AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್​​ಎಸ್​ಎಲ್​ಸಿ ಮಧ್ಯವಾರ್ಷಿಕ ಪ್ರಶ್ನೆ ಪತ್ರಿಕೆ ಲೀಕ್? ಶಿಕ್ಷಣ ಇಲಾಖೆಯ ಹೊಸ ಯಡವಟ್ಟು

ಪ್ರಸಕ್ತ ಸಾಲಿನ ರಾಜ್ಯ ಪಠ್ಯಕ್ರಮ ಅನುಸರಿಸುವ ವಿದ್ಯಾರ್ಥಿಗಳ ಎಸ್​​ಎಸ್​ಎಲ್​ಸಿ ಫಲಿತಾಂಶ ಹೆಚ್ಚು ಮಾಡಲು ಶಿಕ್ಷಣ ಇಲಾಖೆ ನಾನಾ ಸರ್ಕಸ್ ಮಾಡುತ್ತಿದೆ. ಅದರ ಭಾಗವಾಗಿ ವಾರ್ಷಿಕ ಪರೀಕ್ಷೆ ತಯಾರಿ ಅಂತ ಇದೇ ಮೊಟ್ಟ ಮೊದಲ ಬಾರಿಗೆ ಕೆಎಸ್​ಇಎಬಿ (KSEAB) ಪ್ರಶ್ನೆ ಪತ್ರಿಕೆ ತಯಾರಿ ಮಾಡಿದ್ದು ಅದು ಈಗ ಲೀಕ್ ಆಗಿರುವ ಆರೋಪ ಕೇಳಿ ಬಂದಿದೆ.

ಎಸ್​​ಎಸ್​ಎಲ್​ಸಿ ಮಧ್ಯವಾರ್ಷಿಕ ಪ್ರಶ್ನೆ ಪತ್ರಿಕೆ ಲೀಕ್? ಶಿಕ್ಷಣ ಇಲಾಖೆಯ ಹೊಸ ಯಡವಟ್ಟು
ಎಸ್​​ಎಸ್​ಎಲ್​ಸಿ ಮಧ್ಯವಾರ್ಷಿಕ ಪ್ರಶ್ನೆ ಪತ್ರಿಕೆ ಲೀಕ್? ಶಿಕ್ಷಣ ಇಲಾಖೆಯ ಹೊಸ ಯಡವಟ್ಟು
Vinay Kashappanavar
| Edited By: |

Updated on: Sep 29, 2024 | 8:05 PM

Share

ಬೆಂಗಳೂರು, ಸೆಪ್ಟೆಂಬರ್​ 29: ಏನೋ ಮಾಡಲು ಹೋಗಿ ಇನ್ನೇನೋ ಆಯ್ತು. ಬಹುಶಃ ಈ ಮಾತು ಶಿಕ್ಷಣ ಇಲಾಖೆಗೆ (education department) ಪರ್ಫೆಕ್ಟ್ ಆಗಿ ಸೂಟ್ ಆಗುತ್ತೆ ಅಂದರೆ ಅದರಲ್ಲಿ ಯಾವುದೇ ಅನುಮಾನ ಇಲ್ಲ. ಕಲಿಕಾ ಗುಣಮಟ್ಟ ಹೆಸರಲ್ಲಿ ಕಠಿಣ ಪರೀಕ್ಷೆ ಹೆಸರಲ್ಲಿ ಇಲಾಖೆ ಯಡವಟ್ಟು ಮಾಡಿಕೊಂಡಿದೆ.

ಕಳೆದ ಸಾಲಿನ ಎಸ್​​ಎಸ್​ಎಲ್​ಸಿ ಫಲಿತಾಂಶ ಕುಸಿದ ಬೆನ್ನಲ್ಲೇ ಸಾಕಷ್ಟು ಟೀಕೆಗೆ ಶಿಕ್ಷಣ ಇಲಾಖೆ ಗುರಿಯಾಗಿತ್ತು. ವೆಬ್ ಕಾಸ್ಟಿಂಗ್ ಇತರ ಕಠಿಣ ನಿಯಮದ ಎಫೆಕ್ಟ್ ಫಲಿತಾಂಶ ಕುಸಿತ ಆಯ್ತು ಅನ್ನೋ ಟೀಕೆ ಇತ್ತು. ಅದಾದ ಬೆನ್ನಲ್ಲೇ ಪ್ರಸಕ್ತ ಸಾಲಿನ ರಾಜ್ಯ ಪಠ್ಯಕ್ರಮ ಅನುಸರಿಸುವ ವಿದ್ಯಾರ್ಥಿಗಳ ಎಸ್​​ಎಸ್​ಎಲ್​ಸಿ ಫಲಿತಾಂಶ ಹೆಚ್ಚು ಮಾಡಲು ಶಿಕ್ಷಣ ಇಲಾಖೆ ನಾನಾ ಸರ್ಕಸ್ ಮಾಡುತ್ತಿದೆ. ಅದರ ಭಾಗವಾಗಿ ವಾರ್ಷಿಕ ಪರೀಕ್ಷೆ ತಯಾರಿ ಅಂತ ಇದೇ ಮೊಟ್ಟ ಮೊದಲ ಬಾರಿಗೆ ಕೆಎಸ್​ಇಎಬಿ (KSEAB) ಪ್ರಶ್ನೆ ಪತ್ರಿಕೆ ತಯಾರಿ ಮಾಡಿದ್ದು ಅದು ಈಗ ಲೀಕ್ ಆಗಿರುವ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಶಾಕ್: SSLC ಮುಖ್ಯ ಪರೀಕ್ಷೆಯಂತೆ ಮಧ್ಯವಾರ್ಷಿಕ ಪರೀಕ್ಷೆ..!

ಎಸ್​​ಎಸ್​ಎಲ್​ಸಿ ಮಧ್ಯವಾರ್ಷಿಕ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ ಅಂತ ಗಂಭೀರ ಆರೋಪ ಕೇಳಿ ಬಂದಿದೆ. ಸೆಪ್ಟೆಂಬರ್‌ 24ರಿಂದ ಅಕ್ಟೋಬರ್ 1ರವರೆಗೆ ಎಸ್‌ಎಸ್‌ಎಲ್‌ಸಿ ಅರ್ಧವಾರ್ಷಿಕ ಪರೀಕ್ಷೆ ನಡೆಯುತ್ತಿದೆ. ಅರ್ಧವಾರ್ಷಿಕ ಪರೀಕ್ಷೆಗೆ ಏಕರೂಪದ ಪ್ರಶ್ನೆ ಪತ್ರಿಕೆ ತಂದಿದ್ದ ಶಿಕ್ಷಣ ಇಲಾಖೆ ಪ್ರಶ್ನೆ ಪತ್ರಿಕೆ ಆನ್ಲೈನ್ ಅಲ್ಲಿ ಸೋರಿಕೆ ಆಗಿರುವ ಆರೋಪ ಕೇಳಿ ಬಂದಿದೆ. ಶಿಕ್ಷಣ ಇಲಾಖೆ ನಯಾ ರೂಲ್ ಕಷ್ಟ ಪಟ್ಟು ಓದುವ ವಿದ್ಯಾರ್ಥಿಗಳಿಗೆ ನ್ಯಾಯ ಸಿಗುತ್ತಿಲ್ಲ ಅಂತ ವಿದ್ಯಾರ್ಥಿಗಳ ಸಂಘಟನೆ ಕೂಡಾ ಆಕ್ರೋಶ ವ್ಯಕ್ತ ಪಡಿಸಿದೆ.

ಪ್ರತೀ ವರ್ಷ ಎಸ್‌ಎಸ್‌ಎಲ್‌ಸಿ ಮಧ್ಯ ವಾರ್ಷಿಕ ಪರೀಕ್ಷೆಗೆ ಶಾಲಾ ಹಂತದಲ್ಲೇ ಪ್ರಶ್ನೆ ಪತ್ರಿಕೆ ತಯಾರಿ ಮಾಡಲಾಗುತ್ತಿತ್ತು. ಆದರೆ ಈ ವರ್ಷ ಅದಕ್ಕೆ ಬ್ರೇಕ್ ಹಾಕಲಾಯಿತು, ರಾಜ್ಯ ಪಠ್ಯಕ್ರಮ ಅನುಸರಿಸುವ ಶಾಲೆಗಳಲ್ಲಿ ಏಕರೂಪ ಪ್ರಶ್ನೆ ಪತ್ರಿಕೆ ತರಲು ಆದೇಶ ಮಾಡಲಾಗಿತ್ತು. ಈ ಸಾಲಿನಿಂದ ಸರ್ಕಾರದ ನಿರ್ದೇಶನದಂತೆ ಅರ್ಧ ವಾರ್ಷಿಕ ಪರೀಕ್ಷೆಗೂ ರಾಜ್ಯಾದ್ಯಂತ ಏಕರೂಪದ ಪ್ರಶ್ನೆಪತ್ರಿಕೆ ನೀಡಲು ಮಂಡಳಿ ತೀರ್ಮಾನ ಮಾಡಿತ್ತು. ಇದೇ ಈಗ ಪ್ರಶ್ನೆ ಪತ್ರಿಕೆ ಲೀಕ್ ಆಗಲು ಕಾರಣ ಆಗಿದೆ ಎನ್ನಲಾಗಿದೆ.

ಮಂಡಳಿಯಿಂದ ಬಿಇಓ ತಲುಪಿ ಅದು ಪ್ರಾಂಶುಪಾಲರಿಗೆ ತಲುಪುವ ಪ್ರಕ್ರಿಯೆಯಲ್ಲಿ ಲೋಪವಾಗಿದೆ ಎನ್ನಲಾಗಿದೆ. ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಟೀಕೆ ಇದಕ್ಕೆ ಪುಷ್ಟಿ ಕೊಡುತ್ತಿದೆ.

ಈ ಬಗ್ಗೆ ಕರ್ನಾಟಕ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಶ್ನೆ ಮಾಡಿದರೆ ಕಮಿಟಿ ಮಾಡಿ ತನಿಖೆ ಮಾಡುವ ಭರವಸೆ ಕೊಟ್ಟು ಜಾರಿ ಕೊಂಡಿದ್ದಾರೆ. ಒಟ್ಟಿನಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೋ ಅಥವಾ ಶಾಲಾ ಹಂತದಲ್ಲಿ ಆಗಿರುವ ಯಡವಟ್ಟು ಏನೇ ಆದ್ರೂ ಇಲ್ಲಿ ಪ್ರತಿಕೂಲ ಪರಿಣಾಮ ಬೀರುತ್ತಿರುವುದು ಮಾತ್ರ ವಿದ್ಯಾರ್ಥಿಗಳಿಗೆ.

ಇದನ್ನೂ ಓದಿ: ಕರ್ನಾಟಕ ಶಿಕ್ಷಣದಲ್ಲಿ ಆಂಧ್ರ ಮಾಡೆಲ್: SSLC, PUC ವಿದ್ಯಾರ್ಥಿಗಳಿಗೆ ಹೊಸ ರೂಲ್ಸ್

ಈಗಲೇ ಪ್ರಶ್ನೆ ಪತ್ರಿಕೆ ಲೀಕ್ ಆಗಿ ಪರೀಕ್ಷೆ ಬರೆದ್ರೆ ಮೈನ್ ಎಕ್ಸಾಂ ಇನ್ನೆಷ್ಟು ಸಿರಿಯಸ್ ಆಗಿ ಬರೆಯುತ್ತಾರೆ? ಇದು ಒಂದು ಆಲೋಚನೆ ಆದ್ರೆ ಪ್ರಾಮಾಣಿಕವಾಗಿ ಓದಿ ಪರೀಕ್ಷೆ ಬರೆಯುವ ಮಕ್ಕಳಿಗೂ ಇದು ಸಮಸ್ಯೆಗೆ ಕಾರಣವೇ ಅನ್ನೋದು ದುರಂತವೇ ಸರಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.