ಕೊಪ್ಪಳ ವಿವಿಯ ಲಾಂಛನ ಅನಾವರಣಗೊಳಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಕೊಪ್ಪಳ ವಿಶ್ವವಿದ್ಯಾಲಯದ ಲಾಂಛನವನ್ನು ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅನಾವರಣಗೊಳಿಸಿದರು.

ಕೊಪ್ಪಳ ವಿವಿಯ ಲಾಂಛನ ಅನಾವರಣಗೊಳಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಕೊಪ್ಪಳ ವಿವಿ ಲಾಂಛನ ಅನಾವರಣ

Updated on: Jun 02, 2023 | 2:20 PM

ಬೆಂಗಳೂರು/ಕೊಪ್ಪಳ:  ಕೊಪ್ಪಳ ವಿಶ್ವವಿದ್ಯಾಲಯದ ಲಾಂಛನವನ್ನು(Koppal University logo) ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್(thawar chand gehlot) ಅವರು ಅನಾವರಣಗೊಳಿಸಿದರು. ಇಂದು(ಜೂನ್ 02) ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕೊಪ್ಪಳ ವಿವಿ ಲಾಂಛನವನ್ನು ಬಿಡುಗಡೆಗೊಳಿಸಿದರು. ಈ ವೇಳೆ ಕೊಪ್ಪಳ ವಿವಿ ಕುಲಪತಿ ಡಾ. ಬಿ.ಕೆ. ರವಿ, ಕೊಡಗು ವಿವಿ ಕುಲಪತಿ ಡಾ. ಅಶೋಕ್ ಆಲೂರ್, ಬಾಗಲಕೋಟೆ ವಿವಿ ಕುಲಪತಿ ಡಾ. ದೇಶಪಾಂಡೆ, ಚಾಮರಾಜನಗರ ವಿವಿ ಕುಲಪತಿ ಡಾ. ಗಂಗಾಧರ್, ಬೀದರ್ ವಿವಿ ಕುಲಪತಿ ಡಾ. ಬಿರಾದಾರ್, ಹಾಸನ ವಿವಿ ಕುಲಪತಿ ಡಾ. ತಾರಾನಾಥ್ ಮತ್ತು ಹಾವೇರಿ ವಿವಿ ಕುಲಪತಿ ಡಾ. ಸುರೇಶ ಎಚ್. ಜಂಗಮಶೆಟ್ಟಿ ಉಪಸ್ಥಿತರಿದ್ದರು.

ಈ ಹಿಂದಿನ ಬಿಜೆಪಿ ಸರ್ಕಾರ ರಾಜ್ಯಾದ್ಯಂತ 7 ಹೊಸ ವಿಶ್ವವಿದ್ಯಾಲಯಗಳನ್ನು ಆರಂಭಿಸಿತ್ತು.‌ ಅದರಲ್ಲಿ ಕೊಪ್ಪಳ‌ ವಿಶ್ವವಿದ್ಯಾಲಯವೂ ಒಂದಾಗಿದೆ.‌ 2023 ಮಾರ್ಚ್​ನಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಕುಕನೂರು ತಾಲೂಕಿನ ತಳಕಲ್​ನಲ್ಲಿ ಕೊಪ್ಪಳ ವಿಶ್ವವಿದ್ಯಾಲಯವನ್ನು ವರ್ಚುವಲ್​ ಮೂಲಕ ಉದ್ಘಾಟಿಸಿದ್ದರು. ಸದ್ಯ ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಪ್ರೊ.ಬಿ ಕೆ ರವಿ ಕುಲಪತಿಯಾಗಿದ್ದಾರೆ.

​ಯಲಬುರ್ಗಾ ಮತ್ತು ಕುಕನೂರು ತಾಲೂಕಿನ ತಳಕಲ್​ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರದೇಶಿಕ ಕೇಂದ್ರ ನಡೆಯುತ್ತಿದೆ. ಜಿಲ್ಲಾ ಕೇಂದ್ರವಾದ ಕೊಪ್ಪಳದಲ್ಲಿಯೇ ಕೇಂದ್ರ ಕಟ್ಟಡ ನಿರ್ಮಿಸಬೇಕು ಎನ್ನುವುದು ಇಲ್ಲಿನ ಹೋರಾಟಗಾರರ ಆಗ್ರಹವಾಗಿತ್ತು. ಆದ್ರೆ, ಕಟ್ಟಡದ ಕೊರತೆಯಿಂದಾಗಿ ಕೊಪ್ಪಳಕ್ಕೆ ಮಂಜೂರಾದ ಕೇಂದ್ರವನ್ನು ಸದ್ಯಕ್ಕೆ ತಳಕಲ್​ನಲ್ಲಿ ನಡೆಸಲಾಗುತ್ತಿದೆ. ತಳಕಲ್​ ಸಮೀಪದಲ್ಲಿ ಸರ್ಕಾರಿ ವಸತಿ ಪದವಿ ಕಾಲೇಜು ಕಟ್ಟಡ ನಿರ್ಮಾಣವಾಗಿದೆ.

ಕೊಪ್ಪಳ ವಿಶ್ವವಿದ್ಯಾಲಯ ಸ್ಥಾಪನೆಗೂ ಮುನ್ನ ಜಿಲ್ಲೆಯ ವಿದ್ಯಾರ್ಥಿಗಳು 300 ಕಿ.ಮೀ. ದೂರದ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಹೋಗಬೇಕಿತ್ತು. ಇಲ್ಲವೇ ಧಾರವಾಡದತ್ತ ಮುಖ ಮಾಡಬೇಕಿತ್ತು. ಸ್ಥಳೀಯಯರ ಹೋರಾಟದ ಫಲವಾಗಿ ಬಳ್ಳಾರಿ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗದ ಹಳೆಯ ಕಟ್ಟದಲ್ಲಿ ತಾತ್ಕಾಲಿಕವಾಗಿ ಪ್ರಾರಂಭವಾಗಿತ್ತು.

Published On - 2:13 pm, Fri, 2 June 23

Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Follow Us