AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀಟ್ ಪಿಜಿ ಸೀಟು ಹಂಚಿಕೆ ಆಪ್ಶನ್ ಎಂಟ್ರಿಗೆ ತಾಂತ್ರಿಕ ದೋಷ; ಅವಧಿ ವಿಸ್ತರಣೆ ಮಾಡುವಂತೆ ವೈದ್ಯಕೀಯ ವಿದ್ಯಾರ್ಥಿಗಳ ಪಟ್ಟು

ಈ ಬಾರಿ ಸರ್ವರ್ ಸಮಸ್ಯೆಯಿದ್ದರೂ ಕಾಲಾವಕಾಶ ನೀಡುತ್ತಿಲ್ಲ. ಹೀಗಾಗಿ ಅವಧಿ ವಿಸ್ತರಣೆ ಮಾಡುವಂತೆ ವೈದ್ಯಕೀಯ ವಿದ್ಯಾರ್ಥಿಗಳು ಪಟ್ಟು ಹಿಡಿದ್ದಾರೆ. ಆದರೆ ದಿನಾಂಕ ವಿಸ್ತರಣೆ ಸಾಧ್ಯವೇ ಇಲ್ಲ ಎಂದು ಕೆಇಎ ತಿಳಿಸಿದೆ.

ನೀಟ್ ಪಿಜಿ ಸೀಟು ಹಂಚಿಕೆ ಆಪ್ಶನ್ ಎಂಟ್ರಿಗೆ ತಾಂತ್ರಿಕ ದೋಷ; ಅವಧಿ ವಿಸ್ತರಣೆ ಮಾಡುವಂತೆ ವೈದ್ಯಕೀಯ ವಿದ್ಯಾರ್ಥಿಗಳ ಪಟ್ಟು
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Jan 24, 2022 | 10:10 PM

Share

ಬೆಂಗಳೂರು: ನೀಟ್( NEET)​ ಪಿಜಿ ಸೀಟು ಹಂಚಿಕೆ​ ಆಪ್ಶನ್​​ ಎಂಟ್ರಿಗೆ ತಾಂತ್ರಿಕ ದೋಷ ಎದುರಾಗಿದೆ. ಹೀಗಿದ್ದರೂ ಕಾಲಾವಕಾಶ ವಿಸ್ತರಿಸದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (Karnataka Examinations Authority) ವಿರುದ್ಧ ಸದ್ಯ ವಿದ್ಯಾರ್ಥಿಗಳು(Students) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋರ್ಸ್, ಮೆಡಿಕಲ್ ಕಾಲೇಜು ಆಯ್ಕೆಗೆ ಕೆಇಎ ಕೇವಲ ಒಂದು ದಿನ ಮಾತ್ರ ಕಾಲಾವಕಾಶ ನೀಡಿದೆ. 24 ಗಂಟೆ ಅವಕಾಶ ನೀಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಡೆಗೆ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಅದರಂತೆ ಇಂದು ಬೆಳಿಗ್ಗೆ 11 ರಿಂದ ನಾಳೆ (ಜನವರಿ 25) ಬೆಳಗ್ಗೆ 11 ಗಂಟೆವರೆಗೆ ಮಾತ್ರ ಅವಕಾಶ ನೀಡಲಾಗಿದೆ.

ಕಾಲಾವಕಾಶ ವಿಸ್ತರಿಸುವಂತೆ ಕೆಇಎಗೆ ವಿದ್ಯಾರ್ಥಿಗಳ ಮನವಿ

ಪುನಃ ನಾಳೆ ಸಂಜೆಯಿಂದ ಅಣುಕು ಸೀಟು ಹಂಚಿಕೆಯ ಫಲಿತಾಂಶ ಬರಲಿದೆ. ಇದರಿಂದಾಗಿ ಕೋರ್ಸ್ ಮತ್ತು ಕಾಲೇಜುಗಳ ಆಯ್ಕೆಯ ಬದಲಾವಣೆಗೂ ಒಂದೇ ದಿನ ಅವಕಾಶ ಇರಲಿದೆ. ಜನವರಿ 27 ರಂದು ನೈಜ ಸೀಟು ಹಂಚಿಕೆ ಫಲಿತಾಂಶ ಪ್ರಕಟವಾಗಲಿದೆ. ಪ್ರತಿ ವರ್ಷ ಕನಿಷ್ಠ 3 ದಿನಗಳ ಅಂತರ ಇರುತ್ತಿತ್ತು. ಈ ಬಾರಿ ಸರ್ವರ್ ಸಮಸ್ಯೆಯಿದ್ದರೂ ಕಾಲಾವಕಾಶ ನೀಡುತ್ತಿಲ್ಲ. ಹೀಗಾಗಿ ಅವಧಿ ವಿಸ್ತರಣೆ ಮಾಡುವಂತೆ ವೈದ್ಯಕೀಯ ವಿದ್ಯಾರ್ಥಿಗಳು ಪಟ್ಟು ಹಿಡಿದ್ದಾರೆ. ಆದರೆ ದಿನಾಂಕ ವಿಸ್ತರಣೆ ಸಾಧ್ಯವೇ ಇಲ್ಲ ಎಂದು ಕೆಇಎ ತಿಳಿಸಿದೆ. ಒಟ್ಟಾರೆ ಅತಂತ್ರ ಸ್ಥಿತಿಗೆ ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯ ತಲುಪಿದೆ.

ಪಿಜಿಸಿಇಟಿ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ ಮಾಡಿ

  • ಕರ್ನಾಟಕ ಪರೀಕ್ಷಾ ಮಂಡಳಿಯ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ – kea.kar.nic.in
  • ಅಲ್ಲಿ ಲಭ್ಯವಿರುವ Karnataka PGCET Counseling 2021 Round 1 allotment result ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಲಾಗಿನ್ ವಿವರಗಳನ್ನು ಸಲ್ಲಿಸಿ ಸಬ್​ಮಿಟ್ ಆಯ್ಕೆ ಕ್ಲಿಕ್ ಮಾಡಿ
  • ನಿಮ್ಮ ಫಲಿತಾಂಶವು ಪ್ರದರ್ಶಿತಗೊಳ್ಳುತ್ತದೆ
  • ಫಲಿತಾಂಶ ಪರಿಶೀಲಿಸಿ ಆ ಪುಟವನ್ನು ಡೌನ್​ಲೋಡ್ ಮಾಡಿಕೊಳ್ಳಿ
  • ಮುಂದಿನ ಹಂತಗಳಿಗಾಗಿ ಫಲಿತಾಂಶದ ಹಾರ್ಡ್ ಕಾಪಿ ಇಟ್ಟುಕೊಳ್ಳಿರಿ

ಪಿಜಿಸಿಇಟಿ ಫಲಿತಾಂಶ ಹಾಗೂ ಸೀಟು ಹಂಚಿಕೆಯನ್ನು ಪಿಜಿಸಿಇಟಿ ರ್ಯಾಂಕ್ ಆಧರಿಸಿ ನೀಡಲಾಗಿದೆ. ಹಾಗೂ ಆನ್​ಲೈನ್ Karnataka PGCET round 1 counselling application ನಲ್ಲಿ ನೀಡಿರುವ ಆಯ್ಕೆಯ ಅನ್ವಯಿಸಿಯೂ ಸೀಟು ಹಂಚಿಕೆ ಆಗಿದೆ. ಮತ್ತು ನಿಗದಿತ ಶಿಕ್ಷಣ ಸಂಸ್ತೆಗಳ ಸೀಟು ಲಭ್ಯತೆ ಹಾಗೂ ಕೋರ್ಸ್ ಅವಕಾಶ ಆಧರಿಸಿ ಸೀಟ್ ಲಭಿಸಲಿದೆ.

ಇದನ್ನೂ ಓದಿ:

NEET PG Counselling 2021: ನೀಟ್​ ಪಿಜಿ ಕೌನ್ಸಿಲಿಂಗ್ ರಿಜಿಸ್ಟ್ರೇಶನ್​ ಪ್ರಾರಂಭ​; ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳುವ ವಿಧಾನ ಹೀಗಿದೆ

Karnataka PGCET Counseling 2021: ಪಿಜಿಸಿಇಟಿ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ ಮಾಡಿ

Published On - 10:09 pm, Mon, 24 January 22

Follow Us
TV9 Web
TV9 Web

TV9 Kannada

Read More
ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ
ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ