RV ಸಂಸ್ಥೆಗಳನ್ನು ನಡೆಸುತ್ತಿರುವ ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್‌ನ ನೂತನ ಅಧ್ಯಕ್ಷರಾಗಿ ಖ್ಯಾತ ಉದ್ಯಮಿ ಎಂಪಿ ಶ್ಯಾಮ್ ನೇಮಕ

| Updated By: ಆಯೇಷಾ ಬಾನು

Updated on: May 16, 2022 | 3:22 PM

ಆಡಳಿತ ಮಂಡಳಿಯ ಟ್ರಸ್ಟಿಗಳು ಸಭೆಯಲ್ಲಿ ಸಂಸ್ಥೆಗಳ ಚುಕ್ಕಾಣಿ ಹಿಡಿಯಲು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ. ಶ್ಯಾಮ್ ಅವರ ತಂದೆ, ಹಿರಿಯ ಶಿಕ್ಷಣ ತಜ್ಞ ಎಂ.ಕೆ.ಪಾಂಡುರಂಗ ಶೆಟ್ಟಿ ಅವರ ನಂತರ ಟ್ರಸ್ಟ್‌ನ ಮುಖ್ಯಸ್ಥರಾಗಿದ್ದಾರೆ.

RV ಸಂಸ್ಥೆಗಳನ್ನು ನಡೆಸುತ್ತಿರುವ ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್‌ನ ನೂತನ ಅಧ್ಯಕ್ಷರಾಗಿ ಖ್ಯಾತ ಉದ್ಯಮಿ ಎಂಪಿ ಶ್ಯಾಮ್ ನೇಮಕ
ಎಂಪಿ ಶ್ಯಾಮ್
Follow us on

ಬೆಂಗಳೂರು: ಬೆಂಗಳೂರಿನ ಆರ್‌ವಿ ಗ್ರೂಪ್‌ನ(RV Groups) ಶಿಕ್ಷಣ ಸಂಸ್ಥೆಗಳು ಮತ್ತು ಆರ್‌ವಿ ವಿಶ್ವವಿದ್ಯಾಲಯವನ್ನು ನಡೆಸುವ ಅತ್ಯಂತ ಹಳೆಯ ಶೈಕ್ಷಣಿಕ ಟ್ರಸ್ಟ್‌ಗಳಲ್ಲಿ ಒಂದಾದ ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್‌ನ ನೂತನ ಅಧ್ಯಕ್ಷರಾಗಿ ಖ್ಯಾತ ಉದ್ಯಮಿ ಎಂಪಿ ಶ್ಯಾಮ್(MP Shyam) (61) ನೇಮಕಗೊಂಡಿದ್ದಾರೆ.

ಆಡಳಿತ ಮಂಡಳಿಯ ಟ್ರಸ್ಟಿಗಳು ಸಭೆಯಲ್ಲಿ ಸಂಸ್ಥೆಗಳ ಚುಕ್ಕಾಣಿ ಹಿಡಿಯಲು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ. ಶ್ಯಾಮ್ ಅವರ ತಂದೆ, ಹಿರಿಯ ಶಿಕ್ಷಣ ತಜ್ಞ ಎಂ.ಕೆ.ಪಾಂಡುರಂಗ ಶೆಟ್ಟಿ ಅವರ ನಂತರ ಟ್ರಸ್ಟ್‌ನ ಮುಖ್ಯಸ್ಥರಾಗಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಎಂಸಿ ಶಿವಾನಂದ ಶರ್ಮಾ ಅವರು 1940 ರಲ್ಲಿ ಈ ಟ್ರಸ್ಟ್ನ ಸ್ಥಾಪಿಸಿದ್ರು. ಬೆಂಗಳೂರಿನಲ್ಲಿ ಕೇವಲ ಆರು ವಿದ್ಯಾರ್ಥಿಗಳೊಂದಿಗೆ ಪ್ರಾಥಮಿಕ ಶಾಲೆಯೊಂದಿಗೆ ಈ ಟ್ರಸ್ಟ್ ಪ್ರಾರಂಭವಾಯಿತು. ಇಂದು ಇದು ಎಂಜಿನಿಯರಿಂಗ್ ಮತ್ತು ಡೆಂಟಲ್ ಕಾಲೇಜುಗಳನ್ನು ಒಳಗೊಂಡಂತೆ 20 ಶಾಲೆಗಳು ಮತ್ತು ಕಾಲೇಜುಗಳನ್ನು ನಡೆಸುತ್ತಿದೆ. ಸುಮಾರು 20,000 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

USನಲ್ಲಿ ಶಿಕ್ಷಣ ಪಡೆದ ಮತ್ತು ಲಾಜಿಸ್ಟಿಕ್ಸ್‌ನಲ್ಲಿ ಡಾಕ್ಟರೇಟ್ ಪಡೆದಿರುವ ವಿದ್ಯಾವಂತ ಶ್ಯಾಮ್ ಅವರು ಹ್ಯುಂಡೈ, ಹೋಂಡಾ, ಫೋರ್ಡ್, ಮರ್ಸಿಡಿಸ್, JCB ಮತ್ತು ಅಶೋಕ್ ಲೇಲ್ಯಾಂಡ್ ಸೇರಿದಂತೆ ಅಥರ್ ಎಲೆಕ್ಟ್ರಿಕ್, ಆಲ್ಟಿಗ್ರೀನ್ ಮತ್ತು ಫಿಚ್ ಸೇರಿದಂತೆ ಎಲೆಕ್ಟ್ರಿಕ್ ವೆಹಿಕಲ್ ಬ್ರ್ಯಾಂಡ್‌ಗಳ ಜೊತೆಗೆ ಅನುಭವಿ ಆಟೋಮೊಬೈಲ್ ಡೀಲರ್ ಆಗಿದ್ದಾರೆ. ಅಲ್ಲದೆ ಶ್ಯಾಮ್ ಅವರು ಕರ್ನಾಟಕ ಭಾಗದ ಫೆಡರೇಶನ್ ಆಫ್ ಆಟೋ ಡೀಲರ್ಸ್ ಅಸೋಸಿಯೇಶನ್‌ನ ಮುಖ್ಯಸ್ಥರಾಗಿದ್ದಾರೆ.

ಉದ್ಯಮಕ್ಕೆ ಸಂಬಂಧ ಪಟ್ಟ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:12 pm, Mon, 16 May 22