AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

JEE Main April Session Results: ಜೆಇಇ ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟ, 17 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ

Joint Entrance Examination: 17 ವಿದ್ಯಾರ್ಥಿಗಳು ಪೂರ್ಣ ಅಂಕಗಳನ್ನು  ಗಳಿಸಿ ದಾಖಲೆ  ಬರೆದಿದ್ದಾರೆ. ಜನವರಿಯಲ್ಲಿ ನಡೆದ ಪ್ರಯತ್ನದಲ್ಲಿ 9 ವಿದ್ಯಾರ್ಥಿಗಳು ಮತ್ತು ಫೆಬ್ರವರಿ ಪ್ರಯತ್ನದಲ್ಲಿ 11 ವಿದ್ಯಾರ್ಥಿಗಳು ಪೂರ್ಣ  ಅಂಕ ಪಡೆದಿದ್ದಾರೆ. 

JEE Main April Session Results: ಜೆಇಇ ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟ, 17 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Aug 06, 2021 | 11:44 PM

ದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) jeemain.nta.nic.in ನಲ್ಲಿ JEE ಮುಖ್ಯ  3ನೇ ಸೆಷನ್ ಫಲಿತಾಂಶ 2021 ಅನ್ನು ಘೋಷಿಸಿದೆ.  17 ವಿದ್ಯಾರ್ಥಿಗಳು ಪೂರ್ಣ ಅಂಕಗಳನ್ನು  ಗಳಿಸಿ ದಾಖಲೆ  ಬರೆದಿದ್ದಾರೆ. ಜನವರಿಯಲ್ಲಿ ನಡೆದ ಪ್ರಯತ್ನದಲ್ಲಿ 9 ವಿದ್ಯಾರ್ಥಿಗಳು ಮತ್ತು ಫೆಬ್ರವರಿ ಪ್ರಯತ್ನದಲ್ಲಿ 11 ವಿದ್ಯಾರ್ಥಿಗಳು ಪೂರ್ಣ  ಅಂಕ ಪಡೆದಿದ್ದಾರೆ. 

ಜೆಇಇ ಮುಖ್ಯ 2021 ಸೆಷನ್ 3ನ್ನು ಜುಲೈ 20, 22, 25 ಮತ್ತು 27 ರಂದು ಯಶಸ್ವಿಯಾಗಿ ನಡೆಸಲಾಯಿತು. ಜೆಇಇ ಮುಖ್ಯ ಸೆಷನ್ 3 ಕ್ಕೆ ಹಾಜರಾಗಲು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು  nta.ac.in, ntaresults.nic.in, jeemain.nta.nic.in  ವೆಬ್​​ಸೈಟ್​​ಗಳಲ್ಲಿ  ಫಲಿತಾಂಶ ನೋಡಬಹುದು.

ಏಜೆನ್ಸಿ ಆಗಸ್ಟ್ 5 ರಂದು ಜೆಇಇ ಮೇನ್ 2021 ರ ಅಂತಿಮ ಉತ್ತರ ಕೀಲಿಯನ್ನು ಬಿಡುಗಡೆ ಮಾಡಿತು. ಕಠಿಣ ಹಂತದ ಜೆಇಇ ಮೈನ್ ಕಟ್-ಆಫ್ ಶೇ90 ಕ್ಕಿಂತ ಹೆಚ್ಚಿರುತ್ತದೆ ಎಂದು ತಜ್ಞರು ಊಹಿಸಿದ್ದಾರೆ. ಪರೀಕ್ಷೆಯ ಮೇಲೆ ಪರಿಣಾಮ ಬೀರುವ ವಿವಿಧ ಅಂಶಗಳನ್ನು ಪರಿಗಣಿಸಿ ಕಟ್-ಆಫ್ ಸಿದ್ಧಪಡಿಸಲಾಗುತ್ತಿದೆ. ಹಾಜರಾದ ಒಟ್ಟು ಆಕಾಂಕ್ಷಿಗಳ ಸಂಖ್ಯೆ, ಲಭ್ಯವಿರುವ ಸೀಟುಗಳ ಸಂಖ್ಯೆ, ಎಲ್ಲವನ್ನೂ ಆಧರಿಸಿ ಕಟ್ ಆಫ್ ನಿಗದಿ ಮಾಡಲಾಗುತ್ತದೆ.

ಫಲಿತಾಂಶವನ್ನು ಪರಿಶೀಲಿಸಲು, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗಳಲ್ಲಿ ‘JEE Main result 2021’ ಲಿಂಕ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ. ಆಗ ಹೊಸ ಪುಟ ತೆರೆಯುತ್ತದೆ. ನಿಮ್ಮ ರೋಲ್ ಸಂಖ್ಯೆ ಮತ್ತು ಇತರ ವಿವರಗಳನ್ನು ನಮೂದಿಸಿ. ನಿಮ್ಮ ಜೆಇಇ ಮುಖ್ಯ ಫಲಿತಾಂಶವನ್ನು ಡೌನ್‌ಲೋಡ್ ಮಾಡಿ, ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಎನ್‌ಟಿಎ ಇತ್ತೀಚೆಗೆ ಜೆಇಇ ಮೈನ್ 2021 (ಸೆಷನ್ 3) ಅನ್ನು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕೋಹ್ಲಾಪುರ, ಪಾಲ್ಘರ್, ರತ್ನಗಿರಿ, ರಾಯಗಢ, ಸಿಂಧುದುರ್ಗ, ಸಾಂಗ್ಲಿ ಮತ್ತು ಸತಾರದಲ್ಲಿನ ತಮ್ಮ ನಿಯೋಜಿತ ಪರೀಕ್ಷಾ ಕೇಂದ್ರದಲ್ಲಿ ಜುಲೈನಲ್ಲಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ನಡೆಸಿತ್ತು.

17 ಟಾಪರ್‌ಗಳಲ್ಲಿ ಇಬ್ಬರು ಹುಡುಗಿಯರು ಜೆಇಇ ಮುಖ್ಯ 2021 ಫಲಿತಾಂಶದಲ್ಲಿ ಉತ್ತರ ಪ್ರದೇಶದಿಂದ ಪಾಲ್ ಅಗರ್ವಾಲ್ ಮತ್ತು ತೆಲಂಗಾಣದ ಕೊಮ್ಮಾ ಶರಣಯ್ಯ  ಪೂರ್ಣಅಂಕ ಪಡೆದಿದ್ದಾರೆ. ಶೇಕಡಾವಾರು  100 ಅಂಕ ಗಳಿಸಿದ 17 ಅಭ್ಯರ್ಥಿಗಳಲ್ಲಿ ಕೇವಲ ಇಬ್ಬರು ಹುಡುಗಿಯರಿದ್ದಾರೆ.

ಸಾಮಾನ್ಯ ವರ್ಗದಿಂದ ಟಾಪರ್ -ದುಗ್ಗಿನೇನಿ ವೆಂಕಟ ಪನೀಶ್  ಆಂಧ್ರಪ್ರದೇಶದ ದುಗ್ಗಿನೇನಿ ವೆಂಕಟ ಪನೀಶ್ ಜೆಇಇ ಮುಖ್ಯ 2021 ರ ಸಾಮಾನ್ಯ ಫಲಿತಾಂಶದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ:  JEE Main 2021 Result: ಜೆಇಇ ಮುಖ್ಯ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟ; ರಿಸಲ್ಟ್​ ನೋಡಲು ಹೀಗೆ ಮಾಡಿ

ಇದನ್ನೂ ಓದಿ: Cheque Payment: ಚೆಕ್​ ಮೂಲಕ ಪಾವತಿಸುತ್ತಿದ್ದೀರಾ? ಇನ್ನು ಮುಂದೆ ಕಡ್ಡಾಯವಾಗಿ ಈ ಅಂಶಗಳು ನಿಮ್ಮ ಗಮನದಲ್ಲಿರಲಿ

(Third session of the Joint Entrance Examination (JEE) Main 2021 has been announced)

Published On - 11:27 pm, Fri, 6 August 21

ಧೂಮಪಾನ ಮತ್ತು ಡ್ರಗ್ಸ್ ಸೇವನೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ: ಡಾ ಸದಾನಂದ
ಧೂಮಪಾನ ಮತ್ತು ಡ್ರಗ್ಸ್ ಸೇವನೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ: ಡಾ ಸದಾನಂದ
ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ
ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ
ಸ್ಕಂದಗಿರಿ ಮತ್ತು ಬಹುನಂದೀಶ್ವವರ ದೇವಸ್ಥಾನಕ್ಕೂ ನೋ ಎಂಟ್ರಿ: ಜಿಲ್ಲಾಡಳಿತ
ಸ್ಕಂದಗಿರಿ ಮತ್ತು ಬಹುನಂದೀಶ್ವವರ ದೇವಸ್ಥಾನಕ್ಕೂ ನೋ ಎಂಟ್ರಿ: ಜಿಲ್ಲಾಡಳಿತ
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಿದ ಗೌತಮ್ ಅದಾನಿ
ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಿದ ಗೌತಮ್ ಅದಾನಿ
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ