Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Assembly Poll 2023: ಉತ್ತರ ಕನ್ನಡದಲ್ಲಿ ಅಖಾಡಕ್ಕಿಳಿದ ಎಸ್​.ಡಿ.ಪಿ.ಐ, ಕಾಂಗ್ರೆಸ್​ಗೆ ಆತಂಕ

ಬಿಜೆಪಿ ಭದ್ರಕೋಟೆ ಕರಾವಳಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತೆ ತನ್ನ ಪ್ರಾಬಲ್ಯ ಕಾಣಲು ಕಸರತ್ತು ನಡೆಸುತ್ತಿದ್ದರೆ. ಇತ್ತ ಎಸ್‌.ಡಿ.ಪಿ.ಐ ಮುಸ್ಲಿಂ ಸಮುದಾಯ ಪ್ರಾಬಲ್ಯ ಇರುವ ಕ್ಷೇತ್ರಗಳನ್ನ ಆಯ್ಕೆ ಮಾಡಿಕೊಂಡು ತನ್ನ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ತಯಾರಿ ನಡೆಸಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾದರೆ, ಬಿಜೆಪಿಗೆ ವರವಾಗುತ್ತಾ ಎನ್ನುವ ಲೆಕ್ಕಾಚಾರ ಇದೀಗ ಕ್ಷೇತ್ರಗಳಲ್ಲಿ ಪ್ರಾರಂಭವಾಗಿದೆ.

Karnataka Assembly Poll 2023: ಉತ್ತರ ಕನ್ನಡದಲ್ಲಿ ಅಖಾಡಕ್ಕಿಳಿದ ಎಸ್​.ಡಿ.ಪಿ.ಐ, ಕಾಂಗ್ರೆಸ್​ಗೆ ಆತಂಕ
ಉತ್ತರ ಕನ್ನಡದಲ್ಲಿ ಅಖಾಡಕ್ಕೆ ಎಸ್​.ಡಿ.ಪಿ.ಐ
Follow us
ಕಿರಣ್ ಹನುಮಂತ್​ ಮಾದಾರ್
| Updated By: ರಮೇಶ್ ಬಿ. ಜವಳಗೇರಾ

Updated on:Mar 13, 2023 | 10:12 AM

ಉತ್ತರ ಕನ್ನಡ: ಕರಾವಳಿ ಭಾಗದಲ್ಲಿ ಕೋಮ ಸಂಘರ್ಷಗಳು ಹಲವು ಪಕ್ಷಗಳಿಗೆ ವರವಾದರೇ ಸಂಘಟನೆಗಳಿಗೆ ತಮ್ಮ ಅಸ್ಥಿತ್ವವನ್ನು ಗಟ್ಟಿಗೊಳಿಸಿಕೊಳ್ಳಲು ಸಹ ಸಹಕಾರಿಯಾಗುತ್ತಿದ್ದು ಇದೀಗ ಜಿಲ್ಲೆಯಲ್ಲಿ ಚುನಾವಣೆಗೂ ತಮ್ಮವರನ್ನು ನಿಲ್ಲಿಸುವಷ್ಟರ ಮಟ್ಟಿಗೆ ಬೆಳದಿವೆ. ಭಟ್ಕಳ ಮತ್ತು ಶಿರಸಿ ಭಾಗದಲ್ಲಿ ಹಿಂದೂ ಸಂಘಟನೆಯಂತೆಯೇ ಎಸ್.ಡಿ.ಪಿ.ಐ(S.D.P.I) ಹಾಗೂ ಪಿ.ಎಫ್.ಐ ಸಂಘಟನೆ ಸಹ ದೊಡ್ಡಮಟ್ಟದಲ್ಲಿ ಬೆಳೆದು ನಿಂತಿದ್ದು ಗ್ರಾಮಪಂಚಾಯತಿ, ಪುರಸಭೆಗಳಲ್ಲಿ ಎಸ್.ಡಿ.ಪಿ.ಐ ತಮ್ಮವರನ್ನು ಕಣಕ್ಕಿಳಿಸಿ ಒಟ್ಟು 9 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು. ಈ ಯಶಸ್ವಿನ ನಂತರ ಇದೇ ಮೊದಲಬಾರಿಗೆ ಜಿಲ್ಲೆಯ ಭಟ್ಕಳ ಹಾಗೂ ಶಿರಸಿ ವಿಧಾನಸಭಾ ಕ್ಷೇತ್ರಕ್ಕೆ ಎಸ್.ಡಿ.ಪಿ.ಐ ನಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ದವಾಗಿದ್ದು ಭಟ್ಕಳದಿಂದ ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ತೋಫಿಕ್ ಬ್ಯಾರಿ ಅವರನ್ನು ಕಣಕ್ಕಿಳಿಸಲಿದ್ರೆ, ಶಿರಸಿಯಲ್ಲಿ ಹಿಂದೂ ಮುಖಂಡರನ್ನೇ ಕಣಕ್ಕಿಳಿಸಲು ಸಜ್ಜಾಗಿದೆ.

ಭಟ್ಕಳದಲ್ಲಿ ಎಸ್.ಡಿ.ಪಿ.ಐ ರಾಜ್ಯಪ್ರಧಾನ ಕಾರ್ಯದರ್ಶಿ ಹಾಗೂ ಚುನಾವಣಾ ಉಸ್ತುವಾರಿ ಹೊಣೆ ಹೊತ್ತಿರುವ ಅಪ್ಸರ್ ಕೊಡ್ಲಿಪೇಟೆ ರವರು ಉತ್ತರ ಕನ್ನಡ ಜಿಲ್ಲಾ ವಿಧಾನಸಭಾ ಕ್ಷೇತ್ರದ ಚುನಾವಣಾ ಸ್ಪರ್ಧಾಕಾಂಕ್ಷಿಗಳ ಸಭೆ ನಡೆಸಿ ಮಾತನಾಡಿದರು. ‘ಹಿಂದೂ ರಾಷ್ಟ್ರ ಎನ್ನುವುದು ದೇಶದ ಸಂವಿಧಾನಕ್ಕೆ ವಿರುದ್ಧವಾಗಿದೆ. ಜ್ಯಾತ್ಯಾತೀತ ಪಕ್ಷ ಎನಿಸಿಕೊಂಡವರು ಇದರ ಬಗ್ಗೆ ಚಕಾರವೆತ್ತುವುದಿಲ್ಲ. ಶಿಕ್ಷಣದಲ್ಲೂ ಜಾತಿ ಧರ್ಮವನ್ನು ಬಿಜೆಪಿ ತಂದು ಸಂಘರ್ಷ ತಂದಿದೆ. ಧಾರ್ಮಿಕ ಹಕ್ಕೂ ಎಲ್ಲರಿಗೂ ಇದೆ. ಹೀಗಾಗಿಯೇ ಬುರ್ಖಾ ನಿಷೇಧದ ವಿರುದ್ಧ ನಾವು ಹೋರಾಟ ಮುಂದುವರೆಸಿದ್ದೇವೆ. ಬಿಜೆಪಿ ಪಕ್ಷ ಅಧಿಕಾರದಲ್ಲಿ ಇರುವುದರಿಂದ ನಮ್ಮ ವಿರುದ್ಧ ಪ್ಯಾಬ್ರಿಕೇಟೆಡ್ ಕೇಸುಗಳು ಬಂದೇ ಬರುತ್ತವೆ. ಇದನ್ನು ನಾವು ಕಾನೂನಾತ್ಮಕವಾಗಿ ಎದುರಿಸುತ್ತೇವೆ ಎಂದರು.

ಇದನ್ನೂ ಓದಿ:ಹೊಸಕೋಟೆ: ರಾಜಕೀಯ ದ್ವೇಷದಿಂದ ಮೂಲ ಸೌಕರ್ಯಗಳಿಲ್ಲದೆ ಜನರ ಪರದಾಟ; ಅಹೋರಾತ್ರಿ ಗ್ರಾಮಸ್ಥರಿಂದ ಡಿಸಿ ಕಛೇರಿ ಮುಂದೆ ಧರಣಿ

ಇನ್ನು ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇದ್ದು ಅಲ್ಲಿಂದಲೇ ಆರೋಪ ಮುಕ್ತರಾಗಿ ಬರುತ್ತೇವೆ. ಜ್ಯಾತ್ಯಾತೀತ, ಭ್ರಷ್ಟಾಚಾರ ಮುಕ್ತ ಆಡಳಿತ ಕೊಡುವ ದೃಷ್ಟಿಯಿಂದ ಚುನಾವಣೆಗೆ ಈಬಾರಿ ರಾಜ್ಯದಲ್ಲಿ 54 ಕ್ಷೇತ್ರದಲ್ಲಿ ಸ್ಪರ್ಧಿಸುತಿದ್ದು, 19ಕ್ಷೇತ್ರಗಳಲ್ಲಿ ಅಭ್ಯರ್ಥಿ ಘೋಷಣೆ ಮಾಡಲಾಗಿದೆ. ಅದರಂತೆ ಉತ್ತರ ಕನ್ನಡ ಜಿಲ್ಲೆಯ ಎರಡು ಕ್ಷೇತ್ರದಲ್ಲಿ ಅಭ್ಯರ್ಥಿಗಳ ಘೋಷಣೆ ಆಗಲಿದೆ ಎಂದರು. ಇನ್ನು ಜಿಲ್ಲಾದ್ಯಕ್ಷ ಮಾತನಾಡಿ ಭಟ್ಕಳ ಕ್ಷೇತ್ರದಿಂದ ಮೂರು ಅಭ್ಯರ್ಥಿಗಳ ಲಿಸ್ಟ್ ಕಳಿಸಲಾಗಿದೆ. ನನಗೆ ಪಕ್ಷ ಅವಕಾಶ ಕೊಟ್ಟರೆ ನಾನೆ ಸ್ಪರ್ಧೆ ಮಾಡುತ್ತೆನೆ ಎಂದು ತಮ್ಮ ಇಂಗಿತ ವ್ಯಕ್ತಪಡಿಸಿದರು.

ಸದ್ಯ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಹಾಗೂ ಶಿರಸಿ ಕ್ಷೇತ್ರಗಳಿಗೆ ಇದೇ ಮೊದಲ ಬಾರಿಗೆ ಎಸ್.ಡಿ.ಪಿ.ಐ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುತಿದ್ದು ಈ ಮೂಲಕ ರಾಷ್ಟ್ರೀಯ ಪಕ್ಷಗಳಿಗೆ ಟಕ್ಕರ್ ಕೊಡಲು ಸಿದ್ದವಾಗಿದೆ.

ವರದಿ: ವಿನಾಯಕ ಬಡಿಗೇರ ಟಿವಿ 9 ಕಾರವಾರ

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:11 am, Mon, 13 March 23

ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಧ್ರುವ ಸರ್ಜಾ ಜೊತೆ ಡ್ಯಾನ್ಸ್ ಮಾಡೋದು ಕಷ್ಟ, ಹೀಗೆಂದರ್ಯಾಕೆ ರೀಶ್ಮಾ
ಧ್ರುವ ಸರ್ಜಾ ಜೊತೆ ಡ್ಯಾನ್ಸ್ ಮಾಡೋದು ಕಷ್ಟ, ಹೀಗೆಂದರ್ಯಾಕೆ ರೀಶ್ಮಾ
ಆಟವಾಡುತ್ತಿದ್ದಾಗ ಹೈವೋಲ್ಟೇಜ್ ತಂತಿ ತಗುಲಿ ಸುಟ್ಟು ಕರಕಲಾದ ಬಾಲಕ
ಆಟವಾಡುತ್ತಿದ್ದಾಗ ಹೈವೋಲ್ಟೇಜ್ ತಂತಿ ತಗುಲಿ ಸುಟ್ಟು ಕರಕಲಾದ ಬಾಲಕ
Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ
Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ
IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್
IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್
Daily Devotional: ಯುಗಾದಿ ಆಚರಣೆ ಹಾಗೂ ಅದರ ಮಹತ್ವ ತಿಳಿಯಿರಿ
Daily Devotional: ಯುಗಾದಿ ಆಚರಣೆ ಹಾಗೂ ಅದರ ಮಹತ್ವ ತಿಳಿಯಿರಿ