HP Election Results LIVE Streaming: ಇಂದು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಫಲಿತಾಂಶ; ನೇರ ಪ್ರಸಾರ ಎಲ್ಲಿ, ಯಾವಾಗ ನೋಡಬಹುದು?

| Updated By: Digi Tech Desk

Updated on: Dec 08, 2022 | 1:32 AM

Himachal Pradesh Vidhan Sabha Elections Result 2022 LIVE Streaming:ಮತಗಳ ಎಣಿಕೆಯು ಇಂದು ಡಿಸೆಂಬರ್ 8, 2022 ರಂದು ಬೆಳಿಗ್ಗೆ 8 ರಿಂದ ಪ್ರಾರಂಭವಾಗುತ್ತದೆ. ಸುಮಾರು 10 ಕೇಂದ್ರಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಮತ ಎಣಿಕೆಯ ನಂತರ ಇಂದೇ ಫಲಿತಾಂಶ ಪ್ರಕಟವಾಗಲಿದೆ

HP Election Results LIVE Streaming: ಇಂದು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಫಲಿತಾಂಶ; ನೇರ ಪ್ರಸಾರ ಎಲ್ಲಿ, ಯಾವಾಗ ನೋಡಬಹುದು?
Himachal Pradesh Assembly Elections Results 2022
Follow us on

ಈ ವರ್ಷ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿನ (Himachal Pradesh Assembly Elections) ಫಲಿತಾಂಶವು ‘ರಾಜ್’ (ಅಧಿಕಾರದಲ್ಲಿರುವ ಸರ್ಕಾರ) vs ‘ರಿವಾಜ್’ (ಸಾಂಪ್ರದಾಯಿಕ ಮತದಾನದ ಫಲಿತಾಂಶ)ಆಗಲಿದೆ . ಈ ವರ್ಷ, ಹಿಮಾಚಲ ಪ್ರದೇಶ ವಿಧಾನಸಭೆಗೆ ಕಳೆದ ತಿಂಗಳು ನವೆಂಬರ್ 12 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದಿತ್ತು. ಈ ವರ್ಷ ಅಂತಿಮ ಮತದಾನದ ಪ್ರಮಾಣ ಶೇ.74 ರಷ್ಟಿತ್ತು. ಇದು 2017 ರ ಅಂಕಿಅಂಶಗಳಿಗಿಂತ ಸ್ವಲ್ಪ ಕಡಿಮೆಯಾಗಿದೆ. ಈ ವರ್ಷ, ಡೂನ್ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇಕಡಾ 85.25 ಮತದಾನವಾಗಿದೆ. ಶಿಮ್ಲಾದಲ್ಲಿ ಅತೀ ಕಡಿಮೆ ಅಂದರೆ 62.53 ರಷ್ಟು ಮತದಾನವಾಗಿದೆ.

ಮತ ಎಣಿಕೆ ಯಾವಾಗ?

ಮತಗಳ ಎಣಿಕೆಯು ಇಂದು ಅಂದರೆ ಡಿಸೆಂಬರ್ 8, 2022 ರಂದು ಬೆಳಿಗ್ಗೆ 8 ರಿಂದ ಪ್ರಾರಂಭವಾಗುತ್ತದೆ. ಸುಮಾರು 10 ಕೇಂದ್ರಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಮತ ಎಣಿಕೆಯ ನಂತರ ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ. 68 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಅಂತಿಮವಾಗಿ ಯಾರು ಅಧಿಕಾರ ವಹಿಸಿಕೊಳ್ಳುತ್ತಾರೆ ಎಂಬುದು ಸ್ಪಷ್ಟವಿಲ್ಲ.

ಇದನ್ನೂ ಓದಿ
Assembly Election Results LIVE Streaming: ಇಂದು ಗುಜರಾತ್ ಚುನಾವಣೆ ಫಲಿತಾಂಶ: ಎಲ್ಲಿ, ಯಾವಾಗ ನೇರ ಪ್ರಸಾರ?
ಎಕ್ಸಿಟ್ ಪೋಲ್ ಪ್ರಕಾರ ಮತ್ತೊಂದು ಅವಧಿಗೆ ಗುಜರಾತ್​ನಲ್ಲಿ ಬಿಜೆಪಿಗೆ ಅಧಿಕಾರ ಕೊಡಲು ಕಾರಣಗಳೇನು? ಮೋದಿಗೆ ಗೆಲುವು ಯಾಕೆ?
ಹಿಮಾಚಲ ಪ್ರದೇಶ-ಗುಜರಾತ್ ಎಕ್ಸಿಟ್ ಪೋಲ್ ಕರ್ನಾಟಕ ಚುನಾವಣೆ ಮೇಲೂ ಪರಿಣಾಮ ಬೀರುತ್ತೆ: ಸಿಎಂ ಬೊಮ್ಮಾಯಿ ವಿಶ್ವಾಸ

ಫಲಿತಾಂಶಗಳ ನೇರ ಪ್ರಸಾರ ಎಲ್ಲಿ?

ಟಿವಿ9, ಆಜ್ ತಕ್, ಇಂಡಿಯಾ ಟುಡೆ, ಎನ್‌ಡಿಟಿವಿ, ಎಬಿಪಿ ನ್ಯೂಸ್, ಟೈಮ್ಸ್ ನೌ, ಝೀ ನ್ಯೂಸ್ ಮತ್ತು ರಾಷ್ಟ್ರೀಯ ಬ್ರಾಡ್‌ಕಾಸ್ಟರ್ ಡಿಡಿ ನ್ಯೂಸ್‌ನಂತಹ ಎಲ್ಲಾ ಸುದ್ದಿ ವಾಹಿನಿಗಳು ಹಿಮಾಚಲ ಪ್ರದೇಶದ ಫಲಿತಾಂಶಗಳ ನೇರ ಪ್ರಸಾರ ಮಾಡಲಿವೆ. ನಮ್ಮ ವೆಬ್ ಸೈಟ್ ಟಿವಿ9 ಕನ್ನಡ ಡಾಟ್ ಕಾಂಮ್​ನಲ್ಲಿ ಚುನಾವಣಾ ಫಲಿತಾಂಶದ ಮಾಹಿತಿ ಪಡೆಯಬಹುದು. ಭಾರತೀಯ ಚುನಾವಣಾ ಆಯೋಗವು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಇತ್ತೀಚಿನ ಟ್ರೆಂಡ್ ಪ್ರಕಟಿಸುತ್ತದೆ.

ಹಿಮಾಚಲ ಪ್ರದೇಶದ ಪ್ರಮುಖ ಕ್ಷೇತ್ರಗಳು ಯಾವುವು?

ಸೆರಾಜ್, ನಲಗಢ,  ಕಿನ್ನೌರ್ ಮತ್ತು ಧರ್ಮಶಾಲಾ, ಡಾಲ್‌ಹೌಸಿ, ನಾದೌನ್, ರೂರಲ್ ಶಿಮ್ಲಾ,  ಫತೇಪುರ್, ಹಮೀರ್‌ಪುರ್, ಡೆಹ್ರಾ, ಕುಲ್ಲಾ, ನಲಗಢ್, ಕಾರ್ಸೋಗ್, ಮಂಡಿ, ಉನಾ ಮತ್ತು ಬರ್ಸರ್ ಪ್ರಮುಖ ಕ್ಷೇತ್ರಗಳಾಗಿವೆ. ಹಿಮಾಚಲ ಅಸೆಂಬ್ಲಿ ಚುನಾವಣೆ 2022 ರ ಪ್ರಮುಖ ಅಭ್ಯರ್ಥಿಗಳೆಂದರೆ ರಾಜೀವ್ ಸೈಜಾಲ್ (ಬಿಜೆಪಿ)- ಕಸೌಲಿ ಸ್ಥಾನ, ಮುಖೇಶ್ ಅಗ್ನಿಹೋತ್ರಿ (ಕಾಂಗ್ರೆಸ್)- ಹರೋಲಿ ಸ್ಥಾನ, ವಿಕ್ರಮಾದಿತ್ಯ ಸಿಂಗ್ (ಕಾಂಗ್ರೆಸ್)- ಗ್ರಾಮೀಣ ಶಿಮ್ಲಾ ಸ್ಥಾನ, ಜೈರಾಮ್ ಠಾಕೂರ್ (ಬಿಜೆಪಿ)- ಸೆರಾಜ್ ಸ್ಥಾನ, ಮತ್ತು ಸರ್ವೀನ್ ಚೌಧರಿ (ಬಿಜೆಪಿ)- ಶಹಪುರ ಕ್ಷೇತ್ರ.

ಹಿಮಾಚಲ ಪ್ರದೇಶದ ಹಿಂದಿನ ವಿಧಾನಸಭಾ ಚುನಾವಣೆಗಳು

ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸತತ ಎರಡನೇ ಅವಧಿಗೆ ಅಧಿಕಾರಕ್ಕೇರಲು ಸ್ಪರ್ಧಿಸುತ್ತಿದೆ, ಆದರೆ ಕಾಂಗ್ರೆಸ್ ಪಕ್ಷವು ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ರಾಜ್ಯದಲ್ಲಿ ಮೂರನೇ ಪ್ರಮುಖ ರಾಜಕೀಯ ಶಕ್ತಿಯಾಗಿ ಆಮ್ ಆದ್ಮಿ ಪಕ್ಷ ಹೊರಹೊಮ್ಮಿರುವುದರಿಂದ ಹಿಮಾಚಲ ಪ್ರದೇಶದಲ್ಲಿ ಈ ಬಾರಿ ಚುನಾವಣಾ ಹೋರಾಟ ತೀವ್ರವಾಗಿದೆ. 2017ರಲ್ಲಿ ಕಾಂಗ್ರೆಸ್‌ಗೆ ಕೇವಲ 21 ಸ್ಥಾನಗಳಿದ್ದಿದ್ದು ಬಿಜೆಪಿ 44 ಸ್ಥಾನಗಳನ್ನು ಪಡೆದು ಸರ್ಕಾರ ರಚಿಸಿತ್ತು.

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 5:54 pm, Wed, 7 December 22