TET: ಶಿಕ್ಷಕರ ಅರ್ಹತಾ ಪರೀಕ್ಷೆಯ ಫೈನಲ್ ಕೀ ಉತ್ತರ ಪ್ರಕಟ, ಇಲ್ಲಿದೆ ಪತ್ರಿಕೆ 1, 2ರ ಕೀ ಉತ್ತರಗಳು

2022ನೇ ಸಾಲಿನ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ ಅಂತಿಮ ಕೀ ಉತ್ತರಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ಟಿಇಟಿ 2022 ಕೀ ಉತ್ತರ ನೋಡುವ ವಿಧಾನ ಇಲ್ಲಿದೆ ನೋಡಿ.

TET: ಶಿಕ್ಷಕರ ಅರ್ಹತಾ ಪರೀಕ್ಷೆಯ ಫೈನಲ್ ಕೀ ಉತ್ತರ ಪ್ರಕಟ, ಇಲ್ಲಿದೆ ಪತ್ರಿಕೆ 1, 2ರ ಕೀ ಉತ್ತರಗಳು
tet 2022 Final key answer
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Nov 25, 2022 | 7:12 PM

ಬೆಂಗಳೂರು: ಕಳೆದ ನವೆಂಬರ್‌ 6ರಂದು ರಾಜ್ಯಾದ್ಯಂತ 35 ಶೈಕ್ಷಣಿಕ ಜಿಲ್ಲೆಗಳಲ್ಲಿ ನಡೆದ 2022ನೇ ಸಾಲಿನ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ (Karnataka Teacher Eligibility Test exams 2022) ಅಂತಿಮ ಕೀ ಉತ್ತರವನ್ನು (Final key Answer) ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಈ ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

15,000 ಪದವೀಧರ, ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ, ತೃತೀಯ ಲಿಂಗಿಗಳು ಆಯ್ಕೆ

ನವೆಂಬರ್ 06ರಂದು 35 ಶೈಕ್ಷಣಿಕ ಜಿಲ್ಲೆಗಳ 589 ಪರೀಕ್ಷಾ ಕೇಂದ್ರಗಳಲ್ಲಿ ಪತ್ರಿಕೆ-1 ಮತ್ತು 781 ಪರೀಕ್ಷಾ ಕೇಂದ್ರಗಳಲ್ಲಿ ಪತ್ರಿಕೆ-2 ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗಳು ನಡೆದಿತ್ತು. ಬಳಿಕ ನವೆಂಬರ್ 11ರಂದು ತಾತ್ಕಾಲಿಕ ಕೀ ಉತ್ತರಗಳನ್ಜು ಪ್ರಕಟಿಸಿ ಆಕ್ಷೇಪಣೆ ಅವಕಾಶ ನೀಡಲಾಗಿತ್ತು. ಆದ್ರೆ, ಇದೀಗ ಟಿಇಟಿ ಪರೀಕ್ಷೆಯ ಪತ್ರಿಕೆ 1 ಮತ್ತು ಪತ್ರಿಕೆ 2ರ ಫೈನಲ್ ಕೀ ಉತ್ತರಗಳನ್ನು ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳು ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ https://www.schooleducation.kar.nic.in/indexKn.html ನಲ್ಲಿ ಕೀ ಉತ್ತರಗಳನ್ನು ನೋಡಬಹುದಾಗಿದೆ.

ಅಭ್ಯರ್ಥಿಗಳು ಮೊದಲು ಅಧಿಕೃತ ಶಿಕ್ಷಣ ಇಲಾಖೆ ಅಧಿಕೃತ ವೆಬ್‌ಸೈಟ್‌ https://www.schooleducation.kar.nic.in/indexKn.html ಗೆ ಭೇಟಿ ಕೊಡಿ. ನಂತರ ವೆಬ್‌ಸೈಟ್‌ನ ಮುಖಪುಟದಲ್ಲಿರವು ಕೆಎಆರ್‌ಟಿಇಟಿ 2022 ಕೀ ಉತ್ತರ ಲಿಂಕ್ ಮೇಲೆ ಒತ್ತಿರಿ. ಬಳಿಕ ಅಲ್ಲಿ ಕೇಳುವ ಮಾಹಿತಿಯನ್ನು ಹಾಕಿ ಕೀ ಉತ್ತರಗಳನ್ನು ನೋಡಿಕೊಳ್ಳಬಹುದು.

ರಾಜ್ಯಾದ್ಯಂತ ಶಿಕ್ಷಕರ ಅರ್ಹತಾ ಪರೀಕ್ಷೆ ನವೆಂಬರ್ 6ರಂದು ನಡೆದಿದ್ದವು. ಒಟ್ಟು 3, 32,913 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇಟಿಟಿ ಪರೀಕ್ಷೆ ಪತ್ರಿಕೆ 1ಕ್ಕೆ 1,54,929 ಅರ್ಜಿಗಳ ಪೈಕಿ 1,40,801 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ರೆ, ಪ್ರತಿಕ್ರೆ-2ಕ್ಕೆ ಬಂದ 2,06,455 ಅರ್ಜಿಗಳಲ್ಲಿ 1,92,112 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇನ್ನು ಅರ್ಜಿ ಹಾಕಿದ್ದ ಒಟ್ಟು 28,471 ಅಭ್ಯರ್ಥಿಗಳು ಕಾರಣಾಂತರಗಳಿಂದ ಪರೀಕ್ಷೆಗೆ ಗೈರಾಗಿದ್ದರು.

ಪತ್ರಿಕೆ-1ರ ಅಂತಿಮ ಕೀ ಉತ್ತರ ನೋಡಲು ಇಲ್ಲಿ ಕ್ಲಿಕ್ ಮಾಡಿ

ಪತ್ರಿಕೆ-2ರ ಫೈನಲ್ ಕೀ ಉತ್ತರ ನೋಡಲು ಇಲ್ಲಿ ಕ್ಲಿಕ್ಕಿಸಿ

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 7:04 pm, Fri, 25 November 22