AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೇನುಗೂಡಿಗೆ ಕೈಹಾಕಿ ಕಡಿಸಿಕೊಂಡರೂ ನಾನು ಮೀಸಲಾತಿ ಕೊಟ್ಟಿದ್ದೇನೆ: ಸಿಎಂ ಬೊಮ್ಮಾಯಿ

ಸಮಾಜದ ಮೀಸಲಾತಿ ಬೇಡಿಕೆ ಮುಂದೆ ಹಾಕಿ ಕೆಲವರು ಅನುಭವಿಸಿದರು. ಮುಂಬರುವ ದಿನ ಒಗ್ಗಟ್ಟಾಗಿ ಒಂದಾಗಿ ನಾಡು ಕಟ್ಟುವ ಸಂಕಲ್ಪ ಮಾಡೋಣ. ಪಂಚಮಸಾಲಿ ಸಮುದಾಯದ ಬೆಂಬಲ, ಮಾರ್ಗದರ್ಶನ ನನ್ನ ಮೇಲಿದೆ. ಎಲ್ಲ ಸಮುದಾಯಕ್ಕೆ ನ್ಯಾಯ ಕೊಡುವ ಕೆಲಸ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಜೇನುಗೂಡಿಗೆ ಕೈಹಾಕಿ ಕಡಿಸಿಕೊಂಡರೂ ನಾನು ಮೀಸಲಾತಿ ಕೊಟ್ಟಿದ್ದೇನೆ: ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ವಿವೇಕ ಬಿರಾದಾರ
|

Updated on:Mar 26, 2023 | 2:51 PM

Share

ಹಾವೇರಿ: ಜೇನುಗೂಡಿಗೆ ಕೈಹಾಕಿ ಕಡಿಸಿಕೊಂಡರೂ ನಾನು ಮೀಸಲಾತಿ ಕೊಟ್ಟಿದ್ದೇನೆ. ಬೇರೆಯವರ ರೀತಿ ಮೀಸಲಾತಿ (Reservation) ಬೇಡಿಕೆ ವಿಚಾರವನ್ನು ಮುಂದೆ ಹಾಕಬಹುದಿತ್ತು. ಸಮಾಜದ ಮೀಸಲಾತಿ ಬೇಡಿಕೆ ಮುಂದೆ ಹಾಕಿ ಕೆಲವರು ಅನುಭವಿಸಿದರು. ಮುಂಬರುವ ದಿನ ಒಗ್ಗಟ್ಟಾಗಿ ಒಂದಾಗಿ ನಾಡು ಕಟ್ಟುವ ಸಂಕಲ್ಪ ಮಾಡೋಣ. ಪಂಚಮಸಾಲಿ (Panchamasali) ಸಮುದಾಯದ ಬೆಂಬಲ, ಮಾರ್ಗದರ್ಶನ ನನ್ನ ಮೇಲಿದೆ. ಎಲ್ಲ ಸಮುದಾಯಕ್ಕೆ ನ್ಯಾಯ ಕೊಡುವ ಕೆಲಸ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಹೇಳಿದ್ದಾರೆ.

ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಶಕುನಿ ಎಂದು ಸುರ್ಜೇವಾಲ ಹೇಳಿಕೆ ವಿಚಾರವಾಗಿ ಮಾತನಾಡಿದ ಸಿಎಂ ಬೊಮ್ಮಾಯಿ ರಣದೀಪ್ ಸಿಂಗ್ ಸುರ್ಜೇವಾಲ ಸರ್ಟಿಫಿಕೇಟ್ ನನಗೆ ಬೇಕಾಗಿಲ್ಲ. ಕರ್ನಾಟಕದ ಜನ ನನ್ನನ್ನು ಕಾಮನ್​ಮ್ಯಾನ್ ಸಿಎಂ ಅಂತ ಹೇಳಿದ್ದಾರೆ. ನಾನು ಕಾಮನ್ ಆಗಿಯೇ ಇರುತ್ತೇನೆ. ಯಾರು ಶಕುನಿ ಯಾರು ದುರ್ಯೋಧನ ಎಂಬುವುದು ಜನರಿಗೆ ಗೊತ್ತಿದೆ. ರಣದೀಪ್ ಸಿಂಗ್ ಸುರ್ಜೇವಾಲ ಏನು ಬೇಕಾದರೂ ಹೇಳಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: ಮೀಸಲಾತಿ: ಶ್ರೀಗಳಿಗೆ 25 ಬಾರಿ ಕರೆ​ ಮಾಡಿ ಒಪ್ಪಿಕೊಳ್ಳಿ ಎಂದು ಒತ್ತಡ ಹಾಕಿದ್ದಾರೆ: ಡಿಕೆ ಶಿವಕುಮಾರ್ ಸ್ಫೋಟಕ ಆರೋಪ

ಮೀಸಲಾತಿ ವಿಚಾರವಾಗಿ ಸ್ವಾಮೀಜಿಗಳಿಗೆ ಒತ್ತಡ ಹಾಕಿದ್ದರು ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಆರೋಪದ ವಿಚಾರವಾಗಿ ಮಾತನಾಡಿದ ಅವರು ಯಾವುದೇ ಒತ್ತಡ ಹಾಕಿಲ್ಲ, ಬೇಕಾದರೇ ಪ್ರಮಾಣ ಮಾಡಿ ಹೇಳುತ್ತೇನೆ. ಸ್ವಾಮೀಜಿಗಳಿಗೆ ಫೋನ್​ ಮಾಡಿ ಒತ್ತಡ ಹಾಕುವ ಕೆಲಸ ಮಾಡಿಲ್ಲ. ಈ ರೀತಿ ಯಾರು ಹೇಳಿದ್ದಾರೋ ಅವರಿಗೇ ಬಿಡುತ್ತೇನೆ. ಹಲವು ವಿಚಾರ ಬಂದಾಗ ಎಲ್ಲವನ್ನೂ ಬಹಿರಂಗ ಮಾಡಲು ಆಗಲ್ಲ. ವಚನಾನಂದ ಸ್ವಾಮೀಜಿ ಸೈದ್ಧಾಂತಿಕವಾಗಿ ಸಹಕಾರ ನೀಡಿದ್ದಾರೆ. ಮೀಸಲಾತಿಗಾಗಿ ಜಯಮೃತ್ಯುಂಜಯ ಶ್ರೀ ಹೋರಾಟ ಮಾಡಿದ್ದಾರೆ. ಶ್ರೀಗಳ ಹೋರಾಟವೂ ಮೀಸಲಾತಿ ಹೆಚ್ಚಳಕ್ಕೆ ಕಾರಣವಾಯಿತು ಎಂದರು.

ಅನೇಕ ಬಾರಿ ಸಿಎಂ ಬೊಮ್ಮಾಯಿ ಜೊತೆ ಜಗಳ ಮಾಡಿದ್ದೇನೆ

ಪಂಚಮಸಾಲಿ ಸಮುದಾಯಕ್ಕೆ ಸಿಎಂ ಅಪಾರ ಕೊಡುಗೆ ನೀಡಿದ್ದಾರೆ ಎಂದು ವಚನಾನಂದ ಸ್ವಾಮೀಜಿ ಅವರು ಸಿಎಂರನ್ನು ಅಭಿನಂದಿಸಿದರು. ರಾಜ್ಯದಲ್ಲಿ ಈ ಹಿಂದೆ ಮುಖ್ಯಮಂತ್ರಿ ಆದವರು ಎಲ್ಲರೂ ಹೇಳುತ್ತಿದ್ದರು. ಮೀಸಲಾತಿ ಎಂಬುವುದು ಜೇನುಗೂಡು ಅದಕ್ಕೆ ಕೈ ಹಾಕುವುದು ಸರಿ ಅಲ್ಲ ಅಂತ. ನಾನು ಜೇನು ಹುಳುವಿನಿಂದ ಕಡಿಸಿಕೊಂಡರೂ ಪರವಾಗಿಲ್ಲ ಜನರಿಗೆ ಜೇನಿನ ಸಿಹಿ ಕೊಡಬೇಕೆಂದು ಸಿಎಂ ಬಸವರಾಜ ಬೊಮ್ಮಾಯಿಯವರು ಮೀಸಲಾತಿ ನೀಡುವ ತೀರ್ಮಾನ ಮಾಡಿದರು. ಪಂಚಮಸಾಲಿಯವರೆ ಮುಖ್ಯಮಂತ್ರಿ ಆಗಿದ್ದರೂ ಇದನ್ನು ಮಾಡೋಕೆ ಆಗುತ್ತಿರಲಿಲ್ಲ. ಮೀಸಲಾತಿ ವಿಚಾರದಲ್ಲಿ ಅನೇಕ ಬಾರಿ ಸಿಎಂ ಜೊತೆ ಚರ್ಚೆಗಳನ್ನು ಮಾಡಿದ್ದೇವೆ. ಕೆಲವು ರಹಸ್ಯ ಚರ್ಚೆಗಳನ್ನು ಬಹಿರಂಗ ಗೊಳಿಸುವುದಕ್ಕೆ ಆಗಲ್ಲ ಎಂದು ವಚನಾನಂದ ಸ್ವಾಮೀಜಿ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:44 pm, Sun, 26 March 23