ಸೆ. 3ರಂದು ಬೆಂಗಳೂರಿನಲ್ಲಿ 2023 ಎಜುಕೇಶನ್‌ಯುಎಸ್‌ಎ ವಿಶ್ವವಿದ್ಯಾಲಯ ಶಿಕ್ಷಣ ಮೇಳ

ಯುನೈಟೆಡ್ ಸ್ಟೇಟ್ಸ್‌ನಲ್ಲಿ ಉನ್ನತ ಶಿಕ್ಷಣವನ್ನು ಮುಂದುವರೆಸುವ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸುವರ್ಣಾವಕಾಶ ಕಾದಿದೆ. ಈ ಕುರಿತಾಗಿ ಅವಕಾಶಗಳ ಬಗ್ಗೆ ತಿಳಿದುಕೊಳ್ಳಲು ಬಯಸುವವರು ಎಜುಕೇಶನ್‌ಯುಎಸ್‌ಎ ಶಿಕ್ಷಣ ಮೇಳದಲ್ಲಿ ಭಾಗವಹಿಸಬಹುದಾಗಿದೆ.

ಸೆ. 3ರಂದು ಬೆಂಗಳೂರಿನಲ್ಲಿ 2023 ಎಜುಕೇಶನ್‌ಯುಎಸ್‌ಎ ವಿಶ್ವವಿದ್ಯಾಲಯ ಶಿಕ್ಷಣ ಮೇಳ
ಎಜುಕೇಶನ್‌ಯುಎಸ್‌ಎ ವಿಶ್ವವಿದ್ಯಾಲಯ ಮೇಳ
Follow us
|

Updated on:Aug 24, 2023 | 9:49 PM

ಬೆಂಗಳೂರು, ಆಗಸ್ಟ್​ 24: ಯುನೈಟೆಡ್ ಸ್ಟೇಟ್ಸ್‌ನಲ್ಲಿ ಉನ್ನತ ಶಿಕ್ಷಣವನ್ನು ಮುಂದುವರೆಸುವ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸುವರ್ಣಾವಕಾಶ ಕಾದಿದೆ. ಈ ಕುರಿತಾಗಿ ಅವಕಾಶಗಳ ಬಗ್ಗೆ ತಿಳಿದುಕೊಳ್ಳಲು ಬಯಸುವವರು ಎಜುಕೇಶನ್‌ಯುಎಸ್‌ಎ ಶಿಕ್ಷಣ ಮೇಳದಲ್ಲಿ (EducationUSA University Fair) ಭಾಗವಹಿಸುವ ಮೂಲಕ ಯುಎಸ್​ ವಿಶ್ವವಿದ್ಯಾನಿಲಯದ  ಪ್ರತಿನಿಧಿಗಳೊಂದಿಗೆ ವೈಯಕ್ತಿಕವಾಗಿ ಸಮಾಲೋಚನೆ ನಡೆಸಬಹುದಾಗಿದೆ. ಬೆಂಗಳೂರಿನ ಯಶನಾ ಟ್ರಸ್ಟ್‌ ಮತ್ತು ಯುಎಸ್ ಕಾನ್ಸುಲೇಟ್ ಜನರಲ್ ಚೆನ್ನೈನ ಸಹಯೋಗದಲ್ಲಿ ಸೆಪ್ಟೆಂಬರ್ 3 ರಂದು ಬೆಂಗಳೂರಿನ ತಾಜ್​ ಎಂಜಿ ರೋಡ್ ಹೋಟೆಲ್‌ನಲ್ಲಿ ಮಧ್ಯಾಹ್ನ 2:00 ರಿಂದ ಸಂಜೆ 5ರ ವರೆಗೆ ಮೇಳವನ್ನು ಆಯೋಜಿಸಲಾಗಿದೆ.

ಈ ಮೇಳದಲ್ಲಿ ಯುನೈಟೆಡ್ ಸ್ಟೇಟ್ಸ್‌ನ 36 ವಿವಿಧ ಭಾಗಗಳಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಒಳಗೊಂಡಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರು ಆಯಾ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಪ್ರತಿನಿಧಿಗಳನ್ನು ಭೇಟಿ ಮಾಡಲು ಅವಕಾಶವನ್ನು ಒದಗಿಸಲಾಗಿದೆ.

ಇದನ್ನೂ ಓದಿ: TV9 Big Impact: ಪಿಯು ವಿದ್ಯಾರ್ಥಿಗಳಿಗೆ ಗೂಡ್ ನ್ಯೂಸ್; ಸರ್ಕಾರಿ ಕಾಲೇಜುಗಳಲ್ಲಿ ಕನಿಷ್ಠ ಶೇ.10 ದಾಖಲಾತಿ ಹೆಚ್ಚಿಸಲು ಸರ್ಕಾರದ ಯೋಜನೆ

ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪದವಿ, ಸ್ನಾತಕೋತ್ತರ ಅಥವಾ ಪಿಎಚ್‌ಡಿ ಮಾಡಬಯಸುವ ವಿದ್ಯಾರ್ಥಿಗಳಿಗೆ ಈ ಮೇಳವು ಸಹಕಾರಿಯಾಗಲಿದೆ. ಇನ್ನು ಈ ಮೇಳದಲ್ಲಿ ಭಾಗವಹಿಸಲು ಯಾವುದೇ ಶುಲ್ಕ ವಿಧಿಸಬೇಕಾಗಿಲ್ಲ. ಇದು ಸಂಪೂರ್ಣ ಉಚಿತವಾಗಿದ್ದು, ನೋಂದಣಿ ಅಗತ್ಯವಿದೆ. (ಈ ಲಿಂಕ್​ ಮೂಲಕ ನೋದಣಿ ಮಾಡಿಕೊಳ್ಳಬಹುದು https://bit.ly/EdUSAFair23PR)

ಯುನೈಟೆಡ್ ಸ್ಟೇಟ್ಸ್ ಭಾರತೀಯ ವಿದ್ಯಾರ್ಥಿಗಳಿಗೆ ಅತ್ಯಂತ ಜನಪ್ರಿಯ ಅಂತರರಾಷ್ಟ್ರೀಯ ಅಧ್ಯಯನ ಕೇಂದ್ರವಾಗಿದೆ. ಪ್ರತಿ ವರ್ಷ ಎಜುಕೇಶನ್‌ಯುಎಸ್‌ಎ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಶಾಲೆಗಳಲ್ಲಿಯೂ ಆರಂಭವಾಗಲಿವೆ ಎಲ್​​ಕೆಜಿ, ಯುಕೆಜಿ; 262 ಶಾಲೆಗಳಲ್ಲಿ ಆರಂಭಕ್ಕೆ ಸಿಕ್ತು ಗ್ರೀನ್ ಸಿಗ್ನಲ್

ಎಜುಕೇಶನ್‌ಯುಎಸ್‌ಎ ಕೇಂದ್ರಗಳು ಶಿಕ್ಷಣ ಮೇಳಗಳು ಮತ್ತು ಶಾಲೆಗಳು, ವಿಶ್ವವಿದ್ಯಾನಿಲಯಗಳು ಮತ್ತು ಇತರೆ ಸಾರ್ವಜನಿಕ ಕಾರ್ಯಕ್ರಮಗಳ ಮೂಲಕ ನಿರೀಕ್ಷಿತ ವಿದ್ಯಾರ್ಥಿಗಳನ್ನು ವೈಯಕ್ತಿಕವಾಗಿ ಮತ್ತು ಆನ್‌ಲೈನ್ ಸೆಷನ್‌ಗಳ ಮೂಲಕ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅಧ್ಯಯನ ಮಾಡುವ ಬಗ್ಗೆ ನಿಖರವಾದ, ಸಮಗ್ರವಾದ ಮತ್ತು ಪ್ರಸ್ತುತ ಮಾಹಿತಿಯನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಒದಗಿಸುತ್ತದೆ.

ಹೈದರಾಬಾದ್, ಮುಂಬೈ, ಪುಣೆ, ನವದೆಹಲಿ, ಅಹಮದಾಬಾದ್, ಕೋಲ್ಕತ್ತಾ, ಚೆನ್ನೈ ಮತ್ತು ಬೆಂಗಳೂರಿನಲ್ಲಿ ಈ ವೈಯಕ್ತಿಕ ಮೇಳಗಳನ್ನು ಯುಎಸ್-ಇಂಡಿಯಾ ಎಜುಕೇಷನಲ್ ಫೌಂಡೇಶನ್ (ಯುಎಸ್‌ಐಇಎಫ್), ಯುಎಸ್ ರಾಯಭಾರ ಕಚೇರಿಯ ಸಹಯೋಗದೊಂದಿಗೆ ಆಯೋಜಿಸಿದೆ. ಹೆಚ್ಚಿನ ಮಾಹಿತಿಗಾಗಿ https://www.facebook.com/EducationUSAIndia, +91-9880041115 ನಂಬರ್​​ಗೆ ಕರೆ ಮಾಡಬಹುದಾಗಿದೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.  

Published On - 9:49 pm, Thu, 24 August 23

ತಾಜಾ ಸುದ್ದಿ
ಗೋವಾದ ಪಾಲಿ ಜಲಪಾತದಲ್ಲಿ ಸಿಲುಕಿದ್ದ 50 ಮಂದಿ ಕನ್ನಡಿಗರ ರಕ್ಷಣೆ
ಗೋವಾದ ಪಾಲಿ ಜಲಪಾತದಲ್ಲಿ ಸಿಲುಕಿದ್ದ 50 ಮಂದಿ ಕನ್ನಡಿಗರ ರಕ್ಷಣೆ
ಬಿಜೆಪಿ ಕೋಮುವಾದಿ ಅಲ್ಲವೆಂದು ದೇವೇಗೌಡರಿಗೆ ತಡವಾಗಿ ಗೊತ್ತಾಯಿತು: ಆರ್ ಅಶೋಕ
ಬಿಜೆಪಿ ಕೋಮುವಾದಿ ಅಲ್ಲವೆಂದು ದೇವೇಗೌಡರಿಗೆ ತಡವಾಗಿ ಗೊತ್ತಾಯಿತು: ಆರ್ ಅಶೋಕ
ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿ; ಮರಿ ಆನೆ ತುಂಟಾಟ ನೋಡಿ
ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿ; ಮರಿ ಆನೆ ತುಂಟಾಟ ನೋಡಿ
ಅಬ್ಬಬ್ಬಾ.. 25 ದಿನಕ್ಕೆ ದರ್ಶನ್ ಕಳೆದುಕೊಂಡ ತೂಕ ಇಷ್ಟೊಂದಾ?
ಅಬ್ಬಬ್ಬಾ.. 25 ದಿನಕ್ಕೆ ದರ್ಶನ್ ಕಳೆದುಕೊಂಡ ತೂಕ ಇಷ್ಟೊಂದಾ?
ಮನೆಯಲ್ಲಿ ಹನುಮನ ಫೋಟೋ ಇರಲೇಬೇಕು ಯಾಕೆ ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ಹನುಮನ ಫೋಟೋ ಇರಲೇಬೇಕು ಯಾಕೆ ಗೊತ್ತಾ? ವಿಡಿಯೋ ನೋಡಿ
ಈ ರಾಶಿಯ ರಾಜಕಾರಣಿಗಳು ಬಹಳ ಜಾಗರೂಕತೆಯಿಂದ ಜವಾಬ್ದಾರಿಯನ್ನು ನಿರ್ವಹಿಸಿ
ಈ ರಾಶಿಯ ರಾಜಕಾರಣಿಗಳು ಬಹಳ ಜಾಗರೂಕತೆಯಿಂದ ಜವಾಬ್ದಾರಿಯನ್ನು ನಿರ್ವಹಿಸಿ
‘ಪ್ರಕೃತಿ ವಿಕೋಪದಲ್ಲಿ ನೂರಾರು ಜನ ಸಾಯ್ತಾರೆ, ಯಾರಿಗೆ ಶಿಕ್ಷೆ ಸಿಗುತ್ತೆ?’
‘ಪ್ರಕೃತಿ ವಿಕೋಪದಲ್ಲಿ ನೂರಾರು ಜನ ಸಾಯ್ತಾರೆ, ಯಾರಿಗೆ ಶಿಕ್ಷೆ ಸಿಗುತ್ತೆ?’
ಡ್ರೋನ್​ ಕಣ್ಣಲ್ಲಿ ವಿಶ್ವದ ಅತಿ ದೊಡ್ಡ ಪುರಿ ಜಗನ್ನಾಥ ರಥಯಾತ್ರೆ: ವಿಡಿಯೋ
ಡ್ರೋನ್​ ಕಣ್ಣಲ್ಲಿ ವಿಶ್ವದ ಅತಿ ದೊಡ್ಡ ಪುರಿ ಜಗನ್ನಾಥ ರಥಯಾತ್ರೆ: ವಿಡಿಯೋ
ಮುಂಗಾರು ಮಳೆಗೆ ಚಾರ್ಮಾಡಿ ಘಾಟ್​ನಲ್ಲಿ ಜಲವೈಭವ; ನೂರಾರು ಜಲಪಾತಗಳ ಸೃಷ್ಟಿ
ಮುಂಗಾರು ಮಳೆಗೆ ಚಾರ್ಮಾಡಿ ಘಾಟ್​ನಲ್ಲಿ ಜಲವೈಭವ; ನೂರಾರು ಜಲಪಾತಗಳ ಸೃಷ್ಟಿ
ಸತತ ಮಳೆ; ಜಿಗಣೆ ಕಾಟಕ್ಕೆ ಹೈರಾಣಾದ ಪ್ರವಾಹ ತಂಡದ ಅಧಿಕಾರಿಗಳು
ಸತತ ಮಳೆ; ಜಿಗಣೆ ಕಾಟಕ್ಕೆ ಹೈರಾಣಾದ ಪ್ರವಾಹ ತಂಡದ ಅಧಿಕಾರಿಗಳು