NEET 2021: ನೀಟ್ ಪರೀಕ್ಷೆ ಅರ್ಜಿ ಶುಲ್ಕ ಸಲ್ಲಿಸಲು ಇಂದೇ ಕೊನೆಯ ದಿನಾಂಕ; ವಿವರಗಳನ್ನು ಇಲ್ಲಿ ಪರಿಶೀಲಿಸಿ

| Updated By: Skanda

Updated on: Aug 15, 2021 | 11:54 AM

ವಿದ್ಯಾರ್ಥಿ ಸಮುದಾಯದ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಈ ಮುನ್ನ ನೀಡಿದ್ದ ಅವಧಿಯಲ್ಲಿ ಪರೀಕ್ಷಾ ಶುಲ್ಕವನ್ನು ಪಾವತಿಸಲು ಸಾಧ್ಯವಾಗದ ನೋಂದಾಯಿತ ಅಭ್ಯರ್ಥಿಗಳಿಗೆ ಮಾತ್ರ ಮತ್ತೊಂದು ಅವಕಾಶವನ್ನು ನೀಡಲು ನಿರ್ಧರಿಸಿದೆ.

NEET 2021: ನೀಟ್ ಪರೀಕ್ಷೆ ಅರ್ಜಿ ಶುಲ್ಕ ಸಲ್ಲಿಸಲು ಇಂದೇ ಕೊನೆಯ ದಿನಾಂಕ; ವಿವರಗಳನ್ನು ಇಲ್ಲಿ ಪರಿಶೀಲಿಸಿ
ಸಾಂಕೇತಿಕ ಚಿತ್ರ
Follow us on

ನವದೆಹಲಿ: ಎನ್​ಟಿಎ (NTA) ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಗೆ (NEET UG Exam 2021) ಅರ್ಜಿ ಶುಲ್ಕ ಸಲ್ಲಿಸಲು ಇಂದು (ಆಗಸ್ಟ್​ 15) ಕೊನೆಯ ದಿನವಾಗಿದೆ. ನೀಟ್ ಯುಜಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಅರ್ಜಿ ಪ್ರಕ್ರಿಯೆಯನ್ನು ಇನ್ನೂ ಪೂರ್ಣಗೊಳಿಸದ ಇದ್ದಲ್ಲಿ ಇಂದು ರಾತ್ರಿ 11.50ರೊಳಗೆ ntaneet.nic.in ವೆಬ್​ಸೈಟ್​ನಲ್ಲಿ ಶುಲ್ಕ ಸಲ್ಲಿಸಬಹುದು. ಸೆಪ್ಟೆಂಬರ್ 12ಕ್ಕೆ ನೀಟ್ ಪರೀಕ್ಷೆ ನಡೆಯಲಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಟ್‌ನ ಅಧಿಕೃತ ವೆಬ್‌ಸೈಟ್, neet.nta.nic.in ನಲ್ಲಿ ಪರಿಶೀಲಿಸಬಹುದು.

ವಿದ್ಯಾರ್ಥಿಗಳ ನಿರಂತರ ಬೇಡಿಕೆಯನ್ನು ಪರಿಗಣಿಸಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) 2021 ಅರ್ಜಿ ಶುಲ್ಕವನ್ನು ಪಾವತಿಸಲು ಗಡುವು ವಿಸ್ತರಿಸಿದ್ದು, ಇಂದು ರಾತ್ರಿ 11.50ರ ತನಕ ಕಾಲಾವಕಾಶ ನಿಡಲಾಗಿದೆ. ಈ ಮೊದಲಿನ ನಿಗದಿತ ಗಡುವು ಸಮಯದಲ್ಲಿ ನೀಟ್ ಪರೀಕ್ಷಾ ಶುಲ್ಕವನ್ನು ಪಾವತಿಸಲು ಸಾಧ್ಯವಾಗದ ಅಭ್ಯರ್ಥಿಗಳು ಇಂದು ರಾತ್ರಿಯ ಒಳಗೆ ಪಾವತಿಸಬಹುದು.

ಪರೀಕ್ಷೆಯು ಸೆಪ್ಟೆಂಬರ್ 12 ರಂದು ನಡೆಯಲಿದೆ
ವಿದ್ಯಾರ್ಥಿ ಸಮುದಾಯದ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಈ ಮುನ್ನ ನೀಡಿದ್ದ ಅವಧಿಯಲ್ಲಿ ಪರೀಕ್ಷಾ ಶುಲ್ಕವನ್ನು ಪಾವತಿಸಲು ಸಾಧ್ಯವಾಗದ ನೋಂದಾಯಿತ ಅಭ್ಯರ್ಥಿಗಳಿಗೆ ಮಾತ್ರ ಮತ್ತೊಂದು ಅವಕಾಶವನ್ನು ನೀಡಲು ನಿರ್ಧರಿಸಿದೆ. ಈ ವರ್ಷ ನೀಟ್ ಪರೀಕ್ಷೆ ಸೆಪ್ಟೆಂಬರ್ 12 ರಂದು ನಡೆಯಲಿದೆ.

NEET MDS 2021 ಕೌನ್ಸೆಲಿಂಗ್ ವೇಳಾಪಟ್ಟಿ
ವೈದ್ಯಕೀಯ ಸಮಾಲೋಚನಾ ಸಮಿತಿಯು (MCC) NEET MDS 2021 ರ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ನೋಂದಣಿ ಆಗಸ್ಟ್ 20, 2021 ರಿಂದ ಆರಂಭವಾಗುತ್ತದೆ. ಪ್ರವೇಶ ಸುತ್ತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು mcc.nic.in ನಲ್ಲಿ MCC ಯ ಅಧಿಕೃತ ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಹಂತಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ.

ಬಿಡುಗಡೆಯಾದ ವೇಳಾಪಟ್ಟಿಯ ಪ್ರಕಾರ, ನೀಟ್ ರೌಂಡ್ 1 ರ ನೋಂದಣಿ ಪ್ರಕ್ರಿಯೆಯು ಆಗಸ್ಟ್ 24, 2021 ರಂದು ಕೊನೆಗೊಳ್ಳುತ್ತದೆ. ನೋಂದಣಿ ಪ್ರಕ್ರಿಯೆಯ ನಂತರ ಆಯ್ಕೆ ಭರ್ತಿ ಅಥವಾ ಲಾಕಿಂಗ್ ಅನ್ನು ಆಗಸ್ಟ್ 21 ರಿಂದ ಆಗಸ್ಟ್ 24, 2021 ರವರೆಗೆ ಮಾಡಲಾಗುತ್ತದೆ. ಸೀಟು ಹಂಚಿಕೆ ಪ್ರಕ್ರಿಯೆಯನ್ನು ಆಗಸ್ಟ್ 25 ರಿಂದ ಆಗಸ್ಟ್ 26, 2021 ರವರೆಗೆ ಮಾಡಲಾಗುತ್ತದೆ ಮತ್ತು ಫಲಿತಾಂಶವು ಆಗಸ್ಟ್ 27, 2021 ರಂದು ಲಭ್ಯವಾಗಲಿದೆ. ಅಭ್ಯರ್ಥಿಗಳು ಆಗಸ್ಟ್ 28 ರಿಂದ ಸೆಪ್ಟೆಂಬರ್ 1, 2021 ರವರೆಗೆ ಕಾಲೇಜಿಗೆ ವರದಿ ಮಾಡಬಹುದು.

ನೀಟ್‌ನಲ್ಲಿ ಮೀಸಲಾತಿ
ಅಖಿಲ ಭಾರತ ಕೋಟಾದಡಿ ವೈದ್ಯಕೀಯ ಕಾಲೇಜುಗಳ ದಾಖಲಾತಿಯಲ್ಲಿ ಒಬಿಸಿ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಮೀಸಲಾತಿಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನುಮೋದಿಸಿದೆ. ಈಗ 27% OBC ವರ್ಗ ಮತ್ತು 10% EWS ವರ್ಗದ ವಿದ್ಯಾರ್ಥಿಗಳು ಪದವಿಪೂರ್ವ ಮತ್ತು ಸ್ನಾತಕೋತ್ತರ ಎಲ್ಲಾ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿ ಅಖಿಲ ಭಾರತ ಕೋಟಾ ಯೋಜನೆಯಡಿ ಮೀಸಲಾತಿ ಪಡೆಯಬಹುದಾಗಿದೆ. ಎಸ್​ಸಿ/ ಎಸ್​ಟಿ ಅಥವಾ ಒಬಿಸಿ ಸಮುದಾಯಕ್ಕೆ ಸೇರಿರುವ ಅಭ್ಯರ್ಥಿಗಳು ಪಿಯುಸಿಯಲ್ಲಿ ಪಿಸಿಬಿ ಕಾಂಬಿನೇಷನ್ ಪಡೆದು ಶೇ. 40ರಷ್ಟು ಅಂಕವನ್ನು ಗಳಿಸಿರಬೇಕು. ಜನರಲ್ ಕೆಟಗರಿಯವರಾದರೆ ಶೇ. 45ರಷ್ಟು ಅಂಕ ಪಡೆದಿರಬೇಕು. ಹಾಗೇ. ದಿವ್ಯಾಂಗರಿಗೆ ಶೇ. 3ರಷ್ಟು ಮೀಸಲಾತಿ ನೀಡಲಾಗುವುದು. ಅವರಿಗೂ ಶೈಕ್ಷಣಿಕ ಅರ್ಹತೆ ಹಾಗೂ ವಯಸ್ಸಿನ ನಿಯಮಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಎನ್​ಟಿಎ ಮಾಹಿತಿ ನೀಡಿದೆ.

(NEET 2021 exam date application fee submission last date for national eligibility cum entrance test is August 15th 2021)

ಇದನ್ನೂ ಓದಿ:
NEET UG 2021: ಇದೇ ಮೊದಲ ಬಾರಿಗೆ ದುಬೈನಲ್ಲಿ ನಡೆಯಲಿದೆ ನೀಟ್ ಪ್ರವೇಶ ಪರೀಕ್ಷೆ

NEET MDS Counselling: ವಿದ್ಯಾರ್ಥಿಗಳೇ ಗಮನಿಸಿ; ಆಗಸ್ಟ್ 20ರಿಂದ ನೀಟ್ ಎಂಡಿಎಸ್ ಕೌನ್ಸೆಲಿಂಗ್ ಆರಂಭ