AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

NEET 2021: ನೀಟ್ ಮೂಲಕ BSc ನರ್ಸಿಂಗ್ ಕೋರ್ಸ್​ ಸೇರಲಿಚ್ಛಿಸುವವರ ವಯಸ್ಸು, ಅರ್ಹತೆಯ ಮಾಹಿತಿ ಹೀಗಿದೆ

BSc Nursing Courses NEET Exam: ಬಿಎಸ್​ಸಿ ನರ್ಸಿಂಗ್​ಗೆ ಸೇರಲಿಚ್ಛಿಸುವ ಅಭ್ಯರ್ಥಿಗಳು ಪಿಸಿಬಿ (ಫಿಸಿಕ್ಸ್, ಕೆಮಿಸ್ಟ್ರಿ, ಬಯಾಲಜಿ) ಹಾಗೂ ಇಂಗ್ಲಿಷ್​ನಲ್ಲಿ ಶೇ. 45 ಅಂಕಗಳನ್ನಾದರೂ ಪಡೆದಿರಬೇಕು.

NEET 2021: ನೀಟ್ ಮೂಲಕ BSc ನರ್ಸಿಂಗ್ ಕೋರ್ಸ್​ ಸೇರಲಿಚ್ಛಿಸುವವರ ವಯಸ್ಸು, ಅರ್ಹತೆಯ ಮಾಹಿತಿ ಹೀಗಿದೆ
ಸಾಂದರ್ಭಿಕ ಚಿತ್ರ
TV9 Web
| Updated By: ಸುಷ್ಮಾ ಚಕ್ರೆ|

Updated on:Aug 07, 2021 | 2:32 PM

Share

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ನಡೆಸುವ ಈ ವರ್ಷದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET 2021) ನೋಟಿಫಿಕೇಷನ್ ಬಿಡುಗಡೆ ಮಾಡಿದ್ದು, ಬಿಎಸ್​ಸಿ ನರ್ಸಿಂಗ್ ಕೋರ್ಸ್​ಗಳಿಗೆ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆ ಮೂಲಕ ಸೇರಲಿಚ್ಛಿಸುವ ಅಭ್ಯರ್ಥಿಗಳಿಗೆ ಕೆಲವು ನಿರ್ಬಂಧಗಳನ್ನು ವಿಧಿಸಿದೆ. ಬಿಎಸ್​ಸಿ ನರ್ಸಿಂಗ್ ಕೋರ್ಸ್​ಗೆ ಸೇರಲು ಬಯಸುವ ಅಭ್ಯರ್ಥಿಗಳಿಗೆ ಡಿಸೆಂಬರ್ 31ರ ವೇಳೆಗೆ ಕನಿಷ್ಠ 17 ವರ್ಷ ಪೂರ್ತಿಯಾಗಬೇಕು ಎಂದು ಎನ್​ಟಿಎ ಆದೇಶ ಹೊರಡಿಸಿದೆ.

ದೇಶದ ನಾನಾ ಕಾಲೇಜುಗಳಲ್ಲಿ ಅಥವಾ ಶಿಕ್ಷಣ ಸಂಸ್ಥೆಗಳಲ್ಲಿ ಬಿಎಸ್​ಸಿ ನರ್ಸಿಂಗ್ ಕೋರ್ಸ್​ಗೆ ದಾಖಲಾತಿ ಪಡೆಯುವ ವಿದ್ಯಾರ್ಥಿಗಳು ಆ ಕಾಲೇಜು/ ವಿಶ್ವವಿದ್ಯಾಲಯ/ ಶಿಕ್ಷಣ ಸಂಸ್ಥೆಗಳಲ್ಲಿನ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿಕೊಳ್ಳಬೇಕು. ಆ ಕಾಲೇಜುಗಳಲ್ಲಿ ವಿಧಿಸಲಾಗುವ ನಿರ್ಬಂಧಗಳಿಗೂ ಎನ್​ಟಿಎಗೂ ಯಾವುದೇ ಸಂಬಂಧವಿರುವುದಿಲ್ಲ ಎಂದು ಈಗಾಗಲೇ ಐಎನ್​ಸಿ ಸೂಚಿಸಿದೆ ಎಂದು ಎನ್​ಟಿಎ ಖಚಿತಪಡಿಸಿದೆ.

ಬಿಎಸ್​ಸಿ ನರ್ಸಿಂಗ್​ಗೆ ಸೇರಲಿಚ್ಛಿಸುವ ಅಭ್ಯರ್ಥಿಗಳು ಪಿಸಿಬಿ (ಫಿಸಿಕ್ಸ್, ಕೆಮಿಸ್ಟ್ರಿ, ಬಯಾಲಜಿ) ಹಾಗೂ ಇಂಗ್ಲಿಷ್​ನಲ್ಲಿ ಶೇ. 45 ಅಂಕಗಳನ್ನಾದರೂ ಪಡೆದಿರಬೇಕು. ಪಿಯುಸಿಯಲ್ಲಿ ಪಿಸಿಬಿ ಕಾಂಬಿನೇಷನ್ ಪಡೆದಿರಬೇಕು ಎಂದು ಶೈಕ್ಷಣಿಕ ಅರ್ಹತೆಯ ಬಗ್ಗೆ ಎನ್​ಟಿಎ ತಿಳಿಸಿದೆ.

ಎಸ್​ಸಿ/ ಎಸ್​ಟಿ ಅಥವಾ ಒಬಿಸಿ ಸಮುದಾಯಕ್ಕೆ ಸೇರಿರುವ ಅಭ್ಯರ್ಥಿಗಳು ಪಿಯುಸಿಯಲ್ಲಿ ಪಿಸಿಬಿ ಕಾಂಬಿನೇಷನ್ ಪಡೆದು ಶೇ. 40ರಷ್ಟು ಅಂಕವನ್ನು ಗಳಿಸಿರಬೇಕು. ಜನರಲ್ ಕೆಟಗರಿಯವರಾದರೆ ಶೇ. 45ರಷ್ಟು ಅಂಕ ಪಡೆದಿರಬೇಕು. ಹಾಗೇ. ದಿವ್ಯಾಂಗರಿಗೆ ಶೇ. 3ರಷ್ಟು ಮೀಸಲಾತಿ ನೀಡಲಾಗುವುದು. ಅವರಿಗೂ ಶೈಕ್ಷಣಿಕ ಅರ್ಹತೆ ಹಾಗೂ ವಯಸ್ಸಿನ ನಿಯಮಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಎನ್​ಟಿಎ ಮಾಹಿತಿ ನೀಡಿದೆ.

ಸೆಪ್ಟೆಂಬರ್ 12ಕ್ಕೆ ನೀಟ್ ಪರೀಕ್ಷೆ (NEET 2021) ನಡೆಯಲಿದೆ. ನೀಟ್ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಆಗಸ್ಟ್ 10 ಕೊನೆಯ ದಿನವಾಗಿದೆ. ಈ ಮೊದಲು ನೀಟ್​ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಆ. 6ಕ್ಕೆ ನಿಗದಿ ಮಾಡಲಾಗಿತ್ತು. ಬಳಿಕ ಆ ದಿನಾಂಕವನ್ನು ಆ. 10ರವರೆಗೆ ವಿಸ್ತರಿಸಲಾಗಿದೆ. ಸೆಪ್ಟೆಂಬರ್ 12ರಂದು ನಡೆಯುವ ನೀಟ್ ಪರೀಕ್ಷೆ ಫಲಿತಾಂಶವನ್ನು ಬಿಎಸ್​ಸಿ ನರ್ಸಿಂಗ್ ಪ್ರವೇಶಾತಿಗೆ ಬಳಸಬಹುದಾಗಿದೆ. ಒಟ್ಟು 198 ನಗರಗಳಲ್ಲಿ ಈ ನೀಟ್​ ಪರೀಕ್ಷೆ ನಡೆಯಲಿದೆ. ಹಾಗೇ 2020ರಲ್ಲಿ ಒಟ್ಟು 3862 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಆದರೆ ಈ ಬಾರಿ ಅದರ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ.

ಇದನ್ನೂ ಓದಿ: NEET UG 2021 Registration: ನೀಟ್​ ಪರೀಕ್ಷೆಗೆ ನೋಂದಣಿ ಇಂದಿನಿಂದಲೇ ಪ್ರಾರಂಭ; ಸಿಂಪಲ್​ ಆಗಿ ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ..

NEET Exam 2021: ವಿದ್ಯಾರ್ಥಿಗಳೇ ಗಮನಿಸಿ; ನೀಟ್ ಪರೀಕ್ಷೆಯ ದಿನಾಂಕ ಘೋಷಿಸಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್

(NEET 2021 NTA released Notice for Admissions to BSc Nursing Courses through NEET UG Exam)

Published On - 2:31 pm, Sat, 7 August 21

ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್
ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್
ಸಿಎಂ ಜೊತೆಗಿದ್ದ ಶಾಸಕರೆಲ್ಲ ಸ್ವಂತ ಖರ್ಚಿನಲ್ಲಿ ದೆಹಲಿ ಹೋಗಿದ್ದರೇ?
ಸಿಎಂ ಜೊತೆಗಿದ್ದ ಶಾಸಕರೆಲ್ಲ ಸ್ವಂತ ಖರ್ಚಿನಲ್ಲಿ ದೆಹಲಿ ಹೋಗಿದ್ದರೇ?
ಕೆಲದಿನಗಳ ಮಟ್ಟಿಗೆ ಮುಂದೂಡಲ್ಪಟ್ಟ ಮುಖ್ಯಮಂತ್ರಿ ಗಾದಿಯ ಸಂಘರ್ಷ
ಕೆಲದಿನಗಳ ಮಟ್ಟಿಗೆ ಮುಂದೂಡಲ್ಪಟ್ಟ ಮುಖ್ಯಮಂತ್ರಿ ಗಾದಿಯ ಸಂಘರ್ಷ
ಯಶ್ ವಿಚಾರದಲ್ಲಿ ಅಷ್ಟು ಕಟುತ್ವ ಏಕೆ? ಉತ್ತರಿಸಿದ ತಾಯಿ ಪುಷ್ಪಾ
ಯಶ್ ವಿಚಾರದಲ್ಲಿ ಅಷ್ಟು ಕಟುತ್ವ ಏಕೆ? ಉತ್ತರಿಸಿದ ತಾಯಿ ಪುಷ್ಪಾ
ಧಾರ್ಮಿಕ ಸ್ಥಳಕ್ಕೆ ಬಂದಾಗ ರಾಜಕೀಯ ಮಾತಾಡಲಾರೆ: ಪರಮೇಶ್ವರ್
ಧಾರ್ಮಿಕ ಸ್ಥಳಕ್ಕೆ ಬಂದಾಗ ರಾಜಕೀಯ ಮಾತಾಡಲಾರೆ: ಪರಮೇಶ್ವರ್
ದಿನಸಿ ಸಾಲ ವಾಪಾಸ್ ಕೇಳಿದ್ದಕ್ಕೆ ಅಂಗಡಿಗೇ ಬೆಂಕಿ ಹಚ್ಚಲು ಮುಂದಾದ ವ್ಯಕ್ತಿ!
ದಿನಸಿ ಸಾಲ ವಾಪಾಸ್ ಕೇಳಿದ್ದಕ್ಕೆ ಅಂಗಡಿಗೇ ಬೆಂಕಿ ಹಚ್ಚಲು ಮುಂದಾದ ವ್ಯಕ್ತಿ!
ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಸಂಘರ್ಷ ಶುರುವಾಗಿದೆ: ಅಶೋಕ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಸಂಘರ್ಷ ಶುರುವಾಗಿದೆ: ಅಶೋಕ
ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಅಸಹಾಯಕ ತಂದೆ
ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಅಸಹಾಯಕ ತಂದೆ