AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mysore Politics: 9 ಕ್ಷೇತ್ರಗಳಿಗೆ ಟಿಕೆಟ್​ ಘೋಷಣೆ, 2 ಬಾಕಿ: ಎರಡಲ್ಲಿ ಜಿದ್ದಾಜಿದ್ದಿ; ವಲಸಿಗರಿಗೆ ಒಲಿದ ಅವಕಾಶ

ಬಿಜೆಪಿ ಮೈಸೂರು ಜಿಲ್ಲೆಯ 11 ಕ್ಷೇತ್ರಗಳಲ್ಲಿ 9 ಕ್ಷೇತ್ರಗಳಿಗೆ ಕಮಲ ಕಲಿಗಳನ್ನು ಕಣಕ್ಕೆ ಇಳಿಸಿದೆ. ಇನ್ನು 2 ಕ್ಷೇತ್ರಗಳನ್ನು ಕಾಯ್ದಿರಿಸಿದೆ.

Mysore Politics: 9 ಕ್ಷೇತ್ರಗಳಿಗೆ ಟಿಕೆಟ್​ ಘೋಷಣೆ, 2 ಬಾಕಿ: ಎರಡಲ್ಲಿ ಜಿದ್ದಾಜಿದ್ದಿ; ವಲಸಿಗರಿಗೆ ಒಲಿದ ಅವಕಾಶ
ಸಿದ್ದರಾಮಯ್ಯ (ಎಡಚಿತ್ರ) ವಿ ಸೋಮಣ್ಣ (ಬಲಚಿತ್ರ)
ವಿವೇಕ ಬಿರಾದಾರ
|

Updated on: Apr 12, 2023 | 11:43 AM

Share

ಮೈಸೂರು: ರಾಜ್ಯ ವಿಧಾನಸಭೆ ಚುನಾವಣೆಗೆ (Karnataka Assembly Election 2023) ಬಿಜೆಪಿ 189 ಕ್ಷೇತ್ರಗಳಿಗೆ ಟಿಕೆಟ್​ ಘೋಷಣೆ ಮಾಡುತ್ತಿದ್ದಂತೆ ಬಿಜೆಪಿ (BJP) ಪಾಳಯದಲ್ಲಿ ಸಾಕಷ್ಟು ಬೆಳವಣಿಗೆಗಳಾಗುತ್ತಿವೆ. ಮತ್ತು ಬಿಜೆಪಿ ಈ ಬಾರಿ 52 ಜನ ಹೊಸಬರಿಗೆ, ಪರಾಜಿತರಿಗೆ ಟಿಕೆಟ್​ ನೀಡಿದೆ. ಅಲ್ಲದೇ ಘಟಾನುಘಟಿ ನಾಯಕರು ಸೇರಿದಂತೆ ಹಾಲಿ ಶಾಸಕರಿಗೆ ಟಿಕೆಟ್​​ ನೀಡದಿದ್ದದ್ದು ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಜೊತೆಗೆ ಅಚ್ಚರಿ ಮೂಡಿಸಿದೆ. ಬಿಜೆಪಿ ಈ ಬಾರಿ ಮಿಷನ್​ ಮೈಸೂರು (Mysore) ಎಂದು ಘೋಷಣೆ ಮಾಡಿದ್ದು, ಶತಾಯಗತಾಯ ಹಳೇ ಮೈಸೂರು ಭಾಗದಲ್ಲಿ ಕಮಲವನ್ನು ಅರಳಿಸಲು ಹಣತಂತ್ರ ಹೆಣದಿದೆ. ಈ ಸಂಬಂಧ ಹಲವು ದಾಳಗಳನ್ನು ಉರುಳಿಸಿದೆ. ಬಿಜೆಪಿ ಮೈಸೂರು ಜಿಲ್ಲೆಯ 11 ಕ್ಷೇತ್ರಗಳಲ್ಲಿ 9 ಕ್ಷೇತ್ರಗಳಿಗೆ ಕಮಲ ಕಲಿಗಳನ್ನು ಕಣಕ್ಕೆ ಇಳಿಸಿದೆ. ಇನ್ನು 2 ಕ್ಷೇತ್ರಗಳನ್ನು ಕಾಯ್ದಿರಿಸಿದೆ.

ಮೈಸೂರಿನ ಪ್ರತಿಷ್ಠಿತ ವರುಣಾ ಕ್ಷೇತ್ರದಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಸತಿ ಸಚಿವ ವಿ ಸೋಮಣ್ಣ ಅವರಿಗೆ ಟಿಕೆಟ್ ನೀಡಲಾಗಿದೆ. ಇಬ್ಬರ ನಡುವೆ ಜಿದ್ದಾಜಿದ್ದಿನ ಕದನ ಸಾಕ್ಷಿಯಾಗುವ ನಿರೀಕ್ಷೆ ಇದೆ. ವರುಣಾ ಕ್ಷೇತ್ರದಲ್ಲಿ ಒಟ್ಟು 2,23,007 ಮತದಾರರು ಇದ್ದು, ಇದರಲ್ಲಿ ಪುರುಷ – 1,11,777, ಮಹಿಳೆ – 1,11,230 ಇದ್ದಾರೆ.

ಇದನ್ನೂ ಓದಿ: 18 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಣೆ: ಬಂಡಾಯವೆದ್ದ 8 ಕ್ಷೇತ್ರದ ಆಕಾಂಕ್ಷಿಗಳು

ಮತಗಳ ಜಾತಿ ಲೆಕ್ಕಾಚಾರ ಈ ರೀತಿ ಇದೆ

ಲಿಂಗಾಯತ – 53 ಸಾವಿರ, ದಲಿತ – 48 ಸಾವಿರ, ಒಕ್ಕಲಿಗ – 12 ಸಾವಿರ, ಕುರುಬ – 27 ಸಾವಿರ, ಉಪ್ಪಾರ – 14 ಸಾವಿರ, ನಾಯಕ – 23 ಸಾವಿರ, ಮುಸ್ಲಿಂ – 15 ಸಾವಿರ, ಇತರೆ – 35 ಸಾವಿರ ಮತಗಳಿವೆ. ಲಿಂಗಾಯತ ಮತ್ತು ದಲಿತ ಮತಗಳು ನಿರ್ಣಾಯಕವಾಗಲಿವೆ.

ಇನ್ನು ಬಿಜೆಪಿ ವಲಸೆ ಬಂದವರಿಗೂ ಮಣೆ ಹಾಕಿದ್ದು, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ನಾಯಕ ಜಿಟಿ ದೇವೇಗೌಡ ಸ್ಪರ್ಧೆ ಮಾಡುತ್ತಿದ್ದು, ಮಾಜಿ ಶಾಸಕ ವಾಸು ಅವರ ಪುತ್ರ ಕವೀಶ್ ಗೌಡ ಅವರನ್ನ ಬಿಜೆಪಿ ಆಯ್ಕೆ ಮಾಡಿದೆ. ತೆನೆ ಬಿಟ್ಟು ಕಮಲ ಹಿಡಿದಿದ್ದ, ದೇವರಹಳ್ಳಿ ಸೋಮಶೇಖರ್‌ ಅವರಿಗೆ ಹುಣಸೂರು ಟಿಕೆಟ್ ನೀಡಿದೆ.

ಅಲ್ಲದೇ ಕಮಲ ವರಿಷ್ಠರು ಜಿಲ್ಲೆಯಲ್ಲಿ ಇಬ್ಬರು ಹಾಲಿ ಶಾಸಕರಿಗೆ ಮಣೆ ಹಾಕಿದೆ. ಚಾಮರಾಜ ಕ್ಷೇತ್ರದಿಂದ ಹಾಲಿ ಶಾಸಕ ಎಲ್ ನಾಗೇಂದ್ರ, ನಂಜನಗೂಡು ಕ್ಷೇತ್ರದಿಂದ ಹಾಲಿ ಶಾಸಕ ಬಿ ಹರ್ಷವರ್ಧನ್‌ ಅವರಿಗೆ ಅವಕಾಶ ನೀಡಿದೆ. ಕಳೆದ ಬಾರಿ ಪರಾಜಿತ ಅಭ್ಯರ್ಥಿಗಳಿಗೂ ಟಿಕೆಟ್​ ನೀಡಿದ್ದು, ನರಸಿಂಹರಾಜ ಕ್ಷೇತ್ರದಿಂದ ಸಂದೇಶ್ ಸ್ವಾಮಿ ಅವರಿಗೆ ಅವಕಾಶ ಒಲಿದು ಬಂದಿದೆ.

ಹೊಸಬರಿಗೆ ಅವಕಾಶ

ಟಿ ನರಸೀಪುರದಿಂದ ವೈದ್ಯ ಡಾ. ರೇವಣ್ಣ ಅವರಿಗೆ ಟಿಕೆಟ್​ ನೀಡಲಾಗಿದೆ. ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ರೇವಣ್ಣ ಅವರು ಸ್ವಯಂ ನಿವೃತ್ತಿ ಪಡೆದು ಕಣಕ್ಕಿಳಿದ್ದಾರೆ. ಕೆ ಆರ್ ನಗರದಿಂದ ಕಾರ್ಯಕರ್ತ ಹೊಸಹಳ್ಳಿ ವೆಂಕಟೇಶ್‌, ಪಿರಿಯಾಪಟ್ಟಣ ಕ್ಷೇತ್ರದಿಂದ ಮಾಜಿ ಸಚಿವ ಸಿ ಎಚ್ ವಿಜಯಶಂಕರ್‌ಗೂ ಅವಕಾಶ ಹೈಕಮಾಂಡ್​ ಟಿಕೆಟ್ ನೀಡಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

‘ಎಕ್ಕ’ ಸಿನಿಮಾಕ್ಕೂ ಅಪ್ಪುವಿನ ‘ಜಾಕಿ’ ಸಿನಿಮಾಕ್ಕೂ ಲಿಂಕ್ ಏನು?
‘ಎಕ್ಕ’ ಸಿನಿಮಾಕ್ಕೂ ಅಪ್ಪುವಿನ ‘ಜಾಕಿ’ ಸಿನಿಮಾಕ್ಕೂ ಲಿಂಕ್ ಏನು?
ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ: ಎಸ್​ಪಿ ಹೇಳಿದ್ದಿಷ್ಟು
ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ: ಎಸ್​ಪಿ ಹೇಳಿದ್ದಿಷ್ಟು
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ