ಚುನಾವಣೆಗೆ ಮುಂಚಿತವಾಗಿ ನಿಷ್ಠೆಯ ಪ್ರತಿಜ್ಞೆ ಸ್ವೀಕರಿಸಿದ ಗೋವಾ ಕಾಂಗ್ರೆಸ್ ಅಭ್ಯರ್ಥಿಗಳು
Pledge Of Loyalty ಗೋವಾದಲ್ಲಿ ಫೆಬ್ರವರಿ 14 ರ ವಿಧಾನಸಭಾ ಚುನಾವಣೆಗೆ ಕೆಲವೇ ವಾರಗಳ ಮೊದಲು, ಕಾಂಗ್ರೆಸ್ ಅಭ್ಯರ್ಥಿಗಳು ವಿವಿಧ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ, ಜನರು ಮತ್ತು ಪಕ್ಷಕ್ಕೆ "ನಿಷ್ಠರಾಗಿರುವುದಾಗಿ" ಪ್ರತಿಜ್ಞೆ ಮಾಡಿದ್ದಾರೆ.
ಪಣಜಿ: : ಚುನಾಯಿತ ಪ್ರತಿನಿಧಿಗಳು ಪಕ್ಷ ಬದಲಾಯಿಸುವ ಪರಿಪಾಠ ಮುಂದುವರಿಸದಂತೆ ಖಚಿತಪಡಿಸಿಕೊಳ್ಳಲು ಗೋವಾದಲ್ಲಿ ಕಾಂಗ್ರೆಸ್ (Congress) ಪಕ್ಷವು ಎಲ್ಲಾ ರೀತಿಯ ಕಸರತ್ತು ಮಾಡುತ್ತಿದೆ. ಗೋವಾದಲ್ಲಿ ಫೆಬ್ರವರಿ 14 ರ ವಿಧಾನಸಭಾ ಚುನಾವಣೆಗೆ (Goa Assembly Elections) ಕೆಲವೇ ವಾರಗಳ ಮೊದಲು, ಕಾಂಗ್ರೆಸ್ ಅಭ್ಯರ್ಥಿಗಳು ವಿವಿಧ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ, ಜನರು ಮತ್ತು ಪಕ್ಷಕ್ಕೆ “ನಿಷ್ಠರಾಗಿರುವುದಾಗಿ” ಪ್ರತಿಜ್ಞೆ ಮಾಡಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಳೆದ ಚುನಾವಣೆಯಿಂದ 17 ಶಾಸಕರ ಪೈಕಿ 15 ಶಾಸಕರು ಇತರ ಪಕ್ಷಗಳಿಗೆ ಪಕ್ಷಾಂತರಗೊಂಡಿರುವುದನ್ನು ಕಾಂಗ್ರೆಸ್ ಕಂಡಿದ್ದರಿಂದ ಈ ಕ್ರಮಗಳು ಬಂದಿವೆ. ಸದನದಲ್ಲಿ ಕಾಂಗ್ರೆಸ್‌ನ ಪ್ರಸ್ತುತ ಸಂಖ್ಯಾಬಲ ಎರಡು, ಆದರೆ ಬಿಜೆಪಿಯ 27 ಇದೆ. ಶನಿವಾರ ಪಕ್ಷವು ಟ್ವಿಟರ್‌ನಲ್ಲಿ ಹಂಚಿಕೊಂಡ ಫೋಟೋಗಳು ಮತ್ತು ವಿಡಿಯೊಗಳಲ್ಲಿ, ಗೋವಾದಾದ್ಯಂತ ಕಾಂಗ್ರೆಸ್ ಅಭ್ಯರ್ಥಿಗಳು ಮಹಾಲಕ್ಷ್ಮಿ ದೇವಸ್ಥಾನ, ಬಾಂಬೋಲಿಮ್ ಕ್ರಾಸ್ ಮತ್ತು ಹಮ್ಜಾ ಷಾ ದರ್ಗಾಕ್ಕೆ ಭೇಟಿ ನೀಡುತ್ತಿರುವುದು ಕಂಡುಬಂದಿದೆ. ಪಣಜಿಯ ಮಹಾಲಕ್ಷ್ಮಿ ದೇವಸ್ಥಾನ ಮತ್ತು ಕೊಂಕಣಿಯ ಬಾಂಬೋಲಿಮ್ ಕ್ರಾಸ್‌ನಲ್ಲಿ ಅರ್ಚಕರು ಚುನಾವಣೆಯಲ್ಲಿ ಗೆದ್ದ ನಂತರ ಕನಿಷ್ಠ ಐದು ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿ ಇರುವುದಾಗಿ ಪ್ರತಿಜ್ಞೆ ಮಾಡಿದ ಅಭ್ಯರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಅಭ್ಯರ್ಥಿಗಳು ನಂತರ ಬೇಟಿಮ್‌ನ ಮಸೀದಿಯಲ್ಲಿ ‘ಚಾದರ್’ ಅರ್ಪಿಸಿದರು.
ಕಾಂಗ್ರೆಸ್ ಹಿರಿಯ ನೇತಾರ ಪಿ ಚಿದಂಬರಂ, ಅಖಿಲ ಭಾರತ ಕಾಂಗ್ರೆಸ್ ಸಮಿತಿ ಗೋವಾ ಉಸ್ತುವಾರಿ ದಿನೇಶ್ ಗುಂಡೂರಾವ್, ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥ ಗಿರೀಶ್ ಚೋಡಂಕರ್ ಸೇರಿದಂತೆ ಹಿರಿಯ ನಾಯಕರು 34 ಅಭ್ಯರ್ಥಿಗಳೊಂದಿಗೆ ಪೂಜಾ ಸ್ಥಳಗಳಿಗೆ ತೆರಳಿದ್ದರು . ಜನರ ಮನಸ್ಸಿನಲ್ಲಿ ನಂಬಿಕೆಯನ್ನು ಮೂಡಿಸುವ ಸಲುವಾಗಿ, ಅಭ್ಯರ್ಥಿಗಳು ದೇವರ ಮುಂದೆ ಪ್ರಮಾಣ ಮಾಡುವ ಕ್ರಮ ಕೈಗೊಳ್ಳಲಾಯಿತು ಚೋಡಂಕರ್ ಹೇಳಿದರು.
Congress candidates take a pledge of loyalty at Bambolim Cross & assure loyalty to the Electorate & party. pic.twitter.com/wY6h5mGpSH
— Goa Congress (@INCGoa) January 23, 2022
“ನಾವು ಸಾರ್ವಜನಿಕರ ಮನಸ್ಸಿನಿಂದ ಯಾವುದೇ ಸಂದೇಹಗಳನ್ನು ತೆಗೆದುಹಾಕಲು ಪ್ರಯತ್ನಿಸಿದ್ದೇವೆ. ಕಾಂಗ್ರೆಸ್ ಗ್ರಹಿಕೆಯ ಬಗ್ಗೆ ಬಹಳ ಗಂಭೀರವಾಗಿದೆ. ರಾಜಕೀಯ ಪಕ್ಷಗಳು ನಮ್ಮ ಶಾಸಕರನ್ನು ಬೇಟೆಯಾಡುತ್ತಿವೆ. ಹಣ ನೀಡಿ ನಮ್ಮ ಶಾಸಕರನ್ನು ಖರೀದಿಸುವ ಪಕ್ಷಗಳ ವಿರುದ್ಧ ನಾವು ಹೆಚ್ಚು ಆಕ್ರಮಣಕಾರಿಯಾಗಬೇಕು” ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ದಿಗಂಬರ ಕಾಮತ್ ಹೇಳಿದರು.
ಕಳೆದ ಚುನಾವಣೆಯ ನಂತರ ಕಾಂಗ್ರೆಸ್ ತನ್ನ ಬಹುತೇಕ ಶಾಸಕರು ಪಕ್ಷವನ್ನು ತೊರೆಯುವುದನ್ನು ಕಂಡಿದೆ. 2017ರ ವಿಧಾನಸಭೆ ಚುನಾವಣೆಯ ನಂತರ 40 ಸದಸ್ಯ ಬಲದ ಸದನದಲ್ಲಿ 17 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದ್ದ ಪಕ್ಷವು ಸದನದಲ್ಲಿ ಕೇವಲ ಇಬ್ಬರು ಶಾಸಕರನ್ನು ಹೊಂದಿದೆ. 2019 ರಲ್ಲಿ 10 ಕಾಂಗ್ರೆಸ್ ಶಾಸಕರು ಆಡಳಿತಾರೂಢ ಬಿಜೆಪಿ ಸೇರಿದ್ದರು.
ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮಾತ್ರ ಪಕ್ಷಾಂತರ ನಿಲ್ಲಿಸಲು ಹೋರಾಟ ನಡೆಸುತ್ತಿಲ್ಲ. ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್‌ನ ಇತ್ತೀಚಿನ ವರದಿಯ ಪ್ರಕಾರ, ಕಳೆದ ಐದು ವರ್ಷಗಳಲ್ಲಿ 40 ಸದಸ್ಯ ಬಲದ ರಾಜ್ಯ ವಿಧಾನಸಭೆಯ ಒಟ್ಟು ಬಲದ 60 ಪ್ರತಿಶತದಷ್ಟು ಇರುವ ಕನಿಷ್ಠ 24 ಶಾಸಕರು ಗೋವಾದಲ್ಲಿ ಪಕ್ಷಾಂತರ ಮಾಡಿ ವಿಶಿಷ್ಟ ದಾಖಲೆಯನ್ನು ನಿರ್ಮಿಸಿದ್ದಾರೆ.
ಇತ್ತೀಚೆಗೆ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಆಮ್ ಆದ್ಮಿ ಪಕ್ಷ (ಎಎಪಿ) ತನ್ನ ಅಭ್ಯರ್ಥಿಗಳು ಚುನಾಯಿತರಾದರೆ ಪಕ್ಷವನ್ನು ತೊರೆಯುವುದಿಲ್ಲ ಎಂದು ಹೇಳುವ ಕಾನೂನು ಅಫಿಡವಿಟ್‌ಗಳಿಗೆ ಸಹಿ ಹಾಕಬೇಕು ಎಂದು ಘೋಷಿಸಿತ್ತು. ಗೋವಾದಲ್ಲಿ ಫೆಬ್ರವರಿ 14 ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ: ನಾನು ಮುಸ್ಲಿಂ ಎಂಬ ಕಾರಣಕ್ಕೆ ನನ್ನನ್ನು ಸಚಿವ ಸ್ಥಾನದಿಂದ ವಜಾಗೊಳಿಸಿದರು: ಬ್ರಿಟನ್ ಮಾಜಿ ಸಚಿವೆ ನುಸ್ರತ್ ಘನಿ