Siddaramaiah: ಮೈಸೂರು ವಿವಿಯಲ್ಲಿ ಕಾನೂನು ವಿಭಾಗದಲ್ಲಿ Rank ಪಡೆದವರಿಗೆ ಸಿದ್ದರಾಮಯ್ಯ ಹೆಸರಲ್ಲಿ ಚಿನ್ನದ ಪದಕ
Mysore University: ಮೈಸೂರು ವಿಶ್ವ ವಿದ್ಯಾಲಯದಲ್ಲಿ ಮಾಜಿ ಮುಖ್ಯಮಂತ್ರಿ, ಹಾಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೆಸರಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಚಿನ್ನದ ಪದಕ ನೀಡಲು ನಿರ್ಧರಿಸಲಾಗಿದೆ.
ಮೈಸೂರು: ಮೈಸೂರು ವಿಶ್ವ ವಿದ್ಯಾಲಯದಲ್ಲಿ (Mysore University) ಮಾಜಿ ಮುಖ್ಯಮಂತ್ರಿ, ಹಾಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ (Siddaramaiah) ಹೆಸರಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಚಿನ್ನದ ಪದಕ (gold medal) ನೀಡಲು ನಿರ್ಧರಿಸಲಾಗಿದೆ. ಸಿದ್ದರಾಮಯ್ಯ 75 ಅಮೃತ ಮಹೋತ್ಸವ ದತ್ತಿ ಚಿನ್ನದ ಪದಕ ಇದಾಗಿದ್ದು, 2022-23ನೇ ಸಾಲಿನಿಂದ ಎಲ್ಎಲ್ಬಿಯಲ್ಲಿ ಱಂಕ್ (Rank) ಪಡೆದವರಿಗೆ ನೀಡಲಾಗುವುದು.
ಮೈಸೂರು ಗ್ರಾಮಾಂತರ ಅಧ್ಯಕ್ಷರ ಹೆಸರಿನಲ್ಲಿ ವಿಶ್ವ ವಿದ್ಯಾಲಯಕ್ಕೆ 1 ಲಕ್ಷ 5 ಸಾವಿರ ರೂಪಾಯಿ ದತ್ತಿ ನೀಡಲಾಗಿದೆ. ಹಾಗಾಗಿ ಎಲ್ಎಲ್ಬಿಯಲ್ಲಿ ಱಂಕ್ ಪಡೆದವರಿಗೆ ಚಿನ್ನದ ಪದಕ ನೀಡಲು ನಿರ್ಧರಿಸಲಾಗಿದೆ ಎಂದು ಟಿವಿ9ಗೆ ಅಧ್ಯಕ್ಷ ಡಾ. ಬಿ.ಜೆ. ವಿಜಯಕುಮಾರ್ ಮಾಹಿತಿ ನೀಡಿದ್ದಾರೆ.