ಆನ್ ಲೈನ್ ಮೂಲಕವೇ ಪದವಿ ಪ್ರವೇಶ ಪ್ರಕ್ರಿಯೆಗೆ ಚಾಲನೆ -ಉನ್ನತ ಶಿಕ್ಷಣ ಸಚಿವ ಡಾ‌. ಅಶ್ವಥ್ ನಾರಾಯಣ

| Updated By: ಸಾಧು ಶ್ರೀನಾಥ್​

Updated on: Jun 13, 2022 | 7:27 PM

Dr CN Ashwath Narayan: ಸರ್ಕಾರವೂ ಶಾಲಾ ಕಾಲೇಜುಗಳ ಪುನರಾರಂಭಕ್ಕೆ ಒತ್ತಾಸೆಯಾಗಿ ನಿಂತಿದೆ. ಹಾಗೆಂದೇ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ ಗಳಿಗೆ ಪ್ರವೇಶಾವಕಾಶ ಕಲ್ಪಿಸಿದೆ. ಈ ಬಗ್ಗೆ ಉನ್ನತ ಶಿಕ್ಷಣ ಸಚಿವ ಅಶ್ವಥ ನಾರಾಯಣ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ

ಆನ್ ಲೈನ್ ಮೂಲಕವೇ ಪದವಿ ಪ್ರವೇಶ ಪ್ರಕ್ರಿಯೆಗೆ ಚಾಲನೆ -ಉನ್ನತ ಶಿಕ್ಷಣ ಸಚಿವ ಡಾ‌. ಅಶ್ವಥ್ ನಾರಾಯಣ
ಆನ್ ಲೈನ್ ಮೂಲಕವೇ ಪದವಿ ಪ್ರವೇಶ ಪ್ರಕ್ರಿಯೆಗೆ ಚಾಲನೆ -ಉನ್ನತ ಶಿಕ್ಷಣ ಸಚಿವ ಡಾ‌. ಅಶ್ವಥ್ ನಾರಾಯಣ
Follow us on

ಬೆಂಗಳೂರು: ಕೊರೊನಾ ಸೋಂಕು ಕಾಟ ಕಳೆದೆರಡು ವರ್ಷಗಳಿಂದ ಶಿಕ್ಷಣ ಕ್ಷೇತ್ರ ಸೆರಿದಂತೆ ಬಹುತೇಕ ಎಲ್ಲ ಕ್ಷೇತ್ರಗಳನ್ನು ತೀವ್ರವಾಗಿ ಕಾಡಿದೆ. ಈಗಲೂ ಕೊವಿಡ್ ಸೋಂಕು ಅಲ್ಲಿಇಲ್ಲಿ ಇದೆಯಾದರೂ ಅಬ್ಬರ ಕಡಿಮೆಯಾಗಿದೆ. ವಿದ್ಯಾರ್ಥಿಗಳು ಶಾಲಾ ಕಾಲೇಜುಗಳತ್ತ ಹೆಜ್ಜೆಹಾಕಲು ಹಾತೊರೆಯುತ್ತಿದ್ದಾರೆ. ಇನ್ನು ಸರ್ಕಾರವೂ ಶಾಲಾ ಕಾಲೇಜುಗಳ ಪುನರಾರಂಭಕ್ಕೆ ಒತ್ತಾಸೆಯಾಗಿ ನಿಂತಿದೆ. ಹಾಗೆಂದೇ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ ಗಳಿಗೆ ಪ್ರವೇಶಾವಕಾಶ ಕಲ್ಪಿಸಿದೆ. ಈ ಬಗ್ಗೆ ಉನ್ನತ ಶಿಕ್ಷಣ ಸಚಿವ ಅಶ್ವಥ ನಾರಾಯಣ (Dr CN Ashwath Narayan) ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, 2022-23ನೇ ಸಾಲಿನ ಪದವಿ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ. ಆದರೆ ಸದ್ಯಕ್ಕೆ ಆನ್ ಲೈನ್ ಮೂಲಕವೇ ಪ್ರವೇಶ ಪ್ರಕ್ರಿಯೆ (online admission) ನಡೆಸುವಂತೆ ಸೂಚನೆ ನೀಡಿದ್ದಾರೆ.

ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ ಗಳಿಗೆ ಆನ್ ಲೈನ್ ಪ್ರವೇಶಕ್ಕೆ ಕಾಲೇಜು ಶಿಕ್ಷಣ ಇಲಾಖೆ, ವಿವಿಗಳು ಮತ್ತು ಕಾಲೇಜುಗಳು ಸಜ್ಜುಗೊಂಡಿವೆ. ಕಾಲೇಜು ಶಿಕ್ಷಣ ಇಲಾಖೆ, ವಿ.ವಿ.ಗಳು ಮತ್ತು ವಿವಿ ಕಾಲೇಜುಗಳು ಇದಕ್ಕಾಗಿ https://uucms.karnataka.gov.in/ ವಿಳಾಸವನ್ನು ತಮ್ಮ ವೆಬ್ ಸೈಟುಗಳಲ್ಲಿ ಲಿಂಕ್ ಮಾಡಿ, ಲಭ್ಯವಾಗುವಂತೆ ಮಾಡಬೇಕು. ಜತೆಗೆ ಎಲ್ಲ ಕಾಲೇಜುಗಳೂ ಪ್ರವೇಶಾತಿಗೆ ಸಂಬಂಧಿಸಿದ ಮಾಹಿತಿಯನ್ನು ವೆಬ್ ಸೈಟ್ ಗಳಲ್ಲಿ ಪ್ರಕಟಿಸಬೇಕೆಂದು‌ ಉನ್ನತ ಶಿಕ್ಷಣ ಸಚಿವ ಅಶ್ವಥ ನಾರಾಯಣ ಮಾಧ್ಯಮ ಪ್ರಕಟಣೆ ಮೂಲಕ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: National Education Policy: ಕೇಂದ್ರೀಯ ವಿ.ವಿ. ನೇಮಕಾತಿಯಲ್ಲಿ ಬದಲಾವಣೆ; ವೃತ್ತಿಪರರು, ಕೈಗಾರಿಕೆ ಪರಿಣತರಿಂದಲೂ ಪಾಠ

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲುಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲುಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಬಯೋ ಸ್ಪೆಕ್ಟ್ರಂ ಸಮೀಕ್ಷೆ : ರಾಜ್ಯದ ಇನ್ಕ್ಯುಬೇಟರ್ ಗಳಿಗೆ ಎರಡು ಅಗ್ರಸ್ಥಾನಗಳು

Published On - 7:16 pm, Mon, 13 June 22