ಮಂಡ್ಯದಲ್ಲಿ ಕಮಲ ಅರಳಿಸುವ ಜವಾಬ್ದಾರಿ ಸುಮಲತಾ ಹೆಗಲಿಗೆ, ಅಮಿತ್ ಶಾ ಕೊಟ್ಟ ಟಾರ್ಗೆಟ್ ಏನು? 7 ಕ್ಷೇತ್ರದಲ್ಲಿಯೂ ಭರ್ಜರಿ ಪ್ರಚಾರಕ್ಕೆ ರೆಬಲ್ ಲೇಡಿ ಸಜ್ಜು
ಮಂಡ್ಯದಲ್ಲಿ ಕಮಲದ ಹೂ ಅರಳಿಸುವ ಜವಾಬ್ದಾರಿ ಸುಮಲತಾ ಅಂಬರೀಶ್ ಹೆಗಲಿಗೆ, ಅಮಿತ್ ಶಾ ಕೊಟ್ಟ ಟಾರ್ಗೆಟ್ ಏನು? ಏಳು ಕ್ಷೇತ್ರದಲ್ಲಿಯೂ ಭರ್ಜರಿ ಪ್ರಚಾರಕ್ಕೆ ರೆಬಲ್ ಲೇಡಿ ಸಜ್ಜು
ದಿನ ಕಳೆದಂತೆ ಚುನಾವಣಾ ಅಖಾಡ (Karnataka Assembly Elections 2023) ರಂಗೇರುತ್ತಿದೆ. ಬಿಜೆಪಿಗೆ ರೆಬಲ್ ಲೇಡಿ ಸುಮಲತಾ ಎಂಟ್ರಿ ಬೆನ್ನಲ್ಲೇ ಬಿಜೆಪಿಗೆ ದೊಡ್ಡ ಶಕ್ತಿ ಬಂದಂತಾಗಿದೆ.. ಅಸಲಿಗೆ ಸುಮಲತಾ ಪ್ಲಾನ್ ಏನು.. ಅಮಿತ್ ಶಾ ಕೊಟ್ಟ ಟಾರ್ಗೆಟ್ ಏನು ಅನ್ನೋದ್ರ ಕಂಪ್ಲೀಟ್ ರಿಪೋರ್ಟ್ ನಿಮ್ಮ ಮುಂದೆ. ಬಿಜೆಪಿಗೆ ಮಂಡ್ಯದ (Mandya) ಸ್ವಾಭಿಮಾನಿ ಸಂಸದೆ ಸುಮಲತಾ ಅಂಬರೀಷ್ (Sumalatha Ambareesh) ಬೆಂಬಲ ಘೋಷಿಸಿದ ಬೆನ್ನಲ್ಲೇ ಹೊಸತೊಂದು ಪ್ರಶ್ನೆ ಸೃಷ್ಟಿಯಾಗಿದೆ. ಸುಮಲತಾ ಕಮಲ ಅರಳಿಸ್ತಾರಾ? ಮಂಡ್ಯದಲ್ಲಿ ಕಮಲ (BJP) ಅರಳುತ್ತಾ ಎಂದು ನೋಡುವುದಾದ್ರೆ.. ಮಂಡ್ಯದಲ್ಲಿ ಫೇಸ್ ವ್ಯಾಲ್ಯು ಇರುವ ನಾಯಕತ್ವ ಬೇಕಿತ್ತು. ಅದರ ಮುಂದುವರೆದ ಭಾಗವಾಗಿ ಈಗ ಸುಮಲತಾರನ್ನ ಬಿಜೆಪಿಗೆ ಕರ್ಕೊಂಡು ಬರಲಾಗಿದೆ. ಸುಮಲತಾ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮೋದಿಗೆ ಆರ್ಗಾನಿಕ್ ಬೆಲ್ಲ ನೀಡಿ ಮೋದಿ ಗಮನ ಸೆಳೆದಾಗಿದೆ. ಸುಮಲತಾ ಐದು ನಿಮಿಷ ಸಪರೇಟ್ ಆಗಿ ಮಾತಾಡ್ತಾರೆ ಅಂತಾ ಇತ್ತು. ಮೋದಿ ಜೊತೆ ಸುಮಲತಾ ಮಾತುಕತೆ ನಡೆಸಿದ್ದು ಮಂಡ್ಯದಲ್ಲಿ ಬಜೆಪಿಯನ್ನ ಗೆಲ್ಲಿಸುವ ಪಣ ತೊಟ್ಟಿದ್ದಾರೆ.
ರೆಬಲ್ ಲೇಡಿಗೆ ಕಮಲ ಅರಳಿಸುವ ಟಾಸ್ಕ್ ನೀಡಲಾಗಿದೆ.. ಇದರ ಬೆನ್ನಿಗೆ ಇನ್ನು ಸುಮಲತಾ ರಾಜ್ಯ ರಾಜಕಾರಣಕ್ಕೆ ಬರ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದು, ಮಂಡ್ಯ ವಿಧಾನಸಭಾ ಕ್ಷೆತ್ರದ ಮೇಲೆ ರೆಬೆಲ್ ಲೇಡಿಯ ಚಿತ್ತ ನೆಟ್ಟಿದೆ… ಅನ್ನೋದು ಇದೆ. ಇನ್ನೊಂದು ಮೂಲಗಳ ಪ್ರಕಾರ ಲೋಕಸಭೆ ಚುನಾವಣೆಯನ್ನಷ್ಟೇ ಸುಮಲತಾ ಗಮನ ಕೊಟ್ಟಿದ್ದಾರೆ.
ಇದನ್ನೂ ಓದಿ:
ಪ್ರಧಾನಿ ಮೋದಿಗೆ ಮಂಡ್ಯದ ವಿಶೇಷ ಆರ್ಗಾನಿಕ್ ಬೆಲ್ಲವನ್ನ ಕೊಡುತ್ತೇನೆ: ಸಂಸದೆ ಸುಮಲತಾ
ತನ್ನ ಬೆಂಬಲಿಗ ಇಂಡವಾಳು ಸಚ್ಚಿದಾನಂದ ಗೆಲ್ಲಸಿ ಕೊಳ್ಳುವ ತಂತ್ರಗಾರಿಕೆ ನಡೆಸಿದ್ದಾರೆ. ಮಂಡ್ಯದಲ್ಲಿ ಈ ಬಾರಿ ಬಿಜೆಪಿ 7 ವಿಧಾನಸಭಾ ಕ್ಷೇತ್ರದ ಮೇಲೆ ಟಾರ್ಗೆಟ್ ಇಟ್ಕೊಂಡಿದೆ. ಅದರಲ್ಲಿ ಕನಿಷ್ಟ ಐದು ಕ್ಷೇತ್ರ ಗೆಲ್ಲುವ ಟಾರ್ಗೆಟ್ ಇದೆ, ಸುಮಲತಾ ಪ್ರಭಾವ ಇರೋದು ಮಂಡ್ಯ, ಮದ್ದೂರು, ಮೇಲುಕೋಟೆ ಮತ್ತು ಶ್ರೀರಂಗಪಟ್ಟಣ. ಇದ್ರ ಜೊತೆಗೆ ಕೆ.ಆರ್. ಪೇಟೆಯಲ್ಲಿ ಬಿಜೆಪಿಗೆ ತನ್ನದೆಯಾದ ಬಲವಿದೆ.
ಮಂಡ್ಯದಲ್ಲಿ ಮಂಡ್ಯ ಜಿಲ್ಲಾಧ್ಯಕ್ಷ ಉಮೇಶ್ ಭರ್ಜರಿಯಾಗಿ ಪ್ರಚಾರ ನಡೆಸುತ್ತಿದ್ದು.. ಮಂಡ್ಯದಲ್ಲಿ ಬೂತ್ ಮಟ್ಟದಲ್ಲಿ ಬಿಜೆಪಿ ಬಲಗೊಂಡಿದೆ.. ಈ ಬಾರಿ ವಿಧಾನಸಭಾ ಚುನಾವಣೆ ಮೇಲೆ ಬಿಜೆಪಿ ಕನಿಷ್ಠ ಪಕ್ಷ ಐದು ಸೀಟು ಗೆಲ್ಲುವ ವಿಶ್ವಾಸವ್ಯಕ್ತ ಪಡಿಸಿದ್ದು ಮತದಾರನ ಮನದಲ್ಲಿ ಏನಿದೆ ಎಂದು ಕಾದು ನೋಡ್ಬೇಕಿದೆ.
ವರದಿ: ಸೂರಜ್ ಪ್ರಸಾದ್ ಟಿವಿ9 ಮಂಡ್ಯ
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:41 pm, Mon, 13 March 23