TS SSC Result 2022: ಇಂದು ತೆಲಂಗಾಣ 10ನೇ ತರಗತಿ ಫಲಿತಾಂಶ ಪ್ರಕಟ: ನೋಡುವುದು ಹೇಗೆ?

| Updated By: Vinay Bhat

Updated on: Jun 30, 2022 | 7:33 AM

Telangana 10th Result: ತೆಲಂಗಾಣ SSC ಪರೀಕ್ಷೆಗಳು 23 ಮೇ ನಿಂದ 1 ಜೂನ್ 2022 ರವರೆಗೆ ನಡೆಸಲಾಗಿತ್ತು. ಇದರಲ್ಲಿ ಸುಮಾರು 5 ಲಕ್ಷ ಮಂದಿ ಪರೀಕ್ಷೆ ಬರೆದಿದ್ದರು. ಫಲಿತಾಂಶವನ್ನು ತಿಳಿಯಲು ಈ ಕೆಳಗಿನ ಸೂತ್ರ ಅನುಸರಿಸಿ.

TS SSC Result 2022: ಇಂದು ತೆಲಂಗಾಣ 10ನೇ ತರಗತಿ ಫಲಿತಾಂಶ ಪ್ರಕಟ: ನೋಡುವುದು ಹೇಗೆ?
Telangana 10th Result
Follow us on

ತೆಲಂಗಾಣ 10ನೇ ತರಗತಿ ಅಥವಾ ಎಸ್‌ಎಸ್‌ಸಿ (TS SSC Result 2022) ಅಂತಿಮ ಪರೀಕ್ಷೆಯ ಫಲಿತಾಂಶ ಇಂದು ಗುರುವಾರ ಪ್ರಕಟವಾಗಲಿದೆ. ಈ ಬಗ್ಗೆ ತೆಲಂಗಾಣ ಶಿಕ್ಷಣ ಮಂಡಳಿ ಮಾಹಿತಿ ನೀಡಿದ್ದು, ಜೂನ್ 30 ಬೆಳಗ್ಗೆ 11:30 ಕ್ಕೆ ಫಲಿತಾಂಶ ಹೊರಬೀಳಲಿದೆ ಎಂದು ಹೇಳಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು. bse.telangana.gov.in. ಇದರ ಜೊತೆಗೆ ಆಯ್ದ ಥರ್ಡ್​ ಪಾರ್ಟಿ ವೆಬ್​ಸೈಟ್ ಮೂಲಕವೂ ಫಲಿತಾಂಶವನ್ನು ನೋಡಬಹುದಾಗಿದೆ.

ತೆಲಂಗಾಣ SSC ಪರೀಕ್ಷೆಗಳು 23 ಮೇ ನಿಂದ 1 ಜೂನ್ 2022 ರವರೆಗೆ ನಡೆಸಲಾಗಿತ್ತು. ಇದರಲ್ಲಿ ಸುಮಾರು 5 ಲಕ್ಷ ಮಂದಿ ಪರೀಕ್ಷೆ ಬರೆದಿದ್ದರು. TS SSCನಿಂದ ಪಾಸ್ ಪ್ರಮಾಣಪತ್ರವನ್ನು ಪಡೆಯಲು ವಿದ್ಯಾರ್ಥಿಗಳು ಕನಿಷ್ಠ 35 ಶೇಕಡಾ ಅಂಕಗಳನ್ನು ಗಳಿಸಬೇಕು. ಒಂದು ಅಥವಾ ಎರಡು ವಿಷಯಗಳಲ್ಲಿ ಅನುತ್ತೀರ್ಣರಾದವರು ಮರು ಪರೀಕ್ಷೆಗಳಿಗೆ ಹಾಜರಾಗಬೇಕಾಗುತ್ತದೆ. ಫಲಿತಾಂಶವನ್ನು ತಿಳಿಯಲು ಈ ಕೆಳಗಿನ ಸೂತ್ರ ಅನುಸರಿಸಿ.

Maharashtra Politics: ಗುವಾಹತಿಯಿಂದ ಗೋವಾಕ್ಕೆ ಮಹಾರಾಷ್ಟ್ರದ ಬಂಡಾಯ ಶಾಸಕರು, ಮುಂಬೈಗೆ ಸಿಟಿ ರವಿ ದೌಡು, ಇಂದು ವಿಧಾನಸಭೆ ಅಧಿವೇಶನ

ಇದನ್ನೂ ಓದಿ
Karnataka Rain: ಬೆಂಗಳೂರಿನಲ್ಲಿ ಇಂದು ಭಾರೀ ಮಳೆ; ಮಲೆನಾಡು, ಕರಾವಳಿ, ಉತ್ತರ ಕರ್ನಾಟಕದಲ್ಲೂ ವರುಣನ ಆರ್ಭಟ
ನಾನು ಅನಿರೀಕ್ಷಿತ ರೀತಿಯಲ್ಲಿಅಧಿಕಾರಕ್ಕೆ ಬಂದಿದ್ದೆ, ಅದೇ ರೀತಿಯಲ್ಲಿ ಹೊರಡುತ್ತಿದ್ದೇನೆ: ಉದ್ಧವ್ ಠಾಕ್ರೆ
Uddhav Thackeray Resigned ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜೀನಾಮೆ
Maharashtra Floor Test ಮಹಾರಾಷ್ಟ್ರದಲ್ಲಿ ನಾಳೆ ನಡೆಯಲಿರುವ ವಿಶ್ವಾಸಮತ ಯಾಚನೆಗೆ ತಡೆ ನೀಡಲು ನಿರಾಕರಿಸಿದ ಸುಪ್ರೀಂಕೋರ್ಟ್
  • bse.telangana.gov.in ವೆಬ್​​ಸೈಟ್​ಗೆ ಬೇಟಿ ನೀಡಿ.
  • ಮುಖಪುಟದಲ್ಲಿ, SSC ಅನ್ನು ಹುಡುಕಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ.
  • ಅಥವಾ 10 ನೇ ತರಗತಿ ಫಲಿತಾಂಶ ಎಂಬುದರ ಮೇಲೆ ಕ್ಲಿಕ್ ಮಾಡಿ
  • ನಿಮ್ಮ ಹಾಲ್ ಟಿಕೆಟ್ ನಂಬರ್ ನಮೂದಿಸಿ
  • Find result ಎಂಬ ಆಯ್ಕೆ ಮೇಲೆ ಒತ್ತಿರಿ
  • ಈಗ 10ನೇ ತರಗತಿಯ ಫಲಿತಾಂಶ ಕಾಣಿಸುತ್ತದೆ. ಬೇಕಾದರೆ ಡೌನ್​ಲೋಡ್ ಮಾಡುವ ಆಯ್ಕೆ ಇರುತ್ತದೆ.

ಫಲಿತಾಂಶ ಪರಿಶೀಲಿಸುವ ವೆಬ್​ಸೈಟ್​ಗಳು:

  • bse.telangana.gov.in
  • bseresults.telangana.gov.in
  • manabadi.co.in.

Gold Price Today: ಒಂದೇ ದಿನದಲ್ಲಿ ದಾಖಲೆಯ ಕುಸಿತ ಕಂಡ ಚಿನ್ನದ ಬೆಲೆ; ಬೆಳ್ಳಿ ದರವೂ 600 ರೂ. ಇಳಿಕೆ

Published On - 7:33 am, Thu, 30 June 22