ಸ್ಕಾಲರ್‌ಶಿಪ್ ಜೊತೆಗೆ ಜಾಗತಿಕ ಮಟ್ಟದಲ್ಲಿ ಮಾನ್ಯತೆ ಪಡೆದ ನ್ಯೂರೋ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಇದೀಗ ಭಾರತದಲ್ಲಿ ಲಭ್ಯ
ಐಬಿಸ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್, ಅಮೇರಿಕನ್ ನ್ಯೂರೋ ಡಿಜಿಟಲ್ ಮಾರ್ಕೆಟಿಂಗ್ ಮತ್ತು ಬ್ರಾಂಡ್ ಮ್ಯಾನೇಜ್‌ಮೆಂಟ್ ಪಿಜಿ ಡಿಪ್ಲೊಮಾ ಕೋರ್ಸ್ ಅನ್ನು ಪರಿಚಯಿಸಿದೆ. IACET ನಿಂದ ಮಾನ್ಯತೆ ಪಡೆದ ಈ ಕೋರ್ಸ್ ವೆಬ್ 3.0, ನ್ಯೂರೋಸೈನ್ಸ್ ಮತ್ತು ಬ್ರಾಂಡ್ ಮ್ಯಾನೇಜ್‌ಮೆಂಟ್ ಅನ್ನು ಒಳಗೊಂಡಿದೆ. ಕಡಿಮೆ ವೆಚ್ಚದಲ್ಲಿ, ಉದ್ಯಮ ತಜ್ಞರಿಂದ ವಿನ್ಯಾಸಗೊಂಡ ಪಠ್ಯಕ್ರಮ, ಲೈವ್ ಕಾರ್ಯಾಗಾರಗಳು ಮತ್ತು ಪ್ಲೇಸ್‌ಮೆಂಟ್ ಸಹಾಯವನ್ನು ಒದಗಿಸುತ್ತದೆ. ಐಬಿಸ್, ನ್ಯೂರೋ-ಡಿಜಿಟಲ್ ಮಾರ್ಕೆಟಿಂಗ್ ಲ್ಯಾಬ್ ಹೊಂದಿರುವ ಏಕೈಕ ಸಂಸ್ಥೆ.

ಡಿಜಿಟಲ್ ಮಾರ್ಕೆಟಿಂಗ್ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ಒಂದಾಗಿದ್ದು, ಯುವ ಪೀಳಿಗೆಗೆ ಅಚ್ಚುಮೆಚ್ಚಿನದಾಗಿದೆ. ಇದು ಕಾರ್ಪೊರೇಟ್, ಐಟಿ, ಶಿಕ್ಷಣ ಅಥವಾ ಮಾಧ್ಯಮವಾಗಿರಲಿ – ಡಿಜಿಟಲ್ ಮಾರ್ಕೆಟಿಂಗ್ ಪ್ರತಿಯೊಂದು ವಲಯದಲ್ಲೂ ಆಳವಾಗಿ ಬೇರೂರಿದೆ. ಮನೆಯಿಂದ ಕೆಲಸ ಮಾಡುವಂತಹ ಆಧುನಿಕ ಕೆಲಸದ ಮಾದರಿಗಳನ್ನು ಬೆಂಬಲಿಸುವುದರ ಜೊತೆಗೆ, ಡಿಜಿಟಲ್ ಮಾರ್ಕೆಟಿಂಗ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಒಬ್ಬರ ಕೌಶಲ್ಯಗಳನ್ನು ಪ್ರದರ್ಶಿಸಲು ಅನಂತ ಅವಕಾಶಗಳನ್ನು ಕಲ್ಪಿಸುತ್ತಿದೆ. ಅದಕ್ಕಾಗಿಯೇ ಹೊಸಬರು ಮಾತ್ರವಲ್ಲದೆ ವೃತ್ತಿ ಬದಲಾವಣೆಯನ್ನು ಬಯಸುವವರೂ ಸಹ ಈ ಕ್ಷೇತ್ರವನ್ನು ಹೆಚ್ಚಾಗಿ ಪ್ರವೇಶಿಸುತ್ತಿದ್ದಾರೆ. ಆದರೆ, ಸರಿಯಾದ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಅನ್ನು ಎಲ್ಲಿ ಅಧ್ಯಯನ ಮಾಡಬೇಕೆಂಬುದರ ಬಗ್ಗೆ ಹೆಚ್ಚಿನವರಿಗೆ ಇನ್ನೂ ಗೊಂದಲವಿದೆ.
ದೇಶದಲ್ಲಿ ನಾಲ್ಕು ರಿಂದ ಆರು ತಿಂಗಳವರೆಗೆ ಕಡಿಮೆ ಶುಲ್ಕದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್‌ಗಳನ್ನು ನೀಡುವ ಹಲವಾರು ಸಂಸ್ಥೆಗಳಿವೆ. ಈ ಸಂಸ್ಥೆಗಳಲ್ಲಿ ಹೆಚ್ಚಿನವು ಮಾರ್ಕೆಟಿಂಗ್‌ನ ಮೂಲಭೂತ ಅಂಶಗಳನ್ನು ಸಹ ಕಲಿಸಲು ವಿಫಲವಾಗಿದ್ದು, ಇದರ ಬದಲಿಗೆ ಕೆಲವು ಪರಿಕರಗಳ ಮೇಲೆ ಮಾತ್ರ ಗಮನಹರಿಸುತ್ತವೆ. ಈ ಪರಿಣಾಮವಾಗಿ, ವಿದ್ಯಾರ್ಥಿಗಳು ಈ ಕ್ಷೇತ್ರದಲ್ಲಿ ಅಗತ್ಯವಿರುವ ಕೌಶಲ್ಯವನ್ನು ಪಡೆಯದೇ ಇರುವುದರಿಂದ ಅನೇಕ ಡಿಜಿಟಲ್ ಮಾರ್ಕೆಟಿಂಗ್ ಪದವೀಧರರು ಉತ್ತಮವಾದ ಕೆರಿಯರ್ ಅನ್ನು ಕಳೆದುಕೊಳ್ಳುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಐಬಿಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಯಶಸ್ವಿ ವೃತ್ತಿಜೀವನವನ್ನು ನಿರ್ಮಿಸಲು ಬಯಸುವವರಿಗಾಗಿ ಅಮೇರಿಕನ್ ನ್ಯೂರೋ ಡಿಜಿಟಲ್ ಮಾರ್ಕೆಟಿಂಗ್ ಆ್ಯಂಡ್ ಬ್ರಾಂಡ್ ಮ್ಯಾನೇಜ್‌ಮೆಂಟ್ ಪಿಜಿ ಡಿಪ್ಲೊಮಾ ಕೋರ್ಸ್ ಅನ್ನು ಭಾರತದಲ್ಲಿ ಪ್ರಾರಂಭಿಸಿದೆ. ಅಮೇರಿಕನ್ ನ್ಯಾಷನಲ್ ಸ್ಟ್ಯಾಂಡರ್ಡ್ಸ್ ಇನ್ಸ್ಟಿಟ್ಯೂಟ್ (ANSI) ಅಡಿಯಲ್ಲಿ ಬರುವ IACET ನಿಂದ ಮಾನ್ಯತೆ ಪಡೆದ ಭಾರತದ ಏಕೈಕ ಶಿಕ್ಷಣ ಸಂಸ್ಥೆ ಎಂದರೆ ಅದು ಐಬಿಸ್ ಮಾತ್ರ. ವಿದೇಶದಲ್ಲಿ ಅಧ್ಯಯನ ಮಾಡಲು ಸಾಮಾನ್ಯವಾಗಿ ಲಕ್ಷಗಟ್ಟಲೆ ವೆಚ್ಚವಾಗುವ ಈ ಕೋರ್ಸ್ ಅನ್ನು ಈಗ ಐಬಿಸ್ ಮೂಲಕ ಭಾರತದಲ್ಲಿ ಕೈಗೆಟುಕುವ ಬೆಲೆಯಲ್ಲಿ ಪಡೆಯಬಹುದು.
ಡಿಜಿಟಲ್ ಮಾರ್ಕೆಟಿಂಗ್ ಜೊತೆಗೆ, ಈ ಕೋರ್ಸ್ ವೆಬ್ 3.0 ಇಂಟರ್ನೆಟ್ ಮಾರ್ಕೆಟಿಂಗ್, ನ್ಯೂರೋಸೈನ್ಸ್ ಮತ್ತು ಬ್ರ್ಯಾಂಡ್ ಮನ್ಯಾಗ್ಮೆಂಟ್ ಸಹ ಒಳಗೊಂಡಿದೆ – ಇದು ಭಾರತದಲ್ಲಿ ಒಂದು ವಿಶಿಷ್ಟ ಯೋಜನೆಯಾಗಿದೆ. ದಕ್ಷಿಣ ಭಾರತದಲ್ಲಿ ನ್ಯೂರೋ ಡಿಜಿಟಲ್ ಮಾರ್ಕೆಟಿಂಗ್ ಲ್ಯಾಬ್ ಅನ್ನು ನೀಡುವ ಏಕೈಕ ಸಂಸ್ಥೆ ಐಬಿಸ್ ಮಾತ್ರ. ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ನ್ಯೂರೋಸೈನ್ಸ್ ಮಹತ್ವವನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಲು ಸಹಾಯ ಮಾಡಲು, ಐಬಿಸ್ ನ್ಯೂರೋ-ಫೀಡ್‌ಬ್ಯಾಕ್ ಸಾಧನಗಳೊಂದಿಗೆ ಸುಸಜ್ಜಿತವಾದ ಸುಧಾರಿತ ನ್ಯೂರೋ-ಡಿಜಿಟಲ್ ಮಾರ್ಕೆಟಿಂಗ್ ಲ್ಯಾಬ್ ಅನ್ನು ಸ್ಥಾಪಿಸಿದೆ.
ಈ ಕೋರ್ಸ್ ಉದ್ಯಮ ತಜ್ಞರು ವಿನ್ಯಾಸಗೊಳಿಸಿದ ಪ್ರೀಮಿಯಂ ಪಠ್ಯಕ್ರಮ, ಲೈವ್ ಕಾರ್ಯಾಗಾರಗಳು ಮತ್ತು ಹಲವಾರು ಕೇಸ್ ಸ್ಟಡೀಸ್ ಅನ್ನು ಒಳಗೊಂಡಿದೆ. ಭಾರತ ಮತ್ತು ವಿದೇಶಗಳಲ್ಲಿನ 100 ಕ್ಕೂ ಹೆಚ್ಚು ಪ್ರಮುಖ ಮಾರ್ಕೆಟಿಂಗ್ ಕಂಪನಿಗಳ ಸಹಕಾರದೊಂದಿಗೆ, ವಿದ್ಯಾರ್ಥಿಗಳು ಉತ್ತಮ ಉದ್ಯೋಗಾವಕಾಶಗಳನ್ನು ಕಂಡುಕೊಳ್ಳಲು ಮತ್ತು ಅವರ ವೃತ್ತಿಜೀವನದಲ್ಲಿ ಬೆಳೆಯಲು ಸಹಾಯ ಮಾಡಲು ಐಬಿಸ್ ಪ್ರತಿ ವರ್ಷ ಪ್ಲೇಸ್‌ಮೆಂಟ್ ಡ್ರೈವ್‌ಗಳನ್ನು ನಡೆಸುತ್ತದೆ. ಅನೇಕ ಐಬಿಸ್ ವಿದ್ಯಾರ್ಥಿಗಳು ಈಗಾಗಲೇ ಭಾರತ ಮತ್ತು ವಿದೇಶಗಳಲ್ಲಿ ಪ್ರತಿಷ್ಠಿತ ಕಂಪನಿಗಳಲ್ಲಿ ಉನ್ನತ ಉದ್ಯೋಗಗಳನ್ನು ಪಡೆದುಕೊಂಡಿದ್ದಾರೆ.
ಐಬಿಸ್ ವಿದ್ಯಾರ್ಥಿ ಸ್ನೇಹಿ ಕಲಿಕಾ ವಾತಾವರಣವನ್ನು ಸೃಷ್ಟಿಸಲು ಬದ್ಧವಾಗಿದೆ. ಸುಸಜ್ಜಿತ ತರಗತಿ ಕೊಠಡಿಗಳು ಮತ್ತು ಆಧುನಿಕ ಸೌಲಭ್ಯಗಳೊಂದಿಗೆ, ಐಬಿಸ್ ಬೆಂಗಳೂರು, ದೆಹಲಿ ಮತ್ತು ಕೇರಳದಾದ್ಯಂತ ಪ್ರಮುಖ ನಗರಗಳಲ್ಲಿ ಕ್ಯಾಂಪಸ್‌ಗಳನ್ನು ನಿರ್ವಹಿಸುತ್ತಿದೆ. ಇದರಲ್ಲಿ ತ್ರಿಶೂರ್, ಕೋಯಿಕ್ಕೋಡ್, ಕೊಚ್ಚಿ, ಕೊಟ್ಟಾಯಂ, ಪೆರಿಂಥಲ್ಮನ್ನಾ ಮತ್ತು ತಿರುವನಂತಪುರಂ ಪ್ರಮುಖವಾದದ್ದು. ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಅಥವಾ ಆನ್‌ಲೈನ್‌ನಲ್ಲಿ ತರಗತಿಗಳಿಗೆ ಹಾಜರಾಗಲು ಸಹಕಾರಿಯಾಗಿದೆ.
ಕಡಿಮೆ ಸಮಯದಲ್ಲಿ, ಐಬಿಸ್ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದೆ. ಭಾರತ ಸರ್ಕಾರದ ಅಡಿಯಲ್ಲಿ ಕೌಶಲ್ಯ ಅಭಿವೃದ್ಧಿ ಸಚಿವಾಲಯದಿಂದ “ಸ್ಟೇಟ್ ಆಫ್ ದಿ ಆರ್ಟ್ ಎಜುಕೇಶನ್ ಪ್ರೊವೈಡರ್ ಅವಾರ್ಡ್” ಪಡೆದ ಕೇರಳದ ಏಕೈಕ ಶಿಕ್ಷಣ ಸಂಸ್ಥೆ ಇದಾಗಿದ್ದುಈ ಪ್ರಶಸ್ತಿ ಪಡೆದ ಕೇವಲ 14 ಸಂಸ್ಥೆಗಳ ಪೈಕಿ ಇದೂ ಒಂದಾಗಿದೆ. ಇನ್ನು ಹೆಚ್ಚಾಗಿ ಹೇಳಬೇಕೆಂದರೆ, ಐಬಿಸ್ ಗ್ಲೋಬಲ್ ಎಕ್ಸಲೆನ್ಸ್ ಅವಾರ್ಡ್, ಟೈಮ್ಸ್ ಬಿಸಿನೆಸ್ ಅವಾರ್ಡ್ಸ್ ನೀಡುವ ಐಕಾನಿಕ್ ಗ್ಲೋಬಲ್ ಎಜುಕೇಶನ್ ಪ್ರೊವೈಡರ್ ಅವಾರ್ಡ್ ಮತ್ತು ಇತರ ಪ್ರತಿಷ್ಠಿತ ಗೌರವಗಳಿಗೆ ಭಾಜನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:17 pm, Fri, 18 July 25




