ: ವೇಳಾ ಪಟ್ಟಿ ಪ್ರಕಟ

ಪರೀಕ್ಷಾ ವೇಳಾಪಟ್ಟಿ ಹೀಗಿದೆ

  • 25-03-2024: ಪ್ರಥಮ ಭಾಷೆ ಪರೀಕ್ಷೆ (ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್ + ಇಂಗ್ಲಿಷ್ NCERT, ಸಂಸ್ಕೃತ)
  • 27-03-2024: ಸಮಾಜ ವಿಜ್ಞಾನ (ಕೋರ್‌ ಸಬ್ಜೆಕ್ಟ್‌)
  • 30-03-2024: ವಿಜ್ಞಾನ, ರಾಜ್ಯಶಾಸ್ತ್ರ
  • 02-04-2024: ಗಣಿತ, ಸಮಾಜ ಶಾಸ್ತ್ರ
  • 03-04-2024: ಅರ್ಥಶಾಸ್ತ್ರ
  • 04-04-2024: ತೃತೀಯ ಭಾಷೆ ಪರೀಕ್ಷೆ (ಹಿಂದಿ, ಕನ್ನಡ, ಇಂಗ್ಲಿಷ್‌, ಅರೇಬಿಕ್‌, ಪರ್ಷಿಯನ್‌, ಉರ್ದು, ಸಂಸ್ಕೃತ, ಕೊಂಕಣಿ, ತುಳು).
  • 6-04-2024- ದ್ವೀತಿಯ ಭಾಷೆ( ಇಂಗ್ಲೀಷ್, ಕನ್ನಡ).

ವಿದ್ಯಾರ್ಥಿಗಳ ಮಹತ್ವದ ಘಟ್ಟ ಎಸ್​ಎಸ್​ಎಲ್​ಸಿ

ಎಸ್​ಎಸ್​ಎಲ್​ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ವಿದ್ಯಾರ್ಥಿಗಳ ಜೀವನ ಮಹತ್ವದ ಘಟ್ಟಗಳಾಗಿವೆ. ಅದರಲ್ಲೂ ಮೊದಲಿಗೆ ಎದುರಾಗುವುದು ಎಸ್​ಎಸ್​ಎಲ್​ಸಿ ಪರೀಕ್ಷೆ, 1ರಿಂದ 9ನೇ ತರಗತಿಯ ವರೆಗೆ ಪರೀಕ್ಷೆಗಳು ಬರೆದಿರಬಹುದು, ಆದ್ರೆ, ಎಸ್​ಎಸ್​ಎಲ್​ಸಿ ಪರೀಕ್ಷೆ ಬೇರೆ ರೀತಿಯೇ ಆಗಿರುತ್ತದೆ. ಹಾಗಂತ ವಿದ್ಯಾರ್ಥಿಗಳು ಭಯಪಡಬೇಕಿಲ್ಲ. ಧೈರ್ಯವಾಗಿ ಪರೀಕ್ಷೆ ಬರೆಯಬೇಕು.

ಪರೀಕ್ಷೆ ಪತ್ರಿಕೆ ಮಾದರಿಯನ್ನು ಮೊದಲು ಪೂರ್ಣವಾಗಿ ನೋಡಿಕೊಳ್ಳಿ. ಯಾವೆಲ್ಲ ವಿಭಾಗಗಳಲ್ಲಿ ಎಷ್ಟು ಪ್ರಶ್ನೆಗಳಿಗೆ, ಎಷ್ಟು ಅಂಕದ ಯಾವ ಪ್ರಶ್ನೆಗಳಿವೆ, ಯಾವುದು ಅತಿಮುಖ್ಯ, ಕಡ್ಡಾಯವಾಗಿ ಯಾವೆಲ್ಲ ಚಾಪ್ಟರ್‌ಗಳಲ್ಲಿ ಹೆಚ್ಚು ಅಂಕದ ಪ್ರಶ್ನೆ ಕೇಳಲಾಗುತ್ತದೆ ಎಂದು ತಿಳಿದುಕೊಳ್ಳಿ.

ಮೂರು ಬಾರಿ ಪರೀಕ್ಷೆ ಬರೆಯಲು ಅವಕಾಶ

ಈ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಓದುತ್ತಿರುವವರು ಹಾಗೂ ಖಾಸಗಿ ವಿದ್ಯಾರ್ಥಿಗಳು 2023-24ನೇ ಸಾಲಿನ ವಾರ್ಷಿಕ ಪರೀಕ್ಷೆಯನ್ನು ಮೂರು ಬಾರಿ ಬರೆಯಬಹುದು. ಈ ಹಿಂದೆ ಒಂದು ಬಾರಿ ವಾರ್ಷಿಕ ಪರೀಕ್ಷೆ ಬರೆದು, ಅನುತ್ತೀರ್ಣರಾದವರು ಪೂರಕ ಪರೀಕ್ಷೆ ಬರೆಯಬೇಕಿತ್ತು. ಆದರೆ ಈ ಬಾರಿ ವಿದ್ಯಾರ್ಥಿಗಳು ತಾವು ಪಾಸಾಗಲಿ, ಫೇಲಾಗಲಿ ಮೂರು ಬಾರಿ ಪರೀಕ್ಷೆ ಬರೆಯಬಹುದು. ಮೂರರಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ಪರೀಕ್ಷೆಯನ್ನು ಮುಂದಿನ ಅನುಕೂಲಗಳಿಗಾಗಿ ಆಯ್ಕೆ ಮಾಡುವ ಅವಕಾಶ ನೀಡಲಾಗಿದೆ.

ಮೂರು ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಹೀಗಿದೆ

  • ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 : ಮಾರ್ಚ್‌ 30 ರಿಂದ ಏಪ್ರಿಲ್ 15 ರವರೆಗೆ. ಮೇ 8 ರಂದು ಫಲಿತಾಂಶ ಬಿಡುಗಡೆ. ಮೇ 23 ರಂದು ಮರು ಮೌಲ್ಯಮಾಪನ ಫಲಿತಾಂಶ ಪ್ರಕಟ.
  • ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 : ಜೂನ್ 12-19 ರವರೆಗೆ ಪರೀಕ್ಷೆ. ಜೂನ್ 29 ಕ್ಕೆ ರಿಸಲ್ಟ್‌ ಬಿಡುಗಡೆ. ಜುಲೈ 10 ರಂದು ಮರುಮೌಲ್ಯಮಾಪನದ ರಿಸಲ್ಟ್‌ ಬಿಡುಗಡೆ.
  • ಎಸ್‌ಎಸ್‌ಎಲ್‌ಸಿ ಪರೀಕ್ಷೆ-3 : ಜೂನ್ 29 ರಿಂದ ಆಗಸ್ಟ್‌ 5 ರವರೆಗೆ ಪರೀಕ್ಷೆ. ಆಗಸ್ಟ್‌ 19 ರಂದು ಫಲಿತಾಂಶ ಬಿಡುಗಡೆ. ಆಗಸ್ಟ್‌ 26 ರಂದು ಮರುಮೌಲ್ಯಮಾಪನ ಫಲಿತಾಂಶ ಪ್ರಕಟವಾಗಲಿದೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:35 pm, Wed, 17 January 24