ನವದೆಹಲಿ: ಆಗಸ್ಟ್ 20ರಿಂದ ನೀಟ್ ಎಂಡಿಎಸ್ (NEET MDS 2021) ಕೌನ್ಸಿಲಿಂಗ್ ನಡೆಸುವುದಾಗಿ ಸುಪ್ರೀಂಕೋರ್ಟ್ಗೆ ಆರೋಗ್ಯ ಸಚಿವಾಲಯದ ತಿಳಿಸಿದೆ. ಆಗಸ್ಟ್ 20ರಿಂದ ಅಕ್ಟೋಬರ್ 10ರವರೆಗೆ ನೀಟ್ ಎಂಡಿಎಸ್ ಕೌನ್ಸಿಲಿಂಗ್ ನಡೆಯಲಿದೆ. 2020ರ ಡಿಸೆಂಬರ್ 16ರಂದು ನೀಟ್- ಎಂಡಿಎಸ್ ಪರೀಕ್ಷೆ ನಡೆದಿತ್ತು. ಆದರೆ, ಕೊವಿಡ್ನಿಂದಾಗಿ ಇನ್ನೂ ದಾಖಲಾತಿ ಶುರುವಾಗಿರಲಿಲ್ಲ.
ಈ ಬಗ್ಗೆ ಮೆಡಿಕಲ್ ಕೌನ್ಸೆಲಿಂಗ್ ಕಮಿಟಿ ಮತ್ತು ಯೂನಿಯನ್ ಆಫ್ ಇಂಡಿಯಾ ಇಂದು ಸುಪ್ರೀಂ ಕೋರ್ಟ್ಗೆ ಸಫಿಡವಿಟ್ ಸಲ್ಲಿಸಿವೆ. ನೀಟ್ ಎಂಡಿಎಸ್ ಕೌನ್ಸೆಲಿಂಗ್ ಯಾವಾಗ ಮಾಡುತ್ತೀರೆಂಬ ಬಗ್ಗೆ ಬುಧವಾರದೊಳಗೆ ಮಾಹಿತಿ ನೀಡಿ ಎಂದು ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು. ಅದರಂತೆ ಇಂದು ಎಂಡಿಎಸ್ ಕೌನ್ಸಿಲಿಂಗ್ ದಿನಾಂಕವನ್ನು ಸುಪ್ರೀಂ ಕೋರ್ಟ್ಗೆ ತಿಳಿಸಲಾಗಿದೆ. ಕೌನ್ಸೆಲಿಂಗ್ ವಿಳಂಬವಾಗುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ನ್ಯಾಯಮೂರ್ತಿ ಡಿವೈ ಚಂದ್ರಚೂಡ ಹಾಗೂ ನ್ಯಾಯಮೂರ್ತಿ ಎಂಆರ್ ಶಾ ಅವರ ನ್ಯಾಯಪೀಠ ಅಸಮಾಧಾನ ಹೊರಹಾಕಿತ್ತು.
ಯೂನಿಯನ್ ಆಫ್ ಇಂಡಿಯಾ ಎಂಡಿಎಸ್ ಸೀಟ್ಗೆ ಒಬಿಸಿಗೆ ಶೇ. 27ರಷ್ಟು ಮೀಸಲಾತಿ, ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ (EWS) ಶೇ. 10ರಷ್ಟು ಮೀಸಲಾತಿ ನೀಡುವುದಾಗಿ ತಿಳಿಸಿದೆ.
ಇದನ್ನೂ ಓದಿ: NEET 2021 Registration: ನೀಟ್ ಪ್ರವೇಶ ಪರೀಕ್ಷೆಗೆ ಹೆಸರು ನೋಂದಾಯಿಸಲು ಇಂದು ಕೊನೆಯ ದಿನ; ಅರ್ಜಿ ಸಲ್ಲಿಸಲು ಹೀಗೆ ಮಾಡಿ
NEET 2021: ನೀಟ್ ಮೂಲಕ BSc ನರ್ಸಿಂಗ್ ಕೋರ್ಸ್ ಸೇರಲಿಚ್ಛಿಸುವವರ ವಯಸ್ಸು, ಅರ್ಹತೆಯ ಮಾಹಿತಿ ಹೀಗಿದೆ
Published On - 2:53 pm, Tue, 10 August 21