Karnataka SSLC Result 2023: ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ; ಪರ್ಯಾಯ ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ಪರಿಶೀಲಿಸುವುದು ಹೇಗೆ?

SSLC Result 2023 Alternate Websites: ಕರ್ನಾಟಕ ಎಸ್​ಎಸ್​ಎಲ್​ಸಿ ಫಲಿತಾಂಶ 2023: ಇತ್ತೀಚಿನ ಅಧಿಸೂಚನೆಯ ಪ್ರಕಾರ, ಎಸ್​ಎಸ್​ಎಲ್​ಸಿ ಫಲಿತಾಂಶವು ಇಂದು (ಮೇ. 08) ಪ್ರಕಟವಾಗಿದೆ. ಫಲಿತಾಂಶ​ವನ್ನು ನೀವು ಈ ಪರ್ಯಾಯ ವೈಬ್​ಸೈಟ್​​ಗಳಲ್ಲಿ ಪರಿಶೀಲಿಸಬಹುದು.

Karnataka SSLC Result 2023: ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ; ಪರ್ಯಾಯ ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ಪರಿಶೀಲಿಸುವುದು ಹೇಗೆ?
Karnataka SSLC Result 2023
Follow us
| Updated By: Digi Tech Desk

Updated on:May 08, 2023 | 10:24 AM

ಕರ್ನಾಟಕ ಎಸ್​ಎಸ್​ಎಲ್​ಸಿ ಫಲಿತಾಂಶ 2023: ಇತ್ತೀಚಿನ ಅಧಿಸೂಚನೆಯ ಪ್ರಕಾರ, ಎಸ್​ಎಸ್​ಎಲ್​ಸಿ ಫಲಿತಾಂಶವು ಇಂದು (ಮೇ. 08) ಪ್ರಕಟವಾಗಿದೆ. ಫಲಿತಾಂಶ​ವನ್ನು ನೀವು ಈ ಪರ್ಯಾಯ ವೈಬ್​ಸೈಟ್​​ಗಳಲ್ಲಿ ಪರಿಶೀಲಿಸಬಹುದು. ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು http://sslc.karnataka.gov.in ಅಥವಾ http://karresults.nic.in ನಲ್ಲಿ ಪರಿಶೀಲಿಸಬಹುದು. ಕರ್ನಾಟಕ ಲಕ್ಷಾಂತ ವಿದ್ಯಾರ್ಥಿಗಳು ಒಂದೇ ಭಾರೀ ಈ ವೆಬ್‌ಸೈಟ್‌ಗಳ ಲಿಂಕ್​​​ಗಳನ್ನು ತೆರೆಯುವುದರಿಂದ (Heavy Traffic) ಫಲಿತಾಂಶವನ್ನು ಪರಿಶೀಲಿಸಲು ಅಡಚಣೆಯಾಗಬಹುದು.

2022- 2023ನೇ ಸಾಲಿನ ಎಸ್‌ಎಸ್ಎಲ್‌ಸಿ ಪರೀಕ್ಷೆಗಳನ್ನು ಕಳೆದ ಮಾರ್ಚ್ 31ರಿಂದ ಏಪ್ರಿಲ್ 15ರವರೆಗೆ ನಡೆಸಲಾಗಿತ್ತು. ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯು ಏಪ್ರಿಲ್ 21ರಂದು ಆರಂಭವಾಗಿತ್ತು. ಮೇ 10ರಂದು ರಾಜ್ಯದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ಮತದಾನಕ್ಕೆ ಎರಡು ದಿನ ಮೊದಲೇ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಲಿದೆ.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (KSEAB) ಅಧಿಕಾರಿಗಳು karresults.nic.in ಮತ್ತು kseab.karnataka.gov.in.ನಲ್ಲಿ SSLC ಫಲಿತಾಂಶವನ್ನು ಪ್ರಕಟಿಸಲಿದ್ದಾರೆ. ಮೊದಲಿಗೆ ನೀವು ಮಾಡಬೇಕಾದದ್ದು karresults.nic.in ವೆಬ್​ಸೈಟ್​ ಭೇಟಿ ನೀಡಿ. ಅಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆಯ ಫಲಿತಾಂಶ ನೋಡಲು ಒಂದು ಕೊಂಡಿಯನ್ನು ಇರಿಸಿರುತ್ತಾರೆ. ಅದನ್ನು ಕ್ಲಿಕ್​ ಮಾಡಿದಾಗ ಇನ್ನೊಂದು ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ವಿದ್ಯಾರ್ಥಿಯ ನೋಂದಣಿ ಸಂಖ್ಯೆ(Register Number) ಹಾಗೂ ಇತರ ಸಂಬಂಧಿತ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಸಬ್​ಮಿಟ್​ ಮಾಡಿದರೆ ಫಲಿತಾಂಶ ಕಾಣಿಸಿಕೊಳ್ಳುತ್ತದೆ.

http://sslc.karnataka.gov.in ಅಥವಾ http://karresults.nic.in

ಪರ್ಯಾಯ ವೆಬ್​ಸೈಟ್​ಗಳಲ್ಲಿ ಕರ್ನಾಟಕ ಎಸ್​ಎಸ್​ಎಲ್​ಸಿ ಫಲಿತಾಂಶ ಪರಿಶೀಲಿಸುವುದು ಹೇಗೆ? 

  • ಮೇಲೆ ತಿಳಿಸಿದ ಎರಡು ಪರ್ಯಾಯ ವೆಬ್‌ಸೈಟ್‌ಗಳಲ್ಲಿ ಯಾವುದಾದರೂ ಒಂದು ಲಿಂಕ್​​ ಕ್ಲಿಕ್​ ಮಾಡಿ
  • ಮುಖಪುಟದಲ್ಲಿ, ಕರ್ನಾಟಕ ಎಸ್​ಎಸ್​ಎಲ್​ಸಿ 2023 ಗಾಗಿ ಲಭ್ಯವಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.
  • ನಿಮ್ಮ ರಿಜಿಸ್ಟರ್​​​ ಸಂಖ್ಯೆ ಬಳಸಿ ಲಾಗಿನ್​ ಆಗಿ.
  • ಫಲಿತಾಂಶವನ್ನು ಪರಿಶೀಲಿಸಿ ಮತ್ತು ಅಂಕ ಪಟ್ಟಿಯನ್ನು ಡೌನ್‌ಲೋಡ್ ಮಾಡಿ.

ಒಂದು ಅಥವಾ ಎರಡು ವಿಷಯಗಳಲ್ಲಿ ಅನುತ್ತೀರ್ಣರಾದವರಿಗೆ ವಿಭಾಗೀಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಅವರಿಗೆ ಪ್ರವೇಶ ಪತ್ರಗಳನ್ನು ನೀಡಲಾಗುತ್ತದೆ ಮತ್ತು ಕಂಪಾರ್ಟ್‌ಮೆಂಟ್ ಪರೀಕ್ಷೆಗೆ ಹಾಜರಾಗಲು ಪರೀಕ್ಷಾ ಕೇಂದ್ರವನ್ನು ನಿಗದಿಪಡಿಸಲಾಗುತ್ತದೆ.

ಶಿಕ್ಷಣಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

ಕರ್ನಾಟಕ ಎಸ್​ಎಸ್​ಎಲ್​ಸಿ ಫಲಿತಾಂಶ 2023ರ ಲೈವ್​​ ಮಾಹಿತಿಗೆ ಇಲ್ಲಿ ಕ್ಲಿಕ್​ ಮಾಡಿ:

Published On - 10:22 am, Mon, 8 May 23

ತಾಜಾ ಸುದ್ದಿ