ಹರಿಯಾಣ ಫಲಿತಾಂಶದ ಅಪ್ಡೇಟ್ ವಿಳಂಬ; ಕಾಂಗ್ರೆಸ್ ಆರೋಪಕ್ಕೆ ಚುನಾವಣಾ ಆಯೋಗ ತಿರುಗೇಟು
ಹರಿಯಾಣ ಚುನಾವಣೆಯ ಫಲಿತಾಂಶಗಳನ್ನು ವೆಬ್‌ಸೈಟ್‌ನಲ್ಲಿ ಅಪ್ಡೇಟ್ ಮಾಡುವುದಕ್ಕೆ ವಿಳಂಬ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. ಇದಕ್ಕೆ ಉತ್ತರಿಸಿರುವ ಚುನಾವಣಾ ಆಯೋಗ, ಈ ಆರೋಪವನ್ನು ನಾವು ಒಪ್ಪುವುದಿಲ್ಲ. ಇದು ಆಧಾರರಹಿತ ಆರೋಪ ಎಂದು ಹೇಳಿದೆ.
ನವದೆಹಲಿ: ಹರಿಯಾಣ ವಿಧಾನಸಭೆ ಚುನಾವಣೆಯ ಫಲಿತಾಂಶಗಳನ್ನು ನವೀಕರಿಸುವಲ್ಲಿ ನಿಧಾನಗತಿಯ ಧೋರಣೆ ಕುರಿತು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಮಾಡಿದ ಆರೋಪಗಳನ್ನು ಚುನಾವಣಾ ಆಯೋಗ ತಳ್ಳಿಹಾಕಿದೆ. ಎಲ್ಲಾ ಕ್ಷೇತ್ರಗಳಲ್ಲಿ ಸುಮಾರು 25 ಸುತ್ತುಗಳನ್ನು ಪ್ರತಿ 5 ಮೀಟರ್‌ಗಳಿಗೆ ನವೀಕರಿಸಲಾಗುತ್ತಿದೆ. ಶಾಸನಬದ್ಧ ನಿಬಂಧನೆಗಳ ಪ್ರಕಾರ ಮತ ಎಣಿಕೆಯನ್ನು ಮಾಡಲಾಗುತ್ತಿದೆ ಎಂದು ಭಾರತದ ಚುನಾವಣಾ ಆಯೋಗವು ಪೋಸ್ಟ್ ಮಾಡಿದೆ.
ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಹರಿಯಾಣ ಚುನಾವಣಾ ಫಲಿತಾಂಶಗಳ ಅಪ್-ಟು-ಡೇಟ್ ಟ್ರೆಂಡ್‌ಗಳನ್ನು ಅಪ್‌ಲೋಡ್ ಮಾಡಲು ವಿಳಂಬವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದರು. ಆದರೆ ಹರಿಯಾಣ ವಿಧಾನಸಭಾ ಚುನಾವಣೆಯ ಮತ ಎಣಿಕೆ ದತ್ತಾಂಶವನ್ನು ಚುನಾವಣಾ ಸಮಿತಿಯ ವೆಬ್‌ಸೈಟ್‌ಗೆ ನವೀಕರಿಸುವಲ್ಲಿ ನಿಧಾನಗತಿಯ ಕಾಂಗ್ರೆಸ್ ಆರೋಪವನ್ನು ಚುನಾವಣಾ ಆಯೋಗ ಇಂದು ತಿರಸ್ಕರಿಸಿದೆ. ಕಾಂಗ್ರೆಸ್‌ನ ಆರೋಪಗಳು “ಬೇಜವಾಬ್ದಾರಿಯಿಂದ ಕೂಡಿದ, ಆಧಾರರಹಿತ ಮತ್ತು ದುರುದ್ದೇಶಪೂರಿತವಾಗಿದೆ” ಎಂದು ಚುನಾವಣಾ ಸಮಿತಿ ಹೇಳಿದೆ.
ಇದನ್ನೂ ಓದಿ: Haryana Election Result: ಹರಿಯಾಣದಲ್ಲಿ ಬಿಜೆಪಿ ಗೆಲುವು ಖಚಿತ; ಇಂದು ಸಂಜೆ ಪಕ್ಷದ ನಾಯಕರ ಜೊತೆ ಮೋದಿ ಸಭೆ
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಟ್ವೀಟ್ ಮಾಡಿ, “ಲೋಕಸಭಾ ಚುನಾವಣೆಗಳಂತೆ, ಹರಿಯಾಣದಲ್ಲಿ ನಾವು ಮತ್ತೆ ಇಸಿಐ ವೆಬ್‌ಸೈಟ್‌ನಲ್ಲಿ ನವೀಕೃತ ಟ್ರೆಂಡ್‌ಗಳನ್ನು ಅಪ್‌ಲೋಡ್ ಮಾಡುವ ನಿಧಾನಗತಿಯನ್ನು ನೋಡುತ್ತಿದ್ದೇವೆ. ಆಡಳಿತದ ಮೇಲೆ ಒತ್ತಡ ಹೇರಲು ಬಿಜೆಪಿ ಪ್ರಯತ್ನಿಸುತ್ತಿದೆಯೇ?” ಎಂದು ಪೋಸ್ಟ್ ಮಾಡಿದ್ದರು.
“EC dismisses unfounded allegations by Shri Jairam Ramesh regarding slowdown in updating results of #HaryanaElection2024. Approx. 25 rounds across all constituencies are being updated every 5 mts. Counting is being done as per statutory provisions,” posts Election Commission of… pic.twitter.com/zZ20LSt8XS
— Press Trust of India (@PTI_News) October 8, 2024
ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥರಾದ ಅಮಿತ್ ಮಾಳವಿಯಾ, “ಕಾಂಗ್ರೆಸ್ ಸೋತಾಗಲೆಲ್ಲಾ ಅಳುವ ಅಭ್ಯಾಸವನ್ನು ಹೊಂದಿದೆ. ಮೊದಲು ಅವರು ಇವಿಎಂ ಅನ್ನು ದೂಷಿಸುತ್ತಿದ್ದರು. ಈಗ ಅವರು ಚುನಾವಣಾ ಆಯೋಗದ ವೆಬ್‌ಸೈಟ್ ಅನ್ನು ದೂಷಿಸುತ್ತಿದ್ದಾರೆ ಎಂದಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ