
ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲೇ ಸಾಕಷ್ಟು ಕಾನೂನು ವಿದ್ಯಾಲಯಗಳಿವೆ. ಆದರೆ, ಇವುಗಳಲ್ಲಿ ಕೆಂಗೇರಿ ಜ್ಞಾನಾಭಾರತಿ ಕ್ಯಾಂಪಸ್ ಬಳಿ ಇರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ (NLSIU) ವಿಶೇಷವಾದೂದು. NLSIU 1986 ರಲ್ಲಿ ಭಾರತದಲ್ಲಿ ಸ್ಥಾಪಿತವಾದ ಮೊದಲ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯವಾಗಿದೆ. 1988 ರಲ್ಲಿ ಮೊದಲ ಬ್ಯಾಚ್ನ ಪ್ರಾರಂಭದೊಂದಿಗೆ ಪದವಿಪೂರ್ವ ಮಟ್ಟದಲ್ಲಿ ಐದು ವರ್ಷಗಳ ಸಮಗ್ರ ಕಾನೂನು ಪದವಿಯನ್ನು ಪರಿಚಯಿಸಿದ ದೇಶದ ಮೊದಲ ಸಂಸ್ಥೆಗಳಲ್ಲಿ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ ಒಂದು. ಕಳೆದ 36 ವರ್ಷಗಳಿಂದ, ವಿಶ್ವವಿದ್ಯಾನಿಲಯವು ದೇಶದ ಕಾನೂನು ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದೆ. ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯ ಪ್ರಮುಖ ಪದವಿಪೂರ್ವ ಕೋರ್ಸ್, BALL.B (Hons), ಜೊತೆಗೆ ಸಾರ್ವಜನಿಕ ನೀತಿಯಲ್ಲಿ ಸ್ನಾತಕೋತ್ತರ, LL.M, PhD ಮತ್ತು ಆನ್ಲೈನ್ ಮತ್ತು ಹೈಬ್ರಿಡ್ ಆಯ್ಕೆಯನ್ನು ಒಳಗೊಂಡಿದೆ. NLSIU ಪ್ರವೇಶದ ಅರ್ಹತೆ ವಿದ್ಯಾರ್ಥಿಯ CLAT ಪರೀಕ್ಷೆಯ ಸ್ಕೋರ್ ಅನ್ನು ಆಧರಿಸಿದೆ. ...
Published On - 4:28 pm, Tue, 30 April 24