AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

JEE Main 2021 Result: ಜೆಇಇ ಮುಖ್ಯ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟ; ರಿಸಲ್ಟ್​ ನೋಡಲು ಹೀಗೆ ಮಾಡಿ

ಇಂದು ಸಂಜೆ ಫಲಿತಾಂಶ ಪ್ರಕಟಿಸುವುದಕ್ಕೆ ಎಲ್ಲಾ ರೀತಿಯ ಸಿದ್ಧತೆಗಳೂ ನಡೆದಿವೆ. ರಾತ್ರಿಯ ಒಳಗಾಗಿ ಫಲಿತಾಂಶವನ್ನು ವೆಬ್​ಸೈಟ್​ನಲ್ಲಿ ಅಪ್​ಲೋಡ್ ಮಾಡಲಾಗುವುದು. ಆಕಸ್ಮಿಕವಾಗಿ ತಾಂತ್ರಿಕ ದೋಷಗಳು ಎದುರಾದರೆ ಶನಿವಾರ ಮುಂಜಾನೆ ಅಪ್​ಲೋಡ್​ ಮಾಡಲಾಗುತ್ತದೆ.

JEE Main 2021 Result: ಜೆಇಇ ಮುಖ್ಯ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟ; ರಿಸಲ್ಟ್​ ನೋಡಲು ಹೀಗೆ ಮಾಡಿ
ಸಾಂದರ್ಭಿಕ ಚಿತ್ರ
TV9 Web
| Updated By: Skanda|

Updated on: Aug 06, 2021 | 2:07 PM

Share

ಜೆಇಇ ಮುಖ್ಯ ಪರೀಕ್ಷೆ 2021ರ ಮೂರನೇ ಸೆಶನ್ಸ್​ನ ಫಲಿತಾಂಶ (JEE Main 2021 Result) ಇಂದು (ಆಗಸ್ಟ್​ 6, ಶುಕ್ರವಾರ) ಪ್ರಕಟವಾಗುತ್ತಿದೆ. ಈ ಬಗ್ಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಅಧಿಕೃತ ಮಾಹಿತಿ ನೀಡಿದ್ದು, ಜಂಟಿ ಪ್ರವೇಶ ಮುಖ್ಯ ಪರೀಕ್ಷೆ 2021ರ ಫಲಿತಾಂಶ ಪ್ರಕಟಣೆಗೆ ಸಕಲ ಸಿದ್ಧತೆಗಳೂ ಆಗಿರುವುದಾಗಿ ತಿಳಿಸಿದೆ. ಶುಕ್ರವಾರ ಸಂಜೆ ಅಥವಾ ರಾತ್ರಿ ವೇಳೆಗೆ ಫಲಿತಾಂಶ ಪ್ರಕಟಿಸಲಾಗುವುದು ಒಂದು ವೇಳೆ ಯಾವುದಾದರೂ ತಾಂತ್ರಿಕ ದೋಷಗಳಿಂದ ತಡವಾದಲ್ಲಿ ವೆಬ್​ಸೈಟ್​ನಲ್ಲಿ ಪ್ರಕಟಿಸುವುದನ್ನು ಶನಿವಾರಕ್ಕೆ ಮುಂದೂಡುತ್ತೇವೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಆ ಬಗ್ಗೆ ಮಾತನಾಡಿದ ಅವರು ಇಂದು ಸಂಜೆ ಫಲಿತಾಂಶ ಪ್ರಕಟಿಸುವುದಕ್ಕೆ ಎಲ್ಲಾ ರೀತಿಯ ಸಿದ್ಧತೆಗಳೂ ನಡೆದಿವೆ. ರಾತ್ರಿಯ ಒಳಗಾಗಿ ಫಲಿತಾಂಶವನ್ನು ವೆಬ್​ಸೈಟ್​ನಲ್ಲಿ ಅಪ್​ಲೋಡ್ ಮಾಡಲಾಗುವುದು. ಆಕಸ್ಮಿಕವಾಗಿ ತಾಂತ್ರಿಕ ದೋಷಗಳು ಎದುರಾದರೆ ಶನಿವಾರ ಮುಂಜಾನೆ ಖಂಡಿತವಾಗಿಯೂ ಅಪ್​ಲೋಡ್​ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಸುಮಾರು 7 ಲಕ್ಷಕ್ಕೂ ಅಧಿಕ (7,09,519) ವಿದ್ಯಾರ್ಥಿಗಳು ಜೆಇಇ ಮುಖ್ಯ ಪರೀಕ್ಷೆಗೆ ಹಾಜರಾಗಿದ್ದು, ಜಂಟಿ ಪ್ರವೇಶ ಮುಖ್ಯ ಪರೀಕ್ಷೆ -2021(JEE Main-2021)ಯ ಮೂರನೇ ಸೆಶನ್ಸ್​ ಜುಲೈ ಮೂರನೇ ವಾರದಲ್ಲಿ ನಡೆದಿತ್ತು. ಈ ಪರೀಕ್ಷೆ ಏಪ್ರಿಲ್​ನಲ್ಲಿ ನಡೆಯಬೇಕಿತ್ತಾದರೂ ಕೊವಿಡ್​ 19 ಕಾರಣದಿಂದ ಮುಂದೂಡಲ್ಪಟ್ಟಿತ್ತು. ಕೊರೊನಾ ಕಾರಣದಿಂದ ಈ ಬಾರಿ ಪರೀಕ್ಷೆಗಳನ್ನು ಆಯೋಜಿಸಿದ್ದ ನಗರಗಳು ಮತ್ತು ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಎನ್​ಟಿಎ ಹೆಚ್ಚಿಸಿತ್ತು. JEE-Main 2021ರ ಮೊದಲ ಎರಡು ಹಂತದ ಪರೀಕ್ಷೆಗಳು ಫೆಬ್ರವರಿ ಮತ್ತು ಮಾರ್ಚ್​ ತಿಂಗಳಲ್ಲಿಯೇ ಮುಗಿದುಹೋಗಿವೆ. ಅದಾದ ನಂತರದ ಹಂತಗಳ ಪರೀಕ್ಷೆಗಳು ಕೊವಿಡ್​ 19 ಎರಡನೇ ಅಲೆಯ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದವು.

ಫಲಿತಾಂಶ ವೀಕ್ಷಿಸುವುದು ಹೇಗೆ? 1. ಫಲಿತಾಂಶ ವೀಕ್ಷಣೆಗೆ jeemain.nta.nic.in ವೆಬ್​ಸೈಟ್​ಗೆ ಭೇಟಿ ನೀಡಿ 2. JEE Main 2021 Result ಎಂಬ ಆಯ್ಕೆಯನ್ನು ಒತ್ತಿ 3. ನಿಮ್ಮ ಅಪ್ಲಿಕೇಶನ್​ ಸಂಖ್ಯೆ ಹಾಗೂ ಇನ್ನಿತರ ಅಗತ್ಯ ವಿವರ ನಮೂದಿಸಿ 4. ಅಗತ್ಯ ವಿವರಗಳನ್ನು ನೀಡಿದ ನಂತರ ನಿಮ್ಮ ಫಲಿತಾಂಶ ಲಭ್ಯವಾಗಲಿದೆ 5. ಫಲಿತಾಂಶವನ್ನು ಡೌನ್​ಲೋಡ್​ ಮಾಡಿಕೊಳ್ಳಿ

ಜೆಇಇ ಮುಖ್ಯ ಪರೀಕ್ಷೆಯ ಉತ್ತರಗಳನ್ನೂ ವೆಬ್​ಸೈಟ್​ನಲ್ಲಿ ನೋಡಬಹುದಾಗಿದ್ದು, ಪರೀಕ್ಷಾರ್ಥಿಗಳು jeemain.nta.nic.in ಮೂಲಕ ಅದನ್ನು ಪಡೆಯಬಹುದು.

ಇದನ್ನೂ ಓದಿ: Karnataka SSLC Result 2021: ಕರ್ನಾಟಕ ಎಸ್​ಎಸ್​ಎಲ್​ಸಿ ಫಲಿತಾಂಶ ಆ. 7ಕ್ಕೆ ಪ್ರಕಟ. ರಿಸಲ್ಟ್​ ನೋಡಲು ಇಲ್ಲಿದೆ ಮಾಹಿತಿ 

ಸಿಬಿಎಸ್‌ಇ 10ನೇ ತರಗತಿ ಫಲಿತಾಂಶದಲ್ಲಿ ಅಕ್ರಮ ಆರೋಪ; ಶ್ರೀ ಚೈತನ್ಯ ಶಾಲೆ ಬಳಿ ಪೋಷಕರ ಪ್ರತಿಭಟನೆ‌

(NTA JEE Main 2021 Result release date time updates final answer key released jeemain nta nic in)

ಪ್ರೀತಿಸಿ ಮದುವೆಯಾದಕೆಯನ್ನು ಬಿಟ್ಟು ಮತ್ತೊಂದು ಮದ್ವೆ: ಪ್ರೀತಿ ಕೊಂದ ಪವನ್
ಪ್ರೀತಿಸಿ ಮದುವೆಯಾದಕೆಯನ್ನು ಬಿಟ್ಟು ಮತ್ತೊಂದು ಮದ್ವೆ: ಪ್ರೀತಿ ಕೊಂದ ಪವನ್
ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ನಿರ್ಧಾರ ತಿಳಿಸಿದ ಭಾವನಾ
ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ನಿರ್ಧಾರ ತಿಳಿಸಿದ ಭಾವನಾ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ