NEET UG 2021 Registration: ನೀಟ್​ ಪರೀಕ್ಷೆಗೆ ನೋಂದಣಿ ಇಂದಿನಿಂದಲೇ ಪ್ರಾರಂಭ; ಸಿಂಪಲ್​ ಆಗಿ ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ..

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಸೆಪ್ಟೆಂಬರ್​ 12ರಂದು ನಡೆಯಲಿದೆ ಎಂದು ನೂತನ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ ಸೋಮವಾರ ಘೋಷಿಸಿದ್ದಾರೆ. ಒಟ್ಟು 198 ನಗರಗಳಲ್ಲಿ ಈ ನೀಟ್​ ಪರೀಕ್ಷೆ ನಡೆಯಲಿದೆ.

NEET UG 2021 Registration: ನೀಟ್​ ಪರೀಕ್ಷೆಗೆ ನೋಂದಣಿ ಇಂದಿನಿಂದಲೇ ಪ್ರಾರಂಭ; ಸಿಂಪಲ್​ ಆಗಿ ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ..
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Jul 13, 2021 | 1:17 PM

ಸೆಪ್ಟೆಂಬರ್​ನಲ್ಲಿ ನಡೆಯಲಿರುವ ನೀಟ್​-2021 (NEET-2021) ಪರೀಕ್ಷೆಗೆ ನೋಂದಣಿ ಪ್ರಕ್ರಿಯೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA-National Testing Agency) ಇಂದಿನಿಂದ (ಜು.13) ಪ್ರಾರಂಭ ಮಾಡಲಿದೆ. NTA ಯ ನೀಟ್​ ವೆಬ್​​ಸೈಟ್​ ಮೂಲಕ ಆನ್​ಲೈನ್​ನಲ್ಲಿಯೇ ನೋಂದಣಿ ಮಾಡಬಹುದಾಗಿದ್ದು, ಇಂದು ಸಂಜೆ 5ಗಂಟೆಯಿಂದ ರಿಜಿಸ್ಟ್ರೇಶನಲ್​ ಲಿಂಕ್​ ಲಭ್ಯವಾಗಲಿದೆ..

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಸೆಪ್ಟೆಂಬರ್​ 12ರಂದು ನಡೆಯಲಿದೆ ಎಂದು ನೂತನ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ ಸೋಮವಾರ ಘೋಷಿಸಿದ್ದಾರೆ. ಒಟ್ಟು 198 ನಗರಗಳಲ್ಲಿ ಈ ನೀಟ್​ ಪರೀಕ್ಷೆ ನಡೆಯಲಿದೆ. ಹಾಗೇ 2020ರಲ್ಲಿ ಒಟ್ಟು 3862 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಆದರೆ ಈ ಬಾರಿ ಅದರ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ. ಇನ್ನು ಪರೀಕ್ಷಾರ್ಥಿಗಳು ಎಲ್ಲ ರೀತಿಯ ಕೊವಿಡ್​ 19 ಶಿಷ್ಟಾಚಾರಗಳನ್ನೂ ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಪರೀಕ್ಷಾರ್ಥಿಗಳಿಗೆ ಆಯಾ ಕೇಂದ್ರಗಳಲ್ಲಿ ಮಾಸ್ಕ್​​ಗಳನ್ನು ನೀಡಲಾಗುತ್ತದೆ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ.

ನೀಟ್​ ಪರೀಕ್ಷೆಗೆ ಅರ್ಜಿ ಸಲ್ಲಿಸುವುದು ಹೇಗೆ? ಪರೀಕ್ಷಾರ್ಥಿಗಳು ಅರ್ಜಿ ಸಲ್ಲಿಸಲು ಈ ಕೆಳಗೆ ನೀಡಲಾದ ಸರಳ ವಿಧಾನವನ್ನು ಅನುಸರಿಸಬಹುದು. 1. ಮೊದಲು ಎನ್​ಟಿಎ ನೀಟ್​​ನ ಅಧಿಕೃತ ವೆಬ್​ಸೈಟ್​ ntaneet.nic.in.ಗೆ ಭೇಟಿ ಕೊಡಿ 2. ಅದರ ಹೋಂಪೇಜ್​ನಲ್ಲಿ ಕಾಣುವ NEET 2021 ಲಿಂಕ್​ ಮೇಲೆ ಕ್ಲಿಕ್​ ಮಾಡಿ. 3. ಅಲ್ಲಿ ಲಾಗಿನ್​ ವಿವರಗಳನ್ನು ತುಂಬಿ, ಸಬ್ಮಿಟ್​ ಎಂಬಲ್ಲಿ ಕ್ಲಿಕ್​ ಮಾಡಿ. 4. ನಿಮಗೆ ಅಪ್ಲಿಕೇಶನ್​ ಫಾರಂ ಕಾಣಿಸುತ್ತದೆ. ಅಪ್ಲಿಕೇಶನ್​ನಲ್ಲಿ ಕೇಳಲಾದ ಎಲ್ಲ ವಿವರಗಳನ್ನೂ ತುಂಬಿ ಮತ್ತು ಪರೀಕ್ಷಾ ಶುಲ್ಕವನ್ನೂ ತುಂಬಿ. 5. ದೃಢೀಕರಣ ಪುಟವನ್ನು ಡೌನ್​ಲೋಡ್ ಮಾಡಿಕೊಳ್ಳಿ 6. ಅದರ ಹಾರ್ಡ್​ ಕಾಪಿ ಒಂದನ್ನು ನೀವು ಇಟ್ಟುಕೊಳ್ಳಿ.

ಇದನ್ನೂ ಓದಿ: Cinema Writing : ‘ಬೆಲ್​ ಬಾಟಮ್’ ಟ್ರಂಪ್​ಕಾರ್ಡಿನೊಂದಿಗೆ ಕನ್ನಡದ ನಿರ್ದೇಶಕ ಟಿ.ಕೆ. ದಯಾನಂದ ತೆಲುಗಿಗೆ

NEET 2021 Registration to begin today Check here to know the process