ದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ( NTA) ಜಂಟಿ ಪ್ರವೇಶ ಪರೀಕ್ಷೆ (JEE) ಮುಖ್ಯ ಪರೀಕ್ಷೆ ಫಲಿತಾಂಶ 2021ಅನ್ನು ಘೋಷಿಸಲಾಗಿದೆ. ಫಲಿತಾಂಶ ಪ್ರಕಟಿಸಿದ ಶಿಕ್ಷಣ ಸಚಿವಾಲಯವು ಈ ವರ್ಷ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ಒಟ್ಟು 44 ಅಭ್ಯರ್ಥಿಗಳು 100ಕ್ಕೆ 100 ಅಂಕ ಗಳಿಸಿದ್ದು, 18 ಅಭ್ಯರ್ಥಿಗಳು ಉನ್ನತ ಶ್ರೇಣಿ ಪಡೆದಿದ್ದಾರೆ ಎಂದು ಹೇಳಿದೆ. ಮೊದಲ ಸ್ಥಾನ ಪಡೆದವರಲ್ಲಿ ಗೌರಬ್ ದಾಸ್ (ಕರ್ನಾಟಕ), ವೈಭವ್ ವಿಶಾಲ್ (ಬಿಹಾರ), ದುಗ್ಗಿನೇನಿ ವೆಂಕಟ ಪನೀಶ್ ( ಆಂಧ್ರ ಪ್ರದೇಶ), ಸಿದ್ದಾಂತ್ ಮುಖರ್ಜಿ, ಅಂಶುಲ್ ವರ್ಮಾ ಮತ್ತು ಮೃದುಲ್ ಅಗರ್ವಾಲ್ (ರಾಜಸ್ಥಾನ), ರುಚಿರ್ ಬನ್ಸಾಲ್ ಮತ್ತು ಕಾವ್ಯಾ ಚೋಪ್ರಾ (ದೆಹಲಿ), ಅಮಯ್ ಸಿಂಘಾಲ್ ಮತ್ತು ಪಾಲ್ ಅಗರ್ವಾಲ್ ( ಉತ್ತರ ಪ್ರದೇಶ), ಶರಣ್ಯ ಮತ್ತು ಜೊಯ್ಸುಲಾ ವೆಂಕಟ ಆದಿತ್ಯ (ತೆಲಂಗಾಣ), ಪಸಾಲ ವೀರ ಶಿವ, ಕರ್ಣಂ ಲೋಕೇಶ್ ಮತ್ತು ಕಾಂಚನಪಲ್ಲಿ ರಾಹುಲ್ ನಾಯ್ಡು (ಆಂಧ್ರ ಪ್ರದೇಶ), ಪುಲ್ಕಿತ್ ಗೋಯಲ್ (ಪಂಜಾಬ್) ಮತ್ತು ಗುರಮೃತ್ ಸಿಂಗ್ (ಛಂಡೀಗಢ).
ಜೆಇಇ ಮುಖ್ಯ ಫಲಿತಾಂಶವನ್ನು ಪರೀಕ್ಷಿಸಲು ನೇರ ಲಿಂಕ್ ಇನ್ನೂ ಸಕ್ರಿಯವಾಗಿಲ್ಲ. ಲಿಂಕ್ jeemain.nta.nic.in ನಲ್ಲಿ ಸಕ್ರಿಯೆಗೊಂಡ ತಕ್ಷಣ, ವಿದ್ಯಾರ್ಥಿಗಳು ತಮ್ಮ ಜೆಇಇ ಮುಖ್ಯ ಫಲಿತಾಂಶ 2021ರ ಸ್ಕೋರ್ಕಾರ್ಡ್ ಪ್ರವೇಶಿಸಬಹುದು. ಜೆಇಇ ಮುಖ್ಯ ಫಲಿತಾಂಶ 2021 ಪರಿಶೀಲಿಸಲು ಅಧಿಕೃತ ವೆಬ್ಸೈಟ್ಗಳು jeemain.nta.in, nta.ac.in, ntaresults.nic.in
ಜೆಇಇ ಮೇನ್ 2021 ಫಲಿತಾಂಶ ಪರಿಶೀಲಿಸುವುದು ಹೇಗೆ ಎಂಬ ಕುರಿತಾದ ಮಾಹಿತಿ ಈ ಕೆಳಗಿನಂತಿದೆ
ಹಂತ 1: ಅಧಿಕೃತ ವೆಬ್ಸೈಟ್ jeemain.nta.nic.in ಗೆ ಭೇಟಿ ನೀಡಿ
ಹಂತ 2: ಜೆಇಇ ಮೇನ್ಸ್ 2021 ಫಲಿತಾಂಶದ ಮೇಲೆ ಕ್ಲಿಕ್ ಮಾಡಿ
ಹಂತ 3: ಹೊಸ ಪುಟವೊಂದು ತೆರೆಯುತ್ತದೆ
ಹಂತ 4: ಕೇಳಲಾದ ವಿವರಗಳನ್ನು ಟೈಪ್ ಮಾಡಿ
ಹಂತ 5: ಜೆಇಇ ಮೇನ್ಸ್ 2021 ಫಲಿತಾಂಶ ಪ್ರಕಟಗೊಳ್ಳುತ್ತದೆ
ಹಂತ 6: ಸ್ಕೋರ್ಕಾರ್ಡ್ಅನ್ನು ಡೌನ್ಲೋಡ್ ಮಾಡಿ ಪ್ರಿಂಟೌಟ್ ತೆಗೆದುಕೊಳ್ಳಿ.
ಜುಲೈ 20-25ರಿಂದ ಮೂರನೇ ಆವೃತ್ತಿ ನಡೆಯಿತು. ನಂತರ ನಾಲ್ಕನೇ ಆವೃತ್ತಿಯನ್ನು ಆಗಸ್ಟ್ 26ರಿಂದ ಸೆಪ್ಟೆಂಬರ್ 2ರವರೆಗೆ ನಡೆಸಲಾಯಿತು. ಪರೀಕ್ಷೆಗಳನ್ನು ಒಟ್ಟು 13 ಭಾಷೆಗಳಲ್ಲಿ ನಡೆಸಲಾಯಿತು. ಇಂಗ್ಲೀಷ್, ಹಿಂದಿ, ಗುಜರಾತಿ, ಅಸ್ಸಾಮಿ, ಬಂಗಾಳಿ, ಕನ್ನಡ, ಮಲಯಾಳಂ, ಮರಾಠಿ, ಒಡಿಶಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು.
ಇದನ್ನೂ ಓದಿ:
JEE Main April Session Results: ಜೆಇಇ ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟ, 17 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ
ಜೆಇಇ, ನೀಟ್ 2021 ಪ್ರವೇಶ ಪರೀಕ್ಷೆಗಳು ಯಾವಾಗ ನಡೆಯಲಿವೆ? -ಇಲ್ಲಿದೆ ನೋಡಿ ಪ್ರಮುಖ ಮಾಹಿತಿ
Published On - 8:20 am, Wed, 15 September 21