Uddhav Thackeray Resigned ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜೀನಾಮೆ
ವಿಶ್ವಾಸ ಮತ ಯಾಚನೆಗೆ ಮುನ್ನವೇ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದರ ಜತೆಗೆ ಉದ್ಧವ್ ಠಾಕ್ರೆ ವಿಧಾನ ಪರಿಷತ್ತಿಗೂ ರಾಜೀನಾಮೆ ನೀಡಿದ್ದಾರೆ
ಮಹಾರಾಷ್ಟ್ರ ಸರ್ಕಾರ ನಾಳೆ ವಿಶ್ವಾಸ ಮತ ಯಾಚನೆ (Floor Test) ಮಾಡಬೇಕಿತ್ತು. ವಿಶ್ವಾಸ ಮತ ಯಾಚನೆಗೆ ಮುನ್ನವೇ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದರ ಜತೆಗೆ ಉದ್ಧವ್ ಠಾಕ್ರೆ ವಿಧಾನ ಪರಿಷತ್ತಿಗೂ ರಾಜೀನಾಮೆ ನೀಡಿದ್ದಾರೆ. ಗವರ್ನರ್ ಭಗತ್ ಸಿಂಗ್ ಕೊಶ್ಯಾರಿ ಅವರು ಬಹುಮತ ಸಾಬೀತು ಪಡಿಸುವ ಆದೇಶ ನೀಡುವಲ್ಲಿ ಆತುರ ತೋರಿಸಿದ್ದಾರೆ ಎಂದು ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ (MVA) ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಈ ಬಗ್ಗೆ ಬುಧವಾರ ಸಂಜೆ 5 ಗಂಟೆಗೆ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ರಾತ್ರಿ 9 ಗಂಟೆೆಗೆ ತೀರ್ಪು ಪ್ರಕಟಿಸಿದೆ. ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡುವಂತೆ ರಾಜ್ಯಪಾಲರ ಹೊರಡಿದ್ದ ಆದೇಶಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದ್ದು, ಗುರುವಾರ ಬೆಳಗ್ಗೆ 11 ಗಂಟೆಗೆ ಬಹುಮತ ಸಾಬೀತು ಪಡಿಸುವಂತೆ ಠಾಕ್ರೆ ಸರ್ಕಾರಕ್ಕೆ ಹೇಳಿತ್ತು.ಸುಪ್ರೀಂಕೋರ್ಟ್ ತೀರ್ಪು ಹೊರಬಿದ್ದ ಕೆಲವೇ ಕ್ಷಣಗಳಲ್ಲಿ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇಂದು ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಔರಂಗಾಬಾದ್ (Aurangabad) ಹೆಸರು ಸಂಭಾಜಿನಗರ (Sambhajinagar), ಉಸ್ಮಾನಾಬಾದ್ (Osmanabad) ಹೆಸರು ಧಾರಾಶಿವ್ (Dharashiv) ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಮಹಾರಾಷ್ಟ್ರ ಸರ್ಕಾರ ಒಪ್ಪಿಗೆ ನೀಡಿದೆ. ಅದೇ ವೇಳೆ ನವಿ ಮುಂಬೈ ಹೆಸರನ್ನು ಡಿಬಿ ಪಾಟೀಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಬದಲಿಸಲಾಗುವುದು.ಗುರುವಾರ ವಿಶ್ವಾಸ ಮತವನ್ನು ಎದುರಿಸುತ್ತಿರುವ ಶಿವಸೇನೆಯ 31 ತಿಂಗಳ ಅವಧಿಯ ಮಹಾರಾಷ್ಟ್ರ ವಿಕಾಸ್ ಅಘಾಡಿ ಸರ್ಕಾರದ ಕೊನೆಯ ಪ್ರಮುಖ ನಿರ್ಧಾರ ಇದಾಗಿದೆ.
ನಾನು ಹೆದರುವವನಲ್ಲ, ಶಿವಸೈನಿಕರ ರಕ್ತ ಬೀದಿಯಲ್ಲಿ ಬೀಳುವುದಕ್ಕಿಂತ ನಾನು ಕೆಳಗಿಳಿಯುವುದೇ ಲೇಸು. ನಾನು ಹುದ್ದೆ ಬಗ್ಗೆ ಚಿಂತಿಸುವುದಿಲ್ಲ, ನನ್ನ ಶಿವಸೈನಿಕರ ಬೆಂಬಲದ ಬಗ್ಗೆ ಕಾಳಜಿ ವಹಿಸುತ್ತೇನೆ. “ನಾವು ಸುಪ್ರೀಂ ಕೋರ್ಟ್ ತೀರ್ಪನ್ನು ಗೌರವಿಸುತ್ತೇವೆ. ಪ್ರಜಾಪ್ರಭುತ್ವವನ್ನು ಅನುಸರಿಸಬೇಕು” ಎಂದು ಉದ್ಧವ್ ಠಾಕ್ರೆ ವಿಡಿಯೊ ಸಂವಾದದಲ್ಲಿ ಹೇಳಿದ್ದು ನಂತರ ರಾಜೀನಾಮೆ ಪತ್ರ ನೀಡಲು ರಾಜ್ಯಪಾಲರ ನಿವಾಸಕ್ಕೆ ತೆರಳಿದರು.
ಮಹಾರಾಷ್ಟ್ರದಲ್ಲಿನ ರಾಜಕೀಯ ಬಿಕ್ಕಟ್ಟಿನಿಂದಾಗಿ ಠಾಕ್ರೆ ಅವರ ತಂಡವು ಕೇವಲ 15 ಶಾಸಕರನ್ನು ಹೊಂದಿದೆ. ಇತ್ತ ಏಕನಾಥ್ ಶಿಂಧೆ ಅವರು ಶಿವಸೇನಾ, ಶರದ್ ಪವಾರ್ ಅವರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಮತ್ತು ಕಾಂಗ್ರೆಸ್ ಅನ್ನು ಒಳಗೊಂಡಿರುವ ಮಹಾ ವಿಕಾಸ್ ಅಘಾಡಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದು 55 ಶಾಸಕರ ಪೈಕಿ 40 ಶಿವಸೇನಾ ಶಾಸಕರ ಬೆಂಬಲ ಇದೆ ಎಂದು ಹೇಳಿದ್ದಾರೆ.
ಬಿಜೆಪಿ ಸಂಭ್ರಮಾಚರಣೆ ಶುರು
#MaharashtraPolitcalCrisis | Former Maharashtra CM & BJP leader Devendra Fadnavis along with state BJP chief Chandrakant Patil & other party leaders at Taj President hotel in Mumbai for a legislative meeting pic.twitter.com/9az7XBhq15
— ANI (@ANI) June 29, 2022
ಉದ್ಧವ್ ಠಾಕ್ರೆ ರಾಜೀನಾಮೆ ನೀಡುತ್ತಿದ್ದಂತೆ ಬಿಜೆಪಿ ಸಂಭ್ರಮಾಚರಣೆ ಆರಂಭಿಸಿದೆ. ಬಿಜೆಪಿ ಶಾಸಕರು ಜಮಾಯಿಸಿದ ಹೋಟೆಲ್ ತಾಜ್ ಪ್ರೆಸಿಡೆಂಟ್ ಗೆ ಸಿಹಿತಿಂಡಿಗಳನ್ನು ತಂದು ಖುಷಿ ಆಚರಿಸಿದ್ದಾರೆ.
Published On - 9:47 pm, Wed, 29 June 22