ದೆಹಲಿ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ವೈದ್ಯಕೀಯ ಕೋರ್ಸ್ಗೆ ಪ್ರವೇಶಕ್ಕಾಗಿ ನಡೆಯುವ ನೀಟ್ ಪರೀಕ್ಷೆಯ ಫಲಿತಾಂಶ ಇಂದು (ನವೆಂಬರ್ 1) ಪ್ರಕಟವಾಗಿದೆ. ರಾಷ್ಟ್ರೀಯ ಟೆಸ್ಟಿಂಗ್ ಏಜೆನ್ಸಿಯಿಂದ ಈ ಬಗ್ಗೆ ಮಾಹಿತಿ ಲಭ್ಯವಾಗಿದೆ. ನೀಟ್ ಪದವಿ ಕೋರ್ಸ್ ಫಲಿತಾಂಶ ಘೋಷಣೆಗೆ ಸುಪ್ರೀಂಕೋರ್ಟ್ ಈ ಮೊದಲು ಅವಕಾಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಈಗ ಫಲಿತಾಂಶ ಪ್ರಕಟವಾಗಿದೆ.
NTA, NEET 2021 ಫಲಿತಾಂಶವನ್ನು ವಿದ್ಯಾರ್ಥಿಗಳಿಗೆ ಅವರ ಇಮೇಲ್‌ನಲ್ಲಿ ಕಳುಹಿಸಿದೆ. ಅಭ್ಯರ್ಥಿಗಳು NTA, NEET ನ ಅಧಿಕೃತ ಸೈಟ್‌ನಲ್ಲಿ neet.nta.nic.in (NTA Website) ನಲ್ಲಿ ಫಲಿತಾಂಶ ಮತ್ತು ಫೈನಲ್ ಅನ್ಸರ್ ಕೀ ಎರಡನ್ನೂ ಪರಿಶೀಲಿಸಬಹುದು.
ತೆಲಂಗಾಣದ ಮೃಣಾಲ್ ಕುಟ್ಟೇರಿ, ದೆಹಲಿಯ ತನ್ಮಯ ಗುಪ್ತಾ ಹಾಗೂ ಮಹಾರಾಷ್ಟ್ರದ ಕಾರ್ತಿಕ್ ಜಿ. ನಾಯರ್ಗೆ ಟಾಪ್ ಶ್ರೇಣಿ ಲಭ್ಯವಾಗಿದೆ. ಮೂವರು ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ವೇಳೆ ಟೈ ಬ್ರೇಕಿಂಗ್ ಫಾರ್ಮುಲಾ ಬಳಸಬೇಕು ಎಂದು ಎನ್ಟಿಎ ಹೇಳಿದೆ. ಈಗ ಮೊದಲ ಶ್ರೇಣಿಯನ್ನು ಮೂವರು ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ. ನೀಟ್ ಯುಜಿಸಿ 2021 ಪರೀಕ್ಷೆಯಲ್ಲಿ ಒಟ್ಟು 15,44,275 ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಅದರಲ್ಲಿ 8,70,074 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ನೀಟ್ ಫಲಿತಾಂಶವನ್ನು ಡೌನ್‌ಲೋಡ್ ಮಾಡುವುದು ಹೇಗೆ? – ನೀಟ್ ಪರೀಕ್ಷೆ ಪರೀಕ್ಷಿಸಲು ಎನ್ಟಿಎಯ ಅಧಿಕೃತ ವೆಬ್‌ಸೈಟ್ ntaneet.nic.in ಗೆ ಭೇಟಿ ನೀಡಿ. – ವೆಬ್ಸೈಟ್ನ ಹೋಂ ಪೇಜ್ನಲ್ಲಿ NEET ಫಲಿತಾಂಶದ ಲಿಂಕ್ ಅನ್ನು ಕ್ಲಿಕ್ ಮಾಡಿ. – ನಿಮ್ಮ ರಿಜಿಸ್ಟರ್ ಸಂಖ್ಯೆ ಮುಂತಾದ ವಿವರಗಳನ್ನು ನಮೂದಿಸಿ, ಲಾಗಿನ್ ಮಾಡಿ. – ಆಗ ನಿಮ್ಮ ಫಲಿತಾಂಶ ಸ್ಕ್ರೀನ್ ಮೇಲೆ ಗೋಚರಿಸುತ್ತದೆ. – ಅದನ್ನು ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಇದನ್ನೂ ಓದಿ: NEET 2021 Results: ನೀಟ್ ಫಲಿತಾಂಶ ಪ್ರಕಟಿಸಲು ಸುಪ್ರೀಂ ಕೋರ್ಟ್ ಅನುಮತಿ; ರಿಸಲ್ಟ್ ನೋಡಲು ಹೀಗೆ ಮಾಡಿ
ಇದನ್ನೂ ಓದಿ: NEET-PG Counselling: ನೀಟ್ ಪಿಜಿ ಕೌನ್ಸೆಲಿಂಗ್ಗೆ ತಡೆ ನೀಡಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ