Smart School: ಬೀದರ್ ಮೊರಾರ್ಜಿ ದೇಸಾಯಿ ವಸತಿ ಶಾಲೆ -ಇಲ್ಲಿದೆ ಸ್ಮಾರ್ಟ್​​ ಬೋರ್ಡ್​​ ಶಿಕ್ಷಣ, 26 ಸಿಸಿಟಿವಿ, 25 ಎಕರೆಯಲ್ಲಿ ಸಾವಿರಾರು ಗಿಡಮರಗಳ ಸಾಂಗತ್ಯದಲ್ಲಿ ಶಿಕ್ಷಣ!

| Updated By: ಸಾಧು ಶ್ರೀನಾಥ್​

Updated on: Nov 11, 2022 | 5:14 PM

Morarji Desai Residential School Kamthana: ಹಚ್ಚ ಹಸಿರಿನ ನಡುವೆ ಸರಕಾರಿ ವಸತಿ ಶಾಲೆ... ಮೂರಾರ್ಜಿ ದೇಸಾಯಿ ಶಾಲೆಯಲ್ಲಿ ಸ್ಮಾರ್ಟ್​​ ಬೋರ್ಡ್​​ ಶಿಕ್ಷಣ... ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು 26 ಸಿಸಿಟಿವಿ ಅಳವಡಿಕೆ... ಸಿಸಿಟಿವಿ ಮೇಲೆ ನಿಗಾ ವಹಿಸಲು ಮೊಬೈಲಿನಲ್ಲೂ ಕೂಡ ವ್ಯವಸ್ಥೆ... ಇದು ಖಾಸಗಿ ಶಾಲೆಯೂ ನಾಚುವಂತಿರುವ ಸರಕಾರಿ ಶಾಲೆ!

Smart School: ಬೀದರ್ ಮೊರಾರ್ಜಿ ದೇಸಾಯಿ ವಸತಿ ಶಾಲೆ -ಇಲ್ಲಿದೆ ಸ್ಮಾರ್ಟ್​​ ಬೋರ್ಡ್​​ ಶಿಕ್ಷಣ, 26 ಸಿಸಿಟಿವಿ, 25 ಎಕರೆಯಲ್ಲಿ ಸಾವಿರಾರು ಗಿಡಮರಗಳ ಸಾಂಗತ್ಯದಲ್ಲಿ ಶಿಕ್ಷಣ!
ಬೀದರ್ ಮೊರಾರ್ಜಿ ದೇಸಾಯಿ ವಸತಿ ಶಾಲೆ
Follow us on

ಹಚ್ಚ ಹಸಿರಿನ ನಡುವೆ ಸರಕಾರಿ ವಸತಿ ಶಾಲೆ… ಮೂರಾರ್ಜಿ ದೇಸಾಯಿ ಶಾಲೆಯಲ್ಲಿ ಸ್ಮಾರ್ಟ್​​ ಬೋರ್ಡ್​​ ಶಿಕ್ಷಣ (Smart School)… ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಶಾಲೆ ಮತ್ತು ವಸತಿ ನಿಲಯದಲ್ಲಿ 26 ಸಿಸಿಟಿವಿ ಅಳವಡಿಕೆ… ಸಿಸಿಟಿವಿ (CCTV) ಮೇಲೆ ನಿಗಾ ವಹಿಸಲು ಮೊಬೈಲಿನಲ್ಲೂ ಕೂಡ ವ್ಯವಸ್ಥೆ… ಇದು ಖಾಸಗಿ ಶಾಲೆಯೂ ನಾಚುವಂತಿರುವ ಸರಕಾರಿ ಶಾಲೆ! ಸರಕಾರಿ ಶಾಲೆ ಅಂದ್ರೆ ಸಾಕು ಅಲ್ಲಿನ ಶಿಕ್ಷಣ ವ್ಯವಸ್ಥೆ ಬಗ್ಗೆ ಎಲ್ಲರೂ ಪ್ರಶ್ನೆ ಮಾಡೋವ್ರೆ. ಅಲ್ಲಿ ವಿದ್ಯಾರ್ಥಿನಿಯರಿಗೆ ಭದ್ರತೆ ಕೂಡ ಇರೋದಿಲ್ಲ ಅನ್ನೊ ಪರಿಸ್ಥಿತಿಯೂ ಇದೆ. ಇನ್ನು ಸರಕಾರದ ವಿದ್ಯಾರ್ಥಿ/ವಿದ್ಯಾರ್ಥಿನಿಯರ ವಸತಿ ಶಾಲೆಗಳಲ್ಲಿನ ವ್ಯವಸ್ಥೆ ಬಗ್ಗೆ, ಶಿಕ್ಷಣ ಬಗ್ಗೆ, ಅಲ್ಲಿನ ಭದ್ರತೆ ಬಗ್ಗೆ ಹಾಗೂ ಅಲ್ಲಿ ಪೂರೈಸುವಂತಹ ಆಹಾರದ ಬಗ್ಗೆ ಅಂತೂ ಕೇಳಲೇ ಬೇಡಿ. ಯಾಕಂದ್ರೆ ಸರಕಾರ ನಡೆಸುತ್ತಿರೋ ವಸತಿ ಶಾಲೆಗಳ ಬಗ್ಗೆ ನಿಮಗೆಲ್ಲ ಗೊತ್ತಿರುವಂತಹದ್ದೇ ಅಲ್ವಾ..! ಆದ್ರೆ ಈ ಮಾತಿಗೆ ಅಪವಾದ ಅನ್ನೊಹಾಗೆ ಇಲ್ಲೊಂದು ಸರಕಾರಿ ವಸತಿ ಶಾಲೆ ಇದೆ. ಅದು ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಗಿಂತ ಕಡಿಮೆ ಇಲ್ಲ. ಇಲ್ಲಿ ವಿದ್ಯಾರ್ಥಿನಿಯರು ಸಂಪೂರ್ಣ ಸೇಫ್ ಅಂತಾ ಹೇಳಬಹುದು. ಅದು ಯಾವ ವಸತಿ ಶಾಲೆ ಅಂತೀರಾ.. ಇಲ್ಲಿದೆ ನೋಡಿ ವಿಶೇಷ ವರದಿ… (Morarji Desai Residential School Kamthana Bidar)

ಇದು ಹಚ್ಚಹಸಿರಿನಿಂದ ಕಂಗೊಳಿಸುತ್ತಿರುವ ಮೊರಾರ್ಜಿ ದೇಸಾಯಿ ‌ವಸತಿ ಶಾಲೆ… ತಂಪಾದ ಗಿಡದ ನೆರಳಿನಲ್ಲಿ ಮಕ್ಕಳ ಓದು, ಆಟ, ಪಾಠ,… ಉತ್ತಮ ಗುಣಮಟ್ಟದ ಆಹಾರ, ಉತ್ತಮ ಶಿಕ್ಷಣ ವೃಂದದಿಂದ ಮಕ್ಕಳು ಓದಿನಲ್ಲಿ‌ ಸದಾ ಮುಂದು… ಜಿಲ್ಲೆಗೆ ಮಾದರಿಯಾಗಿದೆ ಕಮಠಾಣ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ… ಡಿಜಿಟಲ್ ಬೋರ್ಡ್​​ ಮೇಲೆ ಭಾರತವನ್ನ ತೋರಿಸ್ತಾ ಪಾಠವನ್ನ ಮಾಡ್ತಿರೋ ಶಿಕ್ಷಕರು… ತದೇಕಚಿತ್ತದಿಂದ ಪಾಠವನ್ನ ಕೇಳ್ತಿರೋ ವಿದ್ಯಾರ್ಥಿ ವಿದ್ಯಾರ್ಥಿನಿಯರು…. ಇದು ಬೀದರ್​​ ಜಿಲ್ಲೆಯಲ್ಲಿ ಡಿಜಿಟಲ್ ಬೋರ್ಡ್​ ಬಳಸಿ ಪಾಠ ಮಾಡೋ ಮೊದಲ ಮೂರಾರ್ಜಿ ದೇಸಾಯಿ ವಸತಿ ಶಾಲೆ.

ಇದೊಂದು ವಿನೂತನ ಪ್ರಯತ್ನ. ಇಲ್ಲಿ ವಸತಿ ಶಾಲೆಯಲ್ಲಿ ಇನ್ನೂ ಒಂದು ವಿಶೇಷತೆ ಇದೆ. ಶಾಲೆಯಲ್ಲಿ ಶಿಕ್ಷಕರು ಪಾಠ ಮಾಡ್ತಿದ್ದಾರೋ ಇಲ್ವೊ ಅನ್ನೊ ದೃಶ್ಯಗಳನ್ನ ಮೋಬೈಲಿನಲ್ಲೆ ಲೈವ್ ನೋಡ್ತಿರೋ ಮುಖ್ಯ ಗುರುಗಳು. ಜೊತೆಗೆ ತಮ್ಮ ಕೊಠಡಿಯಲ್ಲಿ ಶಾಲೆಯಲ್ಲಿ ನಡೆಯುತ್ತಿರು ಆಗುಹೋಗುಗಳ ಬಗ್ಗೆ ನಿಗಾ ಇಡಲು ಕಂಪ್ಯೂಟರ್ ಕೂಡ ಅಳವಡಿಸಿಕೊಂಡಿದ್ದಾರೆ. ಹೌದು.. ಇದು ಬೀದರ್ ತಾಲೂಕಿನ ಕಮಠಾಣ ಗ್ರಾಮದಲ್ಲಿರೋ ಮೋರಾರ್ಜಿ ದೇಸಾಯಿ ವಸತಿ ಶಾಲೆ  ಯಲ್ಲಿನ ಅವರ್ಣನೀಯ ದೃಶ್ಯಗಳು.

ಇನ್ನು ಶಾಲೆಯ ಆವರಣವೂ ಕೂಡಾ ಹಚ್ಚಹಸಿರಿನಿಂದ ಕೂಡಿದ್ದು ನೂರಾರು ನಾನಾ ಜಾತಿಯ ಗಿಡಗಳನ್ನ ಇಲ್ಲಿ ನೆಡಲಾಗಿದೆ. ಈ ಗಿಡಗಳ ನೆರಳಿನಲ್ಲಿ ಮಕ್ಕಳು ಪ್ರತಿ ದಿನವೂ ಓದಿಕೊಳ್ಳುತ್ತಿದ್ದು, ಮಕ್ಕಳಿಗೂ ಇದರಿಂದ ಮನಸ್ಸಿಗೆ ಖುಷಿ ಕೊಡುತ್ತದೆ. ತಮ್ಮ ಶಾಲೆಯ ಬಗ್ಗೆ, ಇಲ್ಲಿನ ವಾತಾವರಣದ ಬಗ್ಗೆ, ಇಲ್ಲಿನ ಸೌಲಭ್ಯದ ಬಗ್ಗೆ ಇಲ್ಲಿನ ವಿದ್ಯಾರ್ಥಿನಿ ಹತ್ತನೇ ತರಗತಿ ವಿದ್ಯಾರ್ಥಿನಿ ಸುಧಾರಾಣಿ ಹೆಮ್ಮೆಪಡುತ್ತಾಳೆ.

ಶಿಕ್ಷಣ ಕುರಿತಾದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಒಂದು ವೇಳೆ ಶಾಲಾ ಪ್ರಾಂಶುಪಾಲರು ಬೇರೆ ಕೆಲಸದ ನಿಮಿತ್ತ ಹೊರಗಡೆ ಬಂದಾಗಲೂ ಕೂಡ ಶಾಲೆಯಲ್ಲಿ ಎನು ನಡೆಯುತ್ತಿದೆ.. ಶಿಕ್ಷಕರು ಪಾಠ ಮಾಡುತ್ತಿದ್ದಾರೋ ಅಥವಾ ಇಲ್ಲವೋ ಎಂಬುದನ್ನ ಸಹ ನೋಡಲು ಶಾಲಾ ಪ್ರಾಂಶುಪಾಲರು ತಮ್ಮ ಮೋಬೈಲಲ್ಲಿ ಸಿಸಿಟಿವಿ ಅಪ್ಲಿಕೇಷನ್ ಕೂಡ ಅಳವಡಿಸಿಕೊಂಡಿದ್ದಾರೆ. ಅದರ ಮುಖಾಂತರ ಶಾಲಾ ಘಟನಾವಳಿಗಳನ್ನ ಕೂಡ ನೋಡಬಹುದು. ಜೊತೆಗೆ ವಿದ್ಯಾರ್ಥಿನಿಯರ ಮೇಲೆ ನಡೆಯಬಹುದಾದ ದೌರ್ಜನ್ಯ ನಿಯಂತ್ರಿಸಲು ಜೊತೆಗೆ ಅವುಗಳ ಮೇಲೆ ನಿಗಾ ಇಡಲು ಸಿಸಿಟಿವಿ ಅಳವಡಿಸಿರೋದಾಗಿ ಅಧಿಕಾರಿಗಳು ಹೇಳ್ತಾರೆ.

ಇನ್ನು ಇಲ್ಲಿ ಶಿಕ್ಷಣ ಗುಣಮಟ್ಟಕ್ಕೆ ಎನೂ ಕೊರತೆ ಇಲ್ಲ. ಯಾವುದೇ ಖಾಸಗಿ ಶಾಲೆಗಳ ಶಿಕ್ಷಣ ಗುಣಮಟ್ಟಕ್ಕಿಂತ ಇಲ್ಲಿ ಉತ್ತಮವಾಗಿದೆ. ಸ್ಮಾರ್ಟ್​​ ಬೋರ್ಡ್​​ ಕಲಿಕೆಯಿಂದ ಚೆನ್ನಾಗಿ ಅರ್ಥೈಸಿಕೊಳ್ಳೊದಕ್ಕೆ ಸಾಧ್ಯವಾಗುತ್ತೆ ಅಂತಾರೆ ಇಲ್ಲಿನ ವಿದ್ಯಾರ್ಥಿಗಳು. ಇನ್ನು 25 ಎಕರೆಯಷ್ಟೂ ವಿಸ್ತಾರದಲ್ಲಿ ಈ ವಸತಿ ಶಾಲೆ ನಡೆಯುತ್ತಿದೆ. ಆರನೇ ತರಗತಿಯಿಂದ 12 ನೇ ತರಗತಿವರೆಗೂ ಕೂಡಾ ಇಲ್ಲಿ ಶಾಲೆ/ಕಾಲೇಜು ನಡೆಯುತ್ತಿದೆ. ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಬೇಕಾದ ವ್ಯವಸ್ಥೆಯನ್ನ ಇಲ್ಲಿ ಕಲ್ಪಿಸಲಾಗಿದೆ. ಸಂಗೀತವನ್ನು ಕೂಡ ಈ ವಸತಿ ಶಾಲೆಯಲ್ಲಿ ಕಲಿಸಿ ಕೊಡಲಾಗುತ್ತದೆ.

ಉತ್ತಮ ಗ್ರಂಥಾಲಯ ಉತ್ತಮ ಪ್ರಯೋಗಾಲಯವೂ ಕೂಡಾ ಇಲ್ಲಿದ್ದು ಮಕ್ಕಳ ವಿಜ್ಜಾನ ವಿಷಯಕ್ಕೆ ಸಂಬಂಧಿಸಿದ ಪಾಠಗಳನ್ನ ಪ್ರಯೋಗದ ಮೂಲಕ ಇಲ್ಲಿ ಮಕ್ಕಳಿಗೆ ತಿಳಿಸಿಕೊಡಲಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಎಲ್ಲ ವಿಷಯದಲ್ಲಿಯೂ ಮುಂದಿದ್ದು ಪ್ರತಿ ವರ್ಷವೂ ನೂರಕ್ಕೆ ನೂರರಷ್ಟು ಫಲಿತಾಂಶ ಈ ವಸತಿ ಶಾಲೆ ಗಳಿಸಿದೆ. ಇನ್ನು ಊಟದ ವಿಚಾರದಲ್ಲಿ ಹೇಳುವುದಾದರೆ ಉತ್ತಮ ಆಹಾರವನ್ನ ಇಲ್ಲಿ ಕೊಡಲಾಗುತ್ತಿದೆ. ಮಕ್ಕಳ ಓದಿಗೆ ಬೇಕಾದ ಎಲ್ಲಾ ವಾತಾವರಣವನ್ನ ಇಲ್ಲಿ ಕಲ್ಪಿಸಿಕೊಡಲಾಗಿದೆ ಎಂದು ಪ್ರಿನ್ಸಿಪಾಲ್ ರವಿಂದ್ರ ಹೇಳುತ್ತಾರೆ.
(ವರದಿ: ಸುರೇಶ್ ನಾಯಕ್, ಟಿವಿ 9, ಬೀದರ್)