ನಾನು ಅನಿರೀಕ್ಷಿತ ರೀತಿಯಲ್ಲಿಅಧಿಕಾರಕ್ಕೆ ಬಂದಿದ್ದೆ, ಅದೇ ರೀತಿಯಲ್ಲಿ ಹೊರಡುತ್ತಿದ್ದೇನೆ: ಉದ್ಧವ್ ಠಾಕ್ರೆ
ಪ್ರಜಾಪ್ರಭುತ್ವದಲ್ಲಿ, ಸಂಖ್ಯೆಗಳನ್ನು ತೋರಿಸಲು ತಲೆಗಳನ್ನು ಎಣಿಸಲಾಗುತ್ತದೆ. ನನಗೆ ಅದರಲ್ಲಿ ಆಸಕ್ತಿ ಇಲ್ಲ. ನಾನು ಈ ಆಟಗಳನ್ನು ಆಡಲು ಬಯಸುವುದಿಲ್ಲ. ನಾಳೆ ಅವರು ಶಿವಸೇನಾ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆಯವರ ಮಗನನ್ನು ಕೆಳಗಿಳಿಸಿದ್ದೇವೆ
ಗುರುವಾರ ವಿಧಾನಸಭೆಯಲ್ಲಿ ವಿಶ್ವಾಸ ಮತಕ್ಕಾಗಿ ಯಾಚಿಸಬೇಕು ಎಂದು ಸುಪ್ರೀಂಕೋರ್ಟ್ (Supreme Court) ತೀರ್ಪು ನೀಡಿದ ಬೆನ್ನಲ್ಲೇ ಉದ್ಧವ್ ಠಾಕ್ರೆ (Uddhav Thackeray) ಬುಧವಾರ ಮಹಾರಾಷ್ಟ್ರ (Maharashtra) ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿಡಿಯೊ ಸಂವಾದ ಮೂಲಕ ರಾಜ್ಯವನ್ನು ಉದ್ದೇಶಿಸಿ ಮಾತನಾಡಿದ ಠಾಕ್ರೆ ನಾನು ವಿಧಾನ ಪರಿಷತ್ ಸದಸ್ಯತ್ವಕ್ಕೂ ರಾಜೀನಾಮೆ ನೀಡುವುದಾಗಿ ಹೇಳಿದರು.ಸಿಎಂ ಕುರ್ಚಿ ಬಿಟ್ಟಿದ್ದಕ್ಕೆ ನನಗೆ ಯಾವುದೇ ವಿಷಾದವಿಲ್ಲ. ನಾನು ಏನೇ ಮಾಡಿದರೂ ಮರಾಠಿಗರು ಮತ್ತು ಹಿಂದುತ್ವಕ್ಕಾಗಿ ಮಾಡಿದ್ದೇನೆ. ಇಂದು ಎಲ್ಲರ ಸಮ್ಮುಖದಲ್ಲಿ ರಾಜ್ಯದ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸುತ್ತಿದ್ದೇನೆ. ದೇಶಾದ್ಯಂತ ಗಲಭೆಗಳು ನಡೆದವು, ಆದರೆ ಮಹಾರಾಷ್ಟ್ರವು ಇದಕ್ಕೆ ಹೊರತಾಗಿತ್ತು. ನನ್ನ ಮುಸ್ಲಿಂ ಸಹೋದರರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. “ಪ್ರಜಾಪ್ರಭುತ್ವದಲ್ಲಿ, ಸಂಖ್ಯೆಗಳನ್ನು ತೋರಿಸಲು ತಲೆಗಳನ್ನು ಎಣಿಸಲಾಗುತ್ತದೆ. ನನಗೆ ಅದರಲ್ಲಿ ಆಸಕ್ತಿ ಇಲ್ಲ. ನಾನು ಈ ಆಟಗಳನ್ನು ಆಡಲು ಬಯಸುವುದಿಲ್ಲ. ನಾಳೆ ಅವರು ಶಿವಸೇನಾ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆಯವರ ಮಗನನ್ನು ಕೆಳಗಿಳಿಸಿದ್ದೇವೆ ಎಂದು ಹೇಳುತ್ತಾರೆ. ನಾನು ಅನಿರೀಕ್ಷಿತ ರೀತಿಯಲ್ಲಿ (ಅಧಿಕಾರಕ್ಕೆ) ಬಂದಿದ್ದೇನೆ ಮತ್ತು ನಾನು ಅದೇ ರೀತಿಯಲ್ಲಿ ಹೊರಡುತ್ತಿದ್ದೇನೆ. ನಾನು ಶಾಶ್ವತವಾಗಿ ಹೋಗುವುದಿಲ್ಲ, ನಾನು ಇಲ್ಲೇ ಇರುತ್ತೇನೆ. ಮತ್ತೊಮ್ಮೆ ಸೇನಾ ಭವನದಲ್ಲಿ ಕುಳಿತುಕೊಳ್ಳುತ್ತೇನೆ. ನಾನು ನನ್ನ ಜನರೆಲ್ಲರನ್ನು ಒಟ್ಟುಗೂಡಿಸುತ್ತೇನೆ ಎಂದು ಠಾಕ್ರೆ ಹೇಳಿದ್ದಾರೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಮುಖ್ಯಸ್ಥ ಶರದ್ ಪವಾರ್ ಅವರು ಶಿವಸೇನಾ ಪರವಾಗಿದ್ದದ್ದಕ್ಕೆ ಠಾಕ್ರೆ ಧನ್ಯವಾದ ಹೇಳಿದ್ದಾರೆ.
ನಾವು ಅಧಿಕೃತವಾಗಿ ಔರಂಗಾಬಾದ್ ಅನ್ನು ಸಂಭಾಜಿನಗರ ಎಂದು ಮತ್ತು ಓಸ್ಮಾನಾಬಾದ್ ಅನ್ನು ಧಾರಾಶಿವ್ ಎಂದು ಮರುನಾಮಕರಣ ಮಾಡಿದ್ದೇವೆ ಎಂದು ನನಗೆ ತೃಪ್ತಿ ಇದೆ. ಬಾಳಾಸಾಹೇಬ್ ಠಾಕ್ರೆ ಹೆಸರಿಟ್ಟ ನಗರಗಳು ಅವು. ಔರಂಗಾಬಾದ್ ಅನ್ನು ಮರುನಾಮಕರಣ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳುವಾಗ ಎನ್ ಸಿಪಿ ಮತ್ತು ಕಾಂಗ್ರೆಸ್ ಅದನ್ನು ವಿರೋಧಿಸಲಿಲ್ಲ. ಪ್ರಸ್ತಾವನೆಯನ್ನು ಅಂಗೀಕರಿಸಿದಾಗ ಶಿವಸೇನೆಯಿಂದ ಅನಿಲ್ ಪರಬ್, ಸುಭಾಷ್ ದೇಸಾಯಿ ಮತ್ತು ಆದಿತ್ಯ ಠಾಕ್ರೆ ಮಾತ್ರ ಉಪಸ್ಥಿತರಿದ್ದರು. ಇತರರು ಎಲ್ಲಿದ್ದಾರೆಂದು ನಮಗೆಲ್ಲರಿಗೂ ತಿಳಿದಿದೆ.
“ಸುಪ್ರೀಂಕೋರ್ಟ್ ವಿಶ್ವಾಸಮತ ಪರೀಕ್ಷೆಯ ತೀರ್ಪು ನೀಡಿದೆ. ನಿಯೋಗವು ಅವರನ್ನು ಭೇಟಿಯಾದ ನಂತರ 24 ಗಂಟೆಗಳಲ್ಲಿ ವಿಶ್ವಾಸ ಮತ ಯಾಚಿಸುವಂತೆ ಹೇಳುವ ಮೂಲಕ ಪ್ರಜಾಪ್ರಭುತ್ವವನ್ನು ಎತ್ತಿಹಿಡಿದ ರಾಜ್ಯಪಾಲರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ.
I had come (to power) in an unexpected manner and I am going out in a similar fashion. I am not going away forever, I will be here, and I will once again sit in Shiv Sena Bhawan. I will gather all my people. I am resigning as the CM & as an MLC: Shiv Sena leader Uddhav Thackeray pic.twitter.com/dkMOtManv3
— ANI (@ANI) June 29, 2022
ತಮ್ಮ ಸರ್ಕಾರಕ್ಕೆ ಪ್ರಸ್ತುತ ಬಿಕ್ಕಟ್ಟನ್ನು ಉಂಟುಮಾಡಿದ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಠಾಕ್ರೆ, “ನಿಮಗೆ ನನ್ನ ಮೇಲೆ ಯಾಕ ಕೋಪ? ಕಾಂಗ್ರೆಸ್ ಅಥವಾ ಎನ್‌ಸಿಪಿ? ಸೂರತ್‌ಗೆ ಹೋಗಿ ಮಾತನಾಡುವ ಬದಲು ನೀವು ಮಾತೋಶ್ರೀ ಬಳಿ ನನ್ನ ಬಳಿಗೆ ಬರಬೇಕಿತ್ತು. ನಾನು ಈಗಲೂ ನಿಮ್ಮ ಭಾವನೆಗಳನ್ನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ.
ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದ ಅಸ್ತಿತ್ವದ ಬಿಕ್ಕಟ್ಟಿಗೆ ಕಾರಣವಾಗಿರುವ ಶಿವಸೇನಾ ನಾಯಕ ಏಕನಾಥ್ ಶಿಂಧೆ ಅವರ ಬಂಡಾಯದ ನಂತರ ಮಹಾರಾಷ್ಟ್ರದ ರಾಜಕೀಯದಎಲ್ಲಾ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ವಿಶ್ವಾಸ ಮತ ಯಾಚನ ಏಕೈಕ ಮಾರ್ಗ ಎಂದು ಸುಪ್ರೀಂಕೋರ್ಟ್ ಹೇಳಿದೆ.
Published On - 10:42 pm, Wed, 29 June 22