ದಂತ ವೈದ್ಯಕೀಯ ವಿದ್ಯಾರ್ಥಿಗಳ ಕೌನ್ಸೆಲಿಂಗ್ಗೆ ಒಂದು ವಾರ ಕಾಲಾವಕಾಶ ನೀಡಿದ ಕೇಂದ್ರ
ಈ ಹಿನ್ನೆಲೆಯಲ್ಲಿ ಕರ್ನಾಟಕದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕೌನ್ಸೆಲಿಂಗ್ಗೆ ಅವಕಾಶ ಕೋರಿ ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ದರು. ಸುಧಾಕರ್ ಪತ್ರ ಆಧರಿಸಿ, ಇಂದಿನ ಒಂದು ವಾರಗಳ ಅವಧಿಗೆ ಕೌನ್ಸೆಲಿಂಗ್ ನಡೆಸಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ
ಬೆಂಗಳೂರು: ದಂತ ವೈದ್ಯಕೀಯ ವಿದ್ಯಾರ್ಥಿಗಳ ಕೌನ್ಸೆಲಿಂಗ್ ಗೊಂದಲಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟ ಸೂಚನೆ ನೀಡಿದೆ. ಕೌನ್ಸೆಲಿಂಗ್ಗೆ ಆರೋಗ್ಯ ಇಲಾಖೆಯು ಒಂದು ವಾರದ ಕಾಲಾವಕಾಶ ನೀಡಿದೆ. ನಾಳೆಯಿಂದ (ಜ.28) ಒಂದು ವಾರದ ಅವಧಿಗೆ ಕೌನ್ಸೆಲಿಂಗ್ ನಡೆಯಲಿದೆ. ವಿವಿಧ ಕಾರಣದಿಂದ ವಿಳಂಬವಾಗಿದ್ದ ದಂತ ವೈದ್ಯಕೀಯ ಕೌನ್ಸೆಲಿಂಗ್ಗೆ ಹೆಚ್ಚಿನ ಕಾಲಾವಕಾಶ ಕೋರಿ ವಿದ್ಯಾರ್ಥಿಗಳು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕೌನ್ಸೆಲಿಂಗ್ಗೆ ಅವಕಾಶ ಕೋರಿ ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ದರು. ಸುಧಾಕರ್ ಪತ್ರ ಆಧರಿಸಿ, ಇಂದಿನ ಒಂದು ವಾರಗಳ ಅವಧಿಗೆ ಕೌನ್ಸೆಲಿಂಗ್ ನಡೆಸಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ.
ಕರ್ನಾಟಕದಲ್ಲಿ 23 ಸಾವಿರ ಎಂಜಿನಿಯರಿಂಗ್ ಸೀಟು ಖಾಲಿ ಕರ್ನಾಟಕದಲ್ಲಿ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಬೇಡಿಕೆ ಕಡಿಮೆಯಾಗಿದೆ. 23 ಸಾವಿರ ಎಂಜಿನಿಯರಿಂಗ್ ಸೀಟ್ ಈ ವರ್ಷ ಖಾಲಿ ಉಳಿದಿದೆ. ಇದು ಹಿಂದಿನ ಐದು ವರ್ಷಗಳಲ್ಲೇ ಅತಿಹೆಚ್ಚು. ಕೋವಿಡ್ ಕಾರಣಕ್ಕೆ ಪಿಯುಸಿ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಕೋರ್ಸ್ಗೆ ಅರ್ಹತೆ ಪಡೆದಿದ್ದರು. ನೀಟ್ ಕೌನ್ಸೆಲಿಂಗ್ ಆರಂಭವಾದ ಬಳಿಕ ವೈದ್ಯಕೀಯ ಪದವಿ ಪಡೆಯುವ ಆಕಾಂಕ್ಷಿಗಳು ಎಂಜಿನಿಯರಿಂಗ್ ಕೋರ್ಸ್ ತೊರೆಯುವ ಸಾಧ್ಯತೆ ಹೆಚ್ಚಿದ್ದು, ಖಾಲಿ ಸೀಟುಗಳ ಸಂಖ್ಯೆ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಎಂಜಿನಿಯರಿಂಗ್ ಸೀಟುಗಳನ್ನು ಭರ್ತಿ ಮಾಡಲು ಮೂರು ಸುತ್ತಿನ ಕೌನ್ಸೆಲಿಂಗ್ ನಡೆಸಿದೆ. ಎರಡನೇ ಸುತ್ತಿನ ಬಳಿಕ, ಎಂಜಿನಿಯರಿಂಗ್ ಪ್ರವೇಶದ ಕೊನೆಯ ದಿನಾಂಕ ವಿಸ್ತರಿಸಲು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಅನುಮತಿ ಪಡೆದಿತ್ತು. ಖಾಲಿ ಉಳಿದಿರುವ ಸೀಟುಗಳನ್ನು ಭರ್ತಿ ಮಾಡಲು ಮೂರನೇ ಸುತ್ತಿನ ಕೌನ್ಸೆಲಿಂಗ್ ಅನ್ನು 2021ರ ಡಿಸೆಂಬರ್ 31ರವರೆಗೆ ನಡೆಸಿತ್ತು. ಹಾಗಿದ್ದರೂ 23,001 ಸೀಟುಗಳು ಖಾಲಿ ಉಳಿದಿವೆ.
ಈ ವರ್ಷ ವಿದ್ಯಾರ್ಥಿಗಳಿಗೆ 64,484 ಎಂಜಿನಿಯರಿಂಗ್ ಸೀಟುಗಳು ಲಭ್ಯವಿದ್ದವು. ಇವುಗಳಲ್ಲಿ 48,027 ಸೀಟುಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡಿದ್ದರು. ಆದರೆ, ಇವರಲ್ಲಿ 41,483 ವಿದ್ಯಾರ್ಥಿಗಳು ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದಾರೆ. ಕರ್ನಾಟಕದಲ್ಲಿ 11 ಸರ್ಕಾರಿ ಕಾಲೇಜುಗಳೂ ಸೇರಿ ಸುಮಾರು 230 ಎಂಜಿನಿಯರಿಂಗ್ ಕಾಲೇಜುಗಳಿವೆ.
ವೈದ್ಯಕೀಯ ವಿದ್ಯಾರ್ಥಿಗಳಿಗೆ ಪಿಜಿ ಸೀಟ್ ಪಡೆಯಲು ಹತ್ತಾರು ಸಂಕಷ್ಟ; ಇದು ಖಾಸಗಿ ಕಾಲೇಜುಗಳಿಗೆ ಸೀಟು ಹಂಚುವ ದುರಾಲೋಚನೆಯೇ?@drashwathcn @mla_sudhakar @BCNagesh_bjp #PGCET #PrivateCollegehttps://t.co/yAl9JAxx67
— TV9 Kannada (@tv9kannada) January 26, 2022
ಇದನ್ನೂ ಓದಿ: ವೈದ್ಯಕೀಯ ವಿದ್ಯಾರ್ಥಿಗಳಿಗೆ ಪಿಜಿ ಸೀಟ್ ಪಡೆಯಲು ಹತ್ತಾರು ಸಂಕಷ್ಟ; ಇದು ಖಾಸಗಿ ಕಾಲೇಜುಗಳಿಗೆ ಸೀಟು ಹಂಚುವ ದುರಾಲೋಚನೆಯೇ?
ಇದನ್ನೂ ಓದಿ: ನೀಟ್ ಪಿಜಿ ಸೀಟು ಹಂಚಿಕೆ ಆಪ್ಶನ್ ಎಂಟ್ರಿಗೆ ತಾಂತ್ರಿಕ ದೋಷ; ಅವಧಿ ವಿಸ್ತರಣೆ ಮಾಡುವಂತೆ ವೈದ್ಯಕೀಯ ವಿದ್ಯಾರ್ಥಿಗಳ ಪಟ್ಟು