ಶಿಗ್ಗಾಂವಿನಲ್ಲಿ ಪಂಚಮಸಾಲಿ ಸಮುದಾಯ ಭವನ ಉದ್ಘಾಟನೆ, ಭವನದೊಳಗೆ ತಂದೆ-ತಾಯಿ ಭಾವಚಿತ್ರ ಕಂಡು ಸಿಎಂ ಭಾವುಕ

ಹಾವೇರಿಯ ಶಿಗ್ಗಾಂವಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪಂಚಮಸಾಲಿ ಸಮುದಾಯ ಭವನ ಉದ್ಘಾಟಿಸಿರು. ಈ ವೇಳೆ ಸಮುದಾಯ ಭವನದೊಳಗೆ ಹಾಕಿದ್ದ ತಂದೆ-ತಾಯಿ ಭಾವಚಿತ್ರ ಕಂಡು ಭಾವುಕರಾದರು.

ಶಿಗ್ಗಾಂವಿನಲ್ಲಿ ಪಂಚಮಸಾಲಿ ಸಮುದಾಯ ಭವನ ಉದ್ಘಾಟನೆ, ಭವನದೊಳಗೆ ತಂದೆ-ತಾಯಿ ಭಾವಚಿತ್ರ ಕಂಡು ಸಿಎಂ ಭಾವುಕ
ಬಸವರಾಜ ಬೊಮ್ಮಾಯಿ
Follow us
ಆಯೇಷಾ ಬಾನು
|

Updated on:Mar 26, 2023 | 2:05 PM

ಹಾವೇರಿ: ಸಿಎಂ ಬಸವರಾಜ ಬೊಮ್ಮಾಯಿಯವರು ಹಾವೇರಿ ಜಿಲ್ಲೆ ಶಿಗ್ಗಾಂವಿ ಹೊರವಲಯದಲ್ಲಿ ಸುಮಾರು 6 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಪಂಚಮಸಾಲಿ ಸಮುದಾಯ ಭವನ ಉದ್ಘಾಟಿಸಿದರು. ಹಾಗೂ ಹರಧ್ಯಾನ ಮಂದಿರ ಶಂಕುಸ್ಥಾಪನೆ ನೆರವೇರಿಸಿದರು. ಕಟ್ಟಡ ನಿರ್ಮಾಣ ಹಂತದಲ್ಲಿರುವಾಗಲೇ ಸಮುದಾಯ ಭವನ ಉದ್ಘಾಟನೆ ಮಾಡಲಾಗಿದೆ. ಇನ್ನು ಮತ್ತೊಂದೆಡೆ ಕಾರ್ಯಕ್ರಮದಲ್ಲಿ ಸಿಎಂ ಕಣ್ಣೀರು ಹಾಕಿದ ಪ್ರಸಂಗ ನಡೆದಿದೆ. ಸಮುದಾಯ ಭವನದೊಳಗೆ ಹಾಕಿದ್ದ ತಂದೆ-ತಾಯಿ ಭಾವಚಿತ್ರ ಕಂಡು ಸಿಎಂ ಭಾವುಕರಾದರು. ಈ ವೇಳೆ ಸಚಿವ ಸಿ.ಸಿ.ಪಾಟೀಲ್ ಸಿಎಂ ಬೊಮ್ಮಾಯಿರನ್ನು ಸಮಾಧಾನಪಡಿಸಿದರು.

ಕಾರ್ಯಕ್ರಮದ ನಂತರ ಮಾತನಾಡಿದ ಸಿಎಂ ಬೊಮ್ಮಾಯಿ, ನಾನು ಸಿಎಂ ಆದ ಮೇಲೆ ಸ್ಕಿಲ್​ ಇಂಡಿಯಾ ಯೋಜನೆಯಡಿ 1.80 ಲಕ್ಷ ಯುವಕರಿಗೆ ತರಬೇತಿ ನೀಡಲಾಗುತ್ತಿದೆ. ಅಲ್ಪಾವಧಿಯಲ್ಲಿ ತರಬೇತಿ ನೀಡಿ ಉದ್ಯೋಗ ನೀಡಲು ಚಿಂತನೆ ನಡೆಸಿದ್ದೇವೆ. ಯುವಕರಿಗೆ ಉದ್ಯೋಗ ಸಿಕ್ಕಾಗ ಮಾತ್ರ ಆರ್ಥಿಕತೆ ಸುಧಾರಣೆ ಸಾಧ್ಯತೆ. ರಾಜ್ಯದಲ್ಲಿ ಆರ್ಥಿಕತೆ ಕಾಪಾಡಿಕೊಂಡು ಬಂದಿದಕ್ಕೆ ಖಾಸಗಿ ವಲಯದಲ್ಲಿ ಪ್ರತಿ ವರ್ಷ 13 ಲಕ್ಷ ಉದ್ಯೋಗ ಸೃಷ್ಟಿ ಆಗುತ್ತಿದೆ. ಶಂಕುಸ್ಥಾಪನೆಯಾದ ಜಿಟಿಡಿಸಿ ಕೇಂದ್ರ ರಾಜ್ಯಕ್ಕೆ ಮಾದರಿ ಆಗಬೇಕು ಎಂದರು.

ಪಿಯುಸಿ ಫೇಲ್​ ಆದವರಿಗೂ ಕೌಶಲ್ಯಾಭಿವೃದ್ಧಿಯಡಿ ನೌಕರಿ ನೀಡುವ ಗುರಿ ಹೊಂದಿದ್ದೇವೆ. ಡಿಪ್ಲೊಮಾ, ಇಂಜಿನಿಯರಿಂಗ್​​​​ ಓದಿದವರಿಗೆ ಮಾತ್ರ ನೌಕರಿ ಅಲ್ಲ. ಪಿಯು ಫೇಲಾದವರಿಗೂ ತರಬೇತಿ ನೀಡಿ ನೌಕರಿ ಕೊಡಿಸುವ ಗುರಿ ಇದೆ. ನಮ್ಮ ತಾಲೂಕಿನ ಸಾವಿರಾರು ಯುವಕರಿಗೆ ಉದ್ಯೋಗ ಸಿಗಲಿದೆ‌. ಕಳೆದ ನಾಲ್ಕು ವರ್ಷದಲ್ಲಿ ಕೋವಿಡ್ ಇದ್ದರು, ಪ್ರತಿ ವರ್ಷವು ಖಾಸಗಿ ವಲಯದಲ್ಲಿ 13 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ಸುಮ್ಮನೆ ಹೇಳುತಿಲ್ಲ. ದಾಖಲೆ ಸಮೇತ ಹೇಳುತ್ತಿದ್ದೇನೆ. ಮುಂದೆ ಸಹ ಕರ್ನಾಟಕದ ಜನರಿಗೆ ಕೈಗೆ ಕೆಲಸ ಕೊಡಲಾಗುವುದು. ಜಗತ್ತಿನ ಆಧುನಿಕತೆಯ ತರಬೇತಿಯನ್ನ GTTC ಯಲ್ಲಿ ನೀಡಲಾಗುತ್ತದೆ. ತರಬೇತಿ ಮತ್ತು ಉದ್ಯೋಗ ಸೃಷ್ಟಿ ಯೋಜನೆ ಶಿಗ್ಗಾಂವ ಕ್ಷೇತ್ರದಲ್ಲಿ ಮಾಡಲಾಗುತ್ತಿದೆ. ಇದು ಸುವರ್ಣ ಯುಗದ ಕಾಲ. ಯುವಕ, ಯುವತಿಯರು ಉತ್ತಮವಾದ ತರಬೇತಿ ಪಡೆದು ನೌಕರಿ ಮಾಡಬೇಕು ಎಂದು ಸಿಎಂ ಯುವಕ-ಯುವತಿಯರಲ್ಲಿ ವಿಶ್ವಾಸ ಮೂಡಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿವೃದ್ಧಿಯ ಕೈಗನ್ನಡಿ

ಮತ್ತೊಂದೆಡೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಭಾಷಣ ಮಾಡಿದರು. 74 ಕೋಟಿ ರುಪಾಯಿ ವೆಚ್ಚದಲ್ಲಿ GTTC ಮಾಡಿದ್ದು ಐತಿಹಾಸಿಕ ಯೋಜನೆ. ಜಿಲ್ಲಾಕೇಂದ್ರದಲ್ಲಿ ಇರಲಾರದನ್ನು ತಾಲೂಕು ಕೇಂದ್ರದಲ್ಲಿ ಮಾಡಲಾಗಿದೆ. ಎಲ್ಲಾ ಪ್ರಮುಖ ದೇಶಗಳು ಆರ್ಥಿಕ ಹಿನ್ನಡೆಯಾಗಿದೆ. ಆದರೆ ನಮ್ಮ ದೇಶ ಆರ್ಥಿಕವಾಗಿ ಮುನ್ನಡೆಯಾಗುತ್ತಿದೆ‌. ವೇಗವಾಗಿ ನಮ್ಮ ದೇಶ ಮುನ್ನಗುತ್ತಿದೆ. ದೇಶದಲ್ಲಿ ಅನೇಕ ಬದಲಾವಣೆಗಳಾಗುತ್ತಿವೆ. ಕೌಶಲ್ಯಗಳ ಅಭಿವೃದ್ಧಿ ಆಗುತ್ತಿದೆ. ಕೇಂದ್ರದಲ್ಲಿ ಮೋದಿ ಅವರು ಮಾಡಿದ್ರೆ ರಾಜ್ಯದಲ್ಲಿ ಬೊಮ್ಮಾಯಿಯವರಿಂದ ಕೌಶಲ್ಯ ಅಭಿವೃದ್ಧಿಯಾಗಿದೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿವೃದ್ಧಿಯ ಕೈಗನ್ನಡಿ. ಹಲವು ಅಡೆತಡೆ ಬಂದರೂ ಭೂಮಿ ಪೂಜೆ ಮಾಡಿ ಉದ್ಘಾಟಿಸಿದ್ದಾರೆ. ಸಬ್​ಕಾ ಸಾಥ್ ಸಬ್​ಕಾ ವಿಕಾಸ್ ಮಾತಿನಂತೆ ನಡೆದುಕೊಳ್ತಿದ್ದೇವೆ. ಬಸವರಾಜ ಬೊಮ್ಮಾಯಿ ಸರ್ಕಾರ ಎಲ್ಲರಿಗೂ ನ್ಯಾಯ ಒದಗಿಸಿದೆ. ಮೀಸಲಾತಿಗೆ ಕೈ ಹಾಕಿದಾಗ ಒಂದಿಲ್ಲೊಂದು ಗಲಾಟೆ ಶುರುವಾಯ್ತು. ಸಿಎಂ ಬೊಮ್ಮಾಯಿಯವರು ನ್ಯಾಯಯುತ ಮೀಸಲಾತಿ ನೀಡಿದ್ದಾರೆ. 2D ಪ್ರವರ್ಗ ಅಡಿ ಪಂಚಮಸಾಲಿ ಸಮುದಾಯಕ್ಕೆ 7% ಮೀಸಲಾತಿ ನೀಡಿ ಪಂಚಮಸಾಲಿ ಸಮುದಾಯದಕ್ಕೆ ಸಿಎಂ ನ್ಯಾಯ ಒದಗಿಸಿದ್ದಾರೆ. ಬೊಮ್ಮಾಯಿ ತೆಗೆದುಕೊಂಡ ನಿರ್ಣಯಕ್ಕೆ ವಿಪಕ್ಷದವರು ಮಾತಾಡ್ತಿಲ್ಲ. ಎಲ್ಲಾ ಸಮಸ್ಯೆ ಪರಿಗಣಿಸಿ ಉತ್ತಮವಾದ ಮೀಸಲಾತಿ ನೀಡಿದ್ದೇವೆ. ಪಂಚಮಸಾಲಿ ಜೊತೆಗೆ ಬೇರೆ ಸಮಾಜಕ್ಕೂ ಒಳಮೀಸಲಾತಿ ನೀಡಿದ್ದಾರೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು.

ಅನೇಕ ಬಾರಿ ಸಿಎಂ ಬೊಮ್ಮಾಯಿ ಜೊತೆ ಜಗಳ ಮಾಡಿದ್ದೇನೆ

ಪಂಚಮಸಾಲಿ ಸಮುದಾಯಕ್ಕೆ ಸಿಎಂ ಅಪಾರ ಕೊಡುಗೆ ನೀಡಿದ್ದಾರೆ ಎಂದು ಕಾರ್ಯಕ್ರಮದಲ್ಲಿ ವಚನಾನಂದ ಸ್ವಾಮೀಜಿ ಅವರು ಸಿಎಂರನ್ನು ಅಭಿನಂದಿಸಿದರು. ರಾಜ್ಯದಲ್ಲಿ ಈ ಹಿಂದೆ ಮುಖ್ಯಮಂತ್ರಿ ಆದವರು ಎಲ್ರೂ ಹೇಳುತ್ತಿದ್ದರು. ಮೀಸಲಾತಿ ಎಂಬುವುದು ಜೇನುಗೂಡು ಅದಕ್ಕೆ ಕೈ ಹಾಕುವುದು ಸರಿ ಅಲ್ಲ ಅಂತ. ನಾನು ಜೇನು ಹುಳುವಿನಿಂದ ಕಡಿಸಿಕೊಂಡ್ರು ಪರವಾಗಿಲ್ಲ ಜನರಿಗೆ ಜೇನಿನ ಸಿಹಿ ಕೊಡಬೇಕೆಂದು ಸಿಎಂ ಬಸವರಾಜ ಬೊಮ್ಮಾಯಿಯವರು ಮೀಸಲಾತಿ ನೀಡುವ ತೀರ್ಮಾನ ಮಾಡಿದ್ರು. ಪಂಚಮಸಾಲಿಯವರೆ ಮುಖ್ಯಮಂತ್ರಿ ಆಗಿದ್ರೂ ಇದನ್ನು ಮಾಡೋಕೆ ಆಗ್ತಾ ಇರಲಿಲ್ಲ. ಮೀಸಲಾತಿ ವಿಚಾರದಲ್ಲಿ ಅನೇಕ ಬಾರಿ ಸಿಎಂ ಜೊತೆ ಚರ್ಚೆ ಗಳನ್ನು ಮಾಡಿದ್ದೇವೆ. ಕೆಲವು ರಹಸ್ಯ ಚರ್ಚೆಗಳನ್ನು ಬಹಿರಂಗ ಗೊಳಿಸುವುದಕ್ಕೆ ಆಗಲ್ಲ.

ರಾಜ್ಯ ಮತ್ತು ಕೇಂದ್ರದ ನಡುವಿನ ಬ್ರಿಡ್ಜ್ ಅಂದ್ರೆ ಪ್ರಹ್ಲಾದ್ ಜೋಶಿ. ಇಂದು ಉದ್ಘಾಟನೆ ಮಾಡಿರುವ ಪಂಚಮಸಾಲಿ ಭವನ ಕೇವಲ ಆರು ತಿಂಗಳಲ್ಲಿ ಉದ್ಘಾಟನೆ ಮಾಡಿದ್ದೇವೆ. ಪಂಚಮಸಾಲಿ ಸಮುದಾಯಕ್ಕೆ ಸಿಎಂ ಬೊಮ್ಮಾಯಿಯವರು ಬಹಳಷ್ಟು ಕೊಡುಗೆ ನೀಡಿದ್ದಾರೆ. ಮೀಸಲಾತಿ ವಿಚಾರದಲ್ಲಿ ಕೆಲವರು ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ. 2% ಮೀಸಲಾತಿ ಜಾಸ್ತಿ ಮಾಡಿರುವುದು ಸಾಮಾನ್ಯ ಸಂಗತಿ ಅಲ್ಲ. ಅನೇಕ ಬಾರಿ ನಾನು ಬೊಮ್ಮಾಯಿ ಜಗಳ ಮಾಡಿದ್ದೇವೆ. ಮಾಡಿದ ಜಗಳ ಆ ಸಮಯಕ್ಕೆ ಇರುತ್ತದೆ ಹೊರೆತು ಅದನ್ನು ಮುಂದುವರೆಸಿ ದ್ವೇಷ ಮಾಡಿಲ್ಲ. ಬಸವರಾಜ ಬೊಮ್ಮಾಯಿಯಂತಹ ನಾಯಕ ರಾಜ್ಯಕ್ಕೆ ಬೇಕು. ನೀವೆಲ್ಲಾ ಬೊಮ್ಮಾಯಿ ಬೆಂಬಲವಾಗಿ ನಿಲ್ಲುತ್ತಿರಲ್ಲ ಎಂದು ಸಭಿಕರಿಗೆ ವಚನಾನಂದ ಸ್ವಾಮಿಜಿ ಕೇಳಿದರು.

ಸ್ವಾಮೀಜಿಗಳಿಗೆ ಫೋನ್​ ಮಾಡಿ ಒತ್ತಡ ಹಾಕುವ ಕೆಲಸ ಮಾಡಿಲ್ಲ

‘ಮೀಸಲಾತಿ ವಿಚಾರವಾಗಿ ಸ್ವಾಮೀಜಿಗಳಿಗೆ ಒತ್ತಡ ಹಾಕಿದ್ದರು’ ಎಂಬ ಡಿಕೆ ಶಿವಕುಮಾರ್ ಆರೋಪಕ್ಕೆ ಸಿಎಂ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಯಾವುದೇ ಒತ್ತಡ ಹಾಕಿಲ್ಲ, ಬೇಕಾದ್ರೆ ಪ್ರಮಾಣ ಮಾಡಿ ಹೇಳ್ತೇನೆ. ಸ್ವಾಮೀಜಿಗಳಿಗೆ ಫೋನ್​ ಮಾಡಿ ಒತ್ತಡ ಹಾಕುವ ಕೆಲಸ ಮಾಡಿಲ್ಲ. ಈ ರೀತಿ ಯಾರು ಹೇಳಿದ್ದಾರೋ ಅವರಿಗೇ ಬಿಡುತ್ತೇನೆ. ಹಲವು ವಿಚಾರ ಬಂದಾಗ ಎಲ್ಲವನ್ನೂ ಬಹಿರಂಗ ಮಾಡಲು ಆಗಲ್ಲ. ವಚನಾನಂದ ಸ್ವಾಮೀಜಿ ಸೈದ್ಧಾಂತಿಕವಾಗಿ ಸಹಕಾರ ನೀಡಿದ್ದಾರೆ. ಮೀಸಲಾತಿಗಾಗಿ ಜಯಮೃತ್ಯುಂಜಯಶ್ರೀ ಹೋರಾಟ ಮಾಡಿದ್ದಾರೆ. ಶ್ರೀಗಳ ಹೋರಾಟವೂ ಮೀಸಲಾತಿ ಹೆಚ್ಚಳಕ್ಕೆ ಕಾರಣವಾಯಿತು ಎಂದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:03 pm, Sun, 26 March 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್